ನಮ್ಮ ರಾಜ್ಯದ ಸಿಎಂ ನೀವಾ, ಇಲ್ಲ ಮೋದಿನಾ? – ಪಬ್ಲಿಕ್ ಪ್ರಶ್ನೆಗೆ ದಂಗಾದ ಸಿಎಂ ಮಾಜಿ ಸಿಎಂ..!

ಪ್ರತಿ ಬಾರಿಯೂ ಮಾಧ್ಯಮಗಳ ವಿರುದ್ಧ ಕಿಡಿಕಾರುತ್ತಿದ್ದ ಮುಖ್ಯಮಂತ್ರಿಗಳು ಇಂದು ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ವಿರುದ್ಧ ತನ್ನ ಕೋಪ ಹೊರ ಹಾಕುವ ಮೂಲಕ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮಕ್ಕೆ ಗ್ರಾಮ ವಾಸ್ತವ್ಯ ಮಾಡಲು ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಗರಂ ಆಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ನಾಯಕರು ಸಿಎಂ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ನೀವಾ ಅಥವಾ ಮೋದಿಯೇ? ರಾಜ್ಯದ ಸಮಸ್ಯೆಯನ್ನು ನಿಮ್ಮ ಬಳಿ ಹೇಳಿಕೊಳ್ಳುವಂತಿಲ್ಲವೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ನಡೆದಿದ್ದು ಏನು?
ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಪ್ರತಿಭಟನಾನಿರತರ ಮೇಲೆ ಗರಂ ಆದ ಪ್ರಸಂಗ ನಡೆಯಿತು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು.

ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು ಹೇಳಿ ಪ್ರತಿಭಟನಾಕಾರರ ಮೇಲೆ ಕೂಗಾಡಿದರು. ಅಷ್ಟೇ ಅಲ್ಲ ನಾನು ಗ್ರಾಮವಾಸ್ತವ್ಯ ಮಾಡುವುದಿಲ್ಲ ಎಂದು ಹೇಳಿದರು.

ನಂತರ ಸಿಎಂ ತಮ್ಮ ಸಿಟ್ಟನ್ನು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮೇಲೆ ಹೊರ ಹಾಕಿದರು. ಗರಂ ಆಗಿದ್ದ ಸಿಎಂ ಅವರನ್ನು ನಾಡಗೌಡ ಅವರು ಸಮಾಧಾನಪಡಿಸಿ, ಯಾವನ್ರೀ ಅವನು ಎಸ್ಪಿ ಎಂದು ಪೊಲೀಸ್ ಅಧಿಕಾರಿಗಳ ಮೇಲೆ ತಮ್ಮ ಕೋಪವನ್ನು ಹೊರಹಾಕಿದರು.

ಸಿಎಂ ಗೌರಯುತವಾಗಿ ನಡೆದುಕೊಳ್ಳಲಿ. ಸಿಎಂ ಅಅವರ ಮಾತನ್ನು ಖಂಡಿಸುತ್ತೇನೆ. ಅವರದ್ದೇ ಆದ ಭಾಷೆಯಲ್ಲಿ ಇದಕ್ಕೆ ಪ್ರತ್ಯುತ್ತರ ಕೊಡಲು ಸಿದ್ಧರಿದ್ದೇವೆ. ಈ ಹಿಂದಿನ ಯಾವುದೇ ಮುಖ್ಯಮಂತ್ರಿಗಳು ಈ ರೀತಿ ಮಾತನಾಡಿಲ್ಲ. ಜನ ಕೊಟ್ಟಿರುವ ತೆರಿಗೆಯಿಂದ ಅಭಿವೃದ್ಧಿ ಮಾಡುವುದು ಹೊರತು ಸಿಎಂ ಅವರ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡೋದು ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜೀನಾಮೆ ನೀಡಲಿ: ಸಿಎಂ ಹೇಳಿಕೆಗೆ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ವಾಗ್ದಾಳಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಹೋರಾಟಗಾರರು ನಿಮ್ಮ ತಂದೆಯ ಆಸ್ತಿ ಕೇಳಿಲ್ಲ. ರಾಜ್ಯದ ಮುಖ್ಯಮಂತ್ರಿ ಆಗಲು ನಿಮಗೆ ಯೋಗ್ಯತೆ ಇಲ್ಲ. ನೀವು ಜೆಡಿಎಸ್ ಮುಖ್ಯಮಂತ್ರಿ ಆದರೆ ರಾಜ್ಯಪಾಲರು ಅವರಿಗೆ ನೀಡುತ್ತಿರುವ ಸೌಲಭ್ಯಗಳನ್ನು ವಾಪಸ್ ಪಡೆಯಲಿ. ನಿಮ್ಮ ಮಾತು ಅಸಂವಿಧಾನಿಕ ಮಾತು. ಸಿಎಂ ಜನರನ್ನ ಕೆರಳಿಸುವ ಮಾತುಗಳನ್ನಾಡಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಹತಾಶರಾಗಿ ವರ್ತನೆ ಮಾಡುತ್ತಿದ್ದಾರೆ. ನಿಮ್ಮ ಹತಾಶೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿಮ್ಮ ಆರೋಗ್ಯ, ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ. ದೇವೇಗೌಡರು ತಮ್ಮ ಮಗನಿಗೆ ರಾಜೀನಾಮೆ ನೀಡುವ ಸಲಹೆ ನೀಡಲಿ. ಈ ಮೂಲಕ ರಾಜ್ಯದ ಜನರ ಹಿತ ಸಿಎಂ ಕಾಪಾಡಲಿ ಎಂದು ರವಿ ಸಲಹೆ ನೀಡಿದರು.

ಸಿಎಂ ಇಂದು ಸಣ್ಣತನದ ಮಾತು ಆಡಿದ್ದಾರೆ. ಶಿವನಗೌಡರು ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅವರ ಬಗ್ಗೆಯೂ ಏಕವಚನದಲ್ಲಿ ಮಾತಾಡಿದ್ದಾರೆ. ನೀವು ರಾಜ್ಯದ ಮುಖ್ಯಮಂತ್ರಿಯೋ, ಜೆಡಿಎಸ್ ಮುಖ್ಯಮಂತ್ರಿಯೋ. ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ರಾ ಅಥವಾ ಜೆಡಿಎಸ್ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ರಾ ಎಂದು ಪ್ರಶ್ನಿಸುವ ಮೂಲಕ ಸಿಟಿ ರವಿ ಅವರು ಕಿಡಿಕಾರಿದರು.

ಮುಖ್ಯಮಂತ್ರಿ  ಕುಮಾರಸ್ವಾಮಿರವರ ಗ್ರಾಮ ವಾಸ್ತವ್ಯದ ನಾಟಕ ಮತ್ತೊಮ್ಮೆ ಬಯಲಾಗಿದೆ. ಸಮಸ್ಯೆ ಬಗೆಹರಿಸಲೆಂದು ಕೋರಿದ ಸಾರ್ವಜನಿಕರನ್ನು ಮೋದಿಜೀ (ಬಿಜೆಪಿ) ಪಕ್ಷಕ್ಕೆ ಮತಹಾಕಿದ್ದಕ್ಕೆ ತರಾಟೆಗೆ ತೆಗೆದುಕೊಂಡು ಲಾಠಿ ಚಾರ್ಜ್ ಮಾಡಿಸುವುದಾಗಿ ಬೆದರಿಸಿ ದೌರ್ಜನ್ಯವೆಸಗಿದ್ದಾರೆ. ಇವರ ನಕಲಿ ಜನಪರ ಕಾಳಜಿ ಇಲ್ಲಿ ಬಯಲಾಗಿದೆ.

ನಕಲಿ ಜನಪರ ಕಾಳಜಿ: ಈ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಆರ್ ಆಶೋಕ್ ಕೂಡ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರ್. ಅಶೋಕ್, ಜನರಿಗೆ ಬೈಯುವ ಮೂಲಕ ಮುಖ್ಯಮಂತ್ರಿಗಳ ನಕಲಿ ಜನಪರ ಕಾಳಜಿ ಇಂದು ಬಯಲಾಗಿದೆ ಎಂದು ಬರೆದುಕೊಂಡಿದ್ದಾರೆ.

`ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯದ ನಾಟಕ ಮತ್ತೊಮ್ಮೆ ಬಯಲಾಗಿದೆ. ಸಮಸ್ಯೆ ಬಗೆಹರಿಸಲೆಂದು ಕೋರಿದ ಸಾರ್ವಜನಿಕರನ್ನು ಮೋದಿಜೀ (ಬಿಜೆಪಿ) ಪಕ್ಷಕ್ಕೆ ಮತಹಾಕಿದ್ದಕ್ಕೆ ತರಾಟೆಗೆ ತೆಗೆದುಕೊಂಡು ಲಾಠಿ ಚಾರ್ಜ್ ಮಾಡಿಸುವುದಾಗಿ ಬೆದರಿಸಿ ದೌರ್ಜನ್ಯವೆಸಗಿದ್ದಾರೆ. ಇವರ ನಕಲಿ ಜನಪರ ಕಾಳಜಿ ಇಲ್ಲಿ ಬಯಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ನೀವೇನು ಸರ್ವಾಧಿಕಾರಿಯೇ: ಶಿವಮೊಗ್ಗದಲ್ಲಿ ಪ್ರತಿಯಿಸಿರುವ ಕೆ.ಎಸ್ ಈಶ್ವರಪ್ಪ, ಕರ್ನಾಟಕ ರಾಜ್ಯದ ಕಾಂಗ್ರೆಸ್- ಜೆಡಿಎಸ್ ನಾಯಕರು ತಲೆ ಕೆಟ್ಟವರಂತೆ ಮಾತನಾಡುತ್ತಿದ್ದಾರೆ. ಸಿಎಂ, ಡಿಸಿಎಂ ಹೇಳಿಕೆಗಳ ನೋಡಿದ್ರೆ ಇವರನ್ನು ತಲೆಕೆಟ್ಟವರು ಎಂದೇ ಹೇಳಬೇಕಾಗಿದೆ. ಮುಖ್ಯಮಂತ್ರಿ ಆಗಿರೋದಕ್ಕೆ ಜನ ಸಮಸ್ಯೆ ಹೇಳಿಕೊಳ್ಳಲು ಬರುತ್ತಾರೆ. ರಸ್ತೆ ಮೇಲೆ ಹೋಗೋ ದಾಸಯ್ಯನಿಗೆ ಕೇಳುತ್ತಿಲ್ಲ ಅನ್ನೋದನ್ನ ಸಿಎಂ ಅರಿತುಕೊಳ್ಳಬೇಕು. ಇದು ಸೊಕ್ಕಿನ, ದುರಹಂಕಾರದ ಮಾತಾಗಿದೆ. ಪ್ರಜಾಪ್ರಭುತ್ವ ಹಾಗೂ ಮತದಾರರಿಗೆ ಮಾಡಿದ ಅವಮಾನವಾಗಿದೆ. ಲಾಠಿ ಚಾರ್ಜ್ ಮಾಡುತ್ತೇನೆ ಎಂದಿದ್ದೀರಿ, ನೀವೇನು ಸರ್ವಾಧಿಕಾರಿಯೇ? ಅಘೋಷಿತ ತುರ್ತು ಪರಿಸ್ಥಿತಿ ತರಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ತಾವು, ಅನುಭವಿ ರಾಜಕಾರಣಿಯಾಗಿ, ಮಾಜಿ ಪ್ರಧಾನಿಯ ಪುತ್ರನಾಗಿ ಹೀಗೆ ಹೇಳುವುದು ನಿಮ್ಮ ಯೋಗ್ಯತೆಯ ಬಗ್ಗೆ ಸಂಶಯ ಮೂಡುತ್ತದೆ !!!!!

