ಮೈತ್ರಿ ಸರ್ಕಾರದ ನಿಲುವಿಗೆ ಸಿದ್ದರಾಮಯ್ಯ ವಿರೋಧ !

ಮೈಸೂರಿನಲ್ಲಿ ನಡೆದ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಗೆ ನನ್ನ ವಿರೋಧವಿದೆ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರದ ನಿರ್ಧಾರಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ರಾಜಿ ಆಗಲ್ಲ. ನಾವು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಿಕೊಂಡಿದ್ದೇವೆ. ಅದರಲ್ಲಿ ಈ ವಿಚಾರ ಇಲ್ಲ. ಆದ್ದರಿಂದ ಮುಖ್ಯಮಂತ್ರಿಯೊಂದಿಗೆ ನಾನು ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇಡೀ ರಾಜ್ಯದಲ್ಲಿ ಪೋಷಕರಿಗೆ ಇಂಗ್ಲಿಷ್ ಮಾಧ್ಯಮದ ವ್ಯಾಮೋಹ ಇದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಆರ್ಥಿಕವಾಗಿ ಹಿಂದುಳಿದವರೂ ತಮ್ಮ ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಕಲಿಯಲಿ ಎಂದು ಆಸೆ ಪಡುತ್ತಾರೆ. ಕನ್ನಡ ಭಾಷೆ ಬೇರೆ, ಮಾಧ್ಯಮ ಬೇರೆ. ಇಂಗ್ಲಿಷ್ ಅನ್ನು ಭಾಷೆಯನ್ನಾಗಿ ಕಲಿಯಲು ಯಾರ ವಿರೋಧವೂ ಇಲ್ಲ. ಆದ್ರೆ ಇಂಗ್ಲಿಷ್ ಮಾಧ್ಯಮ ಬೇಡ ಎನ್ನುತ್ತಿದ್ದೇವೆ. ಈ ಬಗ್ಗೆ ಕೆಲವರಿಗೆ ಗೊಂದಲ ಇದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ನಿರರ್ಗಳವಾಗಿ ಮಾತನಾಡಬಹುದು. ಆದ್ರೆ ಹೃದಯದ ಭಾಷೆ ಆಗಲಾರದು ಎಂದು ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಅಲ್ಲದೇ, ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಎಂದು ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇದಕ್ಕೆ ಕಾರಣ ಶಿಕ್ಷಣದ ಗುಣಮಟ್ಟ ಕಡಿಮೆ ಇರೋದು. ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆ ಸುಧಾರಣೆ ಆಗಬೇಕಾದರೆ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗುತ್ತಲೇ ಇದೆ. ಜಾತಿ ಜಾತಿಗಳ ನಡುವೆ ಸಮಾನತೆ ಬಾರದೆ ಹೋದರೆ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಕೆಳ ಜಾತಿಗಳಿಗೆ ಸಾಮಾಜಿಕ, ಶೈಕ್ಷಣಿಕ ಸಮಾನತೆ ಬಂದರೆ ಜಾತಿ ವ್ಯವಸ್ಥೆ ಕ್ರಮೇಣ ಕಡಿಮೆ ಆಗುತ್ತೆ. ಇಡೀ ದೇಶದಲ್ಲಿ ಏಕರೂಪದ ಶಿಕ್ಷಣ ಜಾರಿಯಾಗಬೇಕಿತ್ತು. ಆಯಾ ರಾಜ್ಯದಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲೇ ಏಕರೂಪದ ಶಿಕ್ಷಣ ಸಿಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅಲ್ಲದೇ, ನಾನು ಹಳ್ಳಿಯವನು, ನನ್ನ ಭಾಷೆ ಒರಟು. ಆದ್ರೆ ನನ್ನನ್ನು ದುರಹಂಕಾರಿ ಎನ್ನುತ್ತಾರೆ. ಸೋಗಲಾಡಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಸ್ವಾಭಿಮಾನಿಗಳು ಮಾತನಾಡುವುದಿಲ್ಲ. ನಿರಭಿಮಾನಿಗಳು ಈ ರೀತಿ ಮಾತನಾಡುತ್ತಾರೆ. ಆದ್ರೆ ನಾನು ಯಾವತ್ತು ಆ ರೀತಿ ನಡೆದುಕೊಂಡಿಲ್ಲ ಎಂದು ಸಿದ್ದರಾಮಯ್ಯ ತಮ್ಮ ವಿರೋಧಿಗಳಿಗೆ ಮಾತಿನ ಚಾಟಿ ಬೀಸಿದ್ದಾರೆ.

