BREAKING NEWS: ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ.!

ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸ್ವತಂತ್ರ ದೇವ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.

ಈ ಮೊದಲು ರಾಜ್ಯಾಧ್ಯಕ್ಷರಾಗಿದ್ದ ಮಹೇಂದ್ರ ನಾಥ್ ಪಾಂಡೆ ಪ್ರಧಾನಿ ಮೋದಿ ಸಂಪುಟ ಸೇರಿದ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗದ ನಾಯಕರಾದ ಸ್ವತಂತ್ರ ದೇವ್ ಸಿಂಗ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಒಬಿಸಿ ಸಮುದಾಯ ಬಿಜೆಪಿಯನ್ನು ಬೆಂಬಲಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಬಲ ಕುರ್ಮಿ ಸಮುದಾಯಕ್ಕೆ ಸೇರಿದ ಸ್ವತಂತ್ರ ದೇವ್ ಸಿಂಗ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ಸಿಎಂ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಾರಿಗೆ ಸಚಿವರಾಗಿರುವ ಸ್ವತಂತ್ರ ದೇವ್ ಸಿಂಗ್, ರಾಜ್ಯದ ಜನಪ್ರಿಯ ಹಿಂದುಳಿದ ವರ್ಗದ ನಾಯಕರಲ್ಲಿ ಮುಂಚೂಣಿಯಲ್ಲಿದ್ದಾರೆ.

ಇಸ್ಲಾಂ ಮತ್ತು ಖುರಾನ್ ಕುರಿತು ಫೇಸ್’ಬುಕ್’ನಲ್ಲಿ ಅವಹೇಳನಕಾರಿ ಪೋಸ್ಟ್ !

ಇಸ್ಲಾಂ ಮತ್ತು ಖುರಾನ್ ಕುರಿತು ಫೇಸ್’ಬುಕ್’ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಕಾರಣಕ್ಕೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ರಿಚಾ ಭಾರತಿಗೆ ಷರತ್ತು ಬದ್ಧ ಜಾಮೀನು ದೊರೆತಿದೆ.

ರಾಂಚಿಯ ರಿಚಾ ಭಾರತಿ ತಮ್ಮ ಫೇಸ್’ಬುಕ್’ನಲ್ಲಿ ಇಸ್ಲಾಂ ಕುರಿತು ಅವಹೇಳನಕಾರಿ ಪೊಸ್ಟ್ ಮಾಡಿದ್ದರು. ಇದರಿಂದ ಕೆರಳಿದ್ದ ಅಲ್ಪಸಂಖ್ಯಾತ ಸಮುದಾಯ ರಿಚಾ ವಿರುದ್ಧ ದೂರು ನೀಡಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಖುರಾನ್’ನ 5 ಪ್ರತಿಗಳನ್ನು ಹಂಚಬೇಕು ಎಂಬ ಷರತ್ತಿನ ಮೇಲೆ ಜಾಮೀನು ಮಂಜೂರು ಮಾಡಿದೆ.

ಆದರೆ ನ್ಯಾಯಾಲಯದ ಆದೇಶ ಧಿಕ್ಕರಿಸಿರುವ ರಿಚಾ, ಮುಸ್ಲಿಮರು ಎಂದಾದರೂ ಹನುಮಾನ್ ಚಾಲಿಸಾ ಓದುತ್ತಾರೆಯೇ? ಎಂದು ಪ್ರಶ್ನಿಸಿದ್ದಾಳೆ. ಅಲ್ಲದೇ ಯಾವುದೇ ಕಾರಣಕ್ಕೂ ಖುರಾನ್ ಪ್ರತಿ ಹಂಚುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.

ನಾಳೆ ದೋಸ್ತಿ ಭವಿಷ್ಯ ಏನಾಗಬಹುದು? ಸ್ಪೀಕರ್ ಮತ್ತು ಅತೃಪ್ತ ಶಾಸಕರು ಹಾಗೂ ಸಿಎಂ ಕುಮಾರಸ್ವಾಮಿ ಮುಂದೆ ಉಳಿದಿರುವ ಆಯ್ಕೆಗಳು ಇಷ್ಟು!

ಸ್ಪೀಕರ್ ಮತ್ತು ಅತೃಪ್ತ ಶಾಸಕರು ಹಾಗೂ ಸಿಎಂ ಕುಮಾರಸ್ವಾಮಿ ಪರ ವಕೀಲರ ವಾದ ಆಲಿಸಿದ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಕಾಯ್ದಿರಿಸಿದೆ. ಹಾಗಾದರೆ ಈಗ ಇರುವ ಆಯ್ಕೆಗಳು ಏನು? ಉಳಿದುಕೊಂಡಿರುವ ಪ್ರಶ್ನೆಗಳು ಏನು?

