ಮಂಡ್ಯದಲ್ಲಿ ಕಂಡಿತಂತೆ ದೆವ್ವ, ಬೆಚ್ಚಿಬಿದ್ದ ಸಕ್ಕರೆನಾಡು ಮಂದಿ..?!

ಮಂಡ್ಯದಲ್ಲಿ ದೆವ್ವ ಕಾಣಿಸಿಕೊಂಡಿದೆ ಎಂಬ ಸುದ್ದಿ ಹಬ್ಬಿದ್ದು, ಇದಕ್ಕೆ ಸಂಬಂಧಿಸಿದಂತೆ 2 ಫೋಟೋಗಳು ಕೂಡ ರಿವೀಲ್ ಆಗಿದೆ. ಮಂಡ್ಯದ ಗುತ್ತಲು ರಸ್ತೆ ಮತ್ತು ಮಹಾವೀರ ವೃತ್ತದಲ್ಲಿ ದೆವ್ವ ಕಾಣಿಸಿದೆಯಂತೆ.

ಗುತ್ತಲು ರಸ್ತೆಯ ಸಾದತ್ ನಗರದ ಬಳಿ ಎರಡು ದೆವ್ವಗಳು ಕಾಣಿಸಿಕೊಂಡಿದ್ದು, ಕಳೆದ ವರ್ಷ ಇದೇ ಸ್ಥಳದಲ್ಲಿ ಭೀಕರ ಅಪಘಾತವಾಗಿ ನಾಲ್ಕು ಮಂದಿ ದಾರುಣವಾಗಿ ಸಾವಿಗೀಡಾಗಿದ್ದರು. ಸಾವನ್ನಪ್ಪಿದವರೇ ದೆವ್ವಗಳಾಗಿ ಬಂದಿದ್ದಾರೆಂಬುದು ಇಲ್ಲಿ ಸ್ಥಳೀಯರ ಮಾತು.

ಮಹಾಲಯ ಅಮವಾಸ್ಯೆ ಹಿನ್ನೆಲೆ ಪದೇ ಪದೇ ದೆವ್ವ ಕಾಣಿಸುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಫೋಟೋಗಳು ಕೂಡ ರಿವೀಲ್ ಆಗಿದ್ದು, ಸಕ್ಕರೆ ನಾಡಿನ ಜನ ಬೆಚ್ಚಿಬೀಳುವಂತಾಗಿದೆ. ಆದ್ರೆ ನಿಜವಾಗ್ಲೂ ಅದು ದೆವ್ವಾನೇನಾ..? ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ.