ಅತೃಪ್ತ ಶಾಸಕರ ವಿರುದ್ದ ಸೇಡು ತೀರಿಸಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಕಾಂಗ್ರೆಸ್ಸ್ ನಾಯಕರು!

ವಿಶ್ವಾಸಮತಯಾಚನೆಗೆ ಕ್ಷಣಗಣನೆ ಆರಂಭವಾಗಿದ್ದರೂ ರಾಜ್ಯದಲ್ಲಿ ರಾಜಕೀಯ ಆಟ ಮುಗಿದಿಲ್ಲ. ಹೌದು ಸುಪ್ರೀಂ ಕೋರ್ಟ್​​ ಅತೃಪ್ತರು ಅಧಿವೇಶನಕ್ಕೆ ಹಾಜರಾಗಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಆದೇಶಿಸಿದ ಬೆನ್ನಲ್ಲೇ, ಅತೃಪ್ತರ ಅಮಾನತ್ತಿಗೆ ಮೈತ್ರಿ ನಾಯಕರು ಪಟ್ಟು ಹಿಡಿದಿದ್ದಾರೆ.

ಹೊಟೇಲ್​ನಲ್ಲಿ ಭರ್ಜರಿ ಸಭೆ ನಡೆಸಿದ ಬಳಿಕ ಸ್ಪೀಕರ್ ಕಚೇರಿಗೆ ತೆರಳಿದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ಧರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ್ ಸೇರಿದಂತೆ ಮೈತ್ರಿ ನಾಯಕರು ನಾಳೆ ಅಧಿವೇಶನಕ್ಕೂ ಮುನ್ನವೇ 15 ಅತೃಪ್ತ ಶಾಸಕರನ್ನು ಅಮಾನತ್ತುಗೊಳಿಸುವಂತೆ ಸ್ಪೀಕರ್​ಗೆ ಮನವಿ ಮಾಡಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್.ಶಂಕರ್ ಸೇರಿದಂತೆ ಎಲ್ಲರನ್ನು ಅನರ್ಹಗೊಳಿಸುವಂತೆ ನಾಯಕರು ಮನವಿ ಮಾಡಿದ್ದಾರೆ. ಅಲ್ಲದೇ ಅತೃಪ್ತ ಶಾಸಕರಾದ ಮಹೇಶ್ ಕುಮಟಳ್ಳಿ ಹಾಗೂ ರಮೇಶ್ ಜಾರಕಿಹೊಳಿಯವರನ್ನು ಇಂದು ಸಂಜೆಯೇ ಅನರ್ಹಗೊಳಿಸುವಂತೆ ದೋಸ್ತಿ ನಾಯಕರು ಒತ್ತಾಯಿಸಿದ್ದಾರೆ.

ಒಂದೊಮ್ಮೆ ಈ ನಾಯಕರು ಅನರ್ಹಗೊಂಡಲ್ಲಿ, ಮುಂದಿನ 6 ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ. ಶಾಸಕ ಅಥವಾ ಸಂಸದ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ. ಅಷ್ಟೇ ಅಲ್ಲ, 6 ವರ್ಷ ಸಚಿವ ಹಾಗೂ ನಿಗಮ ಮಂಡಳಿಯಲ್ಲೂ ಅಧಿಕಾರ ಪಡೆಯುವಂತಿಲ್ಲ. ಹೀಗಾಗಿ ಅತೃಪ್ತಿ ಹೊತ್ತು ಮುಂಬೈ ಸೇರಿ ಸರ್ಕಾರಕ್ಕೆ ಸಂಕಷ್ಟ ತಂದಿರುವ ಶಾಸಕರಿಗೆ ಪಾಠ ಕಲಿಸಲು ಸಮ್ಮಿಶ್ರ ಸರ್ಕಾರದ ನಾಯಕರು ಮಹಾಪ್ಲ್ಯಾನ್ ಮಾಡಿದ್ದಾರೆ.

ನಾಳೆ ವಿಶ್ವಾಸಮತ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಸವರಾಜ​ ರಾಯರೆಡ್ಡಿ ಹೊಸ ಬಾಂಬ್!

ನಾಳೆ ವಿಶ್ವಾಸಮತ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಸವರಾಜ​ ರಾಯರೆಡ್ಡಿ ಹೊಸ ಬಾಂಬ್​ ಸಿಡಿಸಿದ್ದು, ವಿಶ್ವಾಸ ಮತಯಾಚನೆ ವೇಳೆ ಬಿಜೆಪಿಯವರಿಂದಲೂ ಬೆಂಬಲ ಸಿಗಬಹುದು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಬುಧವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಅವರು ನುಡಿದರು.

ಇನ್ನು ನಾಳೆ ವಿಶ್ವಾಸ ಮತಯಾಚನೆ ವೇಳೆ ಏನು ಬೇಕಾದ್ರೂ ಆಗಬಹುದು. ಬಿಜೆಪಿಯವರು ನಾಲ್ಕೈದು ಜನ ನಮಗೆ ಬೆಂಬಲಿಸಬಹುದು. ಇಲ್ಲವೇ ನಮ್ಮವರೇ ಬಂದು ಬೆಂಬಲವನ್ನೂ ನೀಡಬಹುದು. ವಿಶ್ವಾಸ ಮತಯಾಚನೆ ವೇಳೆ ಏನಾಗಲಿದೆ ಅನ್ನೋದನ್ನ ಕಾದು ನೋಡಿ ಎಂದು ಮಾಜಿ ಸಚಿವ ಬಸವರಾಜ​ ರಾಯರೆಡ್ಡಿ ಹೊಸ ಬಾಂಬ್​ ಸಿಡಿಸಿದ್ದಾರೆ.

ಸುಪ್ರೀಂಕೋರ್ಟ್​​ ತೀರ್ಪು ಮೈತ್ರಿ ಸರ್ಕಾರಕ್ಕೆ ಹಿನ್ನೆಡೆ ಅಲ್ಲ, ವಿಪ್ ಕೊಡೋದು ಸಂವಿಧಾನಾತ್ಮಕ ಹಕ್ಕು. ಕೋರ್ಟ್​ ತೀರ್ಪು ಸರಿಯಿದೆ. ಕಲಾಪಕ್ಕೆ ಭಾಗಿಯಾಗುವ ವಿಚಾರ ಶಾಸಕರಿಗೆ ಬಿಟ್ಟಿದ್ದು, ರಾಜೀನಾಮೆ ಅಂಗೀಕಾರ, ತಿರಸ್ಕಾರ ಸ್ಪೀಕರ್​​ಗೆ ಬಿಟ್ಟಿದ್ದು ಈ ಬಗ್ಗೆ ಸ್ಪೀಕರ್ ಇಂದು ಅಥವಾ ನಾಳೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದರು.

ಜುಲೈ 22 ರವರೆಗೂ ಸರ್ಕಾರದ ಅನಿಶ್ಚಿತತೆ ಮುಂದುವರಿಕೆ? : ಮುಖ್ಯಮಂತ್ರಿ ಕುಮಾರಸ್ವಾಮಿ

ಕರ್ನಾಟಕ ರಾಜ್ಯ ರಾಜಕೀಯ ಬಿಕ್ಕಟ್ಟು ಸದ್ಯದಲ್ಲಿ ಬಗೆಹರಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ, ಮುಂದಿನ ಸೋಮವಾರದವರೆಗೂ ಈ ಅನಿಶ್ಚಿತತೆ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.

ಏಕೆಂದರೇ ಅತೃಪ್ತ ಶಾಸಕರ ಮನವೊಲಿಸಲು ಸಮಯ ಬೇಕಾಗಿರುವ ಕಾರಣ ಮುಂದಿನ ಸೋಮವಾರದವರೆಗೆ ಸದನದಲ್ಲಿ ವಿಶ್ವಾಸ ಮತ ಯಾಚನೆ ಸಂಬಂಧ ಚರ್ಚೆ ನಡೆಯಲಿದೆ, ಮೂಲಗಳ ಪ್ರಕಾರ ಗುರುವಾರ ವಿಶ್ವಾಸ ಮತಯಾಚನೆ ಕಾರ್ಯ ಆಗುವುದಿಲ್ಲ,

ಸಮ್ಮಿಶ್ರ ಸರ್ಕಾರದ ಮುಖಂಡರು ಬೇಕಂತಲೇ ಸದನವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಹೀಗಾಗಿ ಮುಂದಿನ ಸೋಮವಾರ ಅಂದರೇ ಜುಲೈ 22 ರವರೆಗೆ ಸದನವನ್ನು ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ., ಸದನದಲ್ಲಿ ಮಾತನಾಡುವರ ಸಂಖ್ಯೆ ಹೆಚ್ಚಿಸಿ ಆ ಮೂಲಕ ಸಮಯವನ್ನು ತಮ್ಮದಾಗಿಸಿಕೊಳ್ಳಲು ಸಮ್ಮಿಶ್ರ ಸರ್ಕಾರದ ಮುಖಂಡರು ಪ್ಲಾನ್ ಮಾಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಜಿ ಪರಮೇಶ್ವರ್ ಹಾಗೂ ಡಿ.ಕೆ ಶಿವಕುಮಾರ್ ವಿಶ್ವಾಸ ಮತಯಾಚನೆ ವೇಳೆ ಮಾತನಾಡಲಿದ್ದಾರೆ. ಸೋಮವಾರ ಅಥವಾ ಪ್ರಶಸ್ತ ಗಳಿಗೆಯಲ್ಲಿ ಸಿಎಂ ತಮ್ಮ ಹುದ್ದೆಗೆ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ವಿಶ್ವಾಸಮತ ಯಾಚನೆ ಏಕೆ ಅನಿವಾರ್ಯ ಎಂಬದನ್ನು ನಾವು ದಾಖಲೆಯಲ್ಲಿ ತರಲು ಬಯಸುತ್ತೇವೆ, ಸರ್ಕಾರವನ್ನು ಬೀಳಿಸಲು ಅವರು ಎಷ್ಟೆಲ್ಲಾ ಪ್ರಯತ್ನ ಮಾಡಿದರು ಎಂಬ ಬಗ್ಗೆ ಎಲ್ಲರಿಗೂ ತಿಳಿಯಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ನಮ್ಮ ಶಾಸಕರು ವಾಪಸ್ ಬರಲಿದ್ದಾರೆ. ಮುಂಬಯಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅವರನ್ನು ಲಾಕ್ ಮಾಡಲಾಗಿದೆ. ಅವರ ಫೋನ್ ಗಳನ್ನು ಅವರಿಂದ ಕಸಿದುಕೊಳ್ಳಲಾಗಿದೆ, ಸಂಪೂರ್ಣವಾಗಿ ಅವರನ್ನು ಬಂಧನದಲ್ಲಿರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದ ಸಿಎಂ ನಡೆ : ದಿಢೀರ್ ಪ್ರಯಾಣ

