BREAKING NEWS : ‘ರಾಯುಡು ವಿದಾಯಕ್ಕೆ ಭಾರತ ತಂಡದ ಈ ಕ್ರಿಕೆಟಿಗ ಪ್ರಮುಖ ಕಾರಣವಂತೆ’

ಭಾರತ ತಂಡದ ಕ್ರಿಕೆಟಿಗ ಅಂಬಾಟಿ ರಾಯುಡು ಅವರು ಕಳೆದ ವಾರವಷ್ಟೇ ತಮ್ಮ ಅಂತಾರಾಷ್ಟ್ರೀಯ ಎಲ್ಲ ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಣೆ ಮಾಡಿದರು. ಆದರೆ, ರಾಯುಡು ಅವರ ವಿದಾಯಕ್ಕೆ ಭಾರತ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಕಾರಣ ಎಂದು ಯುವರಾಜ್​ ಸಿಂಗ್​ ತಂದೆ ಯೋಗ್ರಾಜ್ ಸಿಂಗ್ ​ ಅವರು ಕ್ರೀಡಾ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.

ಭಾರತದ ಪರವಾಗಿ ಆರಂಭಿಕ 15 ಮಂದಿಯ ಕ್ರಿಕೆಟ್ ವಿಶ್ವಕಪ್ 2019 ತಂಡಕ್ಕೆ ರಾಯುಡು ಅವರನ್ನು ಮೊದಲು ನಿರ್ಲಕ್ಷಿಸಲಾಗಿದೆ. ಜೊತೆಗೆ ತಮಿಳುನಾಡಿನ ಆಲ್‌ರೌಂಡರ್ ವಿಜಯ್​ ಶಂಕರ್​ ಹಾಗೂ ಶಿಖರ್ ಧವನ್ ಅವರು ಗಾಯದ ಸಮಸ್ಯೆ ಕಾರಣದಿಂದಾಗಿ ಬದಲಾಯಿಸಬೇಕಾಯಿತು, ಅಲ್ಲೂ ಸಹ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಅವರ ಹೆಸರನ್ನು ಮತ್ತೆ ಕಡೆಗಣಿಸಲಾಗಿದೆ ಎಂದಿದ್ದಾರೆ.

ಈ ಘಟನೆ ಅಂಬಾಟಿ ರಾಯುಡು ಅವರು ತಮ್ಮ ಬೂಟುಗಳನ್ನು ಗೋಡೆಯ ಮೇಲೆ ನೇತುಹಾಕಲು ಪ್ರೇರೇಪಿಸಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ನ ಪರವಾಗಿ ಅಭಿಮಾನಿಗಳು ಹೊರಬಂದು ಬಿಸಿಸಿಐ ಆಂತರಿಕ ರಾಜಕೀಯಕ್ಕೆ ದೂಷಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಯಕ ಇನ್ನೂ ಯಾವುದೇ ಪ್ರತಿಕ್ರಿಯೆಗಳನ್ನು ನೀಡದಿದ್ದರೂ, ಯೋಗ್ರಾಜ್ ಸಿಂಗ್ ಮಾತ್ರ ಹೊರಬಂದು ರಾಯುಡು ಅವರ ನಿವೃತ್ತಿಗೆ ಎಂಎಸ್​ ಧೋನಿಯೇ ಕಾರಣ ಎಂಬ ಆರೋಪ ಮಾಡಿದ್ದಾರೆ.

ನನ್ನ ಮಗ ರಾಯುಡು ತರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡಿದ್ದೀರಿ. ನಿವೃತ್ತಿಯಿಂದ ಹೊರಬನ್ನಿ ಮತ್ತು ನಿಮ್ಮ ಸಾಮರ್ಥ್ಯವನ್ನು ಅವರಿಗೆ ತೋರಿಸಿ. ಎಂ.ಎಸ್. ಧೋನಿಯಂತಹ ಜನರು ಶಾಶ್ವತವಾಗಿ ಉಳಿಯುವುದಿಲ್ಲ, ಈ ರೀತಿಯ ಹೊಲಸು ಶಾಶ್ವತವಾಗಿ ಉಳಿಯುವುದಿಲ್ಲ, ”ಎಂದು ಯುವರಾಜ್​ ಸಿಂಗ್​ ತಂದೆ ಯೋಗ್ರಾಜ್ ಸಿಂಗ್ ​ ಹೇಳಿದರು.

“ಮೈತ್ರಿ ಸರ್ಕಾರದ” ಅನರ್ಹತೆ ಅಸ್ತ್ರಕ್ಕೆ ಜಂಟಿಪತ್ರಿಕಾಗೋಷ್ಠಿಯಲ್ಲಿ ಅತೃಪ್ತ ಶಾಸಕರ ಸವಾಲು ಏನು ಗೊತ್ತಾ?

ನಾವು ನಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆಯೇ ವಿನಃ ನಮ್ಮ ಪಕ್ಷಕ್ಕೆ ಅಲ್ಲ. ನಾವೆಲ್ಲರೂ ಕಾಂಗ್ರೆಸ್, ಜೆಡಿಎಸ್ ನಲ್ಲಿಯೇ ಇದ್ದೇವೆ. ಸರ್ಕಾರದ ವಿರುದ್ಧ ಅಸಮಾಧಾನಕ್ಕೆ ನಾವು ರಾಜೀನಾಮೆ ನೀಡಿದ್ದೇವೆ. ಹೀಗಾಗಿ ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಅತೃಪ್ತ ಶಾಸಕರು ಕಾಂಗ್ರೆಸ್ ಎಚ್ಚರಿಕೆಗೆ ಸಡ್ಡು ಹೊಡೆದಿದೆ.