ಸ್ಪೀಕರ್ ವಿಚಾರದಲ್ಲಿ ಅಥವಾ ಸ್ಪೀಕರ್ ಗೆ ಸಂಬಂಧಿಸಿದ ಪರಮಾಧಿಕಾರದಲ್ಲಿ ಸುಪ್ರಿಂ ಕೋರ್ಟ್ ಹಸ್ತಕ್ಷೇಪ ಮಾಡಬಹುದೆ? ಎನ್ನುವುದು ಬಹುದೊಡ್ಡ ಪ್ರಶ್ನೆ. ಇದನ್ನು ಶಾಸಕಾಂಗ ಮತ್ತು ನ್ಯಾಯಾಂಗ ನಡುವಿನ ತಿಕ್ಕಾಟ ಎಂದು ವಿಶ್ಲೇಷಣೆ ಮಾಡಲಾಗಿದೆ.

ಮೂರು ವಾದಗಳು…
ಅತೃಪ್ತ ಶಾಸಕರು: ನಾವು ಸ್ವಯಂ ಆಗಿ ರಾಜೀನಾಮೆ ನೀಡಿದ್ದೇವೆ. ರಾಜೀನಾಮೆ ಅಂಗೀಕಾರ ಮಾಡುವುದು ಸಂವಿಧಾನಬದ್ಧ

ಸ್ಪೀಕರ್ ವಕೀಲರ ವಾದ: ಸ್ಪೀಕರ್ ಸಂವಿಧಾನಬದ್ಧವಾಗಿಯೇ ಇದ್ದು, ಸ್ಪೀಕರ್ ಪರಮಾಧಿಕಾರದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡಬಾರದು.

ಸಿಎಂ ವಕೀಲರ ವಾದ: ಶಾಸಕರ ರಾಜೀನಾಮೆ ಹಿಂದೆ ಸರಕಾರ ಬೀಳಿಸುವ ತಂತ್ರ ಇದ್ದು, ನ್ಯಾಯಾಲಯ ವಿಚಾರವನ್ನು ಸ್ಪೀಕರ್ ವಿವೇಚನೆಗೆ ಬಿಡಬೇಕು.

ಉಳಿದುಕೊಂಡಿರುವ ಪ್ರಶ್ನೆಗಳು
ಈ ಮೂರು ಅಂಶಗಳ ಆಧಾರದಲ್ಲಿಯೇ ಇಂದು ಸುಪ್ರೀಂನಲ್ಲಿ ವಾದ ನಡೆಯಿತು. ಅತೃಪ್ತ ಶಾಸಕರ ಪರ ಮುಕುಲ್ ರೋಹ್ಟಗಿ, ಸ್ಪೀಕರ್ ಪರವಾಗಿ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ಆದರೆ ಒಂದಿಷ್ಟು ಪ್ರಶ್ನೆಗಳು ಹಾಗೆ ಉಳಿದುಕೊಂಡವು.

ರಾಜೀನಾಮೆ ಕೊಟ್ಟ ಶಾಸಕರಿಗೆ ರಾಜೀನಾಮೆ ಕೊಟ್ಟ ಮೇಲೆ ನೀಡಿರುವ ವಿಪ್ ಅನ್ವಯವಾಗುತ್ತದೆಯೇ?

ರಾಜೀನಾಮೆ ಮತ್ತು ಅನರ್ಹತೆಯನ್ನು ಒಂದೇ ವಿಚಾರಣೆ ಅಡಿ ತರಬಹುದೆ?

ಬೇರೆ ಪಕ್ಷದ ನಾಯಕರ ಜತೆ ಒಂದೇ ವಿಮಾನದಲ್ಲಿ ತೆರಳಿರುವುದು, ಪತ್ರಿಕಾ ಹೇಳಿಕೆಗಳನ್ನು ಪಕ್ಷ ವಿರೋಧಿ ಎಂದು ಪರಿಗಣಿಸಬಹುದೆ? ..

ಪರ-ವಿರೋಧದ ವಾದಗಳು ಜೋರಾಗಿಯೇ ನಡೆದಿದ್ದು ಒಂದು ದಿನ ಕಾಯಲೇಬೇಕಾಗಿದೆ.