ರಾಜ್ಯ ರಾಜಕೀಯ ಪ್ರಹಸನದ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ. 

ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ HAL ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ದಿಲ್ಲಿಗೆ ತೆರಳುವ ಸಾಧ್ಯತೆ ಇದೆ. ಈ ನಡೆ ಕುತೂಹಲಕ್ಕೆ ಕಾರಣವಾಗಿದೆ. 

ಸುಪ್ರೀಂ ತೀರ್ಪು ಬೆನ್ನಲ್ಲೇ ಸಿಎಂ ವಿಮಾನ ನಿಲ್ದಾಣಕ್ಕೆ ತೆರಳಿದ್ದು,  ದಿಲ್ಲಿಗೆ ತೆರಳಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭೇಟಿ ಮಾಡುವ ಸಾಧ್ಯತೆ ಇದೆ. ಆದರೆ ಸಿಎಂ ಪ್ರಯಾಣದ ಹಾದಿ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.

ಅವಿಶ್ವಾಸ ನಿರ್ಣಯದ ವೇಳೆ ಅತೃಪ್ತರಾಗಿ ರಾಜೀನಾಮೆ ನೀಡಿ ಹೋದ ಶಾಸಕರು ಆಗಮಿಸಬಹುದು ಅಥವಾ, ಆಗಮಿಸದೇ ಇರಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅವರಿಗೆ ಆಗಮಿಸಲು ಯಾವುದೇ ಒತ್ತಡ ಹೇರುವಂತಿಲ್ಲ ಎಂದು ತೀರ್ಪು ಬಂದಿದೆ. ಇದು ಮೈತ್ರಿ ನಾಯಕರಲ್ಲಿ ಆತಂಕ ಮೂಡಿಸಿದ್ದು, ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.

ಬಿಜೆಪಿಗೆ ಉಲ್ಟಾ ಹೊಡೆದು ಮತ್ತೆ ಕಾಂಗ್ರೆಸ್ ಸೇರಲಿದ್ದಾರಾ ಆ ಬಂಡಾಯ ಶಾಸಕ!? ಚಿಂತೆಯಲ್ಲಿ ಯಡಿಯೂರಪ್ಪ

ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮುಂಬೈ ನಲ್ಲಿ ಇದ್ದಾರೆ ಆದರೆ ಬೆಂಗಳೂರಿನ ಶಾಸಕರೊಬ್ಬರು ಮತ್ತೆ ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ಬಂದಿದ್ದಾರೆ!

ಬೆಂಗಳೂರಿನ ಬಹುತೇಕ ಶಾಸಕರು ರಾಜೀನಾಮೆ ನೀಡಿ ಮುಂಬೈನಲ್ಲಿದ್ದಾರೆ ಅವರು ಕೋರ್ಟ್ ನ ಆದೇಶದ ಪ್ರಕಾರ ವಿಪ್ ನಡೆಯುವ ಸಂದರ್ಭದಲ್ಲಿ ಸಂಸತ್ತಿಗೆ ಬರಬೇಕು ಎಂಬ ಯಾವ ಒತ್ತಡವೂ ಇಲ್ಲ ಆದರೆ ಕಾಂಗ್ರೆಸ್ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಮಾತ್ರ ತಮ್ಮ ವರಸೆಯನ್ನು ಬದಲಾಯಿಸಿದ್ದಾರೆ ಅದೇನೆಂದರೆ ನಾನು ಮತ್ತೆ ಕಾಂಗ್ರೆಸ್ ಸಭೆಗೆ ಬರಲಿದ್ದೇನೆ ಎಂದು ಹೇಳಿದ್ದಾರೆ.

ರಾಜಿನಾಮೆ ಹಿಂಪಡೆಯುವುದು ಅಥವಾ ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಸ್ಪೀಕರ್ ಬಳಿ ಕೇಳುವುದು ಅದರ ಬಗ್ಗೆ ಈಗ ನಾನು ಹೇಳುವುದಿಲ್ಲ ಮುಂದಿನ ದಿನಗಳಲ್ಲಿ ಹೇಳುತ್ತೇನೆ.. ಎಂದು ಹೇಳಿದರು.