ಮುಂದಿನ ಪ್ರಧಾನಿ ಬಗ್ಗೆ ಅಚ್ಚರಿ ಭವಿಷ್ಯ ನುಡಿದ ಚೌಡೇಶ್ವರಿ ಮಾತೇ!

ಲೋಕಸಮರವು ಅಂತಿಮ ಘಟಕ್ಕೆ ಬಂದಿದ್ದು ನಾಳೆ ಚುನಾವಣೆಯ ಫಲಿತಾಂಶ ಹಿನ್ನೆಲೆ ನರೇಂದ್ರ ಮೋದಿ ಮತ್ತೇ ಪ್ರಧಾನಿ ಆಗೋದು ಸುಲಭವಲ್ಲ ಆದರೂ ಪ್ರಯಾಸದಿಂದ ಪ್ರಧಾನಿ ಆಗಲಿದ್ದಾರೆ ಎಂದು ತಿಪಟೂರು ತಾಲೂಕಿನ ದಸರೀಘಟ್ಟ ಚೌಡೇಶ್ವರಿ ಅಮ್ಮ ಕಳಸ ಭವಿಷ್ಯ ನುಡಿದಿದೆ.

ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿ ಆಗಬೇಕು ಎಂಬ ಅವರ ಆಸೆ ನೆರವೇರಲಿದೆ. ಅವರು ನನ್ನ ಕ್ಷೇತ್ರಕ್ಕೆ ಬರದಿದ್ದರೂ ಪರವಾಗಿಲ್ಲ, ಸದ್ಯದಲ್ಲೇ ಅವರನ್ನ ನನ್ನ ಕ್ಷೇತ್ರಕ್ಕೆ ಕರೆಯಿಸಿಕೊಳ್ಳುತ್ತೇನೆ ಎಂದು ಹೇಳಿದೆ.

ಹಿಂದೆ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ದೇಶದಲ್ಲಿ ಪ್ರಧಾನಿ ಪಟ್ಟ ಏರೋದಾಗಿ ಭವಿಷ್ಯ ನುಡಿದಿದ್ದ ಚೌಡೇಶ್ವರಿ ದೇವತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರಿಗೂ ಪ್ರಧಾನಿಯಾಗೋದಾಗಿ ಚೌಡೇಶ್ವರಿ ಅಮ್ಮ ಭವಿಷ್ಯ ಹೇಳಿತ್ತು. ಅದು ಸತ್ಯ ಕೂಡ ಆಗಿತ್ತು.

ಮೇ 23, ಗುರುವಾರ ದೇಶದ್ಯಂತ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು ದೇಶದಲ್ಲಿ ಮತ್ತೆ ಪ್ರಧಾನಿ ಹುದ್ದೆ ಯಾರು ಅಲಂಕಾರಿಸಲಿದ್ದಾರೆ ಎಂಬ ಕುತೂಹಲ ದೇಶದ ಪ್ರಜೆಗಳಲ್ಲಿ ಮೂಡಿದೆ. ಚುನಾವಣೆ ಮುಗಿದ ನಂತರ ಎಕ್ಸಿಟ್​ ಪೋಲು ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷ ಮೇಲುಗೈ ಸಾಧಿಸಲಿದೆ ಎಂದಿವೆ.

ರಮೇಶ್ ಜಾರಕಿಹೊಳಿ ಹೊಸ ಸ್ಕೆಚ್ ಗೆ ಮೈತ್ರಿ ಛೀದ್ರ ಛೀದ್ರ.! ಏನು ಗೊತ್ತಾ..?

ರಮೇಶ್ ಜಾರಕಿಹೊಳಿ ಬಿಜೆಪಿ ಹೈ ಕಮಾಂಡ್ ಜೊತೆ ಮಹತ್ವದ ಚರ್ಚೆಗೆ ತಯಾರಿ ನಡೆದಿದ್ದು ನಾಳೆ ಬೆಳಗ್ಗೆ ದೆಹಲಿಯಲ್ಲಿ ರಹಸ್ಯ ಮಾತುಕತೆ ನಡೆಯಲಿದೆ ಎಂದು ಹೇಳಲಾಗ್ತಿದೆ. ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದಾಗಿನಿಂದಲೂ ಸಾಹುಕಾರ್ ರಮೇಶ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಅಂತ ಹೇಳಲಾಗ್ತಿದೆ.

