ಎರಡು ಸಲ ಮಿಸ್​.. ಈ ಸಲ ನಯನತಾರಾ ಮದುವೆ ಫಿಕ್ಸ್..!ಈ ನಟಿ ಸಂಭಾವನೆ ಎಷ್ಟು ಕೋಟಿ ಗೊತ್ತಾ..?

ನಯನತಾರಾ ಫಿಲ್ಮೋಗ್ರಫಿ ಚೆಕ್​ ಮಾಡಿದರೆ, ಇತ್ತೀಚೆಗೆ ಅಂಥಾ ಸೂಪರ್ ಹಿಟ್ ಸಿನಿಮಾಗಳು ಯಾವ್ದು ಕೊಟ್ಟಿಲ್ಲ, ಹಾಗಂತ ಆಕೆಯ ರೆಮ್ಯೂನರೇಷನ್ ಮಾತ್ರ ಕಡಿಮೆಯಾಗಿಲ್ಲ.ಮತ್ತದೇ ಕ್ರೇಜ್. ಹಲವು ವರ್ಷಗಳಿಂದ ಕ್ರೇಜ್​​​ನ ಉಳಿಸಿ, ಬೆಳಸಿಕೊಂಡು ಬರ್ತಿರೋ ಚೆಲುವೆ ನಯನತಾರಾ.

ಇವತ್ತಿಗೂ ಸೌತ್​ನಲ್ಲಿ ಅತಿ ಹೆಚ್ಚು ಅಭಿಮಾನಿಗಳು ಈ ಲೇಡಿ ಸೂಪರ್​ ಸ್ಟಾರ್​ಗಿದ್ದಾರೆ. ಗ್ಲಾಮರ್​ ಜೊತೆಗೂ ಅಭಿನಯಕ್ಕೂ ಸೈ ಅನ್ನೋ ಚೆಲುವೆ ಈಕೆ. ಅದೇ ಕಾರಣಕ್ಕೆ ನಯನತಾರಾ ಕಾಲ್​ಶೀಟ್​ಗಾಗಿ ಫಿಲ್ಮ್​ ಮೇಕರ್ಸ್​ ಮುಗಿಬೀಳ್ತಾರೆ. ಡಿಮ್ಯಾಂಡ್ ಜಾಸ್ತಿಯಾದಂತೆ ಕಾಲ್​ಶೀಟ್​ ರೇಟ್ ಏರ್ತಿದೆ. ಸದ್ಯ ಚಿತ್ರವೊಂದಕ್ಕೆ ನಯನತಾರ 3 ಕೋಟಿ ಸಂಭಾವನೆ ಪಡಿತ್ತಿದ್ದಾರಂತೆ.

ತಮಿಳಿನ ಮಿಸ್ಟರ್ ಲೋಕಲ್, ಕೊಲಯತ್ತೂರ್​ ಕಲಾಂ, ವಿಜಯ್ ನಟನೆಯ ಇನ್ನೂ ಹೆಸರಿಡದ ಚಿತ್ರ, ರಜಿನಿಕಾಂತ್​​​ ಅಭಿನಯದ ದರ್ಬಾರ್, ತೆಲುಗಿನ ಸೈರಾ ನರಸಿಂಹ ರೆಡ್ಡಿ, ಮಲಯಾಳಂನ ಲವ್​ ಆ್ಯಕ್ಷನ್ ಡ್ರಾಮಾ ಸಿನಿಮಾಗಳು ನಯನತಾರಾ ಕೈಯಲ್ಲಿದೆ.

ಸದ್ಯ ಸೌತ್​ನ ಮತ್ಯಾವುದೇ ಟಾಪ್​ ಹಿರೋಯಿನ್​ ಕೈಯಲ್ಲಿ ಇಷ್ಟು ಸಿನಿಮಾಗಳಿಲ್ಲ, ಇದೇ ಕ್ರೇಜ್​ನಿಂದ್ಲೇ ನಯನತಾರಾ ರೆಮ್ಯೂನರೇಷನ್​ 3 ಕೋಟಿ ತಲುಪಿರೋದು. ಇತ್ತೀಚೆಗೆ ನಯನತಾರಾ ಒಂದು ಜಾಹಿರಾತಿಗೆ ಎರಡು ದಿನಗಳ ಕಾಲ್​ಶೀಟ್​ ಕೊಟ್ಟು 3 ಕೋಟಿ ಬ್ಯಾಗಿಗೆ ಇಳಿಸಿದ್ದಾರೆ.

ಬಾಲಕೃಷ್ಣ ನಟನೆಯ ಒಂದು ತೆಲುಗು ಮತ್ತು ಮಣಿರತ್ನಂ ನಿರ್ದೇಶನದ ಐತಿಹಾಸಿಕ ಪೊನ್ನಿಯನ್ ಸೆಲ್ವನ್​​ ಚಿತ್ರಗಳಿಗೆ ನಯನತಾರಾ ನಾಯಕಿಯಾಗೋ ಸಾಧ್ಯತೆಯಿದೆ. ಈ ಕುರಿತು ಮಾತುಕತೆ ನಡೀತಿದ್ದು, ಎಲ್ಲಾ ಅಂದುಕೊಂಡಂತೆ ಆದರೆ, ಈ ಚಿತ್ರಗಳಿಗೂ ದೊಡ್ಡ ಮಟ್ಟದ ರೆಮ್ಯೂನರೇಷನ್​ ನಯನತಾರಾ ಪಡೆಯಲಿದ್ದಾರೆ.

ಎರಡು ಸಲ ಮಿಸ್​.. ಈ ಸಲ ನಯನತಾರಾ ಮದುವೆ ಫಿಕ್ಸ್..!

ಇನ್ನೂ ನಯನತಾರಾ ಪರ್ಸನಲ್ ಲೈಫ್​ ಬಗ್ಗೆ ಹೇಳೋದಾದರೆ, ಈ ನವೆಂಬರ್​ನಲ್ಲಿ ಪ್ರಿಯಕರ ವಿಘ್ನೇಶ್​ ಶಿವನ್​ ಜೊತೆ ನಿಶ್ಚಿತಾರ್ಥಕ್ಕೆ ಮನಸ್ಸು ಮಾಡಿದ್ಧಾರಂತೆ. ಸಿಂಬು ಮತ್ತು ಪ್ರಭುದೇವಾರನ್ನು ಪ್ರೀತಿಸಿ, ದೂರಾದ ನಯನತಾರಾ 4 ವರ್ಷಗಳಿಂದ ಡೈರೆಕ್ಟರ್ ವಿಘ್ನೇಶ್ ಶಿವನ್​ ಜೊತೆ ಪ್ರೀತಿಲಿ ಮುಳುಗಿದ್ದಾರೆ.

ಇದೀಗ ಇಬ್ಬರು ಮದುವೆಗೆ ನಿರ್ಧರಿಸಿದ್ದು, ನವೆಂಬರ್​ನಲ್ಲಿ ಉಂಗುರ ಬದಲಿಸಿಕೊಂಡು ಮುಂದಿನ ವರ್ಷ ಹಸೆಮಣೆ ಏರೋಕೆ ಮುಂದಾಗಿದ್ದಾರಂತೆ. ಮದುವೆ ನಂತರ ಚಿತ್ರರಂಗದಲ್ಲಿ ನಯನತಾರಾ ಕ್ರೇಜ್​ ಹೇಗಿರುತ್ತೋ ಕಾದು ನೋಡ್ಬೇಕು.

Leave a Reply

Your email address will not be published. Required fields are marked *