ಇದೆಲ್ಲವೂ ಯಡಿಯೂರಪ್ಪನವರಿಗೆ ಯೋಚನೆಯಾಗಿ ಪರಿಣಿಮಿಸಿದೆ ಕಾರಣವೇನೆಂದರೆ ರಾಮಲಿಂಗ ರೆಡ್ಡಿ ಅವರೇ ಮುಖ್ಯವಾಗಿ ಅತೃಪ್ತ ಶಾಸಕರ ನಾಯಕರ ಎಂಬಂತೆ ಇದ್ದರೂ ಅವರಿಂದ ಏನಾದರೂ ಬೇರೆ ಶಾಸಕರ ಮನವೊಲಿಸುವ ಪ್ರಯತ್ನ ಮಾಡಿದರೆ ಅಲ್ಲಿಗೆ ಬಿಜೆಪಿಯ ಕನಸು ಭಗ್ನವಾಗಲಿದೆ.

ಸ್ಪೀಕರ್ ಒಂದು ಎಡವಟ್ಟು ಬಿಜೆಪಿಗೇ ಬಾರಿ ಲಾಭ? ಬಂಡಾಯ ಶಾಸಕರ ಕೈಯಲ್ಲಿ ದೋಸ್ತಿ ಸರ್ಕಾರದ ಜುಟ್ಟು!

ಸರ್ಕಾರದ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿದ್ದ ಬಂಡಾಯ ಶಾಸಕರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ರಾಜೀನಾಮೆ ಅಂಗೀಕಾರವಾಗದೇ ಅತಂತ್ರ ಮತ್ತು ಅನಿಶ್ಚಿತ ಸ್ಥಿತಿಯಲ್ಲಿದ್ದ ಅತೃಪ್ತರಿಗೆ ಸುಪ್ರೀಂ ಕೋರ್ಟ್ ತೀರ್ಪು ಬಲ ಕೊಟ್ಟಿದೆ.

ಗುರುವಾರ ನಡೆಯುವ ವಿಶ್ವಾಸ ಮತಯಾಚನೆಗೆ ಬಂಡಾಯ ಶಾಸಕರನ್ನು ಹಾಜರಾಗಲೇಬೇಕೆಂದು ಒತ್ತಾಯಪಡಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂದರೆ, ಅತೃಪ್ತ ಶಾಸಕರಿಗೆ ವಿಪ್ ಹೊರಡಿಸಲು ಸಾಧ್ಯವಾಗುವುದಿಲ್ಲ. ಇದು ಬಿಜೆಪಿ ಪಾಲಿಗೆ ವರದಾನವಾಗಿದೆ.

ವಿಶ್ವಾಸ ಮತ ಯಾಚನೆ ವೇಳೆ 15 ಅತೃಪ್ತ ಶಾಸಕರು ಗೈರಾದರೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಂತಾಗುತ್ತದೆ. ಬಿಜೆಪಿಯಿಂದ ರಾತ್ರೋರಾತ್ರಿ ಸಾಕಷ್ಟು ಸಂಖ್ಯೆಯಲ್ಲಿ ಶಾಸಕರನ್ನು ಸೆಳೆದುಕೊಂಡರೆ ಮಾತ್ರ ಮೈತ್ರಿಸರ್ಕಾರ ಉಳಿಯಲು ಸಾಧ್ಯ. ಇಲ್ಲವಾದಲ್ಲಿ ಸರ್ಕಾರದ ಪತನ ತಡೆಯಲು ಸಾಧ್ಯವಿಲ್ಲ.

ಒಂದು ವೇಳೆ, ಸ್ಪೀಕರ್ ರಮೇಶ್ ಕುಮಾರ್ ಅವರು 15 ಶಾಸಕರನ್ನು ಅನರ್ಹಗೊಳಿಸುವ ಕಡುನಿರ್ಧಾರಕ್ಕೆ ಬಂದರೂ ಮೈತ್ರಿ ಸರ್ಕಾರದ ಪತನವನ್ನು ತಡೆಯಲು ಸಾಧ್ಯವಿಲ್ಲ.

ಅತೃಪ್ತರ ಕೈಲಿದೆ ಸರ್ಕಾರದ ಭವಿಷ್ಯ:
ಆದರೆ, ಮೈತ್ರಿ ಸರ್ಕಾರ ಉಳಿಸುವ ಏಕೈಕ ಮಾರ್ಗ ಇರುವುದು ಅತೃಪ್ತರಲ್ಲೇ. ಅಂದರೆ, ರಾಜೀನಾಮೆ ನೀಡಿರುವ ಬಂಡಾಯ ಶಾಸಕರು ದಿಢೀರ್ ಮನಸು ಬದಲಾಯಿಸಿ ನಾಳೆ ವಿಶ್ವಾಸ ಮತ ಯಾಚನೆಗೆ ಬಂದು ಮೈತ್ರಿ ಸರ್ಕಾರದ ಪರ ವೋಟು ಚಲಾಯಿಸಿದರೆ ಕುಮಾರಸ್ವಾಮಿ ಸರ್ಕಾರ ಉಳಿಯಲು ಸಾಧ್ಯ. ಪ್ರಸಕ್ತ ಸಂದರ್ಭದಲ್ಲಿ ಇದು ಬಹುತೇಕ ಅಸಾಧ್ಯವೆಂಬಂತಿದೆ.

ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ಧಾರೆ. ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯವಾಗಿದೆ. ಅತೃಪ್ತ ಶಾಸಕರಿಗೆ ಸಿಕ್ಕ ನೈತಿಕ ಜಯವಾಗಿದೆ. ಸ್ಪೀಕರ್ ಅಧಿಕಾರವನ್ನು ಸುಪ್ರೀಂ ಕೋರ್ಟ್ ಮಿತಿಗೊಳಿಸಿದೆ. ಇದು ಸ್ವಾಗತಾರ್ಹ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇನ್ನು, ಕೆ.ಎಸ್. ಈಶ್ವರಪ್ಪ ಅವರು ಸಿಎಂ ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿದ್ಧಾರೆ. ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಗೊತ್ತಿದ್ರೂ ನಾಳೆ ವಿಶ್ವಾಸಮತ ಯಾಚನೆ ಯಾಕೆ? ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಮಾಜಿ ಉಪಮುಖ್ಯಮಂತ್ರಿಯೂ ಆದ ಈಶ್ವರಪ್ಪ ಆಗ್ರಹಿಸಿದ್ದಾರೆ.

ಸರ್ಕಾರದ ಪತನ ಹೇಗೆ?
ಕರ್ನಾಟಕ ವಿಧಾನಸಭೆ ಬಲಾಬಲ: 224
ರಾಜೀನಾಮೆ ನೀಡಿರುವ ಶಾಸಕರು: 16
ವಿಶ್ವಾಸ ಮತಯಾಚನೆಯ ದಿನ ಇವರು ಗೈರಾದಲ್ಲಿ ಸದನದ ಬಲ 108ಕ್ಕೆ ಇಳಿಕೆ
ವಿಶ್ವಾಸಮತ ಗೆಲ್ಲಲು ಬೇಕಾದ ಬಹುಮತ: 105
ಮೈತ್ರಿ ಸರ್ಕಾರದ ಬಲ: 119-18 = 101

ಬಿಜೆಪಿಯ ಬಲ: 105+2 = 107

ರಾಜ್ಯ ರಾಜಕಾರಣದಲ್ಲಿ ಮಹತ್ತರ ತಿರುವು : ಸುಪ್ರೀಂ ತೀರ್ಪಿನ ಹೀನ್ನಲ್ಲೇ ಅತೃಪ್ತ ಶಾಸಕರ ಪುಲ್ಲ ಆಕ್ಟಿವ್; ಮುಂದಿನ ನಡೆ ಪ್ರಕಟ!

ರಾಜ್ಯ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ಪ್ರಕಟಿಸಿದ್ದು, ಇದು ಸ್ಪೀಕರ್ ಹಾಗೂ ಅತೃಪ್ತ ಶಾಸಕರು ಇಬ್ಬರಿಗೂ ರಿಲೀಫ್ ನೀಡಿದೆ.

ಹೀಗಿದ್ದರೂ ತೀರ್ಪಿನಿಂದ ಸರ್ಕಾರ ಪತನಗೊಳ್ಳುವ ಲಕ್ಷಣಗಳು ಮಾತ್ರ ಮತ್ತಷ್ಟು ಹೆಚ್ಚಾಗಿವೆ. ಸದ್ಯ ಈ ಎಲ್ಲಾ ಹೈಡ್ರಾಮಾದ ಬೆನ್ನಲ್ಲೇ ಅತೃಪ್ತ ಶಾಸಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ತಮ್ಮ ಮುಂದಿನ ನಡೆ ಏನು ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ.

ಸುಪ್ರಿಂ ಮಧ್ಯಂತರ ತೀರ್ಪು ಪ್ರಕಟಿಸಿದ ಬಳಿಕ ಪ್ರತಿಕ್ರಿಯಿಸಿರುವ ಅತೃಪ್ತ ಶಾಸಕರು ‘ಸುಪ್ರೀಂಕೋರ್ಟ್ ನೀಡಿರುವ ತೀರ್ಪುನ್ನು ನಾವು ಸ್ವಾಗತಿಸುತ್ತೇವೆ. ರಾಜೀನಾಮೆ ನೀಡಿರುವ ನಾವು ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ. ವಿಶ್ವಾಸಮತ ಯಾಚನೆ ಹಿನ್ನೆಲೆ ಸದನಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಯಾವ ಕಾರಣಕ್ಕೂ ವಾಪಸ್ ಹೋಗಲ್ಲ, ನಮ್ಮ ನಿರ್ಧಾರಕ್ಕೆ ಬದ್ಧ’ ಎಂದಿದ್ದಾರೆ. ಈ ಪ್ರತಿಕ್ರಿಯೆಯಿಂದ ಸರ್ಕಾರ ಬೀಳುವುದು ಬಹುತೇಕ ಖಚಿತವಾಗಿದೆ.