ನಾಲ್ಕರಿಂದ ಐದು ಶಾಸಕರನ್ನ ಕರೆತರೋದು ನನ್ನ ಜವಾಬ್ದಾರಿ ಅಂತ ರಮೇಶ್ ಜಾರಕಿಹೊಳಿ, ಬಿಎಸ್ ಯಡಿಯೂರಪ್ಪ ಅವ್ರಿಗೆ ಮಾತು ಕೊಟ್ಟಿದ್ದಾರಂತೆ.. ಉಳಿದ ಶಾಸಕರನ್ನ ಸೆಳೆಯೋದು ನಿಮಗೆ ಬಿಟ್ಟಿದ್ದು ಅಂತ ತಿಳಿಸಿದ್ದಾರಂತೆ. ಅಲ್ದೇ ತಮ್ಮ ಬೆಂಬಲಿಗ ಶಾಸಕರಿಗೆ ಯಾರು ಏನೇ ಭರವಸೆ ನಿಂತರು ಕಿವಿಕೊಡಬೇಡಿ ಎಂದು ಸೂಚಿಸಿದ್ದಾರಂತೆ.

ಇನ್ನು ಖಾಸಗಿ ಹೋಟೆಲ್‌ನಲ್ಲಿ ಶಾಸಕ ಬಿ. ನಾಗೇಂದ್ರ ಜೊತೆ ಸುದೀರ್ಘ ಚರ್ಚೆ ನಡೆಸಿರುವ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಕಂಪ್ಲಿ ಗಣೇಶ್, ಭೀಮಾನಾಯ್ಕ್ ಸೇರಿದಂತೆ ಹಲವು ಶಾಸಕರ ಮನವೊಲಿಕೆಗೂ ಮುಂದಾಗಿದ್ದಾರೆ. ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ದೋಸ್ತಿಗಳಿಗೆ ಸರಿಯಾಗೇ ಕೆಂಡ ತೋಡ್ತಿದ್ದಾರೆ.

ಆರಂಭದಲ್ಲಿ ರಮೇಶ್ ಜಾರಕಿಹೊಳಿ ಬೆನ್ನಿಗೆ ನಿಂತಿದ್ದ ಕಾಂಗ್ರೆಸ್ ಅತೃಪ್ತ ಶಾಸಕರು ಈಗ ತಮ್ಮ ನಡೆ ಬದಲಿಸಿದ್ದಾರೆ. ಬಿಜೆಪಿಯನ್ನ ನಂಬಿ ರಾಜೀನಾಮೆ ಕೊಡಲು ಹಿಂದೇಟು ಹಾಕ್ತಿದ್ದಾರೆ. ಈಗಾಗಲೇ ಬಿಜೆಪಿಗೆ ಹೋದ ಕಾಂಗ್ರೆಸ್ ನಾಯಕರ ಕಥೆ ನೋಡಿದ್ದೇವೆ. ಉಮೇಶ್ ಜಾಧವ್ ಭವಿಷ್ಯ ಏನಾಗುತ್ತೋ ಗೊತ್ತಿಲ್ಲ,  ಇನ್ನು ನಾವು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ಮೇಲೆ ಏನೇನು ಬದಲಾವಣೆಗಳಾಗುತ್ತೋ. ಯಡಿಯೂರಪ್ಪ ಅದೆಷ್ಟು ದಿನ ಬಿಜೆಪಿಯಲ್ಲಿ ಪ್ರಭಾವಿ ನಾಯಕನಾಗಿ ಇರ್ತಾರೋ ಎಂಬ ಅನುಮಾನವನ್ನೂ ರೆಬಲ್ ಶಾಸಕರು ವ್ಯಕ್ತಪಡಿಸ್ತಿದ್ದಾರೆ.

ರಾಜೀನಾಮೆ ಡೇಟ್ ಅನೌನ್ಸ್ ಮಾಡಿದ ಕುಮಾರಸ್ವಾಮಿ..!

