Exclusive news : ಕಾಂಗ್ರೆಸ್ ಶಾಸಕ ಮುನಿರತ್ನ ಮನೆ ಹತ್ತಿರ ಭಾರೀ ಸ್ಫೋಟ! ನಿಗೂಢ ಸ್ಫೋಟದ ರಭಸಕ್ಕೆ ಒಬ್ಬ ವ್ಯಕ್ತಿಯ ದೇಹ ಛಿದ್ರ ಛಿದ್ರ

ಕಾಂಗ್ರೆಸ್ ಶಾಸಕ ಮುನಿರತ್ನ ಮನೆ ಹತ್ತಿರ ಭಾರೀ ಸ್ಫೋಟದ ಶಬ್ಧ ಕೇಳಿ ಬಂದಿದ್ದು, ನಿಗೂಢ ಸ್ಫೋಟದ ರಭಸಕ್ಕೆ ಒಬ್ಬ ವ್ಯಕ್ತಿಯ ದೇಹ ಛಿದ್ರ ಛಿದ್ರಗೊಂಡಿದೆ. ಇಷ್ಟೇ ಅಲ್ಲದೇ ಶಬ್ಧದ ತೀವ್ರತೆಗೆ ಅರ್ಧ ಕಿಲೋ ಮೀಟರ್ ಸುತ್ತಲಿನ ಜನರು ಗಾಬರಿಗೊಂಡಿದ್ದಾರೆ.

ಬೆಂಗಳೂರಿನ ವಯ್ಯಾಲಿಕಾವಲ್ 11ನೇ ಬಿ ಕ್ರಾಸ್ ಬಳಿ ಇರುವ ಮುನಿರತ್ನ ನಿವಾಸದ ಮುಂಭಾಗದ ಕಾರ್ ಪಾರ್ಕಿಂಗ್ ಬಳಿ ಸ್ಫೋಟಗೊಂಡಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಸಾವನ್ನಪ್ಪಿದ್ದಾರೆ.   ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ನಿಗೂಢ ಸ್ಫೋಟಕ್ಕೆ ಕಾರಣವೇನು ಎಂಬುವುದು ಇನ್ನೂ ಗೊತ್ತಾಗಿಲ್ಲ.

ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಗ್ಯಾಸ್ ಕಟ್ಟರ್ ಗೆ ಸಿಲಿಂಡರ್ ತಂದಿದ್ದರು. ಸಿಲಿಂಡರ್ ಸ್ಫೋಟದಿಂದ ಈ ಘಟನೆ ನಡೆದಿರಬಹುದು. ಬಿಲ್ಡಿಂಗ್ ಡೆಮಾಲಿಷನ್ ಗಾಗಿ ಈ ಸಿಲಿಂಡರ್ ತಂದಿದ್ದರು. ಕಚೇರಿ ಬಳಿಯೇ  ವೆಂಕಟೇಶ್ ಪೇಪರ್ ಓದುತ್ತಿದ್ದರು. ಘಟನೆ ಸ್ಥಳದಲ್ಲೇ ವೆಂಕಟೇಶ್  ಪ್ರತಿದಿನ ಓಡಾಡುತ್ತಿದ್ದರು- ಪ್ರತ್ಯಕ್ಷ ದರ್ಶಿ ರಾಜೇಶ್ ಹೇಳಿಕೆ

ನಿಖರ ಕಾರಣ ತಿಳಿದಿಲ್ಲ
ಘಟನೆಯ ಕುರಿತಾಗಿ ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದು, ಹಳೆ ಮನೆ ಕೆಡವಿ ಹೊಸ ಮನೆ ನಿರ್ಮಿಸುತ್ತಿದ್ದಾರೆ. ಘಟನೆಗೆ ನಿಖರ ಕಾರಣ ಏನೂ ಅನ್ನೋದು ಗೊತ್ತಿಲ್ಲ. ಸ್ಥಳಕ್ಕೆ ವಿಧಿ ವಿಜ್ಞಾನ ತಂಡ ಆಗಮಿಸುತ್ತಿದೆ ಎಂದಿದ್ದಾರೆ.

ಎಚ್ ಡಿ ರೇವಣ್ಣ ಸಿಎಂ ಆಗ್ಬೇಕಾ..! ಭವಾನಿ ರೇವಣ್ಣ ಹೇಳಿದ್ದೇನು..?