  1. ಸುಪ್ರೀಂ ಕೋರ್ಟ್ ಆದೇಶಕ್ಕೆ ಅನಿವಾರ್ಯವಾಗಿ ಪಾಲಿಸಬೇಕಾಗುತ್ತದೆ. ನಿಗದಿತ ಅವಧಿಯೊಳಗೆ ರಾಜೀನಾಮೆ ಅಂಗಿಕಾರ ಮಾಡಿ ಎಂದು ಸ್ಪೀಕರ್ ಗೆ ನ್ಯಾಯಾಲಯ ತಿಳಿಸಿದರೆ ಮತ್ತೆ ಕಾನೂನಿನ ಆಯ್ಕೆಗಳನ್ನು ದೋಸ್ತಿಗಳು ಹುಡುಕಬಹುದು.
  2. ಶಾಸಕರ ರಾಜೀನಾಮೆ ಮತ್ತು ಅನರ್ಹತೆಯನ್ನು ಒಂದೇ ವೇದಿಕೆಯಡಿ ಅಥವಾ ಒಂದೇ ಕ್ರಮದ ಅಡಿ ವಿಚಾರಣೆ ಮಾಡಬಹುದು ಎಂದಾದರೆ ಅತೃಪ್ತ ಶಾಸಕರಿಗೆ ಹಿನ್ನಡೆಯಾಗಲಿದೆ.
  3. ಅತೃಪ್ತ ಶಾಸಕರ ರಾಜೀನಾಮೆ ಸ್ವೀಕರಿಸಲು ಸೂಚಿಸಬಹುದು – ಕಾಲಮಿತಿಯೊಳಗೆ ರಾಜೀನಾಮೆ ಇತ್ಯರ್ಥಕ್ಕೆ ಆದೇಶಿಸಬಹುದು .
  4. ಸ್ಪೀಕರ್ ಅಧಿಕಾರ, ಕಾರ್ಯವ್ಯಾಪ್ತಿ ಪರಾಮರ್ಶೆ ಸಂಭವ – ಇಂಥ ಪ್ರಕರಣಗಳನ್ನುಎದುರಿಸಲು ಮಾರ್ಗಸೂಚಿ ರೂಪಿಸಲು ಸಾಂವಿಧಾನಿಕ ಪೀಠಕ್ಕೆ ಶಿಫಾರಸು ಸಾಧ್ಯತೆ -ಅಗತ್ಯ ಕಾನೂನು ತಿದ್ದುಪಡಿಗೆ ಪಾರ್ಲಿಮೆಂಟ್‌ ಗೂ ಸೂಚಿಸಬಹುದು.

ಪರಿಣಾಮ ಏನಾಗುತ್ತದೆ? ರಾಜೀನಾಮೆ ಸ್ವೀಕರಿಸಲು ಸೂಚಿಸಿದರೆ ಸರಕಾರ ಅಲ್ಪಮತಕ್ಕೆ ಕುಸಿಯುವುದು ಖಚಿತ

ಸಮಯಾವಕಾಶ ನೀಡಿದರೂ ರಾಜೀನಾಮೆ ಸ್ವೀಕಾರ ಅನಿವಾರ್ಯ. ಆಗಲೂ ಸರಕಾರಕ್ಕೆ ಉಳಿಗಾಲವಿಲ್ಲ.

ಕಾಂಗ್ರೆಸ್ ತೊರೆದ ಇಬ್ಬರು ನಾಯಕರು : ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ

ಮಾಜಿ ಕಾಂಗ್ರೆಸ್ ಶಾಸಕ ಅಲ್ಪೇಶ್ ಟಾಕೂರ್ ಹಾಗೂ ದವಳ್ ಸಿನ್ಹ್ ಜಾಲಾ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಗೆ ಸಜ್ಜಾಗಿದ್ದಾರೆ. ಟಾಕೂರ್ ಸೇನಾ ಮುಖಂಡರೊಂದಿಗೆ ನಡೆಸಿದ ಸಭೆಯ ಬಳಿಕ ಜಾಲಾ ತಮ್ಮ ನಿರ್ಧಾರ ತಿಳಿಸಿದ್ದಾರೆ.

ಜುಲೈ 5 ರಂದು ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕ್ರಾಸ್ ಓಟಿಂಗ್ ಮಾಡಿದ್ದ ಅಲ್ಪೇಶ್ ಟಾಕೂರ್ , ಜಾಲಾ ಇಬ್ಬರೂ ಕೂಡ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರು.

ಇದೀಗ ಅಹಮದಾಬಾದ್ ನಲ್ಲಿ ಹಲವು ಮುಖಂಡರೊಂಡಿಗೆ ನಡೆಸಿದ ಸಭೆ ಬಳಿಕ ತಾವೂ ಬಿಜೆಪಿ ಸೇರಲು ನಿರ್ಧರಿಸಿದ್ದಾಗಿ ದವಳ್ ಸಿನ್ಹ್ ಜಾಲಾ ಘೋಷಿಸಿದ್ದಾರೆ.