ಮಂಗಳವಾರ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ, 8 ಮಂದಿ ಅತೃಪ್ತ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸ್ಪೀಕರ್ ಗೆ ದೂರು ಕೊಡಲು ನಿರ್ಧರಿಸಿತ್ತು.

ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಹತ್ತು ಮಂದಿ ಅತೃಪ್ತ ಶಾಸಕರು ಜಂಟಿ ಸುದ್ದಿಗೋಷ್ಠಿ ನಡೆಸಿ, ನಾವು ಬಿಜೆಪಿಗೆ ಹೋಗುವುದಿಲ್ಲ. ಯಾವುದೇ ಮಂತ್ರಿ ಪದವಿಗೆ ಬೇಡಿಕೆ ಇಟ್ಟಿಲ್ಲ. ಕರ್ನಾಟಕದ ಜನರು ಮೈತ್ರಿ ಸರ್ಕಾರವನ್ನು ಇಷ್ಟಪಡುತ್ತಿಲ್ಲ ಎಂದು ಎಸ್ ಟಿ ಸೋಮಶೇಖರ್ ಹೇಳಿದರು.

ನಾವ್ಯಾರು ಪಕ್ಷ ಬಿಟ್ಟಿಲ್ಲ, ನಾವೆಲ್ಲರೂ ಇನ್ನೂ ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿದ್ದೇವೆ. ನಾವು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಮೇಲೆ ನಮಗೆ ಯಾವುದೇ ಅಸಮಾಧಾನವಿಲ್ಲ ಎಂದು ಶಾಸಕ ನಾರಾಯಣ ಗೌಡ ತಿಳಿಸಿದ್ದಾರೆ.

ರಾಜೀನಾಮೆ ಬಳಿಕ ರಮೇಶ್ ಜಾರಕಿಹೊಳಿ ಮೊದಲ ಪ್ರತಿಕ್ರಿಯೆಗೆ ಬೆಚ್ಚಿಬಿದ್ದ ಮೈತ್ರಿ ಸರ್ಕಾರ..!

ರಾಜೀನಾಮೆ ಬಳಿಕ ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ, ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ರಾಜೀನಾಮೆ ಹಿಂಪಡೆಯುವ ಮಾತೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜೀನಾಮೆ ನೀಡಿದ ಎಲ್ಲ ಶಾಸಕರು ನಮ್ಮ ನಿರ್ಧಾರಕ್ಕೆ ಅಚಲರಾಗಿದ್ದೇವೆ ಎಂದ ರಮೇಶ್ ಜಾರಕಿಹೊಳಿ, ನಾವು ಸಚಿವ ಸ್ಥಾನ ಬೇಕೆಂದು ರಾಜೀನಾಮೆ ನೀಡಿದ್ದಲ್ಲ. ಮನಸ್ಸಿಗೆ ಬೇಸರವಾದ ಕಾರಣ ನಾವು ರಾಜೀನಾಮೆ ಸಲ್ಲಿಸಿದ್ದೇವೆ ಎಂದಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಪ್ರತಾಪ್ ಗೌಡ ಪಾಟೀಲ್ , ನಾವೆಲ್ಲ ಒಗ್ಗಟ್ಟಾಗಿ ರಾಜೀನಾಮೆ ನೀಡಿದ್ದೇವೆ. ನಮಗೆ ವೈಯಕ್ತಿಕವಾಗಿ ಬೇಸರವಾಗಿದ್ದಕ್ಕೆ ರಾಜೀನಾಮೆ ನೀಡಿದ್ದೇವೆ. ಮತ್ತೆ ತಿರುಗಿ ಪಕ್ಷಕ್ಕೆ ಹೋಗುವ ಮಾತೇ ಇಲ್ಲ ಎಂದಿದ್ದಾರೆ.

ಅಲ್ಲದೇ, ನಮ್ಮ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದು, ಏನು ಕ್ರಮ ಕೈತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ. ಅದನ್ನ ನಾವು ಸಮರ್ಥವಾಗಿ ಎದುರಿಸಲು ತಯಾರಿದ್ದೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತು ಮುಂದುವರಿಸಿದ ಪ್ರತಾಪ್ ಗೌಡ ಪಾಟೀಲ್, ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆಯೇ ಹೊರತು ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ. ನಾವು ಯಾವುದೇ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ.

ನಾವು ಕ್ರಮಬದ್ಧವಾಗಿಯೇ ರಾಜೀನಾಮೆ ನೀಡಿದ್ದೇವೆ. ಸ್ಪೀಕರ್ ರಮೇಶ್ ಕುಮಾರ್ ಅದನ್ನ ಅಂಗೀಕರಿಸಿದರೆ ರಾಜೀನಾಮೆ ಜಾರಿಯಾಗುತ್ತದೆ. ಅಲ್ಲದೇ ನಾನು ನಮ್ಮ ಕ್ಷೇತ್ರದ ಜನರ ಅಭಿಪ್ರಾಯವನ್ನ ಕೇಳಿಯೇ ರಾಜೀನಾಮೆ ಸಲ್ಲಿಸಿರುವುದು.

BJP ಹಾದಿಗೆ ಮುಳ್ಳಾದ ಸ್ಪೀಕರ್!