ಸಚಿವ ರೇವಣ್ಣ ಸಿಎಂ ಆಗಲು ಅರ್ಹರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಭಗವಂತನ ಇಚ್ಛೆಗೆ ನಾವು ಬದ್ಧ. ನಮ್ಮ ಮನೆಯವರೇ ಸಿಎಂ ಇರುವುದರಿಂದ ಅವರನ್ನ ಪಕ್ಕಕ್ಕೆ ಸರಿಸಿ ರೇವಣ್ಣ ಆಗಲಿ ಎಂದು ಹೇಳುವುದಿಲ್ಲ ಎಂದು ಹೇಳಿದ ಭವಾನಿ ರೇವಣ್ಣ, ರೇವಣ್ಣ ಸಿಎಂ ಆಗಬೇಕಾ ಬೇಡವಾ ಅದು ಭಗವಂತನ ಇಚ್ಛೆ. ಅವರಿಗೆ ಅವಕಾಶ ಬಂದಾಗ ಯಾರು ತಡೆಯಲು ಆಗಲ್ಲ. ಇವತ್ತಿನ ಮಟ್ಟಿಗೆ ಕುಮಾರಸ್ವಾಮಿ ಅವರೆ ಸಿಎಂ ಇದ್ರೇನೆ ಒಳ್ಳೆಯದು ಎಂದು ಹೇಳಿದ್ದಾರೆ.

ಗೌಡ್ರ ಕುಟುಂಬಕ್ಕೆ ಸೋಲು ನಿಶ್ಚಿತ..! ಅಸಲಿ ಕಾರಣ ಇಲ್ಲಿದೆ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ, ಹಾಸನ ಲೋಕಸಭೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಮಂಡ್ಯ ಲೋಕಸಭೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲುತ್ತಾರೆ. ಜನರು ಜೆಡಿಎಸ್ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿಯನ್ನು ಮನೆಗೆ ಕಳಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಸಿದ್ದರಾಮಯ್ಯ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರೀಕೃತ ರಾಜಕೀಯ ನಡೆಯುತ್ತಿದೆ. ಸಿದ್ದರಾಮಯ್ಯ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ. ಇಂತದರಲ್ಲಿ ಇವರು ಎಕ್ಸ್ಪರ್ಟ್. ಮೇ 23 ರ ನಂತರ ಸರ್ಕಾರ ಸ್ಪೋಟ ಮಾಡುತ್ತಾರೆ ಎಂದರು.

ಒತ್ತಾಯದ ಮದುವೆ ಮುರಿದು ಹೋಗುತ್ತೆ – ಜಗದೀಶ್ ಶೆಟ್ಟರ್
ಮೈತ್ರಿ ಸರ್ಕಾರದ ಗೊಂದಲದಿಂದ ಜನ ಬೇಸತ್ತಿದ್ದಾರೆ. ಎಲ್ಲ ಶಕ್ತಿಗಳು ಸೇರಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೆಳಗಿಳಿಸಲು ಪ್ರಯತ್ನಿಸುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒತ್ತಾಯದ ಮದುವೆಯಾಗಿವೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಒತ್ತಾಯದ ಮದುವೆ ಮುರಿದು ಹೋಗುತ್ತೆ. ಮೇ 23ರ ನಂತರ ರಾಜ್ಯದಲ್ಲಿ ಬದಲಾವಣೆ ಆಗುತ್ತೆ  ಎಂದು ಜಗದೀಶ್ ಶೆಟ್ಟರ್ ನುಡಿದರು.