ಪಟೇಲ್ ಸಮುದಾಯದ ಮೀಸಲಾತಿಗಾಗಿ ಅಲ್ಪೇಶ್ ಟಾಕೂರ್ 2015ರಲ್ಲಿ ತಮ್ಮ ಹೋರಾಟ ಆರಂಭ ಮಾಡಿದ್ದು, ಅದಾದ ಬಳಿ ರಧಾನ್ ಪುರ್ ಕ್ಷೇತ್ರದಿಂದ 2017ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು.

ಆದರೆ 2019 ಲೋಕಸಭಾ ಚುನಾವಣೆಗೆ ಕೆಲ ಸಮಯ ಇರುವಂತೆಯೇ ಕಾಂಗ್ರೆಸ್ ನ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದರು. ಇದೀಗ ಶಿಘ್ರ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದಾರೆ.

ಕೊನೆಗೂ ಆಪರೇಷನ್ ಕಮಲ​ ಮಾಡಿದ್ದು ನಾವೇ…! ಬಿಎಸ್​​ವೈ ಹೊಸ ಬಾಂಬ್​​!!

ಮೈತ್ರಿ ಸರ್ಕಾರದ ರಾಜಕೀಯ ಅಸ್ಥಿರತೆಯ ಕ್ಲೈಮ್ಯಾಕ್ಸ್​ಗೆ ಗುರುವಾರ ಮುಹೂರ್ತ ಫಿಕ್ಸ್​ ಆಗ್ತಿದ್ದಂತೆ ಬಿಜೆಪಿ ಹೊಸ ಬಾಂಬ್​ ಸಿಡಿಸಿದೆ.

ಇಷ್ಟು ದಿನ ಅತೃಪ್ತ ಶಾಸಕರಿಗೂ ನಮಗೂ ಸಂಪರ್ಕವೇ ಇಲ್ಲ ಎಂದಿದ್ದ ಬಿಜೆಪಿ ಇದೀಗ ಇನ್ನು 3 ಶಾಸಕರು ಬಿಜೆಪಿ ಸೇರ್ತಾರೆ ಎನ್ನುವ ಮೂಲಕ ದೋಸ್ತಿಗೆ ಶಾಕ್​ ನೀಡಿದೆ.

ಹೌದು ಇಂದಿನ ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಕುಮಾರ್, ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತ ಯಾಚನೆಗೆ ದಿನಾಂಕ ಹಾಗೂ ಸಮಯ ನಿಗದಿ ಮಾಡ್ತಿದ್ದಂತೆ ಬಿಜೆಪಿಯಲ್ಲಿ ಕುಮಾರಸ್ವಾಮಿ ಸರ್ಕಾರ ಸೋಲಲಿದೆ ಎಂಬ ವಿಶ್ವಾಸ ಮನೆ ಮಾಡಿದೆ.

ಹೀಗಾಗಿ ಹೊಸ ಉತ್ಸಾಹದಲ್ಲಿ ಸರ್ಕಾರ ರಚನೆವರೆಗೂ ಪ್ಲ್ಯಾನ್ ಮಾಡುತ್ತಿರುವ ಬಿಜೆಪಿ ನಾಯಕರು, ಇಷ್ಟು ದಿನಗಳ ಕಾಲ ಅತೃಪ್ತರು ನಮ್ಮ ಸಂಪರ್ಕದಲ್ಲಿಲ್ಲ ಎಂಬ ಭಜನೆ ಬಿಟ್ಟು ರಾಜಾರೋಶವಾಗಿ ಆಫರೇಶನ್​ ಕಮಲ ಮಾಡಿರೋದನ್ನು ಒಪ್ಪಿಕೊಂಡಿದ್ದಾರೆ.

ನಮ್ಮ ಸಂಪರ್ಕದಲ್ಲಿ 17 ಶಾಸಕರಿದ್ದಾರೆ. ಇದು ಇನ್ನೂ 3 ಶಾಸಕರು ಬಿಜೆಪಿ ಸೇರ್ತಾರೆ ಎನ್ನುವ ಮೂಲಕ ಬಿಎಸ್​ವೈ ಹೊಸ ಬಾಂಬ್​ ಸಿಡಿಸಿದ್ದಾರೆ. ಅಷ್ಟೇ ಅಲ್ಲ ವಿಶ್ವಾಸಮತ ಯಾಚನೆಯಂದೂ ಕುಮಾರಸ್ವಾಮಿ ಸೋಲುತ್ತಾರೆ ಎಂದು ಬಿಎಸ್​ವೈ ಭವಿಷ್ಯ ನುಡಿದಿದ್ದಾರೆ.