ನಿಮ್ಮ ಸ್ಥಾನಕ್ಕೆ ಗೌರವ ತರುವ ಕೆಲಸ ಮಾಡಿ, ಅಡಿದ ಮಾತಿಗಾಗಿ ಮತದಾರರ ಕ್ಷಮೆ ಕೇಳಿ. ನಿಮ್ಮ ಮಗ ನಿಖಿಲ್ ಸೋತಿದ್ದಕ್ಕೆ ಸಿಟ್ಟು ಬಂದಿದೆಯೋ ಅಥವಾ ಪ್ರಜ್ವಲ್ ಗೆದ್ದಿದ್ದಕ್ಕೆ ಸಿಟ್ಟು ಬಂದಿದೆಯೋ ಎಂದು ಮರು ಪ್ರಶ್ನೆ ಮಾಡಿರುವ ಈಶ್ವರಪ್ಪ ಅವರು, ನಿಮ್ಮ ಈ ಸಿಟ್ಟನ್ನು ಮೋದಿ ಅವರ ಮೇಲೆ ತೀರಿಸಿಕೊಳ್ಳಬೇಡಿ. ಪ್ರಜಾಪ್ರಭುತ್ವಕ್ಕೆ ಗೌರವ ನೀಡಿ, ಇಲ್ಲವಾದಲ್ಲಿ ರಾಜೀನಾಮೆ ನೀಡಿ ಹೋಗಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂಗೆ ‘ಪಬ್ಲಿಕ್’ ಪ್ರಶ್ನೆಗಳೇನು?:
ಪ್ರಶ್ನೆ 1– ನಿಮಗೆ ವೋಟು ಹಾಕದಿದ್ದರೆ ಸಮಸ್ಯೆ ಹೇಳೋ ಹಾಗೆನೇ ಇಲ್ವಾ?
ಪ್ರಶ್ನೆ 2– ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ?
ಪ್ರಶ್ನೆ 3– ನೀವು ಕರ್ನಾಟಕದ ಮುಖ್ಯಮಂತ್ರಿನಾ ಅಥವಾ ಜೆಡಿಎಸ್ ಮುಖ್ಯಮಂತ್ರಿನಾ?
ಪ್ರಶ್ನೆ 4– ಜನರು ನಿಮ್ಮತ್ರ ಬರೋ ಹಾಗೇ ಇಲ್ವಾ?
ಪ್ರಶ್ನೆ 5– ಕಷ್ಟ ಹೇಳೋದು ಜನರ ಹಕ್ಕು; ಬಗೆಹರಿಸೋದು ನಿಮ್ಮ ಕರ್ತವ್ಯ
ಪ್ರಶ್ನೆ 6– ಸಮಸ್ಯೆ ಹೇಳಿದ್ರೆ ಲಾಠಿಚಾರ್ಜ್ ಮಾಡಿಸ್ತೀರಾ?
ಪ್ರಶ್ನೆ 7– ಮೋದಿಗೆ ವೋಟ್ ಹಾಕಿದ್ರೆ ನಿಮ್ಮ ಬಳಿ ಸಮಸ್ಯೆ ಹೇಳೋ ಆಗಿಲ್ವಾ?

ನರೇಂದ್ರ ಮೋದಿ ಬಗೆಹರಿಸುವ ಸಮಸ್ಯೆಗಳನ್ನು ನರೇಂದ್ರ ಮೋದಿಗೆ ಕೇಳುತ್ತೇವೆ. ನಿಮ್ಮನ್ನ ಸಿ.ಎಮ್ ಎಂದು ನಾವ್ಯಾರೂ ಸೆಲೆಕ್ಟೇ ಮಾಡಿಲ್ಲ. ಯಾಕೆ ಸಿ.ಎಮ್ ಆದ್ರಿ? ಈಗ ಸಮಸ್ಯೆ ಬಗೆಹರಿಸಿ, ಇಲ್ಲವೇ, ರಾಜೀನಾಮೆ ನೀಡಿ ಮನೆಗೆ ಹೋಗಿ.

