ಕಾಂಗ್ರೇಸ್ ಹೇಳಿರುವುದು ಸುಳ್ಳು ಇಲ್ಲಿಯವರೆಗು ಮಾಡಿಲ್ಲ ಸರ್ಜೀಕಲ್ ಸ್ಟ್ರೈಕ್! ಇಲ್ಲಿದೆ ನೋಡಿ ಸ್ಪೋಟಕ ಮಾಹಿತಿ

ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವುದೇ ಸುಳಿವುಗಳು ನಮಗೆ ದೊರೆತಿಲ್ಲ ಎಂದು ಭಾರತದ ರಕ್ಷಣಾ ಸಚಿವಾಲಯ (ಎಂ.ಒ.ಡಿ) ಸ್ಪಷ್ಟಪಡಿಸಿದೆ.

ಕಾಶ್ಮೀರ ಮೂಲದ ರೋಹಿತ್ ಚೌಧರಿ ಎಂಬವರು ಮಾಹಿತಿ ಹಕ್ಕು ಕಾಯಿದೆ (ಆರ್.ಟಿ.ಐ) ಯ ಆಡಿಯಲ್ಲಿ 2004 ರಿಂದ 2014ರ ವರೆಗೆ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾಹಿತಿ ನೀಡಬೇಕು ಎಂದು ರಕ್ಷಣಾ ಸಚಿವಾಯಲಕ್ಕೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಇಂದು ಉತ್ತರಿಸಿರುವ ಸಚಿವಾಲಯ, 2004 ರಿಂದ 2014ರ ವರೆಗೆ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನಮಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ ಎಂದು ಹೇಳಿದೆ.

2016 ಸೆಪ್ಟಂಬರ್ 29 ರಂದು ಉತ್ತರ ಕಾಶ್ಮೀರದ ಉರಿಯಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಿಟ್ಟರೆ ನಮಗೆ 2004 ರಿಂದ 2014ರ ಅವಧಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವ ರೀತಿಯ ಮಾಹಿತಿಗಳೂ ಸಿಕಿಲ್ಲ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ರೋಹಿತ್ ಚೌಧರಿ, ಕಾಂಗ್ರೆಸ್ ನಾಯಕರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಯುಪಿಎ ಆಡಳಿತದ ಅವಧಿಯಲ್ಲಿ ಯಾವುದೇ ಸರ್ಜಿಕಲ್ ಸ್ಟ್ರೈಕ್ ಆಗಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಇತ್ತೀಚೆಗೆ ತಮ್ಮ ಆಡಳಿತದ ಅವಧಿಯಲ್ಲಾದ 6 ಸರ್ಜಿಕಲ್ ಸ್ಟ್ರೈಕ್‍ಗಳ ಬಗ್ಗೆ ಚಿತ್ರಗಳ ಸಮೇತ ವಿವರಗಳನ್ನು ಬಿಡುಗಡೆ ಮಾಡಿತ್ತು. ನಮ್ಮ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್‍ಗಳು ನಡೆದಿವೆ. ಆದರೆ ನಾವು ಅದನ್ನು ಪ್ರಚಾರಕ್ಕೆ ಬಳಸಿಕೊಂಡಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಅವರಿಗೆ ಟಾಂಗ್ ನೀಡಿದ್ದರು.

ಸಿದ್ದರಾಮಯ್ಯರನ್ನು ರಾಜಕೀಯವಾಗಿ ನಿವೃತ್ತಿ ಕೊಡಿಸಲು : ಡಿಕೆಶಿ-ಹೆಚ್ಡಿಕೆ ಮಾಸ್ಟರ್ ಪ್ಲಾನ್

ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ ಎಂದು ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಈಗ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಒಂದಾಗಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ಬಿಜೆಪಿಗೆ ಉತ್ತರ ಕರ್ನಾಟಕ ಭಾಗ ಭದ್ರ ನೆಲೆಯಾಗಿದೆ. ಹಾಗಾಗಿ ಈ ಭಾಗದ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು. ಗೋವಿಂದ ಕಾರಜೋಳ, ನಾನೂ ಸೇರಿದಂತೆ ಹಲವಾರು ಮಂದಿ ಇದ್ದು, ಅವಕಾಶ ಸಿಕ್ಕರೆ ಜವಾಬ್ದಾರಿ ನಿಭಾಯಿಸುತ್ತೇವೆ ಎಂದರು.