ದೋಸ್ತಿ ಸರ್ಕಾರದ ವಿರುದ್ಧ ಹೆಚ್ ವಿಶ್ವನಾಥ್ ಹೊಸ ಬಾಂಬ್

ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ನೀಡಿ ಅತೃಪ್ತರಾಗಿ ಹೊರ ನಡೆದ ಶಾಸಕರ ಮೇಲೆ ಕೇಸ್ ಹಾಕುವುದಾಗಿ ಮೈತ್ರಿ ಸರ್ಕಾರ ಬೆದರಿಸುತ್ತಿದೆ ಎಂದು ಬಿಜೆಪಿ ಶಾಸಕರೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ.

ಯಲಹಂಕ ಬಿಜೆಪಿ ಶಾಸಕ ವಿಶ್ವನಾಥ್ ಮೈತ್ರಿ ಸರ್ಕಾರದಿಂದ ಬಿಟ್ಟು ಹೋದ ಶಾಸಕರಿಗೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಹಳೆ ಪ್ರಕರಣಗಳನ್ನು ರೀ ಓಪನ್ ಮಾಡಿ, ಯಾರು ಬಿಟ್ಟು ಹೋಗುತ್ತಾರೋ ಅವರ ಮೇಲೆ ಕೇಸ್ ಹಾಕುವುದಾಗಿ ಹೇಳುತ್ತಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಿಶ್ವನಾಥ್ ಹೇಳಿದ್ದಾರೆ. 

ಸದ್ಯ ಮೈತ್ರಿ ಸರ್ಕಾರವು ಸುಭದ್ರವಾಗಿ ಮುಂದುವರಿಯುವುದೆ ಅನುಮಾನವಾಗಿರುವ ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಬಾಂಬ್ ಸಿಡಿಸಿದ್ದಾರೆ.

ವಾಹನ ಸವಾರರಿಗೆ ಹೊಸ ರೂಲ್ಸ್: ಯಾವ ತಪ್ಪಿಗೆ ಎಷ್ಟು ದಂಡ..?

ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತೀರಾ..? ಹಾಗಿದ್ರೆ ಹುಷಾರ್ 10 ಸಾವಿರ ಫೈನ್ ಕಟ್ಟಲೇಬೇಕು.

ಇದು ಕೇಂದ್ರ ಸರ್ಕಾರದ ಹೊಸ ನಿಯಮ. ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಕೂಡ ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಿದೆ.

ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಹೊಸ ಮೋಟಾರು ವಾಹನ ಕಾಯ್ದೆ ಮಸೂದೆ ಮಂಡಿಸಿದೆ. ಹೊಸ ಮಸೂದೆ ಪ್ರಕಾರ ಮದ್ಯಪಾನ ಮಾಡಿದ್ರೆ 10 ಸಾವಿರ ದಂಡ, ಅದೇ ರೀತಿ ರ್ಯಾಶ್ ಡ್ರೈವ್ ಮಾಡಿದ್ರೆ 5 ಸಾವಿರ ದಂಡ, ಲೈಸೆನ್ಸ್​ ಇಲ್ಲ ಅಂದ್ರೆ 5 ಸಾವಿರ ದಂಡ, ಫೋನ್​ನಲ್ಲಿ ಮಾತನಾಡುತ್ತಾ ಚಾಲನೆ ಮಾಡಿದ್ರೂ 5 ಸಾವಿರ ದಂಡ ವಿಧಿಸಲು ಮುಂದಾಗಿದೆ.

ಕಳೆದ ವರ್ಷ ಮಂಡಿಸಿದ್ದ ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ. ಹೀಗಾಗಿ ಪರಿಷ್ಕೃತ ಮಸೂದೆಯನ್ನ ಮತ್ತೆ ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರವಾಗಿದೆ. ರಾಜ್ಯಸಭೆಯಲ್ಲೂ ಇದು ಅಂಗೀಕಾರವಾದ್ರೆ ಶೀಘ್ರವೇ ಈ ಕಾಯ್ದೆ ಜಾರಿಗೆ ಬರಲಿದೆ. ವಾಹನ ಸವಾರರಿಗೆ ದುಪ್ಪಟು ಫೈನ್ ಬೀಳಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಲು ಮಾಡಿದ ಮಾಸ್ಟರ್ ಪ್ಲಾನ್ ನೋಡಿ!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಲು ಗ್ರಾಮ ದೇವತೆ ಮತ್ತು ಮನೆ ದೇವರ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಜೂನ್ 16, ಮಂಗಳವಾರ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮ ನಡೆಯಲಿರುವ ವಿಶೇಷ ಪೂಜೆ, ಹೋಮ, ಹವನ ಕಾರ್ಯಕ್ರಮದಲ್ಲಿ ಬಿಎಸ್​ವೈ ಭಾಗಿಯಾಗಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಬೂಕನಕೆರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟೂರು ಆಗಿರೋದು ವಿಶೇಷವಾಗಿದೆ.