ಕಳೆದೆರಡು ವಾರದಿಂದ ಏನೇನಾಯ್ತು?
ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಅತೃಪ್ತ ಶಾಸಕರು ಅದೇನೇ ಮಾಡಿದರೂ ಮರಳಿ ಬರಲು ಒಪ್ಪಿರಲಿಲ್ಲ. ದೋಸ್ತಿ ನಾಯಕರು ಅತೃಪ್ತ ಶಾಸಕರನ್ನು ಓಲೈಸಿ ಮರಳಿ ಕರೆ ತರಲು ಯತ್ನಿಸುತ್ತಿರುವಾಗಲೇ ರಾಜೀನಾಮೆ ಅಂಗೀಕರಿಸಲು ವಿಳಂಬವಾಗುತ್ತಿದೆ ಎಂದು ದೂರಿ ಸುಪ್ರೀಂ ಕದ ತಟ್ಟಿದ್ದರು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಮಧ್ಯಂತರ ತೀರ್ಪು ಪ್ರಕಟಿಸಿದ್ದು ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ. ವಿಶ್ವಾಸಮತದ ವೇಳೆ ಸದನದಲ್ಲಿ ಹಾಜರಿರುವುದು ಅವರ ವಿವೆಚನೆಗೆ ಬಿಟ್ಟಿದ್ದು ಎಂದಿದೆ. ಇನ್ನು ಸರ್ಕಾರ ಉಳಿಯಬೇಕಿದ್ದರೆ ಅತೃಪ್ತ ಶಾಸಕರೇ ಮನಸ್ಸು ಬದಲಾಯಿಸಿ ಮರಳಬೇಕಷ್ಟೇ.

ಒಂದು ವರ್ಷದಲ್ಲಿ ನಿಮ್ಮಿಂದ ಆಗಿರೋದು ಸಾಕು, ದೇವರೇ ನಿಮಗೆ ಶಿಕ್ಷೆ ಕೊಡೋ ಕಾಲ ಬರುತ್ತೆ – ಸಚಿವ ರೇವಣ್ಣ ಭವಿಷ್ಯ

ಒಂದು ವರ್ಷದಲ್ಲಿ ನಿಮ್ಮಿಂದ ಆಗಿರೋದು ಸಾಕು, ದೇವರೇ ನಿಮಗೆ ಶಿಕ್ಷೆ ಕೊಡೋ ಕಾಲ ಬರುತ್ತೆ ಎಂದು ಮಾಧ್ಯಮಗಳ ಮೇಲೆ ಲೋಕಪಯೋಗಿ ಸಚಿವ ಹೆಚ್​.ಡಿ  ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮಿಂದ ಆಗಿರೋದೆ ಸಾಕು

ಚಾಮರಾಜಪೇಟೆಯ ಶೃಂಗೇರಿ ಶಾರದಾ ಪೀಠದಲ್ಲಿ ಬುಧವಾರ ಹೋಮ ಹವನ ಮಾಡಿಸುತ್ತಿರುವ ವೇಳೆ ಮಾಧ್ಯಮಗಳ ಮೇಲೆ ಗರಂ ಆದ ರೇವಣ್ಣ ಇದು ವೈಯಕ್ತಿಕ ಪೂಜೆ. ಯಾಕೆ ಇಲ್ಲಿಗೆ ಬಂದಿದ್ದೀರಾ..? ಒಂದು ವರ್ಷದಿಂದ ನಿಮ್ಮಿಂದ ಆಗಿರೋದೆ ಸಾಕು ಎಂದು ಕಿಡಿಕಾರಿದರು.

ಸತತ ಅರ್ಧ ಗಂಟೆಗೂ ಹೆಚ್ಚಿನ ಕಾಲ ಪೀಠದ ಒಳಗೆ ಪೂಜೆ

ಶತಾಯ ಗತಾಯ ಸರ್ಕಾರವನ್ನು ಉಳಿಸಿಕೊಳ್ಳಲೇ ಬೇಕೆಂದು ಪಣ ತೊಟ್ಟಿರುವ ರೇವಣ್ಣ ಮತ್ತು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ದೇವಸ್ಥಾನದ ಭೇಟಿ ಮುಂದುವರೆಸಿದ್ದಾರೆ. ಚಾಮರಾಜ ಪೇಟೆಯ ಶೃಂಗೇರಿ ಶಾರದಾ ಪೀಠದಲ್ಲಿ ಹೋಮ ಹವನ ಮಾಡಿಸುತ್ತಿರುವ ಕುಟುಂಬದವರು ಸತತ ಅರ್ಧ ಗಂಟೆಗೂ ಹೆಚ್ಚಿನ ಕಾಲ ಪೀಠದ ಒಳಗೆ ಪೂಜೆ ಮಾಡಿಸಲಾಗುತ್ತಿದೆ.