ಮಾಜಿ ಮುಖ್ಯಮಂತ್ರಿ ಪುತ್ರನಿಗಿದ್ದ ಝಡ್ ಪ್ಲಸ್ ಭದ್ರತೆಯನ್ನು ಹಿಂಪಡೆದ ಸಿಎಂ

ತೆಲುಗುದೇಶಂ ವರಿಷ್ಠ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಹಾಗೂ ಅವರ ಪುತ್ರನಿಗೆ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಸರ್ಕಾರ ರದ್ದುಪಡಿಸಿದೆ.

ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕುಟುಂಬದ ಸದಸ್ಯರಿಗೆ ನೀಡಿದ್ದ ಭದ್ರತೆಯನ್ನು ಜಗನ್ ಸರ್ಕಾರ ಹಿಂತೆಗೆದುಕೊಂಡಿದೆ. ನಾಯ್ಡು ಪುತ್ರ ನಾರಾ ಲೋಕೇಶ್ ಅವರಿಗೆ ನೀಡಿದ್ದ Z ಕ್ಯಾಟಗರಿ ಭದ್ರತೆಯನ್ನು ವಾಪಸ್ ಪಡೆದಿದ್ದು, ಅವರಿಗೆ 2+2 ಗನ್ ಮ್ಯಾನ್ ಭದ್ರತೆಯನ್ನು ನೀಡಿದೆ.

ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ತಮಗೆ ನಕ್ಸಲರಿಂದ ಜೀವಬೆದರಿಕೆ ಇದೆ ಎಂಬ ಕಾರಣಕ್ಕೆ ಝಡ್‌ ಪ್ಲಸ್ ಭದ್ರತೆ ಪಡೆದುಕೊಂಡಿದ್ದರು.

ಈಗ ನಾಯ್ಡು ಮುಖ್ಯಮಂತ್ರಿ ಇಲ್ಲದ ಕಾರಣ ಜೀವಬೆದರಿಕೆ ಇಲ್ಲ. ಆದ್ದರಿಂದ ವಿಶೇಷ ಭದ್ರತೆಯನ್ನು ರದ್ದುಪಡಿಸಲಾಗಿದೆ ಎಂದು ಜಗನ್ ಸರ್ಕಾರ ಸ್ಪಷ್ಟಪಡಿಸಿದೆ.

ಸೋಮವಾರವಷ್ಟೇ, ಮಾಜಿ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರ ನಿವಾಸದ ಪಕ್ಕದಲ್ಲಿ ಕಟ್ಟಲಾದ ಪ್ರಜಾ ವೇದಿಕೆ ಕಟ್ಟಡವನ್ನು ನೆಲಸಮ ಮಾಡಲು ಜಗನ್ ಆದೇಶಿಸಿದ್ದರು.

ಹೀಗೆ ಜಗನ್ ಸಿಎಂ ಆದ ಬಳಿಕ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಆಘಾತದ ಮೇಲೆ ಆಘಾತ ನೀಡುತ್ತಿದ್ದಾರೆ.

ಮೋದಿ ಮೋದಿ ಅಂಥ ಕೂಗತ್ತೀರಿ ಈ ಹೆಣ್ಣುಮಕ್ಕಳು ಕೂಗು ಮೋದಿಗೆ ಕೇಳಿಸುತ್ತಾ..? : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ

ಮೋದಿ ಮೋದಿ ಅಂಥ ಕೂಗತ್ತೀರಿ ಈ ಹೆಣ್ಣುಮಕ್ಕಳು ಕೂಗು ಮೋದಿಗೆ ಕೇಳಿಸುತ್ತಾ..? ಬಿಜೆಪಿ ನಾಯಕರಿಗೆ ಟ್ರೈನ್ ಮಾಡಿ ದೆಹಲಿಗೆ ಕಳಿಸುತ್ತೇನೆ ಅಲ್ಲಿ ಹೋಗಿ ಕೂಗಿ ಎಂದು ಬಿಜೆಪಿ ಮುಖಂಡರ ಮೇಲೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ರಾತ್ರಿ ಹತ್ತು ಘಂಟೆ ಆದರು ಎಲ್ಲರ ಅರ್ಜಿಗಳನ್ನು ಸ್ವೀಕರಿಸುವೆ
ಬಡತನದಿಂದ ತತ್ತರಿಸಿದ್ದೇವೆ ಎಂದು ಹಳ್ಳಿಯ ಜನರು ನನಗೆ ಮನವಿ ಮಾಡಿದರು. ಹೀಗಾಗಿ ಬಂದಿದ್ದೇನೆ. ಯಾರು ನಿಮಗೆ ಸ್ಪಂದಿಸುತ್ತಾರೆ ಅದನ್ನು ನೋಡಿ ಎಂದು ಹೇಳಿದೆ, ಓಟು ಮೋದಿಗೆ ಹಾಕಿ ಕೆಲಸ ನನಗೆ ಕೇಳ್ತೀರಾ ಅನ್ನೋ ಮಾತು ತಪ್ಪು ಅನ್ನೋದೆ ಆದರೆ ನಾನು ಮುಂದೆ ಮೌನವಾಗಿರುವೆ. ರಾತ್ರಿ ಹತ್ತು ಘಂಟೆ ಆದರು ಎಲ್ಲರ ಅರ್ಜಿಗಳನ್ನು ಸ್ವೀಕರಿಸುವೆ. ಎಲ್ಲ ಅರ್ಜಿಗಳಿಗೆ ಪರಿಹಾರವನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ಬಿಜೆಪಿ ಸರ್ಕಾರ ಇದ್ದಾಗ ತಾವೇ ಮಂತ್ರಿ ಇದ್ದರಲ್ಲ.ಆಗ ಯಾಕೆ ಮಾಡಲಿಲ್ಲ ಎಂದು ಇದೇ ವೇಳೆ ಪ್ರಶ್ನೆ ಮಾಡಿದರು.