ಸ್ಫೋಟಕ ನ್ಯೂಸ್ : ವಿಧಾನಸಭಾ ವಿಸರ್ಜನೆಗೆ ಮುಂತಾದ ಜೆಡಿಎಸ್ ನಾಯಕರು

ಮೈತ್ರಿ ಸರ್ಕಾರದ ಹಗ್ಗಜಗ್ಗಾಟಕ್ಕೆ ಸಂಬಂಧಿಸಿದ ಎಕ್ಸ್ ಕ್ಲೂಸಿವ್ ನ್ಯೂಸ್. ಬರೀ ಸ್ಫೋಟಕ ನ್ಯೂಸ್ ಅಲ್ಲ, ಮೈತ್ರಿ ಸರ್ಕಾರದ ಮಹಾಪತನದ ಸುದ್ದಿ. ಕರ್ನಾಟಕದಲ್ಲಿ ಎಲೆಕ್ಷನ್ ಫಿಕ್ಸಾ..? ಕರ್ನಾಟಕ ವಿಧಾನಸಭೆಗೆ ಈಗ ಮಧ್ಯಂತರ ಚುನಾವಣೆ ನಡೆದರೂ ಅಚ್ಚರಿ ಇಲ್ಲ. ಕಾಂಗ್ರೆಸ್ ಜತೆ ಕಚ್ಚಾಟಕ್ಕೆ ಕೊನೆ ಹಾಡಲು ಪರಿಹಾರ ಹೇಳಿದ್ದಾರೆ JDS ನಾಯಕ.  ಜೆಡಿಎಸ್ ನಾಯಕನ ಪರಿಹಾರದ ಮಾತು ಕೇಳಿದ್ರೆ ಮಧ್ಯಂತರ ಎಲೆಕ್ಷನ್ ಪಕ್ಕಾ ಎಂದು ಕಾಣುತ್ತಿದೆ.

ಕಾಂಗ್ರೆಸ್ ಜತೆ ಸಮ್ಮಿಶ್ರ ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ ಎಂದ ಜೆಡಿಎಸ್ ನಾಯಕ ಕಾಂಗ್ರೆಸ್ ಪಕ್ಷದ ವಿರುದ್ಧ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಕಚ್ಚಾಟ ಕೊನೆಗಾಣಿಸಲು ವಿಧಾನಸಭಾ ವಿಸರ್ಜನೆಯೇ ಪರಿಹಾರ ಎಂದು ಅವರು ಹೇಳಿದ್ದಾರೆ.

ಅನಗತ್ಯ ಗೊಂದಲ ಹುಟ್ಟುಹಾಕುವ ಬದಲು ಸಮ್ಮಿಶ್ರ ಸರ್ಕಾರವನ್ನು ವಿಸರ್ಜನೆ ಮಾಡುವುದು ಸೂಕ್ತ ಎಂಬ ಹೇಳಿಕೆಗೆ ಬದ್ಧವಾಗಿರುವುದಾಗಿ ಜೆಡಿಎಸ್‍ನ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಪುನರುಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದಲೂ ಮುಖ್ಯಮಂತ್ರಿ ಹುದ್ದೆಯ ಚರ್ಚೆ ನಡೆಯುತ್ತಿದೆ. ಜನಸಾಮಾನ್ಯರಲ್ಲಿ ಇದು ಬೇಸರ ಮೂಡಿಸಿದೆ. ಆಡಳಿತದತ್ತ ಗಮನಹರಿಸಬೇಕೇ ಹೊರತು ಅನಗತ್ಯ ವಿಚಾರಗಳ ಬಗ್ಗೆ ಅಲ್ಲ. ಹಿರಿಯ ಪಕ್ಷಗಳಲ್ಲಿ ಹಿರಿಯರಿದ್ದಾರೆ, ಆಡಳಿತದ ಪರಿಣಿತರಿದ್ದಾರೆ.

ಇಬ್ಬರೂ ಸೇರಿ ಉತ್ತಮ ಸರ್ಕಾರ ನೀಡಬೇಕು. ಅದನ್ನು ಬಿಟ್ಟು ಅನಗತ್ಯವಾಗಿ ಮುಖ್ಯಮಂತ್ರಿ ಹುದ್ದೆ ಕುರಿತು ಚರ್ಚೆ ಮಾಡಿ, ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಧರ್ಮವನ್ನು ಪಾಲಿಸಿಕೊಂಡು ಸರ್ಕಾರ ನಡೆಸಿದರೆ ಬಿಜೆಪಿಯವರಿಗೆ ಅವಕಾಶವೇ ಸಿಗುವುದಿಲ್ಲ.

ಆದರೆ ನಮ್ಮ ನಮ್ಮಲ್ಲೇ ಗೊಂದಲಗಳಿರುವುದರಿಂದ ಬೇರೆಯವರಿಗೆ ಅವಕಾಶವಾಗುತ್ತದೆ. ಮೈತ್ರಿ ಸಂದರ್ಭದಲ್ಲೇ ಎಲ್ಲವೂ ಚರ್ಚೆಯಾಗಬೇಕಿತ್ತು. ಈಗ ಅನಗತ್ಯ ವಿಷಯಗಳು ಪ್ರಸ್ತಾಪವಾಗುವುದು ಬೇಡ ಎಂದರು.