ಸಾಲು ಸಾಲು ಶಾಸಕರ ಹಾಗೂ ಸಚಿವರ ರಾಜೀನಾಮೆಯಿಂದಾಗಿ ರಾಜ್ಯದ ಸಮ್ಮಿಶ್ರ ಸರ್ಕಾರ ತಾಂತ್ರಿಕವಾಗಿ ಬಹುಮತವನ್ನು ಕಳೆದುಕೊಂಡಿದೆ. ಹೀಗಾಗಿ ಬಿಜೆಪಿ ನೂತನ ಸರ್ಕಾರ ರಚಿಸುವ ಕನಸು ಕಾಣುತ್ತಿದೆ. ಆದರೆ, ಕಮಲ ಪಾಳಯದ ಈ ಕನಸಿಗೆ ಒಂದೆಡೆ ಕೆಲ ಕಾನೂನಿನ ತೊಡಕುಗಳು ಎದುರಾದರೆ, ಸ್ಪೀಕರ್ ಕೆ.ಆರ್​. ರಮೇಶ್ ಕುಮಾರ್ ಸಹ ಮಗ್ಗುಲ ಮುಳ್ಳಾಗಿ ಕಾಡುವ ಸೂಚನೆ ನೀಡಿರುವುದು ಕಮಲ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರ 224. ಸರ್ಕಾರ ರಚಿಸುವ ಮ್ಯಾಜಿಕ್ ನಂಬರ್ 113. ಹೀಗಾಗಿ ಕಳೆದ ವರ್ಷ 118 ಜನ ಮೈತ್ರಿ ಪಕ್ಷದ ಶಾಸಕರು ಒಟ್ಟಾಗಿ ಸರ್ಕಾರ ರಚನೆ ಮಾಡಿದ್ದರು. ಆದರೆ, ಇದೀಗ ಕಾಂಗ್ರೆಸ್ ಪಕ್ಷದ 13 ಹಾಗೂ ಜೆಡಿಎಸ್ ಪಕ್ಷದ ಓರ್ವ ಶಾಸಕ ರಾಜೀನಾಮೆ ನೀಡಿದ್ದಾರೆ. ಇದಲ್ಲದೆ ಮೈತ್ರಿಗೆ ಬೆಂಬಲ ಸೂಚಿಸಿದ್ದ ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ಹೆಚ್. ನಾಗೇಶ್ ಸಹ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.

ಈ ಪ್ರಕ್ರಿಯೆಯಿಂದ ಕಾಂಗ್ರೆಸ್-ಜೆಡಿಎಸ್ ಸಂಖ್ಯೆ 118 ರಿಂದ 104ಕ್ಕೆ ಕುಸಿದಿದೆ. ಅಲ್ಲದೆ ಬಿಜೆಪಿ ಸಂಖ್ಯೆ 105 ರಿಂದ 107ಕ್ಕೆ ಏರಿಕೆ ಕಂಡಿದೆ. 14 ಶಾಸಕರ ರಾಜೀನಾಮೆಯಿಂದಾಗಿ ಇದೀಗ ಬಹುಮತದ ಮ್ಯಾಜಿಕ್ ನಂಬರ್ 106 ಕ್ಕೆ ಇಳಿದಿದೆ. ಪರಿಣಾಮ ಬಿಜೆಪಿ ತಾಂತ್ರಿಕವಾಗಿ ಬಹುಮತ ಪಡೆದಂತಾಗಿದೆ. ಇದೇ ಕಾರಣಕ್ಕೆ ಸರ್ಕಾರ ರಚಿಸಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಎಲ್ಲವೂ ಬಿಜೆಪಿ ನಾಯಕರು ಅಂದುಕೊಂಡತೆ ಆದರೆ, ಈ ವಿಧಾನಮಂಡಲ ಅಧಿವೇಶನದ ಒಳಗೆ ಹೊಸ ಸರ್ಕಾರ ರಚನೆಯಾಗುವುದರಲ್ಲಿ ಎರಡು ಮಾತಿಲ್ಲ. ಆದರೆ, ಇದಕ್ಕೆ ಬಿಜೆಪಿ ಕೆಲವು ಕಾನೂನು ತೊಡಕುಗಳನ್ನು ಎದುರಿಸಬೇಕಿದೆ.

ಬಿಜೆಪಿ ಮುಂದಿದೆ ಕಾನೂನು ತೊಡಕು;
ಮೈತ್ರಿ ಪಕ್ಷದ 14 ಶಾಸಕರು ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕಾರ ಮಾಡದ ಹೊರತಾಗಿ ಮ್ಯಾಜಿಕ್ ಸಂಖ್ಯೆ 106ಕ್ಕೆ ಇಳಿಯುವುದು ಸಾಧ್ಯವಿಲ್ಲ. ಆದರೆ, ಸ್ಪೀಕರ್ ಇವರ ರಾಜೀನಾಮೆಯನ್ನು ಈವರೆಗೆ ಅಂಗೀಕಾರ ಮಾಡದೆ ಇರುವುದು ಅಥವಾ ರಾಜೀನಾಮೆಗೆ ಸೂಕ್ತ ಕಾರಣ ಕೇಳಲು ಅತೃಪ್ತರನ್ನು ಆಹ್ವಾನಿಸದೆ ಇರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕಾರ ಮಾಡುವ ಅಥವಾ ಮಾಡದೆ ಇರುವ ಪರಮಾಧಿಕಾರ ಸ್ಪೀಕರ್ ಅವರಿಗಿದೆ. ಹೀಗಾಗಿ ರಾಜೀನಾಮೆ ನೀಡಿರುವ ಶಾಸಕರು ಖುದ್ದಾಗಿ ಬಂದು ತಮ್ಮ ರಾಜೀನಾಮೆ ಕಾರಣ ಹೇಳಿ ಎಂದು ಸ್ಪೀಕರ್ ಅತೃಪ್ತರಿಗೆ ಆಹ್ವಾನ ಮಾಡಬಹುದು. ಇವರ ಕಾರಣ ಸಮಂಜಸವಾಗಿಲ್ಲ ಎಂದಾದರೆ ಶಾಸಕರ ರಾಜೀನಾಮೆಯನ್ನು ಅಂಗೀಕರಿಸದೆಯೂ ಇರಬಹುದು. ಅಥವಾ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಅತೃಪ್ತ ಶಾಸಕರ ಶಾಸಕ ಸ್ಥಾನವನ್ನೇ ಅನೂರ್ಜಿತಗೊಳಿಸಬಹುದು. ಸ್ಪೀಕರ್ ಅವರ ಇಂತಹ ಯಾವುದೇ ನಿರ್ಧಾರ ಬಿಜೆಪಿಯ ಕನಸಿಗೆ ಮುಳ್ಳಾಗುವುದರಲ್ಲಿ ಎರಡು ಮಾತಿಲ್ಲ.

ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಇಂತಹ ತೀರ್ಮಾನಗಳಿಗೆ ಮುಂದಾಗುವ ಮುನ್ನವೇ ವಿರೋಧ ಪಕ್ಷಗಳು ಅವರ ವಿರುದ್ಧ ಅವಿಶ್ವಾ ನಿರ್ಣಯ ಮಂಡನೆ ಮಾಡಿ ಅವರನ್ನು ಸ್ಪೀಕರ್ ಸ್ಥಾನದಿಂದ ಕೆಳಗಿಸುವುದಕ್ಕೂ ಅವಕಾಶವಿದೆ. ಆದರೆ, ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭಕ್ಕೆ 14 ದಿನದ ಮುನ್ನವೇ ವಿರೋಧ ಪಕ್ಷಗಳು ಇಂತಹ ತೀರ್ಮಾನಕ್ಕೆ ಮುಂದಾಗಬೇಕು. ಜುಲೈ.12 ರಿಂದಲೇ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, 22ಕ್ಕೆ ಮುಗಿಯಲಿದೆ. ಹೀಗಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಾಡುವುದು ಕಾನೂನಾತ್ಮಕವಾಗಿ ಅಸಾಧ್ಯ ಎನಿಸಿದೆ.

ಹೀಗಾಗಿ ಬಿಜೆಪಿ ಅನಿವಾರ್ಯವಾಗಿ ರಾಜ್ಯಪಾಲರ ಮೊರೆ ಹೋಗಲಿದೆ. ರಾಜ್ಯಪಾಲರು ಮನಸ್ಸು ಮಾಡಿದರೆ ಮಾತ್ರ ಈ ಸರ್ಕಾರ ಬೀಳಿಸುವುದು ಸಾಧ್ಯ. ರಾಜ್ಯಪಾಲರು ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ಬಹುಮತ ಸಾಭೀತಿಗೆ ಆಗ್ರಹಿಸಿದರೆ ಮಾತ್ರ ಸರ್ಕಾರ ಬೀಳುವುದು ಬಹುತೇಕ ಖಚಿತ. ಹೀಗಾಗಿ ಎಲ್ಲಾ ಬಿಜೆಪಿ ನಾಯಕರು ರಾಜ್ಯಪಾಲರ ಮೊರೆ ಹೋಗುವ ಸಾಧ್ಯತೆ ಇದೆ.

ಇಂದು ಸಂಜೆ ನಡೆಯಲಿರುವ ಬಿಜೆಪಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಎಲ್ಲಾ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಮದ್ಯ ಪ್ರವೇಶಕ್ಕೆ ಮನವಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗುವುದು ಎನ್ನಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಪ್ರಸ್ತುತ ರಾಜ್ಯಪಾಲರೇ ಮುಂದಾಗಿ ಈ ಸರ್ಕಾರವನ್ನು ಬೀಳಿಸಿದರೂ ಅಚ್ಚರಿ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್ – ಜೆಡಿಎಸ್‌ ಸರ್ಕಾರದ ಭವಿಷ್ಯ ರಮೇಶ್ ಕುಮಾರ್ ಕೈಯಲ್ಲಿ.! ನಿರ್ಧಾರ ಏನಿರುತ್ತೆ ಗೊತ್ತಾ..?

ಮೈತ್ರಿ ಸರ್ಕಾರದ 15 ಶಾಸಕರ ರಾಜೀನಾಮೆ ಬಳಿಕ ಕಾಂಗ್ರೆಸ್ – ಜೆಡಿಎಸ್‌ ಸರ್ಕಾರಕ್ಕೆ ಬಹುಮತ ಕೊರತೆ ಎದುರಾಗಿದೆ. ಈಗ ಸರ್ಕಾರದ ಅಳಿವು – ಉಳಿವು ಸ್ಪೀಕರ್‌ ಕ್ರಮದ ಮೇಲೆ ನಿಂತಿದೆ.

ವಿಧಾನಸೌಧದ ಸ್ಪೀಕರ್‌ ಕಚೇರಿಯಲ್ಲಿ ಶಾಸಕರ ರಾಜೀನಾಮೆ ಪತ್ರಗಳಿದ್ದು, ರಮೇಶ್‌ ಕುಮಾರ್‌ ಪರಿಶೀಲನೆ ನಡೆಸಲಿದ್ದಾರೆ. ಹೀಗಾಗಿ, ಅವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಬಂಡಾಯಗಾರರಿಗೆ ಪಾಠ ಕಲಿಸಲು ಮುಂದಾಗಿರುವ ದೋಸ್ತಿ ನಾಯಕರು ಸ್ಪೀಕರ್‌ಗೆ ದೂರು ಕೊಡಲು ಮುಂದಾಗಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ರಾಜೀನಾಮೆ ಕೊಟ್ಟವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಮನವಿ ಮಾಡಲಿದ್ದಾರೆ. ಈಗಾಗಲೇ ಸ್ಪೀಕರ್‌ಗೆ ದೂರು ಕೊಟ್ಟಿದ್ದು, ಮತ್ತೊಮ್ಮೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ಬಂಡಾಯಗಾರರ ಮೇಲೆ ಅನರ್ಹತೆ ತೂಗುಗತ್ತಿ ತೂಗುತ್ತಿದೆ. ಶಾಸಕರು ಅನರ್ಹಗೊಂಡರೂ ಉಪಚುನಾವಣೆಗೆ ನಿಲ್ಲಬಹುದು. ಇದಕ್ಕೆ ಕೆಲ ತಿಂಗಳ ಹಿಂದೆ ತಮಿಳುನಾಡಿನಲ್ಲಿ ಸೃಷ್ಟಿಯಾಗಿದ್ದ ರಾಜಕೀಯ ಬಿಕ್ಕಟ್ಟೇ ಇದಕ್ಕೆ ನಿದರ್ಶನ.