ರಾಯಚೂರು ಸಮಗ್ರ ಅಭಿವೃದ್ಧಿ ನನ್ನ ಕರ್ತವ್ಯ
272 ಕೋಟಿ ಹಣ ರಾಯಚೂರಿಗೆ ಬಿಡುಗಡೆ ಮಾಡಿದೆ. ಪ್ರಮಾಣಿಕವಾಗಿ ರೈತರ ಸಾಲ ಮನ್ನಾಕ್ಕೆ 25000 ಕೋಟಿ ಹಣವನ್ನು ಹಂಚಿಕೆ ಮಾಡಿರುವೆ. ನಾನು ರೈತರಿಗೆ ದ್ರೋಹ ಮಾಡುವ ಕೆಲಸ ಮಾಡಿಲ್ಲ, ತುಂಗಭದ್ರಾ ಜಲಾಶಯದಲ್ಲಿ 33 ಟಿ ಎಂಸಿ ನೀರು ಹೂಳಿನಿಂದ ಕಡಿಮೆಯಾಗಿದೆ. ಟಿಬಿ ಬೋರ್ಡ್ ಅಧಿಕಾರಿಗಳ ಜೊತೆ ಮಾತನಾಡಿ ಡಿಪಿ ಆರ್ ತಯಾರಿಸುವ ಕೆಲಸ ನಡೆದಿದೆ.
ನವಲೆ ಹತ್ತಿರ ರಿಸರ್ವೆಯರ್ ಮಾಡುವ ಬೇಡಿಕೆಗೆ ಗಮನ ನೀಡಿದೆ. ಆಂಧ್ರ ಹಾಗೂ ತೆಲಂಗಾಣ ಸಿಎಂ ಗಳ ಜೊತೆ ಮಾತನಾಡಿ ಅವರಿಗೆ ನೀರನ್ನೂ ನೀಡುವ ಕೆಲಸ ಮಾಡುವೆ. ರಾಯಚೂರು ಜಿಲ್ಲೆಯ ನೀರಾವರಿ ಅಭಿವೃದ್ಧಿಗೆ ಬದ್ದ, ಸರ್ಕಾರದಲ್ಲಿ ಹಣದ ಕೊರತೆ ಇಲ್ಲ, ಜಲಧಾರೆ ಯೋಜನೆಯಲ್ಲಿ ರಾಯಚೂರು ಜಿಲ್ಲೆಯ ಎಲ್ಲ ಹಳ್ಳಿಗಳ ಜನತೆಗೆ ಕುಡಿಯುವ ನೀರು ನೀಡುತ್ತೇವೆ.
ರಾಯಚೂರು ಸಮಗ್ರ ಅಭಿವೃದ್ಧಿ ನನ್ನ ಕರ್ತವ್ಯ ಎಂದರು.

ಬಿಜೆಪಿಯವರ ರೀತಿಯಲ್ಲಿ ನಾಟಕ ಮಾಡುವವ ನಾನಲ್ಲ
ಇದು ನಿಮ್ಮ ಸರ್ಕಾರ. ಬಿಜೆಪಿಯವರ ರೀತಿಯಲ್ಲಿ ನಾಟಕ ಮಾಡುವವ ನಾನಲ್ಲ, ಮೋದಿ ಏನು ಮಾಡ್ತಾರೆ ಅದನ್ನು ನಾನು ಚರ್ಚೆ ಮಾಡಿಲ್ಲ, ಹಲವಾರು ಯೋಜನೆಯನ್ನು ಸರ್ಕಾರದ ಮೂಲಕ ಚಾಲನೆಗೆ ಚಿಂತನೆ ಮಾಡಿದ್ದೇನೆ. ಸರ್ಕಾರದಿಂದ ಎಲ್ಲಾ ನೆರವು ರೈತರಿಗೆ ನೀಡುವೆ ಎಂದು ಇದೇ ವೇಳೆ ತಿಳಿಸಿದರು.