ಇನ್ನು ನಾಳೆ ಬೆಳಿಗ್ಗೆ ಎಂಟರಿಂದ ಬೂಕನಕೆರೆ ಗ್ರಾಮ ದೇವತೆ ಗೋಗಲಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಗಣಪತಿ ಹೋಮ ಜರುಗಲಿದೆ. ಬಳಿಕ0 ಅವರ ಕುಲದೇವರು ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರನಿಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಅಲ್ಲದೇ ಈ ಹೋಮ, ಹವನ ಪೂಜೆ ಕಾರ್ಯಕ್ರಮಗಳು ಬಿಎಸ್​ ಯಡಿಯೂರಪ್ಪನವರ ಸೂಚನೆ ಮೇರೆಗೆ ನಡೆಯಲಿದ್ದು, ಈ ಪೂಜೆಯಲ್ಲಿ ಬಿಎಸ್​ ವೈ ಸಂಬಂಧಿಗಳ ಭಾಗವಹಿಸಲಿದ್ದಾರೆ. ಸಂಕಷ್ಟದಲ್ಲಿದ್ದಾಗ ಹಾಗೂ ಅಧಿಕಾರಕ್ಕೇರುವ ಸಂದರ್ಭದಲ್ಲಿ ಗೋಗಲಮ್ಮನಿಗೆ ಹೋಮ, ಪೂಜೆ ಸಲ್ಲಿಸುವುದು ಬಿಎಸ್​ವೈ ಅವರ ವಾಡಿಕೆಯಾಗಿದೆ.

ರಾಜ್ಯ ರಾಜಕೀಯದ ದಿಕ್ಕು ಬದಲಾವಣೆ : ಸಚಿವ ಸ್ಥಾನಕ್ಕೆ ರಾಜೀನಾಮೆ ಎಚ್‌.ಡಿ. ರೇವಣ್ಣ!

ರಾಜ್ಯ ರಾಜಕಾರಣದ ಈ ಸ್ಥಿತಿಗೆ ಎಚ್‌.ಡಿ. ರೇವಣ್ಣ ಅವರೇ ಕಾರಣರಾಗಿದ್ದು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ನಾವೆಲ್ಲಾ ವಾಪಸ್‌ ಬರುತ್ತೇವೆ ಎಂದು ಅತೃಪ್ತ ಶಾಸಕರು ಒಂದು ಹೇಳಿಕೆ ನೀಡಲಿ.

ನಾನೇ ಖುದ್ದಾಗಿ ಸಚಿವ ರೇವಣ್ಣ ಅವರ ರಾಜೀನಾಮೆಗೆ ಮನವೊಲಿಸುತ್ತೇನೆ ಎಂದು ಅರಕಲಗೂಡು ಜೆಡಿಎಸ್‌ ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದ್ದಾರೆ.

ತಾಲೂಕಿನ ಹಳ್ಳಿಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ನ್ಯೂನತೆಗಳು ಮತ್ತು ಸಣ್ಣಪುಟ್ಟಅಸಮಾಧಾನಗಳು ಇಲ್ಲವೆಂದಲ್ಲ. ಆದರೆ ರಾಜಕೀಯ ವರಿಷ್ಠರ ಜೊತೆಗಿರುವ ಹೊಗಳುಭಟ್ಟಶಾಸಕರಿಂದಲೇ ಇಂದು ರಾಜ್ಯ ರಾಜಕಾರಣ ಈ ಸ್ಥಿತಿಗೆ ಬಂದಿದೆ ಎಂದು ಟೀಕಿಸಿದರು.

ಆಂಜನೇಯನ ಎದೆಬಗೆದರೆ ರಾಮಾ ರಾಮಾ ಎನ್ನುವ ಹಾಗೆ ತಮ್ಮ ಎದೆ ಬಗೆದರೆ ಸಿದ್ದರಾಮಣ್ಣ ಸಿದ್ದರಾಮಣ್ಣ ಎನ್ನುತ್ತಿದ್ದ ಎಂಟಿಬಿ ನಾಗರಾಜ್‌ ಏನಾದರು? ಸಿದ್ದರಾಮಯ್ಯ ನಮ್ಮ ಪಾಲಿಗೆ ಆನೆ ಇದ್ದಂತೆ ಎನ್ನುತ್ತಿದ್ದ ಸೋಮಶೇಖರ್‌ ಎಲ್ಲಿ ಹೋದರು ಎಂದು ವ್ಯಂಗ್ಯವಾಡಿದರು.