ಮೊದಲ ಹೆಜ್ಜೆಯಾಗಿ ಅತೃಪ್ತರು ಸಲ್ಲಿಸಿರುವ ರಾಜೀನಾಮೆ ಪತ್ರ ಪರಿಶೀಲನೆ ನಡೆಸಲಾಗುತ್ತದೆ. ರಾಜೀನಾಮೆ ಸಲ್ಲಿಸಿರುವ ರೀತಿ ಕ್ರಮಬದ್ಧವಾಗಿಯೇ.? ಅಥವಾ ಇಲ್ಲವೆ.? ಎಂಬ ಬಗ್ಗೆ ಪರಿಶೀಲನೆ ನಡೆಸಿ, ಕ್ರಮಬದ್ಧವಾಗಿ ಇಲ್ಲದಿದ್ದರೆ ತಿರಸ್ಕೃತ ಮಾಡಲಾಗುತ್ತದೆ. ಕ್ರಮಬದ್ಧವಾಗಿದ್ದರೆ ಸೂಕ್ತ ಸಂದರ್ಭದಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿ, ವಿಳಂಬ ನೀತಿ ಧೋರಣೆ ಅನುಸರಿಸಬಹುದು. ಅಥವಾ ಈ ಹಿಂದೆ ಉಮೇಶ್ ಜಾಧವ್ ಮಾದರಿಯಲ್ಲಿ ಅತೃಪ್ತರನ್ನು ಕರೆಸಿ ವಿಚಾರಣೆ ನಡೆಸುವುದು. ರಾಜೀನಾಮೆಗೆ ನೈಜ ಕಾರಣ ತಿಳಿಯುವುದು. ಕೊನೆಗೆ ಎಲ್ಲವೂ ರಾಜೀನಾಮೆ ಅಂಗೀಕರಸಬಹುದು. ಅಥವಾ ಕಾಂಗ್ರೆಸ್‌ ದೂರಿನ ಮೇರೆಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಬಹುದು.

ರಾಜ್ಯಪಾಲರ ಮುಂದಿರುವ ಆಯ್ಕೆಗಳು
ರಾಜ್ಯಪಾಲರು ಸದ್ಯದ ರಾಜಕೀಯ ಪರಿಸ್ಥಿತಿ ಅವಲೋಕನ ಮಾಡುವುದು, ಜೊತೆಗೆ ರಾಜಕೀಯ ಬಿಕ್ಕಟ್ಟು ಮಿತಿ ಮೀರುತ್ತಾ ಎಂಬುದರ ಬಗ್ಗೆ ಗಮನ ಹರಿಸವುದು. ಎಷ್ಟು ಶಾಸಕರು ರಾಜೀನಾಮೆ ನೀಡ್ತಾರೆ ಎಂಬುದರ ಜೊತೆಗೆ ಸಂವಿಧಾನಿಕ ಬಿಕ್ಕಟ್ಟು ಸೃಷ್ಠಿಯಾಗಿದ್ಯಾ ಎಂಬುದರ ಬಗ್ಗೆ ಮಾಹಿತಿ ಸಂಗ್ರಹ ಮಾಡುವುದು. ಸಾಂವಿಧಾನಿಕ ಬಿಕ್ಕಟ್ಟು ಕಂಡುಬಂದಲ್ಲಿ ವಿಧಾನಸಭೆ ಅಮಾನತ್ತಿನಲ್ಲಿರಿಸುವ ನಿರ್ಧಾರ ಕೈಗೊಳ್ಳಬಹುದು. ಜೊತೆಗೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಕೂಡ ಮಾಡಬಹುದು. ಆಗ ಈ ಪ್ರಕರಣ ಕೇಂದ್ರ ಸರ್ಕಾರದ ಅಂಗಳಕ್ಕೆ ಹೋಗುತ್ತೆ. ಅಲ್ಲಿಗೆ ರಾಜ್ಯ ಸರ್ಕಾರದ ಭವಿಷ್ಯ ಕೇಂದ್ರ ಸಚಿವ ಸಂಪುಟದಲ್ಲಿ ಕೈಗೊಳ್ಳುವ ನಿರ್ಧಾರದ ಮೇಲೆ ನಿಂತಿರುತ್ತೆ

ಈ ನಡುವೆ, ಸ್ಪೀಕರ್‌ ಮೇಲೆ ಮೈತ್ರಿ ನಾಯಕರ ಒತ್ತಡವಿದೆ ಅಂತ ಹೇಳಲಾಗ್ತಿದೆ. ಈ ಬಗ್ಗೆ ರಮೇಶ್ ಕುಮಾರ್​ ಅವರೇ ಆಪ್ತರ ಜೊತೆ ಹೇಳಿಕೊಂಡಿದ್ದಾರಂತೆ. ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ಕರೆ ಮಾಡಿ ರಾಜೀನಾಮೆ ಪರಿಶೀಲನೆ ಬಗ್ಗೆ ಸ್ಪೀಕರ್ ಬಳಿ ಚರ್ಚೆ ನಡೆಸಿದ್ದಾರೆ. ಅದಕ್ಕೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳೋದಾಗಿ ಸ್ಪೀಕರ್ ಹೇಳಿದ್ದಾರೆ ಅಂತ ತಿಳಿದುಬಂದಿದೆ. ಒಟ್ಟಿನಲ್ಲಿ ಸ್ಪೀಕರ್‌ ರಮೇಶ್ ಕುಮಾರ್ ಕ್ರಮವೇ ಈಗ ಅಂತಿಮವಾಗಿದೆ.

ಇಂದು ಬೆಳಿಗ್ಗೆ ಕಾಂಗ್ರೆಸ್​ನ ಮತ್ತೈದು ವಿಕೆಟ್​ ಪತನ! ರಾಜೀನಾಮೆ ಕೊಡೋರ ಹೆಸರು ಕೇಳಿದ್ರೆ ನೀವು ಬೆಚ್ಚಿಬೀಳ್ತಿರಿ!

ಸರ್ಕಾರವನ್ನು ಉಳಿಸಿಕೊಳ್ಳಲು ಸಚಿವರ ತಲೆದಂಡ ಪಡೆದು ರಣತಂತ್ರ ರೂಪಿಸಿರುವ ಮೈತ್ರಿ ಸರ್ಕಾರಕ್ಕೆ ನಾಳೆ ಮತ್ತಷ್ಟು ಶಾಕ್​ ಕಾದಿದೆ. ಹೌದು ನಾಳೆ ಮತ್ತೈದು ಕಾಂಗ್ರೆಸ್​ ಶಾಸಕರು ರಾಜೀನಾಮೆ ನೀಡಲಿದ್ದು, ಸ್ಪೀಕರ್​ ಸಮಯಾವಕಾಶ ಕೋರಿದ್ದಾರೆ ಎಂಬ ಶಾಕಿಂಗ್ ನ್ಯೂಸ್​ ಲಭ್ಯವಾಗಿದೆ.

ಹೌದು ಈಗಾಗಲೇ ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸಿ ಅವರಿಗೆ ಸಚಿವ ಸ್ಥಾನ ನೀಡುವುದಕ್ಕಾಗಿ ಮೈತ್ರಿ ನಾಯಕರು ಪ್ಲ್ಯಾನ್​ ರೂಪಿಸಿದ್ದು, ಇದಕ್ಕಾಗಿ 21 ಕಾಂಗ್ರೆಸ್ ಹಾಗೂ 9 ಜೆಡಿಎಸ್ ಸಚಿವರ ರಾಜೀನಾಮೆ ಪಡೆದುಕೊಂಡಿದ್ದಾರೆ.

ಇದರ ಬೆನ್ನಲ್ಲೇ ನಾಳೆ ವೇಳೆಗೆ ಅತೃಪ್ತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಬೆಂಗಳೂರು ಶಾಸಕಿ ಸೌಮ್ಯ, ರೆಡ್ಡಿ, ರೋಷನ್ ಬೇಗ್​, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಬೆಳಗಾವಿ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಎಂಟಿಬಿ ನಾಗರಾಜ್ ಸೇರಿ ಒಟ್ಟು 5 ಜನರು ರಾಜೀನಾಮೆ ನೀಡಲಿದ್ದಾರೆ.

ಈಗಾಗಲೇ ಈ ಶಾಸಕರು ರಾಜೀನಾಮೆಗಾಗಿ ಸ್ಪೀಕರ್ ಕಚೇರಿಯಲ್ಲಿ ಸಮಯಾವಕಾಶ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಸಧ್ಯ 11 ಕ್ಕೂ ಹೆಚ್ಚು ಶಾಸಕರ ರಾಜೀನಾಮೆಯಿಂದ ಸರ್ಕಾರ ಸಂಕಷ್ಟದಲ್ಲಿದ್ದು, ಒಂದೊಮ್ಮೆ ನಾಳೆ ಮತ್ತೆ 5 ಶಾಸಕರು ರಾಜೀನಾಮೆ ನೀಡಿದಲ್ಲಿ ಸರ್ಕಾರ ಮತ್ತಷ್ಟು ಅತಂತ್ರವಾಗೋದು ಗ್ಯಾರಂಟಿ ಎನ್ನಲಾಗ್ತಿದೆ.

ಮೈತ್ರಿ ಸರ್ಕಾರಕ್ಕೆ ಮತ್ತೆ ಹ್ಯಾಟ್ರಿಕ್ ವಿಕೆಟ್ ಔಟ್!

ಒಂದು ಕಡೆ ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆಗೆ ಮೈತ್ರಿ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದು ಕಡೆ ರಾಜೀನಾಮೆ ಪತ್ರಗಳು ಹನುಮಂತನ ಬಾಲದಂತೆ ಬೆಳೆಯುತ್ತಿದೆ.

ಬೆಳಗ್ಗೆ ಸಚಿವ ಎಚ್.ನಾಗೇಶ್, ಸಂಜೆ ಸಚಿವ ಆರ್. ಶಂಕರ್ ರಾಜೀನಾಮೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್ ಮತ್ತೊಬ್ಬ ಪ್ರಭಾವಿ ನಾಯಕನಾಗಿದ್ದ, ಶಿವಾಜಿನಗರ ಶಾಸಕ ರೋಷನ್ ಬೇಗ್ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಹೇಳಿರುವ ರೋಷನ್ ಬೇಗ್, ಬಿಜೆಪಿ ಸೇರೋದಾಗಿ ಪ್ರಕಟಿಸಿದ್ದಾರೆ.