‘ವೋಟ್ ಮೋದಿಗೆ ಹಾಕ್ತೀರಾ, ಕೆಲಸ ಮಾತ್ರ ನನ್ನಿಂದ ಆಗಬೇಕು’ : ಸಿಎಂ ಕುಮಾರಸ್ವಾಮಿ

ಸಿಎಂ ಕುಮಾರಸ್ವಾಮಿ ಇಂದು ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದು, ರಾಯಚೂರಿನಲ್ಲಿ ಸಭೆ ನಡೆಸಿ, ಸರ್ಕಿಟ್ ಹೌಸ್‌ನಿಂದ ಕರೇಗುಡ್ಡದತ್ತ ತೆರಳುವ ಮಾರ್ಗ ಮಧ್ಯೆ ಸಿಎಂಗೆ ವೈಟಿಪಿಎಸ್ ಕಾರ್ಯಕರ್ತರು ಪ್ರತಿಭಟನೆ ಬಿಸಿ ಮುಟ್ಟಿಸಿದ್ದಾರೆ.

ಸಿಎಂ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ, ಬಸ್ ತಡೆಹಿಡಿದು ಕೆಲಸದಿಂದ ತೆಗೆದ ಗುತ್ತಿಗೆ ಕಾರ್ಮಿಕರಿಗೆ ಮತ್ತೆ ಉದ್ಯೋಗ ನೀಡುವಂತೆ ವೈಟಿಪಿಎಸ್ ಕಾರ್ಯಕರ್ತರು ಪ್ರೊಟೆಸ್ಟ್ ಮಾಡಿದ್ದಾರೆ. ಇನ್ನು ಕಾರ್ಮಿಕರ ನಡೆಗೆ ಸಿಎಂ ಗರಂ ಆಗಿದ್ದು, ಕುಳಿತ ಸೀಟ್‌ನಿಂದ ಎದ್ದು ಬಂದು ಆಕ್ರೋಶ ಹೊರಹಾಕಿದರು.

ಓಟನ್ನ ಪ್ರಧಾನಿ ಮೋದಿಗೆ ಹಾಕ್ತೀರಾ, ಕೆಲಸ ಮಾತ್ರ ನನ್ನಿಂದ ಆಗಬೇಕೆಂದು ಸಿಎಂ ಕಾರ್ಯಕರ್ತರ ವಿರುದ್ಧ ಕಿಡಿಕಾರಿದರು. ಇನ್ನು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸಪಡಬೇಕಾಯ್ತು.

ತದನಂತರ ಮಾನ್ವಿಯ ಕಲ್ಲೂರು ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ ಕೋರಿದ್ದು, ಮಾರ್ಗಮಧ್ಯದಲ್ಲೇ ಸಿಎಂ ಅಹವಾಲು ಸ್ವೀಕರಿಸಿದರು. ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಲ್ಲದೇ, ಕ್ಯಾನ್ಸರ್‌ ಪೀಡಿತ ಮಹಿಳೆಗೆ 2 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದರು.

‘ಕೈ’ ಗೆ ಮೋದಿ ಪಂಚ್: ಪ್ರಧಾನಿಯ ಒಂಭತ್ತು ಏಟಿಗೆ ‘ಕೈ’ ಫುಲ್ ಸುಸ್ತು!

ಪ್ರಧಾನಿ ನರೇಂದ್ರ ಮೋದಿ, 17ನೇ ಲೋಕಸಭೆಯ ಮೊದಲ ಅಧಿವೇಶನದ ವೇಳೆ ಕಾಂಗ್ರೆಸ್ ನಾಯಕರನ್ನು ಭರ್ಜರಿಯಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಂಗಳವಾರ ಭಾಷಣ ಮಾಡಿದ ಪ್ರಧಾನಿ ಮೋದಿ, ತುರ್ತುಪರಿಸ್ಥಿತಿ, ಹಿರಿಯ ನಾಯಕರಿಗೆ ಗೌರವ ಸಲ್ಲಿಸದ ಕಾಂಗ್ರೆಸ್‌ನ ಪರಿಪಾಠ, ಕೇವಲ ಗಾಂಧೀ ನೆಹರೂ ಕುಟುಂಬದ ಓಲೈಕೆ, ತ್ರಿವಳಿ ತಲಾಖ್ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕರಿಗೆ ಮಾತಿನ ಪಂಚ್ ನೀಡಿದರು. ಜೊತೆಗೆ ಬಿಜೆಪಿಯ 2ನೇ ಅವಧಿಯ ಗೆಲುವು, ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು

ತಮ್ಮ ವಿರುದ್ಧ ಕೀಳು ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್‌ಗೆ ತಿರುಗೇಟು ನೀಡಿದ ಮೋದಿ, ‘ನೀವು ಎಷ್ಟು ಎತ್ತರಕ್ಕೆ ಏರುತ್ತೀರೋ, ನಾನು ಅಷ್ಟೇ ಸಂತೋಷಪಡುತ್ತೇನೆ’ ಎಂದು ಹೇಳಿದರು.