ಕಾಲಿಗೆ ಚಪ್ಪಲಿಯನ್ನೂ ಹಾಕದೇ ಓಡಾಡುತ್ತಿರುವ ಸಚಿವ ರೇವಣ್ಣ

ಸತತ ಒಂದು ವಾರದಿಂದ ಕಾಲಿಗೆ ಚಪ್ಪಲಿಯನ್ನೂ ಹಾಕದೇ ಓಡಾಡುತ್ತಿರುವ ಸಚಿವ ರೇವಣ್ಣ ದಿನದ 24 ಗಂಟೆಯಲ್ಲಿ 20 ಗಂಟೆಯನ್ನು ದೇವಸ್ಥಾನಗಳಲ್ಲೇ ಕಳೆಯುತ್ತಿದ್ದಾರೆ ಎನ್ನಬಹುದು. ಮೊನ್ನೆ ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸ್ಲಲಿಸಿದ್ದರು, ಬೆಂಗಳೂರಿನಲ್ಲಿ ಗಣಪತಿ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ ಮಾಡಿಸಿದ್ದರು. ಇನ್ನು ಉಡುಪಿಯಲ್ಲಿರುವ ದೇವಸ್ಥಾನಗಳಿಗೆ ಹೋಗಿ ಬಂದರು. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಕೂಡ ಸಲ್ಲಿಸಿದ್ದಾರೆ. ಇಂದು ಚಾಮರಾಜ ಪೇಟೆಯ ಶೃಂಗೇರಿ ಶಾರದಾ ಪೀಠದಲ್ಲಿ ಕುಟುಂಬ ಸಮೇತ ಹೋಗಿ ಪೂಜೆ ಸಲ್ಲಿಸಿದ್ದಾರೆ.

ಸುಪ್ರೀಂ ತೀರ್ಪು: ಸ್ಪೀಕರ್ ಹಾಗೂ ಅತೃಪ್ತ ಶಾಸಕರಿಗೆ ನಿರಾಳ, ಸರ್ಕಾರಕ್ಕೆ ಆತಂಕ!

ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಹಾಗೂ ಅತೃಪ್ತ ಶಾಸಕರ ನಡುವಿನ ಗುದ್ದಾಟಕ್ಕೆ ಸುಪ್ರೀಂ ಕೋರ್ಟ್ ಇತಿಶ್ರೀ ಹಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ಇಬ್ಬರ ಹಕ್ಕುಗಳನ್ನೂ ಎತ್ತಿ ಹಿಡಿದಿದೆ. ಆದರೆ ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಸರ್ಕಾರಕ್ಕೆ ಪತನಗೊಳ್ಳುವ ಭೀತಿ ಎದುರಾಗಿದೆ.

ಹೌದು ಕಳೆದೆರಡು ವಾರದಿಂದ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ ನಡೆಯುತ್ತಿದೆ. ಒಂದೆಡೆ 15 ಅತಪ್ತ ಶಾಸಕರು ರಾಜೀನಾಮೆ ಸಲ್ಲಿಸಿ ಮುಂಬೈ ಹೋಟೇಲ್ ಸೇರಿದ್ದರೆ, ಇತ್ತ ದೋಸ್ತಿ ನಾಯಕರು ಅವರ ಮನವೊಲಿಲು ಯತ್ನಿಸಿದ್ದರು. ಆದರೆ ಯಾವುದಕ್ಕೂ ಜಗ್ಗದ ಅತೃಪ್ತ ಶಾಸಕರು ರಾಜೀನಾಮೆ ಅಂಗೀಕಾರಕ್ಕೆ ಸುಪ್ರೀಂ ಬಾಗಿಲು ತಟ್ಟಿದ್ದರು. ಹೀಗಿರುವಾಗ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವ ದಾಳವೆಸೆದಿದ್ದರು. ಅಲ್ಲದೇ ಎಲ್ಲಾ ಶಾಸಕರು ಸದನಕ್ಕೆ ಹಾಜರಾಗಬೇಕೆಂದು ವಿಪ್ ಜಾರಿಗೊಳಿಸಿದ್ದರು.

ಆದರೀಗ ಸರ್ಕಾರ ಉಳಿಸಿಕೊಳ್ಳುವ ಯತ್ನದಲ್ಲಿದ್ದ ದೋಸ್ತಿಗೆ ಸುಪ್ರೀಂ ತೀರ್ಪಿನಿಂದ ಹಿನ್ನಡೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸರ್ಕಾರ ನಾಳೆ ಗುರುವಾರ ವಿಶ್ವಾಸಮತ ಯಾಚಿಸಬಹುದು ಎಂದು ತಿಳಿಸಿದೆಯಾದರೂ, ಅತೃಪ್ತ ಶಾಸಕರು ಸದನಕ್ಕೆ ಹಾಜರಾಗುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಅಲ್ಲದೇ ಈಗಾಗಲೇ ಸರ್ರಕಾರ ಜಾರಿಗೊಳಿಸಿರುವ ವಿಪ್ ರಾಜೀನಾಮೆ ಸಲ್ಲಿಸಿರುವ 15 ಅತೃಪ್ತ ಶಾಸಕರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಅವರು ಅನರ್ಹಗೊಳ್ಳುವ ಬೀತಿಯಿಂದಲೂ ಪಾರಾಗಿದ್ದಾರೆ.

View Post

ಒಂದು ವೇಳೆ ಅತೃಪ್ತ ಶಾಸಕರು ವಿಶ್ವಾಸಮತ ಯಾಚನೆ ವೇಳೆ ಹಾಜರಾಗದಿದ್ದರೆ ಸರ್ಕಾರ ಅಲ್ಪಮತಕ್ಕೆ ಕುಸಿದು ಪತನಗೊಳ್ಳಲಿದೆ. ಈ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ 5 ವರ್ಷದ ಅವಧಿ ಪೂರ್ಣಗೊಳಿಸುವ ಮೊದಲೇ ಬೀಳಲಿದೆ.