ಶಾಸಕರ ಸಾಮೂಹಿಕ ರಾಜೀನಾಮೆ ಮೈತ್ರಿಪಕ್ಷಗಳ ನಾಯಕರನ್ನು ಭಾರೀ ಸಂಕಟಕ್ಕೆ ದೂಡಿದ್ದು, ಸರ್ಕಾರ ಪತನವಾಗುವ ಸನ್ನಿವೇಶ ಸೃಷ್ಟಿಯಾಗಿದೆ.

ಶಾಸಕರ ಮನವೊಲಿಸಲು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮುಂಬೈಗೆ ತೆರಳಿದ್ದರೆ, ಇತ್ತ ಅಳಿದುಳಿದ ಜೆಡಿಎಸ್ ಶಾಸಕರು ರೆಸಾರ್ಟ್‌ನತ್ತ ಮುಖ ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ನಾಯಕರನ್ನು ಟೀಕಿಸಿ, ನರೇಂದ್ರ ಮೋದಿ ಹೊಗಳಲು ಆರಂಭಿಸಿದ್ದ ರೋಷನ್ ಬೇಗ್‌ರನ್ನು ಕಾಂಗ್ರೆಸ್‌ನಿಂದ ಅಮಾನತ್ತು ಮಾಡಲಾಗಿತ್ತು.

ಚಾಮುಂಡೇಶ್ವರಿ ಕೃಪಾಶೀರ್ವಾದ ದಿಂದ ಇಂದು ಈ ರಾಶಿಯವರು ಕೈ ಹಾಕಿದ ಕೆಲಸದಲ್ಲಿ ಯಶಸ್ಸು, ಭಾರೀ ಲಾಭ 09-07-2019

ದಿನಭವಿಷ್ಯ 9 ಜುಲೈ 2019

ಪಂಡಿತ್ ಅನಂತ್ ಪ್ರಸಾದ್ ದೈವಜ್ಞ ಜ್ಯೋತಿಷ್ಯರು ಜ್ಯೋತಿಷ್ಯ 9945996688
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ
ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ( 7)ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9945996688

ಮೇಷ ರಾಶಿ – ನಿಮ್ಮ ವಿಶ್ವಾಸ ನಿಮ್ಮ ವ್ಯಕ್ತಿತ್ವವನ್ನು ಬೆಳಗಿಸುತ್ತದೆ ಇಂದಿನಹೂಡಿಕೆ ಲಾಭದಾಯಕವಾಗಿರುತ್ತದೆ ಹಳೆಯ ಸಂಪರ್ಕ ಇಂದು ಚಾಲ್ತಿಗೆ ಬರುತ್ತದೆ ದಾಂಪತ್ಯ ಉತ್ತಮಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688ಪಂಡಿತ್

