‘ಜೆಡಿಎಸ್ ಪಕ್ಷದ ವರಿಷ್ಠರ ಮಾತನ್ನು ಧಿಕ್ಕರಿಸಿ ಬಂದಿದ್ದೇನೆ’ – ಶಾಸಕ ಅನ್ನದಾನಿ

ಎಲ್ಲ ಟೆನ್ಷನ್ ಮರೆತು ಚೆಲ್ಲಿದರು ಮಲ್ಲಿಗೆಯ ಜಾನಪದ ಗೀತೆಯನ್ನು ಹಾಡುವ ಮೂಲಕ ಜೆಡಿಎಸ್​ ಶಾಸಕ ಅನ್ನದಾನಿ ಅವರು ಜನರನ್ನು ರಂಜಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಶಾಸಕರಾದ ಅನ್ನದಾನಿ ಅವರು, ಇಷ್ಟು ದಿನ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರೆಲ್ಲರು ರೆಸಾರ್ಟ್ನಲ್ಲಿದ್ದರು. ಸರ್ಕಾರ ಉರುಳುವ ಭಯದಲ್ಲಿ ರೆಸಾರ್ಟ್ ಸೇರಿದ್ದರು.

ಆದರೆ, ಇಂದು ಅನ್ನದಾನಿ ಅವರು ಮಳವಳ್ಳಿಗೆ ಆಗಮಿಸಿ ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದ ಆವರಣದಲ್ಲಿ ನಡೆದ ಆದಿಜಗದ್ಗುರು ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದಾರೆ.

ಅಲ್ಲದೇ ಮಾದೇಶ್ವರರ ಮೇಲಿನ ಚಲ್ಲಿದರು ಮಲ್ಲಿಗೆಯ ಗೀತೆ ಹಾಡಿದ ಶಾಸಕ ಅನ್ನದಾನಿ ಅವರು ಎಲ್ಲ ಗಮನ ಸೆಳೆದಿದ್ದು, ಇಂದಿನ ರಾಜಕೀಯ ಪರಿಸ್ಥಿತಿ ಯಲ್ಲಿ ನಾನು ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿರಲಿಲ್ಲ, ಆದರೆ, ನನ್ನ ಕ್ಷೇತ್ರದ ಜನರ ಸಮಸ್ಯೆ ಗಳನ್ನು ಆಲಿಸಿದ ನಂತರ ಸಂಜೆಯೊಳಗೆ ಬಂದು ನಿಮ್ಮಲ್ಲಿಗೆ ಸೇರುತ್ತೇನೆ ಎಂದು ಹೇಳಿ ಬಂದಿದ್ದೇನೆ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯ ನಮ್ಮ ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಸಿ ಬಂದ್ದಿದ್ದೇನೆ. ಜನರ ಸಮಸ್ಯೆಗಳನ್ನು ಕೇಳದಿದ್ದರೆ ಮನುಷ್ಯನಾಗಿರಲು ಸಾಧ್ಯವಿಲ್ಲವೆಂದು ನಮ್ಮ ವರಿಷ್ಠರು ಮಾತನ್ನು ಧಿಕ್ಕರಿಸಿ ನಾನು ಇಲ್ಲಿಗೆ ಬಂದಿದ್ದೇನೆ. ಇನ್ನೆರಡು ದಿನಗಳಲ್ಲಿ ಸರ್ಕಾರದ ಭವಿಷ್ಯ ಏನಾಗುತ್ತೋ ಯಾರಿಗು ಗೊತ್ತಿಲ್ಲ, ಆದರೂ ದೇವರನ್ನು ನಂಬಿಕೊಂಡಿದ್ದು ಸರಿಯಾಗುವ ಭರವಸೆ ಇದೆ ಎಂದು ಮಳವಳ್ಳಿ ಜೆಡಿಎಸ್​ ಶಾಸಕ ಅನ್ನದಾನಿ ಅವರು ನುಡಿದರು.

Leave a Reply

Your email address will not be published. Required fields are marked *