  • ಸೋನಿಯಾ, ರಾಹುಲ್ ಜೈಲಿಗೆ ಹಾಕೋದು ನಾವಲ್ಲ ಕೆಲ ವ್ಯಕ್ತಿಗಳನ್ನು (ಸೋನಿಯಾ, ರಾಹುಲ್) ಜೈಲಿಗೆ ಕಳುಹಿಸದೇ ಇದ್ದದ್ದಕ್ಕೆ ನಮ್ಮನ್ನು ಟೀಕಿಸಲಾಗುತ್ತಿದೆ. ಇದಕ್ಕೆ ಕಾರಣವೇನೆಂದರೆ, ಯಾರನ್ನು ಬೇಕಾದರೂ ಜೈಲಿಗೆ ತಳ್ಳುವ ತುರ್ತು ಪರಿಸ್ಥಿತಿ ಸಮಯವಲ್ಲ. ಈ ವಿಷಯವನ್ನು ನ್ಯಾಯಾಂಗ ನಿರ್ವಹಿಸುತ್ತದೆ. ಕಾನೂ ನು ತನ್ನ ಕೆಲಸ ಮಾಡುವುದಕ್ಕೆ ನಾವು ಬಿಟ್ಟಿದ್ದೇವೆ.
  • ಕಾಂಗ್ರೆಸ್‌ಗೆ ಮುಸ್ಲಿಂ ಅಭಿವೃದ್ಧಿ ಬೇಕಿಲ್ಲ ಮುಸ್ಲಿಮರ ಅಭಿವೃದ್ಧಿ ಕಾಂಗ್ರೆಸ್‌ನ ಹೊಣೆಯಲ್ಲ. ಅವರು ಗಟಾರದಲ್ಲೇ ಇರಬೇಕೆಂದು ಬಯಸಿದ್ದರೆ ಅಲ್ಲೇ ಇರಲಿ ಎಂದು ಶಾ ಬಾನೋ ಪ್ರಕರಣದ ವೇಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿ ದ್ದರಂತೆ. ಇದೇನಾ ನಿಮ್ಮ ಕಳಕಳಿ. ನಾವು ಮತ್ತೆ ಆ ಮಸೂದೆ ಮಂಡಿಸಿದ್ದೇವೆ. ಅದನ್ನು ಬೆಂಬಲಿಸಿ.
  • ನಿಮಗೆ ನೆಲವೇ ಕಾಣೋಲ್ಲ ಕಾಂಗ್ರೆಸ್ಸಿಗರು ತಮ್ಮ ಭ್ರಮೆಯಲ್ಲಿ ಅದೆಷ್ಟು ಮೇಲೇರಿ ನಿಂತಿದ್ದಾರೆ ಎಂದರೆ ಅವರಿಗೆ ನೆಲವೇ ಕಾಣೋಲ್ಲ. ನಿಮ್ಮ ಬೇರುಗಳನ್ನೇ ನೀವು ಮರೆ ತಿದ್ದೀರಿ. ಮೇಲೇರಿ ನಿಂತ ನೀವು ಕೆಳಗಿದ್ದವರೆಲ್ಲಾ ಕೀಳು ಎಂದೇ ಪರಿಗಣಿಸಿದ್ದೀರಿ. ನೀವು ಮೇಲೇರಿದಷ್ಟೂ ನಮಗೆ ಸಂತಸವೇ ಸರಿ.
  • ತುರ್ತು ಪರಿಸ್ಥಿತಿ ಮರೆಯಲ್ಲ ಹಲವು ಚರ್ಚೆಗಳ ವೇಳೆ ನೀವು ನಮ್ಮ ಬಗ್ಗೆ ತುರ್ತು ಪರಿಸ್ಥಿತಿ ಆರೋಪ ಮಾಡುತ್ತೀರಿ. ಇಂದು ಜೂನ್ 25. 1974ರಲ್ಲಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದವರು ಯಾರು? ಆ ಕರಾಳ ದಿನಗಳನ್ನು ನಾವು ಎಂದಿಗೂ ಮರೆಯುವುದಿಲ್ಲ.
  • ಸಿಂಗ್ ಈಸ್ ಕಿಂಗ್ ಅಲ್ಲ ನೀವು ಎಂದಾದರೂ ನಿಮ್ಮದೇ ನಾಯಕ ನರಸಿಂಹರಾವ್ ಅವರ ಸರ್ಕಾರ ಸಾಧನೆ ಮೆಚ್ಚಿದ್ದೀರಾ? ಒಮ್ಮೆಯಾದರೂ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರ ಸಾಧನೆ ಪ್ರಸ್ತಾಪಿಸುವ ಧೈರ್ಯ ತೋರಿದ್ದಾರಾ?
  • ಬಿಜೆಪಿಯ 2ನೇ ಗೆಲುವು ಯುಪಿಎ ಸರ್ಕಾರದಿಂದ ಪಾರಾ ಗಲು ಎನ್‌ಡಿಎಗೆ ಅವಕಾಶ ನೀಡಿ ದರು. ‘ನಾನು ಚುನಾವಣೆಯಲ್ಲಿ ಗೆಲುವು ಮತ್ತು ಸೋಲಿನ ಹೊರತಾಗಿ ಯೋಚಿಸುತ್ತೇನೆ. ದೇಶದ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ.
  • ಜನ ಪರ ಯೋಜನೆ ಕೆಲವು ವಾರಗಳ ಹಿಂದಷ್ಟೇ ನಾವು ಮತ್ತೊ ಮ್ಮೆ ಅಧಿಕಾರವನ್ನು ವಹಿಸಿಕೊಂಡಿದ್ದೇವೆ. ಹೊಸ ಸರ್ಕಾರದಲ್ಲಿ ನಾವು ಹಲವಾರು ಜನಪರ ನಿರ್ಧಾರಗಳನ್ನು ಕೈಗೊಂಡಿರುವುದಕ್ಕೆ ನನಗೆ ಸಂತೋಷವಿದೆ. ರೈತರು, ವ್ಯಾಪಾರಿಗಳು, ಯುವಕರು, ಮತ್ತು ಸಮಾಜದ ಇತರ ವಲಯಗಳಿಗೆ ಪ್ರಯೋಜನವಾಗುವ ನಿರ್ಧಾರಗಳನ್ನು ಕೈಗೊಳ್ಳಲಾಗುವುದು.
  • ಜೈ ಅನುಸಂಧಾನ್ ಜೈ ಜವಾನ್ ಜೈ ಕಿಸಾನ್ ಘೋಷಣೆಗೆ ಮೋದಿ ಜೈ ಅನುಸಂಧಾನ್ ಎಂಬ ಘೋಷಣೆಯನ್ನು ಸೇರಿಸಿದರು. ಇಂದು ನಾವು ಜಲ ಸಂಪನ್ಮೂಲದ ಬಗ್ಗೆ ಮಾತನಾಡುವ, ‘ನಾನು ಡಾ| ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಅಂಬೇಡ್ಕರ್ ಅವರು ನೀರಾವರಿ, ನೀರಿನ ಕಾಲುವೆ ನಿರ್ಮಾಣಕ್ಕೆ ಶ್ರದ್ಧೆಯಿಂದ ಕೆಲಸ ಮಾಡಿದ್ದರು.
  • ಭ್ರಷ್ಟಾಚಾರದ ಬಗ್ಗೆ ನಮ್ಮ ದೇಶದಲ್ಲಿ ಭ್ರಷ್ಟಾಚಾರಕ್ಕೆ ಜಾಗವೇ ಇಲ್ಲ. ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಶಕ್ತಿಶಾಲಿ, ಸುರಕ್ಷಿತ, ಅಭಿವೃದ್ಧಿ ಹೊಂದಿದ ಮತ್ತು ಎಲ್ಲರನ್ನೂ ಒಳಗೊಂಡ ಭಾರತವನ್ನು ನಿರ್ಮಿಸುವ ಕನಸನ್ನು ಈಡೇರಿಸಲು ನಾವೆಲ್ಲಾ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ.

