‘ಜೆಡಿಎಸ್ ಪಕ್ಷದ ವರಿಷ್ಠರ ಮಾತನ್ನು ಧಿಕ್ಕರಿಸಿ ಬಂದಿದ್ದೇನೆ’ – ಶಾಸಕ ಅನ್ನದಾನಿ

ಎಲ್ಲ ಟೆನ್ಷನ್ ಮರೆತು ಚೆಲ್ಲಿದರು ಮಲ್ಲಿಗೆಯ ಜಾನಪದ ಗೀತೆಯನ್ನು ಹಾಡುವ ಮೂಲಕ ಜೆಡಿಎಸ್​ ಶಾಸಕ ಅನ್ನದಾನಿ ಅವರು ಜನರನ್ನು ರಂಜಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಶಾಸಕರಾದ ಅನ್ನದಾನಿ ಅವರು, ಇಷ್ಟು ದಿನ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರೆಲ್ಲರು ರೆಸಾರ್ಟ್ನಲ್ಲಿದ್ದರು. ಸರ್ಕಾರ ಉರುಳುವ ಭಯದಲ್ಲಿ ರೆಸಾರ್ಟ್ ಸೇರಿದ್ದರು.

ಆದರೆ, ಇಂದು ಅನ್ನದಾನಿ ಅವರು ಮಳವಳ್ಳಿಗೆ ಆಗಮಿಸಿ ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದ ಆವರಣದಲ್ಲಿ ನಡೆದ ಆದಿಜಗದ್ಗುರು ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದಾರೆ.

ಅಲ್ಲದೇ ಮಾದೇಶ್ವರರ ಮೇಲಿನ ಚಲ್ಲಿದರು ಮಲ್ಲಿಗೆಯ ಗೀತೆ ಹಾಡಿದ ಶಾಸಕ ಅನ್ನದಾನಿ ಅವರು ಎಲ್ಲ ಗಮನ ಸೆಳೆದಿದ್ದು, ಇಂದಿನ ರಾಜಕೀಯ ಪರಿಸ್ಥಿತಿ ಯಲ್ಲಿ ನಾನು ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿರಲಿಲ್ಲ, ಆದರೆ, ನನ್ನ ಕ್ಷೇತ್ರದ ಜನರ ಸಮಸ್ಯೆ ಗಳನ್ನು ಆಲಿಸಿದ ನಂತರ ಸಂಜೆಯೊಳಗೆ ಬಂದು ನಿಮ್ಮಲ್ಲಿಗೆ ಸೇರುತ್ತೇನೆ ಎಂದು ಹೇಳಿ ಬಂದಿದ್ದೇನೆ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯ ನಮ್ಮ ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಸಿ ಬಂದ್ದಿದ್ದೇನೆ. ಜನರ ಸಮಸ್ಯೆಗಳನ್ನು ಕೇಳದಿದ್ದರೆ ಮನುಷ್ಯನಾಗಿರಲು ಸಾಧ್ಯವಿಲ್ಲವೆಂದು ನಮ್ಮ ವರಿಷ್ಠರು ಮಾತನ್ನು ಧಿಕ್ಕರಿಸಿ ನಾನು ಇಲ್ಲಿಗೆ ಬಂದಿದ್ದೇನೆ. ಇನ್ನೆರಡು ದಿನಗಳಲ್ಲಿ ಸರ್ಕಾರದ ಭವಿಷ್ಯ ಏನಾಗುತ್ತೋ ಯಾರಿಗು ಗೊತ್ತಿಲ್ಲ, ಆದರೂ ದೇವರನ್ನು ನಂಬಿಕೊಂಡಿದ್ದು ಸರಿಯಾಗುವ ಭರವಸೆ ಇದೆ ಎಂದು ಮಳವಳ್ಳಿ ಜೆಡಿಎಸ್​ ಶಾಸಕ ಅನ್ನದಾನಿ ಅವರು ನುಡಿದರು.

ಯಡಿಯೂರಪ್ಪ ಹೊಸ ಬಾಂಬ್ : ಕುಮಾರಸ್ವಾಮಿ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿ ಕೊಡಲಿ

ಕುಮಾರಸ್ವಾಮಿ ಅವರು ತಕ್ಷಣ ರಾಜೀನಾಮೆ ಕೊಡಲಿ, ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಧವಳಗಿರಿ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರ ಮೇಲೆ ವಿಪ್ ಜಾರಿ ಮಾಡಿದರೆ ಪರಿಣಾಮ ಆಗಲ್ಲ, ನಾಳೆ ಸಾಯಂಕಾಲದವರೆಗೆ ಎಲ್ಲ ಮುಗಿಯುವ ಭರವಸೆ ಇದೆ ಅಲ್ಲಿಯವರೆಗೆ ಕಾಯುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಎಲ್ಲರ ಗಮನ ನಾಳೆ ಸುಪ್ರೀಂಕೋರ್ಟ್ ಏನು ತೀರ್ಪು ಕೊಡಬಹುದು ಅನ್ನೋದರ ಮೇಲಿದೆ. ಈಗಾಗಲೇ ಸುಪ್ರೀಂಕೋರ್ಟ್ ಶಾಸಕರಿಗೆ ಸದನಕ್ಕೆ ಬರಬೇಕು ಅಂತ ಬಲವಂತ ಮಾಡಬಾರದು ಅಂತ ಹೇಳಿದೆ. ಸುಪ್ರೀಂ ಕೋರ್ಟ್ 15 ಜನ ಶಾಸಕರಿಗೆ ವಿಧಾನಸಭೆ ಹೋಗಬಹುದು ಅಥವಾ ಹೋಗದೆ ಇರಬಹುದು ಎಂದು ಹೇಳಿದೆ ಎಂದರು.

ಕುಮಾರಸ್ವಾಮಿ ಅವರು ಅನಗತ್ಯ ವಿಳಂಬ ಮಾಡಬಾರದು. ನಾಳೆ ವಿಶ್ವಾಸ ಮತ ಮಾಡುವ ಭರವಸೆಯನ್ನು ಸ್ಪೀಕರ್ ಮತ್ತು ಮುಖ್ಯಮಂತ್ರಿ ಕೊಟ್ಟಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ವಿಳಂಬ ಮಾಡಿದರೆ ಪ್ರಜಾತಂತ್ರಕ್ಕೆ ದ್ರೋಹ ಮಾಡಿದಂತಾಗುತ್ತದೆ ಹೀಗಾಗಿ ನಾವು ನಾಳೆವರೆಗೆ ಕಾದು ನೋಡುತ್ತೇವೆ ಎಂದರು.