ರೋಷನ್ ಬೇಗ್ ಹೇಳಿದ್ದರಲ್ಲಿ ತಪ್ಪೇನಿದೆ. ಸಿದ್ದರಾಮಯ್ಯ ಒಬ್ಬ ದುರಂಹಕಾರಿ. ರೋಷನ್ ಬೇಗ್ ಹೇಳಿದ್ದು ನಿಜ. ಸತ್ಯವನ್ನು ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ನಾಳೆ (ಗುರುವಾರ) ಸಂಜೆಯವರೆಗೆ ಮಾತ್ರ ಮುಖ್ಯಮಂತ್ರಿಯಾಗಿರುತ್ತಾರೆ. ಗರಿಷ್ಠ ಎಂದರೆ ನಾಡಿದ್ದು (ಶುಕ್ರವಾರ) ಬೆಳಗ್ಗೆವರಗೆ ಮಾತ್ರ ಅವರು ಸಿಎಂ ಆಗಿರುತ್ತಾರೆ. ಅವರೇ ರಾಜೀನಾಮೆ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.

ಶೇಕಡಾ ನೂರಕ್ಕೆ ನೂರರಷ್ಟು ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುತ್ತಾರೆ. ಹೊಸ ಸರ್ಕಾರ ರಚನೆಗೆ ನಾವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಕಳೆದೊಂದು ವರ್ಷದಿಂದ ಮೈತ್ರಿ ಸರ್ಕಾರ ಇರುವುದಿಲ್ಲ ಅಂತಾನೇ ಹೇಳುತ್ತಾ ಬಂದಿದೆ. ಆದ್ರೆ ಅದು ಮಾತಾಗಿಯೇ ಉಳಿದಿವೆ. ಇದೀಗ ಬಿಜೆಪಿ ರಾಜ್ಯ ನಾಯಕರು ಲೋಕಸಭಾ ಫಲಿತಾಂಶದ ಮೇಲೆ ಅವಲಂಬಿತರಾಗಿದ್ದು, ರಿಸಲ್ಟ್ ಬಳಿಕ  ಬಿಜೆಪಿ ಸರ್ಕಾರ ರಚೆನೆ ಮಾಡಿಯೇ ಸಿದ್ಧ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ.

ಹಲವು ಬಾರಿ ಮೈತ್ರಿ ಸರ್ಕಾರವನ್ನು ಕೆಡುವಲು ಕಾಂಗ್ರೆಸ್ ಶಾಸಕರಿಂದಲೇ ಬಿಜೆಪಿ ನಾಯಕರು ಪ್ಲಾನ್ ರೂಪಿಸಿದ್ದರು. ಆದ್ರೆ ಆ ಪ್ಲಾನ್‌ಗಳೆಲ್ಲ ಉಲ್ಟಾಪಲ್ಟಾ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಮೈತ್ರಿ ಸರ್ಕಾರದ ಜೊತೆ ವಿಚ್ಛೇದನಕ್ಕೆ ಡೇಟ್ ಫಿಕ್ಸ್ ..! ಸಿದ್ದು ತೀರ್ಮಾನಕ್ಕೆ ರಾಹುಲ್ ಸಮ್ಮತಿ?

ಮೈತ್ರಿ ಸರ್ಕಾರ ರಚನೆಯಾಗಿ ವರ್ಷ ಕಳೆದಿದ್ದರೂ ಕಾಂಗ್ರೆಸ್‌ನಲ್ಲಿನ ಆಂತರಿಕ ಬೇಗುದಿ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಕಾಂಗ್ರೆಸ್‌ನಲ್ಲಿ ಬಂಡಾಯ ಏಳುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಸಾಗಿದ್ದು, ಮೊನ್ನೆಯಷ್ಟೇ ರೋಷನ್‌ ಬೇಗ್‌ ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದರು.

ಇದೀಗ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಮಾಹಿತಿ ನೀಡಿದ್ದು, ಸಿದ್ದರಾಮಯ್ಯ ಅಹವಾಲಿಗೆ ರಾಹುಲ್‌ ತಲೆದೂಗಿದ್ದಾರೆ ಎನ್ನಲಾಗಿದೆ.

ಚುನಾವಣೆ ಫಲಿತಾಂಶದ ಬಳಿಕ ತಮ್ಮನ್ನು ಭೇಟಿಯಾಗಲು ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಸಲಹೆ ನೀಡಿದ್ದಾರಂತೆ.