ಪ್ರಾದೇಶಿಕ ಅಸಮಾನತೆ ನಿವಾರಣೆಯಾಗಬೇಕಾದರೆ ಮುಖ್ಯಮಂತ್ರಿ ಹುದ್ದೆಯೂ ಉತ್ತರ ಕರ್ನಾಟಕ ಭಾಗಕ್ಕೆ ಸಿಗಬೇಕು. ಮಂಡ್ಯ ಜಿಲ್ಲೆಗೆ 8 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗಕ್ಕೆ ಕೇವಲ 2 ಸಾವಿರ ಕೋಟಿ ರೂ.ಗಳನ್ನು ಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗುತ್ತಾರೆ. ಹಾಗೆಯೇ ಕರ್ನಾಟಕದಲ್ಲಿ 22 ರಿಂದ 23 ಸೀಟುಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ ಎಂದು ಹೇಳಿದರು.

ವಾಸ್ತು ಶಾಸ್ತ್ರದ ಪ್ರಕಾರ ದುಡ್ಡು ಬೇಕಂದ್ರೆ ಜೇಬಲ್ಲಿ ಇವನ್ನ ಇಡ್ಬೇಡಿ…

ಪ್ಯಾಂಟಿನಲ್ಲಿ ಚಿಲ್ಲರೆ ಪೈಸೆ, ಪೆನ್, ಎಟಿಎಂ ಕಾರ್ಡ್‌ಗಳು, ಮನೆ ಕೀ ಮುಂತಾದ ವಸ್ತುಗಳನ್ನು ಇಟ್ಟುಕೊಳ್ಳುತ್ತೇವೆ. ವಾಸ್ತು ಪ್ರಕಾರ ಈ ಬೇಡದ ವಸ್ತುಗಳನ್ನು ಜೇಬಿನಲ್ಲಿ ಇಡುವುದರಿಂದ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಅಷ್ಟಕ್ಕೂ ಯಾವ ವಸ್ತುವನ್ನಿಟ್ಟುಕೊಳ್ಳಬಾರದು?

ಹಳೇ ಬಿಲ್: ತಿಂಡಿ ತಿಂದದ್ದು ಆಗಿರಬಹುದು ಅಥವಾ ಸಾಮಗ್ರಿಗಳನ್ನು ಖರೀದಿಸಿದ್ದು, ವಿದ್ಯುತ್ ಬಿಲ್ ಕೂಡ ಆಗಿರಬಹುದು. ಅವನ್ನು ಪರ್ಸ್ ಅಥವಾ ಜೇಬಿನಲ್ಲಿಟ್ಟುಕೊಂಡು ಸುತ್ತಬೇಡಿ. ಇದರಿಂದ ನೆಗೆಟಿವ್ ಎನರ್ಜಿ ಉತ್ಪತ್ತಿಯಾಗುತ್ತದೆ. ಜೊತೆಗೆ ಆರ್ಥಿಕ ಜೀವನದ ಮೇಲೆ  ಪರಿಣಾಮ ಬೀರುತ್ತದೆ.

ಅಪಾಯಕಾರಿ ಫೋಟೋ: ಕೋಪ, ಕೊಲೆ, ಮತ್ಸರ, ವಿರೋಧ ಭಾವನೆಗಳನ್ನು ಬಿಂಬಿಸುವ ವಸ್ತುಗಳನ್ನು ಜೇಬಿನಲ್ಲಿಡಬೇಡಿ. ಇವು ನಮ್ಮ ಸುತ್ತಮುತ್ತಲೂ ಕೆಟ್ಟ ಶಕ್ತಿಯನ್ನು ಉತ್ತೇಜಿಸುತ್ತವೆ.

ಹರಿದ ಪರ್ಸ್: ಜೇಬಿನಲ್ಲಿ ಪರ್ಸ್ ಇಡಬಾರದೇ ಎಂದು ಕೇಳಬೇಡಿ. ಖಂಡಿತಾ ಇಡಬಹುದು. ಆದರೆ ಆ ಪರ್ಸ್ ಹರಿದು ಅಥವಾ ಹಾಳಾಗಿ ಹೋಗದೆ ಚೆನ್ನಾಗಿರಬೇಕು. ಯಾಕೆಂದರೆ ವಾಸ್ತು ಶಾಸ್ತ್ರದ ಅನುಸಾರ ತುಂಡಾದ ಹರಿದ ಪರ್ಸ್ ಬಳಸಿದರೆ ಹಣ ಉಳಿಯುವುದಿಲ್ಲ.

ನೋಟ್ಜೇಬಿನಲ್ಲಿ ನೋಟ್ ಇಡುವುದಾದರೆ ಅದನ್ನು ಸರಿಯಾದ ರೀತಿಯಲ್ಲಿ ಇಡಿ. ಅದನ್ನು ಹೇಗೇಗೋ ಮಡಚಿ, ಮುದ್ದೆ ಮಾಡಿ ಇಟ್ಟರೆ ಅದು ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ.

ತಿನ್ನುವ ಆಹಾರ: ಜೇಬಿನಲ್ಲಿ ಸಾಮಾನ್ಯವಾಗಿ ಚಾಕಲೇಟ್ ಅಥವಾ ಚಿಪ್ಸ್ ಪ್ಯಾಕ್ ಇರುತ್ತದೆ. ಆದರೆ ವಾಸ್ತುವಿನ ಪ್ರಕಾರ ಇಂಥ ವಸ್ತುಗಳನ್ನಿಡುವುದರಿಂದ ದುಷ್ಪರಿಮಾಣ ಬೀರುತ್ತದೆ.

ಔಷಧಿಗಳು: ಔಷಧಿಗಳಿಂದ ಹೊರ ಬರುವ ಶಕ್ತಿ ಮನುಷ್ಯನ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ.

ಹರಿತವಾದ ವಸ್ತು: ಬ್ಲೇಡ್, ಚಾಕು, ಪಿನ್, ಸೂಜಿ ಮೊದಲಾದ ವಸ್ತುಗಳನ್ನು ಜೇಬಿನಲ್ಲಿಡಬೇಡಿ. ಇವು ಮನೆಯಲ್ಲಿ ಇಡುವುದೂ ಅಪಾಯಕಾರಿ. ಆದರೆ ಅಗ್ನಿ ತತ್ವ ಹೊಂದಿರುವ ಅಡುಗೆ ಮನೆಯಲ್ಲಿ ಇವುಗಳನ್ನ ಇಡಬಹುದು.

 

ಕಾಂಗ್ರೆಸ್, ಟಿಡಿಪಿ ಸೇರಿದಂತೆ 21 ವಿಪಕ್ಷಗಳಿಗೆ ಭಾರೀ ಹಿನ್ನಡೆ!

ಲೋಕಸಭಾ ಚುನಾವಣೆಗೆ ಇನ್ನೆರಡು ಹಂತಗಳು ಬಾಕಿಯಿವೆ. ಮತ ಎಣಿಕೆ ವೇಳೆ ವಿವಿಪ್ಯಾಟ್ ಎಣಿಕೆಯನ್ನು ಹೆಚ್ಚಿಸಬೇಕೆಂದು ವಿಪಕ್ಷಗಳು ಸಲ್ಲಿಸಿದ್ದ ಮರು-ಪರಿಶೀಲನಾ ಅರ್ಜಿಯನ್ನು  ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಕಾಂಗ್ರೆಸ್, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸೇರಿದಂತೆ 21 ವಿಪಕ್ಷಗಳು ಸುಪ್ರೀಂ ಮೊರೆ ಹೋಗಿದ್ದುವು.