ಕರ್ನಾಟಕ ದೋಸ್ತಿ ಸರಕಾರದ ಟ್ರಬಲ್ ಶೂಟರ್ ಗೆ ಟ್ರಬಲ್ , ಮುಂದಿದೆ ಭಾರೀ ಗಂಡಾಂತರ!

ಜಲಸಂಪನ್ಮೂಲ ಸಚಿವ, ಕರ್ನಾಟಕ ದೋಸ್ತಿ ಸರಕಾರದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರಿಗೆ ಟ್ರಬಲ್ ಶುರುವಾಗಿದೆ.

ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮಂಗಳವಾರದ ಆದೇಶ ಡಿಕೆಶಿ ಆತಂಕಕ್ಕೆ ಮೂಲ ಕಾರಣ. ಹವಾಲ, ಹೈಕಮಾಂಡ್ ಕಪ್ಪ, ತೆರಿಗೆ ವಂಚನೆ ಆರೋಪದಿಂದ‌ ತಮ್ಮನ್ನು ಕೈಬಿಡುವಂತೆ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿದೆ.

ಯಾವ ಪ್ರಕರಣ?: 3 ಪ್ರಕರಣಗಳಿಂದ ಮುಕ್ತರಾಗಿದ್ದ ಡಿಕೆಶಿಗೆ 4ನೇ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ. ಪ್ರಕರಣದಿಂದ ಡಿಕೆಶಿ ಹೆಸರು ಕೈಬಿಡಲು ನ್ಯಾಯಾಧೀಶ ರಾಮಚಂದ್ರ ಹುದ್ದರ್ ನಿರಾಕರಿಸಿದ್ದಾರೆ. ಹಾಗಾಗಿ ಡಿಕೆಶಿ ಮೇಲಿನ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.

ಡಿ.ಕೆ.ಶಿವಕುಮಾರ್ ದೆಹಲಿ ಫ್ಲ್ಯಾಟ್ ನಲ್ಲಿ ಸಿಕ್ಕಿದ್ದ ಹಣ ಸಂಕಷ್ಟ ತಂದಿದೆ. ಐಟಿ ಇಲಾಖೆ ದಾಖಲಿಸಿದ್ದ ನಾಲ್ಕನೇ ಪ್ರಕರಣ ಡಿಕೆಶಿಗೆ ಸುತ್ತಿಕೊಂಡಿದೆ. ಆಗಸ್ಟ್ 2017 ರಲ್ಲಿ ಡಿಕೆಶಿಗೆ ಸಂಬಂಧಿಸಿದ್ದ ವಿವಿಧ ಆಸ್ತಿಗಳ ಮೇಲೆ ದಾಳಿ ನಡೆಸಿದ್ದ ಐಟಿ ಇಲಾಖೆ ಪ್ರಕರಣ ದಾಖಲಿಸಿಕೊಂಡಿತ್ತು.