ಶ್ರೀ ಹಾಸನಾಂಬೆ ಕೃಪೆಯಿಂದ ಇಂದು ಈ ರಾಶಿಯವರು ಕೈ ಹಾಕಿದ ಕೆಲಸದಲ್ಲಿ ಯಶಸ್ಸು, ಭಾರೀ ಲಾಭ 16-07-2019

ಪಂಡಿತ್ ಅನಂತ್ ಪ್ರಸಾದ್ ದೈವಜ್ಞ ಜ್ಯೋತಿಷ್ಯರು ಜ್ಯೋತಿಷ್ಯ 9945996688
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ
ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ( 7)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688

ಮೇಷ ರಾಶಿ – ವಿಶ್ರಾಂತಿ ಪಡೆಯಿರಿ, ಆರ್ಥಿಕ ಚೇತರಿಕೆ, ಮನೆಯಲ್ಲಿ ಮತ್ತು ಗೆಳೆಯರೊಂದಿಗೆ ಸಂತಸ, ಅನುಭವಿವ್ಯಕ್ತಿಗಳೊಂದಿಗೆ ಸಂವಹನ, ಇತರರಿಂದ ನೀವು ಮುಂದಿರುವಿರಿ, ದಾಂಪತ್ಯ ಉತ್ತಮ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ವೃಷಭ ರಾಶಿ – ಕೋಪವನ್ನು ನಿಯಂತ್ರಿಸದಿದ್ದಲ್ಲಿ ಸಮಸ್ಯೆ, ಆರ್ಥಿಕ ಸಮತೋಲನ, ಮನೆಯಲ್ಲಿ ಸರ್ವಾಧಿಕಾರಿಧೋರಣೆ ಬೇಡ, ಕೆಲಸಗಳನ್ನು ಪೂರ್ತಿಗೊಳಿಸುವಿರಿ, ಸ್ಪರ್ದೆಗಳಲ್ಲಿ ಜಯ, ದಾಂಪತ್ಯ ಉತ್ತಮ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಮಿಥುನ ರಾಶಿ – ಅನಾರೋಗ್ಯ ಕಾಡುತ್ತದೆ, ಅಧಿಕ ಖರ್ಚಿನಿಂದ ನೆಮ್ಮದಿಯಿರದು, ಮನೆಯ ಕೆಲಸಗಳನ್ನು ಮಾಡಿ,ನಿಮ್ಮ ಕೆಲಸ ಪೂರ್ಣವಾಗಿದೆಯೇ ಎಂದು ವಿವೇಚಿಸಿ ನೋಡಿ, ಖರೀಧಿಗಳಿಂದ ಸಂಗಾತಿ ನಿಮ್ಮ ಮೇಲೆ ಇರುಸುಮುರುಸು ತೋರುವರು, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಕರ್ಕಾಟಕ ರಾಶಿ – ಮಕ್ಕಳೊಂದಿಗೆ ಕಾಲಕಳೆಯಿರಿ, ಉತ್ಸಾಹ ವೃದ್ದಿಸುವುದು, ಆರ್ಥಿಕ ಚೇತರಿಕೆ, ವ್ಯವಹಾರಗಳಲ್ಲಿಅನಿರೀಕ್ಷಿತ ಲಾಭ, ಮಾತುಗಳಲ್ಲಿ ನೈಜತೆ ಅಗತ್ಯ, ದಾಂಪತ್ಯ ಉತ್ತಮ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಸಿಂಹ ರಾಶಿ – ನಡಿಗೆಯಿಂದ ಆರೋಗ್ಯ ವೃದ್ಧಿ, ಸಂಚಾರದಲ್ಲಿ ಒತ್ತಡ ಮತ್ತು ಆತುರತೆ ಬೇಡ, ಆರ್ಥಿಕ ಲಾಭ, ಕೋಪವನ್ನುನಿಮ್ಮಿಂದ ದೂರವಿರಿಸಿ, ವಿಶ್ವಾಸದಿಂದ ಏಳಿಗೆ ಕಾಣುವಿರಿ, ದಾಂಪತ್ಯದಲ್ಲಿ ಸಿಹಿಕಹಿ ಅನುಭವ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಕನ್ಯಾ ರಾಶಿ – ಇತರರನ್ನು ಆಕರ್ಷಿಸುವಿರಿ, ಆತುರದ ಹೂಡಿಕೆ ಬೇಡ, ಯಾವುದೇಕೆಲಸದ ಮುನ್ನ ಮನೆಯಲ್ಲಿ ಸಲಹೆ ಪಡೆಯಿರಿ, ಶಾಂತತೆ ನಿಮ್ಮಲ್ಲಿರಲಿ, ದಾಂಪತ್ಯ ಉತ್ತಮ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ತುಲಾ ರಾಶಿ – ಗೆಳೆಯರೊಂದಿಗೆ ಸಂತಸದ ಕ್ಷಣ, ಆಹಾರದಲ್ಲಿ ಮಿತಿಯಿರಲಿ, ಆರ್ಥಿಕ ಸುಧಾರಣೆ, ಲಾಭ ಕಾಣುವಿರಿ, ಜಂಟಿಯೋಜನೆಗಳಲ್ಲಿ ಜಾಗೃತೆಯಿರಲಿ, ಮನರಂಜನೆ ಪಡೆಯುವಿರಿ, ದಾಂಪತ್ಯ ಉತ್ತಮ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ವೃಶ್ಚಿಕ ರಾಶಿ – ಸಂಗಾತಿಯ ಆರೋಗ್ಯ ಕೈಕೊಡುತ್ತದೆ, ನೂತನ ಕಲ್ಪನೆಗಳಿಂದಲಾಭ, ಮಕ್ಕಳಿಂದ ನಿರಾಸೆ, ನೂತನ ಯೋಜನೆಗಳ ಬಗ್ಗೆ ಯೋಚನೆ ಅಗತ್ಯ, ದೇವತಾ ಕಾರ್ಯಗಳತ್ತ ಮನಮಾಡುವಿರಿ, ದಾಂಪತ್ಯದಲ್ಲಿ ಸಂತಸ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಧನು ರಾಶಿ – ಸಂಚಾರದಿಂದ ಸಂತಸ ಪಡೆಯುವಿರಿ, ಆರ್ಥಿಕ ಚೇತರಿಕೆ, ಕೆಲಸದಲ್ಲಿ ಸಹೋದ್ಯೋಗಿಗಳ ಬೆಂಬಲ, ಜನರೊಂದಿಗೆಬೆರೆಯುವಾಗ ಮಾತಿನಲ್ಲಿ ಜಾಗೃತೆ ಅಗತ್ಯ, ಸಂಬಂಧಿಗಳಿಂದ ನಿಮ್ಮ ಕೆಲಸಕ್ಕೆ ಅಡ್ಡಿ ಎದುರಾಗುತ್ತದೆ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಮಕರ ರಾಶಿ – ಸಂಗಾತಿಯೊಂದಿಗೆ ಕಾಲಕಳೆಯುವಿಕೆ ಸಂತಸ ತರುತ್ತದೆ, ಮನೆ ಹೂಡಿಕೆಗಳಿಂದ ಪ್ರಯೋಜನ,ವಾಹನ ಚಲಾಯಿಸುವಾಗ ಜಾಗೃತೆ ಅತ್ಯಗತ್ಯ, ಶ್ರಮಕ್ಕೆ ತಕ್ಕ ಫಲ ದೊರೆಯುವುದು, ವಾದಗಳಿಂದ ದೂರವಿರಿ, ದಾಂಪತ್ಯ ಉತ್ತಮ, ನಿಮ್ಮ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಕುಂಭ ರಾಶಿ – ಆಹಾರದ ವಿಚಾರದಲ್ಲಿ ಎಚ್ಚರವಹಿಸಿ, ಇತರರು ಗಮನ ಸೆಳೆಯುವರು, ಹೂಡಿಕೆಯಲ್ಲಿ ವ್ಯಕ್ತಿಯ ವಿಶ್ವಾಸರ್ಹತೆಯಬಗ್ಗೆ ಚಿಂತಿಸಿ ಮುನ್ನಡೆಯಿರಿ, ಕೆಲಸದಲ್ಲಿ ಅನುಕೂಲ ವಾತಾವರಣ, ಇತರರಿಗೆ ಸಹಾಯ ಮಾಡುವ ಗುಣ ಗೌರವ ನೀಡುತ್ತದೆ, ದಾಂಪತ್ಯದಲ್ಲಿ ಬೇಸರ ಕಾಡುತ್ತದೆ, ನಿಮ್ಮ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಮೀನ ರಾಶಿ – ಒತ್ತಡ ಮುಕ್ತ ದಿನ, ಮನೆಯವರ ಬೆಂಬಲ, ಆರ್ಥಿಕ ಚೇತರಿಕೆ, ಸಂಗಾತಿಯ ಆರೋಗ್ಯದಲ್ಲಿನಏರುಪೇರು ಚಿಂತೆಗೆ ಕಾರಣವಾಗುತ್ತದೆ, ಪ್ರಯತ್ನಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ಅಸಮಾಧಾನ ಕಾಣಿಸಿಕೊಳ್ಳುತ್ತದೆ, ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688