ವೃಷಭ ರಾಶಿ – ಮುಗುಳ್ನಗೆ ಮೂಲಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ ನೂತನ ಕಲ್ಪನೆಗಳಿಂದ ಲಾಭ ನೂತನಕೆಲಸಕಾರ್ಯಗಳನ್ನು ಆರಂಭಿಸಲು ಉತ್ತಮ ದಿನ ಗಾಳಿ ಮಾತು ಗಳಿಂದ ದೂರವಿರಿ ದಾಂಪತ್ಯ ಉತ್ತಮಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಮಿಥುನ ರಾಶಿ – ನಿಮ್ಮವರನ್ನು ನೀವು ಹೊಗಳುವಿರಿ ನಿಮ್ಮ ಶ್ರಮಕ್ಕೆ ತಕ್ಕ ಗೌರವಸಿಗುತ್ತದೆ ಇತರರಿಗೆ ಸಹಾಯ ಮಾಡಿ ಆರ್ಥಿಕ ಪ್ರತಿ ಫಲಗಳನ್ನು ಪಡೆಯುವಿರಿ ವೃತ್ತಿಯಲ್ಲಿ ಏಳಿಗೆ ಬದಲಾವಣೆ ದಾಂಪತ್ಯಉತ್ತಮಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಕರ್ಕಾಟಕ ರಾಶಿ – ಒರಟುತನವನ್ನು ಬಿಟ್ಟುಬಿಡಿ ಭೂ ವ್ಯವಹಾರಗಳು ಲಾಭದಾಯಕವಾಗಿದೆ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಉತ್ಸಾಹವನ್ನುನಿಯಂತ್ರಿಸಿಕೊಳ್ಳಿ ಅನುಭವಗಳ ಮೂಲಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ ಉತ್ತಮ ದಿನ ದಾಂಪತ್ಯವನ್ನು ನಿರ್ವಹಿಸಲು ಹೆಣಗಾಡುವಿರಿ,ಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಸಿಂಹ ರಾಶಿ – ಇತರರ ವರ್ತನೆ ಕಿರಿಕಿರಿ ನೀಡುತ್ತದೆ ಆರ್ಥಿಕ ಲಾಭ ಮನೆಯವಿಚಾರಗಳಿಗೆ ಗಮನ ನೀಡಿ ತಪ್ಪುಗಳನ್ನು ಕ್ಷಮಿಸುವ ಗುಣ ಹೊಂದಿರಿ ಜಂಟಿ ಯೋಜನೆಗಳ ಬಗ್ಗೆ ಜಾಗೃತರಾಗಿರಿ ಉತ್ತಮ ದಾಂಪತ್ಯಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಕನ್ಯಾ ರಾಶಿ – ಜೀವನವನ್ನು ಆನಂದಿಸಿ ಕೊಳ್ಳಿ ಆರ್ಥಿಕ ಸಮತೋಲನಕಾಯ್ದುಕೊಳ್ಳಿ ಮನೆ ಅಗತ್ಯಗಳನ್ನು ಪೂರೈಸಿ ನಿಮ್ಮ ದೃಷ್ಟಿ ಗುರಿಯತ್ತ ಇರಲಿ ಗೆಳೆಯರ ಸಹಾಯ ಪಡೆಯಿರಿ ಹೊಸ ವಿಚಾರಗಳ ಲಭ್ಯತೆ ದಾಂಪತ್ಯ ಉತ್ತಮವಾಗಿರುತ್ತದಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ತುಲಾ ರಾಶಿ – ಅರೋಗ್ಯ ಸುಧಾರಿಸಿಕೊಳ್ಳಿ ದುಂದು ವೆಚ್ಚ ಮಾಡಲುಮುಂದಾಗಬೇಡಿ ಸಂತೋಷದ ಸುದ್ದಿ ಪಡೆಯಿರಿ ನೂತನ ಯೋಜನೆಗಳ ಬಗ್ಗೆ ಸರಿಯಾಗಿ ಮತ್ತು ತಕ್ಷಣವೇ ಪ್ರತಿಕ್ರಿಯಿಸಿ ವ್ಯಾಪಾರದ ಬಗ್ಗೆ ಆಸಕ್ತಿ ಇರಲಿ ದಾಂಪತ್ಯ ಉತ್ತಮಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ವೃಶ್ಚಿಕ ರಾಶಿ – ಗೆಳೆಯರಿಂದ ಸಂತೋಷ ಆರ್ಥಿಕ ವ್ಯವಹಾರಗಳಲ್ಲಿ ಜಾಗ್ರತೆವಹಿಸಿ ವರ್ತನೆಯಲ್ಲಿ ಜಾಗ್ರತೆ ಇರಲಿ ವಾಗ್ದಾನಗಳನ್ನು ಮಾಡುವ ಮೊದಲು ಹಲವು ಬಾರಿ ಯೋಚಿಸಿ ಕಾನೂನು ಸಲಹೆ ಪಡೆಯಲು ಉತ್ತಮ ದಿನ ದಾಂಪತ್ಯದಲ್ಲಿ ಕಲಹ, ಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಧನು ರಾಶಿ – ಸ್ನೇಹಿತ ರೊಂದಿಗೆ ಸಂತಸದ ಕ್ಷಣ ಆಹಾರದ ಬಗ್ಗೆ ಜಾಗ್ರತೆ ಇರಲಿ ನಿಮ್ಮ ಪ್ರತಿಭೆ ಗಳನ್ನು ಸರಿಯಾಗಿ ಬಳಸಿಕೊಳ್ಳಿಇದರಿಂದ ಲಾಭ ಪಡೆಯುವಿರಿ ಇತರರ ಸಹಾಯದಿಂದ ಸಂತೋಷ ಹೊಂದುವಿರಿ ಮನೆಯವರ ಭಾವನೆಗಳಿಗೆ ಸ್ಪಂದಿಸಿ ನಿಮ್ಮ ಮಾತುಗಳನ್ನು ಇತರರು ಆಲಿಸುವರು ದಾಂಪತ್ಯ ಸಂತೋಷಕರವಾಗಿರುತ್ತದೆಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಮಕರ ರಾಶಿ – ಉತ್ತಮ ಆರೋಗ್ಯ ಅಧಿಕ ಖರ್ಚು ಗಳನ್ನು ಮಾಡಬೇಡಿಮನೆಯಲ್ಲಿ ಸಂತೋಷದ ಕ್ಷಣ ಇತರರ ಭಾವನೆಗಳಿಗೆ ಬೆಲೆ ಕೊಡಿ ಕೆಲಸಗಳನ್ನು ಪೂರ್ಣಗೊಳಿಸುವಿರಿ ದಾಂಪತ್ಯ ಉತ್ತಮ

ಕುಂಭ ರಾಶಿ – ಆಧ್ಯಾತ್ಮಿಕತೆಯ ಕಡೆ ಗಮನ ಹರಿಸಿ ಆರ್ಥಿಕ ಲಾಭಪಡೆಯುವರಿ ಮಕ್ಕಳಿಂದ ಸಂತಸ ಪಡೆಯುವಿರಿ ಆದಾದ ಹೊಸ ಮಾರ್ಗಗಳನ್ನು ಕಂಡು ಹಿಡಿಯಿರಿ ಗುರು ಸಮಾನರಾದ ಮಾರ್ಗದರ್ಶನ ದಾಂಪತ್ಯ ಉತ್ತಮಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688

ಮೀನ ರಾಶಿ – ಭಯವನ್ನು ನಿವಾರಿಸಿಕೊಳ್ಳಿ ಸರಿಯಾದ ಸಲಹೆ ಪಡೆದುಕೊಳ್ಳಿ ಸಮಸ್ಯೆಗಳ ಬಗ್ಗೆ ಗಮನಹರಿಸಿ ಗೌರವಪಡೆಯಿರಿ ಪತ್ರಗಳಿಗೆ ಸಹಿ ಮಾಡುವ ಮೊದಲು ಜಾಗ್ರತೆ ವಹಿಸಿ ನಿಮ್ಮ ಉತ್ಸಾಹ ಮತ್ತು ಸೃಜನಶೀಲತೆ ಬೆಳಗುತ್ತದೆ ದಾಂಪತ್ಯದಲ್ಲಿ ಸಿಹಿ ಕಹಿಗಳ ಅನುಭವ,ಪಂಡಿತ್ ಅನಂತ್ ಪ್ರಸಾದ್ ಶರ್ಮಾ ದೈವಜ್ಞ ಜ್ಯೋತಿಷ್ಯರುಧನವಶ, ಜನವಶ,ಶತ್ರುನಾಶ, ಸ್ತ್ರೀ– ಪುರುಷವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರತಿಳಿಸುತ್ತಾರೆ. ಸಮಸ್ಯೆಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9945996688