ಸಿಎಂ ಕುಮಾರಸ್ವಾಮಿ ಎದುರಿರುವ ದಾರಿಯೇನು?

  1. ಸುಪ್ರೀಂಕೋರ್ಟ್ ತೀರ್ಪಿನಿಂದ ಮುಖ್ಯಮಂತ್ರಿಗೆ ಹಿನ್ನಡೆ
  2. ನಾಳೆ ವಿಶ್ವಾಸಮತ ಯಾಚಿಸುವ ನಿರ್ಧಾರ ಕೈಬಿಡಬಹುದ
  3. ವಿಶ್ವಾಸಮತ ಯಾಚಿಸಿದೇ ವಿದಾಯ ಭಾಷಣ ಮಾಡಬಹುದು
  4. ವಿದಾಯ ಭಾಷಣದ ಬಳಿಕ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಬಹುದು

ಸರ್ಕಾರ ಉಳಿಯಬೇಕೆಂದರೆ ಅತೃಪ್ತ ಶಾಸಕರು ವಿಶ್ವಾಸಮತ ಯಾಚನೆ ವೇಳೆ ಸದನದಲ್ಲಿ ಹಾಜರಿಲೇಬೇಕು. ಸರ್ಕಾರ ಉಳಿಯುತ್ತಾ? ಬೀಳುತ್ತಾ? ವಿಶ್ವಾಸಮತ ಯಾಚನೆ ವೇಳೆಯಷ್ಟೇ ತಿಳಿಯಲಿದೆ.

ಅತೃಪ್ತ ಶಾಸಕರಿಗೆ ಡಿಕೆ ಶಿವಕುಮಾರ್ ರಿಂದ ಎಚ್ಚರಿಕೆ! ಬೆಚ್ಚಿಬಿದ್ದ ಅತೃಪ್ತರು!

ಕೋರ್ಟ್ ಅಂತಿಮ ನಿರ್ಧಾರದ ಪ್ರಕಾರ ಈಗಾಗಲೇ ಅತೃಪ್ತರು ಹೂಡಿದ್ದ ಪ್ರಕರಣ ಅವರ ಪರವಾಗಿ ಆಗಿದೆ.

ಅಂತೆಯೇ ವಿಪ್ ಜಾರಿ ಮಾಡಿರುವಂತಹ ಪಕ್ಷಗಳ ಸಭೆಯಲ್ಲಿ ಅತೃಪ್ತ ಶಾಸಕರು ಹಾಜರಾತಿ ಕಡ್ಡಾಯ ಇಲ್ಲವೆಂಬುದನ್ನು ಕೋರ್ಟ್ ತೀರ್ಮಾನ ಮಾಡಿದೆ.

ಇದರಿಂದ ಪರೋಕ್ಷವಾಗಿ ಮೈತ್ರಿ ಸರ್ಕಾರ ಕುಸಿದು ಹೋಗುವ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ ಅಲ್ಲದೆ ಮೈತ್ರಿ ಸರ್ಕಾರದ ಪ್ರಮುಖ ನಾಯಕರಾಗಿ ಮೈತ್ರಿ ಸರ್ಕಾರವನ್ನು ಉಳಿಸುವ ಶತಪ್ರಯತ್ನ ಮಾಡಿದಂತಹ ಡಿಕೆ ಶಿವಕುಮಾರ್ ರವರು ಈ ವಿಷಯ ಕುರಿತು ಒಂದು ಹೇಳಿಕೆ ನೀಡಿದ್ದಾರೆ ನಾನು ಸಾಮಾನ್ಯ ಶಾಸಕನಾಗಿ ಸಂವಿಧಾನದ ಹಾಗೂ ಕೋರ್ಟ್ನ ನಿರ್ಧಾರಕ್ಕೆ ತಲೆಬಾಗುತ್ತೇನೆ.

ಹಾಗೂ ಅತೃಪ್ತ ಶಾಸಕರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ ನೀವು ಆ ಪಕ್ಷಕ್ಕೆ ಹೋದರೆ ನಿಮಗೆ ಯಾವುದೇ ಒಳಿತಾಗುವುದಿಲ್ಲ ಹಾಗೂ ಅವರು ನಿಮಗೆ ಮೋಸ ಮಾಡಲಿದ್ದಾರೆ ಮತ್ತು ನಿಮಗೆ ನಿಮ್ಮ ಸಂಬಂಧಿಕರು ನಿಮ್ಮ ರಾಜಕೀಯ ಜೀವನ ಮುಂದಿದೆ ನಿರ್ಧರಿಸಿ ಎಂದು ಪರೋಕ್ಷವಾಗಿ ಎಚ್ಚರಿಕೆಯ ಗಂಟೆಯನ್ನು ಅತೃಪ್ತ ರಲ್ಲಿ ಮೂಡಿಸಿದ್ದಾರೆ.