ಮೈತ್ರಿಯಿಂದ ರಾಜ್ಯದಲ್ಲಿ ಕಾಂಗ್ರೆಸ್​ಗೆ ಭಾರಿ ಹಿನ್ನಡೆಯಾಗಿದೆ. ಮೈತ್ರಿ ಮುಂದುವರಿದರೆ ಸಂಕಷ್ಟ ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಇದ್ದಿದ್ದರೆ ಕನಿಷ್ಠ 15 ಸ್ಥಾನಗಳನ್ನಾದರೂ ಗೆಲ್ಲಬಹುದಿತ್ತು. ಮೈತ್ರಿಯಿಂದ ಕೈ ಶಾಸಕರು ಪದೇಪದೆ ಬಂಡಾಯ ಏಳುತ್ತಿದ್ದಾರೆ. ಎಷ್ಟು ಸಲ ಈ ಶಾಸಕರನ್ನು ಸಮಾಧಾನ ಪಡಿಸಲು ಸಾಧ್ಯ? ಆದಷ್ಟು ಬೇಗ ಮೈತ್ರಿಯಿಂದ ಹೊರಬರಬೇಕೆಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಅವರ ಅಳಲಿಗೆ ರಾಹುಲ್‌ ಗಾಂಧಿ ಸಮ್ಮತಿ ಸೂಚಿಸಿದ್ದು, ಈಗ ತಲೆದೋರಿರುವ ಸಮಸ್ಯೆಗೆ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಇತಿಶ್ರೀ ಹಾಡಲು ಉಭಯ ನಾಯಕರು ತೀರ್ಮಾನಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

sample of video link

joke is a display of humour in which words are used within a specific and well-defined narrative structure to make people laugh and is not meant to be taken seriously. It takes the form of a story, usually with dialogue, and ends in a punch line. It is in the punch line that the audience becomes aware that the story contains a second, conflicting meaning. This can be done using a pun or other word play such as irony, a logical incompatibility, nonsense, or other means. Linguist Robert Hetzron offers the definition:

https://youtu.be/kWr8SvbUGMo

ಮೈತ್ರಿ ಸರ್ಕಾರಕ್ಕೆ ಕೈಕೊಟ್ಟ ಜೆಡಿಎಸ್ !

ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ನಂತರ ಜೆಡಿಎಸ್ ಸಭೆ ನಡೆಸಲು ಸಿದ್ಧವಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಎಕ್ಸಿಟ್ ಪೋಲ್ ವ್ಯತಿರಿಕ್ತ ಫಲಿತಾಂಶ ಬಂದ ಕಾರಣಕ್ಕೆ ಸಭೆ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಸಭೆ ಬಗ್ಗೆ ಆಸಕ್ತಿ ವಹಿಸದ  ಎಚ್.ಡಿ.ದೇವೇಗೌಡ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳ ಸಭೆ ನಡೆಯುವ ಸಾಧ್ಯತೆ ಕ್ಷೀಣವಾಗಿದೆ.

23 ರ ನಂತರ ಫಲಿತಾಂಶ ಬಂದ ಬಳಿಕ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಮಹಾಘಟಬಂಧನ್ ಗೆ ಪೂರಕವಾದ ಫಲಿತಾಂಶ ಬಂದ್ರೆ ತಕ್ಷಣವೇ ಸಭೆಗೆ ಸಮಯ ನಿಗದಿ ಮಾಡಲಾಗುತ್ತದೆ. ಅಲ್ಲಿವರೆಗೆ ತಟಸ್ಥವಾಗಿರಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಧರ್ಮಸ್ಥಳದಲ್ಲಿ ನೀರನ್ನು ಅಭಾವಕ್ಕೆ ಮಾಸ್ಟರ್ ಪ್ಲಾನ್ ಮಾಡಿದ ದರ್ಶನ್ ! ಎಲ್ಲರೂ ಡಿ ಬಾಸ್ ನೋಡಿ ಕಲಿಯಬೇಕು.? ಅಷ್ಟಕ್ಕೂ ಡಿ ಬಾಸ್ ಮಾಡಿದ್ದೇನು?

ಶ್ರೀ ಧರ್ಮಸ್ಥಳ ಮಂಜುನಾಥ ಶ್ರೀ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಹೆಚ್ಚು ಕಾಣಿಸಿಕೊಂಡಿರುವುದರಿಂದ ಅಲ್ಲಿನ ಸಮಸ್ಯೆಗೆ ಬಗ್ಗೆಹರಿಸಲು ಮುಂದಾಗಿದ್ದಾರೆ ಸ್ಥಳದ ಪೀಠಾಧಿಕಾರಿಯಾದ ವೀರೇಂದ್ರ ಸ್ವಾಮೀಜಿಯವರ ಜೊತೆ ಚರ್ಚಿಸಿ ಈ ಯತ್ನಕ್ಕೆ ಮುಂದಾಗಿದ್ದಾರೆ.

ಡಿ ಬಾಸ್ ಮಾಸ್ಟರ್ ಪ್ಲಾನ್ ಕೆಳಿ ಸ್ವಾಮೀಜಿಗಳು ಮಾಡಿದ್ದೇನು ಅವರು ಪ್ಲಾನ್ ಗೆ ಸಾಥ್ ನೀಡಿದ್ದರು ಹೇಗೆ ನೋಡಿ .

https://youtu.be/WoP50aXcd4Y

ಸಿದ್ದುಗೆ ಹಿಗ್ಗಾಮುಗ್ಗಾ ಗುದ್ದಿದ ರೋಷನ್ ಬೇಗ್! ಕಾಂಗ್ರೆಸ್‌ಗೆ ಗುಡ್ ಬೈ? ಕಾರಣ ಬಿಚ್ಚಿಟ್ಟ ಬಿಜೆಪಿ ಶಾಸಕ

ಸಿದ್ದರಾಮಯ್ಯ ದುರಹಂಕಾರಿ, ದಿನೇಶ್ ಫ್ಲಾಪ್​ ಶೋ ಎಂದು ಸ್ವಪಕ್ಷದ ನಾಯಕರ ವಿರುದ್ಧ ಶಿವಜಿನಗರ ಕಾಂಗ್ರೆಸ್ ಶಾಸಕ ಬಹಿರಂಗವಾಗಿ ಗುಡುಗಿದ್ದು,  ಕೈ ಪಾಳಯವನ್ನು ಇನ್ನಿಲ್ಲದಂತೆ ಕಂಗಾಲಾಗಿಸಿದೆ.

ಇನ್ನು  ರೋಷನ್ ಬೇಗ್ ಅವರು ಆಕ್ರೋಶದ ಕಟ್ಟೆ ಹೊಡೆಯಲು ಕಾರಣವೇನು ಎನ್ನುವುದನ್ನು ವಿಜಯಪು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಿಚ್ಚಿಟ್ಟಿದ್ದಾರೆ. ಜಮೀರ್ ಅಹ್ಮದ್ ಗೆ ಸಚಿವ ಸ್ಥಾನ ನೀಡಿದಕ್ಕೆ ರೋಶನ್ ಬೇಗ್ ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು.

ರೋಶನ್ ಬೇಗ ಸಣ್ಣ ಹುಡುಗ ಅಲ್ಲ. 30-40 ವರ್ಷದ ಅನುಭವಿ, ಕಾಂಗ್ರೆಸ್ ನಲ್ಲಿಯ ಪರಿಸ್ಥಿತಿ ಎಂದು ತೋರಿಸಿದ್ದಾರೆ. ರೋಶನ್ ಬೇಗ ಸಿಡಿದೆದ್ದಿರುವ ಹಿಂದೆ ಮೈತ್ರಿ ಸರ್ಕಾರ ಪತನದ ಸ್ಪಷ್ಟ ಸಂದೇಶ. ಈ ಹೇಳಿಕೆಯಿಂದ ಹಿಂದೆ ಸರಿಯಬಾರದು. ಕ್ಷಮೆ ಕೇಳಿದರೆ ರೋಶನ್ ಬೇಗ ಜೀರೋ ಆಗ್ತಾರೆ ಎಂದು ಹೇಳಿದರು.

ಯತ್ನಾಳ್ ಹೇಳಿರುವುದು ಒಂದು ರೀತಿಯಲ್ಲಿ ಸತ್ಯವೇ. ಯಾಕಂದ್ರೆ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ರೋಷನ್ ಬೇಗ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು,  ಮುಸ್ಲಿಂ ಕೋಟಾದಲ್ಲಿ ನನಗೆ ಸಚಿವ ಸ್ಥಾನ ಕೊಡಿ ಎಂದು ಬೇಡಿಕೆ ಇಟ್ಟಿದ್ದರು.

ಆದ್ರೆ, 2018ರ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್ ನಿಂದ ಬಂದ ಜಮೀರ್ ಅಹ್ಮದ್ ಖಾನ್ ಅವರಿಗೆ ಮಂತ್ರಿಗಿರಿ ಕೊಟ್ಟಿದ್ದರು. ಇದ್ರಿಂದ ಅಸಮಾಧನಗೊಂಡಿರುವ ರೋಷನ್ ಬೇಗ್, ಅಂದಿನಿಂದ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ರೋಷನ್ ಬೇಗ್ ಮುನಿಸಿಕೊಮಡಿದ್ದರು. ಇದೀಗ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ ಅಷ್ಟೇ.