ಏಪ್ರಿಲ್ 9ರಂದು ಸುಪ್ರೀಂ ಕೋರ್ಟ್ ಗೆ ಚಂದ್ರಬಾಬು ನಾಯ್ಡು ಅವರು ಒಳಗೊಂಡಂತೆ 21 ರಾಜಕೀಯ ಪಕ್ಷಗಳು ವಿವಿವ್ಯಾಟ್ ಕೌಂಟಿಂಗ್ ಇರುತ್ತದೆ ಅದನ್ನು ಶೇಕಡ 50 ಏರಿಸಬೇಕೆಂದು ಅರ್ಜಿ ತಿರಸ್ಕರಿಸಲಾಗಿತ್ತು. ನಂತರ ಮರು ಪರಿಶೀಲನಾ ಅರ್ಜಿ ವಿಚಾರಣೆಗೆ ಒಪ್ಪಿದರೂ ಕೂಡ ಸುಪ್ರೀಂ ಕೋರ್ಟ್ ಇವತ್ತು ಅದನ್ನು ವಜಾ ಮಾಡಲಾಗಿದೆ.

ಪ್ರಮುಖವಾಗಿ ಸುಪ್ರೀಂಕೋರ್ಟ್ ಒಂದು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದು ರ್ಯಡಮ್ ಆಗಿ ಈಗ ಎಲೆಕ್ಷನ್ ಕಮಿಷನ್ ಪ್ರತಿ ಅಸೆಂಬ್ಲಿ ಸ್ಟೇಟ್ಮೆಂಟ್ನಲ್ಲಿ ಒಂದು ಬೂತ್ನ ವಿವಿಪ್ಯಾಟ್ ಸಂಪೂರ್ಣವಾಗಿ ಬಳಕೆ ಮಾಡುತ್ತದೆ ಅದನ್ನು ಶೇ 5% ಏರಿಸಬೇಕೆಂದು ಸುಪ್ರೀಂ ಕೋರ್ಟ್ ಕಡತ್ತ ದೇಶ ನೀಡಿತ್ತು .

ಚಂದ್ರವ್ವ ನಾಡು ಬರುವುದನ್ನು ಶೇಕಡ 50ರಷ್ಟು ಏರಿಸಬೇಕು ಇಲ್ಲವಾದರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 125 ಬೂತುಗಳಲ್ಲಿ ವಿವಿಪ್ಯಾಟ್ ಕೌಂಟಿಂಗ್ ಕೂಡ ಆಗಬೇಕು ಅಂತ ಸ್ಪಷ್ಟವಾಗಿ ಸುಪ್ರೀಂ ಕೋರ್ಟಿಗೆ ಕೇಳಿದರು.

ಸುಪ್ರೀಂಕೋರ್ಟ್ ಇದನ್ನು ಒಪ್ಪಲಿಲ್ಲ ಏಕೆಂದರೆ ಕೇಂದ್ರ ಚುನಾವಣಾ ಆಯೋಗ ಕೂಡ ಇದನ್ನು ತುಂಬಾ ತಡವಾಗಿ ಫಲಿತಾಂಶ ಕೊಡುತ್ತದೆ ಕಾರಣವಾಗುತ್ತೆ ರಾಂಡಮ್ ಆಗಿ ವಿವಿಪ್ಯಾಡ್ ಬಳಕೆ ಮಾಡಬಹುದು. ಅದನ್ನು ಕೌಂಟಿಂಗ್ ಗೆ ಬಳಸಬಹುದು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿತ್ತು.

ರಾಜಕೀಯ ಪಕ್ಷಗಳು ಒಪ್ಪಿಕೊಂಡಿರಲಿಲ್ಲ ಏಕೆಂದರೆ ದೇಶದ ಪ್ರಜಾಪ್ರಭುತ್ವ ವಿವಿ ಟ್ಯಾಪ್ ಅನ್ನು ಪ್ರೋಗ್ರಾಂಗಳು ಕೈಯಲ್ಲಿ ಬಿಡುವುದಕ್ಕೆ ಸಾಧ್ಯವಿಲ್ಲ. ಚಂದ್ರಬಾಬು ನಾಯ್ಡು ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾ ಮಾಡಲಾಗಿದೆ ಪಕ್ಷಗಳಿಗೆ ಚುನಾವಣಾ ಸಂದರ್ಭದಲ್ಲಿ ಭಾರಿ ಹಿನ್ನಡೆ ಉಂಟಾಗಿದೆ.