ಅತೃಪ್ತ ಶಾಸಕರ ವಿರುದ್ದ ಸೇಡು ತೀರಿಸಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಕಾಂಗ್ರೆಸ್ಸ್ ನಾಯಕರು!

ವಿಶ್ವಾಸಮತಯಾಚನೆಗೆ ಕ್ಷಣಗಣನೆ ಆರಂಭವಾಗಿದ್ದರೂ ರಾಜ್ಯದಲ್ಲಿ ರಾಜಕೀಯ ಆಟ ಮುಗಿದಿಲ್ಲ. ಹೌದು ಸುಪ್ರೀಂ ಕೋರ್ಟ್​​ ಅತೃಪ್ತರು ಅಧಿವೇಶನಕ್ಕೆ ಹಾಜರಾಗಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಆದೇಶಿಸಿದ ಬೆನ್ನಲ್ಲೇ, ಅತೃಪ್ತರ ಅಮಾನತ್ತಿಗೆ ಮೈತ್ರಿ ನಾಯಕರು ಪಟ್ಟು ಹಿಡಿದಿದ್ದಾರೆ.

ಹೊಟೇಲ್​ನಲ್ಲಿ ಭರ್ಜರಿ ಸಭೆ ನಡೆಸಿದ ಬಳಿಕ ಸ್ಪೀಕರ್ ಕಚೇರಿಗೆ ತೆರಳಿದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ಧರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ್ ಸೇರಿದಂತೆ ಮೈತ್ರಿ ನಾಯಕರು ನಾಳೆ ಅಧಿವೇಶನಕ್ಕೂ ಮುನ್ನವೇ 15 ಅತೃಪ್ತ ಶಾಸಕರನ್ನು ಅಮಾನತ್ತುಗೊಳಿಸುವಂತೆ ಸ್ಪೀಕರ್​ಗೆ ಮನವಿ ಮಾಡಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್.ಶಂಕರ್ ಸೇರಿದಂತೆ ಎಲ್ಲರನ್ನು ಅನರ್ಹಗೊಳಿಸುವಂತೆ ನಾಯಕರು ಮನವಿ ಮಾಡಿದ್ದಾರೆ. ಅಲ್ಲದೇ ಅತೃಪ್ತ ಶಾಸಕರಾದ ಮಹೇಶ್ ಕುಮಟಳ್ಳಿ ಹಾಗೂ ರಮೇಶ್ ಜಾರಕಿಹೊಳಿಯವರನ್ನು ಇಂದು ಸಂಜೆಯೇ ಅನರ್ಹಗೊಳಿಸುವಂತೆ ದೋಸ್ತಿ ನಾಯಕರು ಒತ್ತಾಯಿಸಿದ್ದಾರೆ.

ಒಂದೊಮ್ಮೆ ಈ ನಾಯಕರು ಅನರ್ಹಗೊಂಡಲ್ಲಿ, ಮುಂದಿನ 6 ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ. ಶಾಸಕ ಅಥವಾ ಸಂಸದ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ. ಅಷ್ಟೇ ಅಲ್ಲ, 6 ವರ್ಷ ಸಚಿವ ಹಾಗೂ ನಿಗಮ ಮಂಡಳಿಯಲ್ಲೂ ಅಧಿಕಾರ ಪಡೆಯುವಂತಿಲ್ಲ. ಹೀಗಾಗಿ ಅತೃಪ್ತಿ ಹೊತ್ತು ಮುಂಬೈ ಸೇರಿ ಸರ್ಕಾರಕ್ಕೆ ಸಂಕಷ್ಟ ತಂದಿರುವ ಶಾಸಕರಿಗೆ ಪಾಠ ಕಲಿಸಲು ಸಮ್ಮಿಶ್ರ ಸರ್ಕಾರದ ನಾಯಕರು ಮಹಾಪ್ಲ್ಯಾನ್ ಮಾಡಿದ್ದಾರೆ.

Leave a Reply

Your email address will not be published. Required fields are marked *