ಈ ಹಿಂದೆ ಆಂತರಿಕ ಗೊಂದಲಗಳಿಂದಾಗಿ ಮೂರು ಬಾರಿ ಸಮ್ಮಿಶ್ರ ಸರ್ಕಾರಗಳು ಪತನಗೊಂಡಿವೆ. ನಾಲ್ಕನೇ ಬಾರಿಯೂ ಇತಿಹಾಸ ಪುನರಾವರ್ತನೆಯಾಗಬಾರದು.

ಒಂದೂವರೆ ತಿಂಗಳಿನಿಂದ ಗೊಂದಲಗಳು ಹೆಚ್ಚಾಗಿವೆ. ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ ಸರಿಯಾಗಿ ಚರ್ಚೆಯಾಗುತ್ತಿಲ್ಲ. ಸಮ್ಮಿಶ್ರ ಸರ್ಕಾರ ಅತಂತ್ರ ಸ್ಥಿತಿಯಲ್ಲಿದೆ ಎಂದು ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ.

ಈಗಲಾದರೂ ಎರಡೂ ಪಕ್ಷಗಳ ಹಿರಿಯ ನಾಯಕರು ಕುಳಿತು ಚರ್ಚೆ ಮಾಡಿ ಸೂಕ್ತ ನಿರ್ಧಾರಕ್ಕೆ ಬರಲಿ. ದಿನವೂ ಹಗ್ಗಾಜಗ್ಗಾಟ ನಡೆಸುವುದೇ ಆದರೆ ಸರ್ಕಾರವನ್ನು ವಿಸರ್ಜನೆ ಮಾಡಲಿ ಎಂದು ಅವರು ಸಲಹೆ ನೀಡಿದರು.

ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ..! ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಕಮಲ್ ಹಾಸನ್

ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ..! ಎಂದು ಹೇಳುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟ, ರಾಜಕಾರಣಿ ಕಮಲ್ ಹಾಸನ್, ಇದೀಗ ಹಿಂದು ಎಂಬ ಪದ ವಿದೇಶದಿಂದ ಬಂದಿದ್ದು ಎಂದು ಹೇಳಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಹಿಂದೂ ಎಂಬ ಪದ ವಿದೇಶಿ ಪದವಾಗಿದ್ದು, ವಿದೇಶದವರ್ಯಾರೋ ತಮ್ಮ ಅಜ್ಞಾನದಿಂದ ಹೇಳಿದ ಪದವನ್ನು ಈಗ ಒಂದು ಮತಕ್ಕೆ, ಒಂದು ದೇಶಕ್ಕೆ ನೀಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಮೊಘಲರೋ ಅಥವಾ ಭಾರತಕ್ಕೆ ಬಂದ ಇನ್ನ್ಯಾರೋ ಈ ಪದವನ್ನು ನೀಡಿದರು. ಅಲ್ಲಿವರೆಗೂ ಇಂಥದೊಂದು ಪದವೇ ಇರಲಿಲ್ಲ. ನಮಗೆ ಸಾಕಷ್ಟು ಗುರುತರಳಿರುವಾಗ, ಪದಗಳಿರುವಾಗ ನಾವ್ಯಾಕೆ ವಿದೇಶದಿಂದ ಎರವಲು ಪಡೆದ ಪದವನ್ನು ಒಂದು ಧರ್ಮಕ್ಕೆ ಬಳಸಬೇಕು ಎಂದು ಮರುಪ್ರಶ್ನೆ ಹಾಕಿದ್ದಾರೆ.

ನಾಥೂರಾಮ್ ಗೋಡ್ಸೆಯನ್ನು ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಹೇಳಿ, ಬಹುಸಂಖ್ಯಾತ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದ್ದರು. ಆದರೆ ತಮ್ಮ ಹೇಳಿಕೆಗೆ ಬದ್ಧರಾಗಿದ್ದು, ತಾನು ಐತಿಹಾಸಿಕ ಸತ್ಯವನ್ನೇ ಹೇಳಿದ್ದೇನೆ.

ಎಂದು ಕಮಲ್ ಹಾಸನ್ ಸಮರ್ಥಿಸಿಕೊಂಡರು. ನಂತರ ತಮ್ಮ ವರಸೆ ಬದಲಾಯಿಸಿದ ಕಮಲ್ ಹಾಸನ್ ಎಲ್ಲಾ ಧರ್ಮದಲ್ಲೂ ಉಗ್ರರಿದ್ದಾರೆ ಎಂದು ಹೇಳಿ ಅವಮಾನಕ್ಕೀಡಾಗಿದ್ದರು.