ಬಹಿರಂಗವಾಯ್ತು ಕೆಪಿಸಿಸಿ ಸಮೀಕ್ಷೆ..! ಮಂಡ್ಯ,ಹಾಸನ,ತುಮಕೂರು ಗೆಲ್ಲೋರ್ಯಾರು ಗೊತ್ತಾ?!

ಈ ಬಾರಿ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ ಭಾರತದ ಲೋಕಸಭಾ ಚುನಾವಣೆ ಫಲಿತಾಂಶವನ್ನು ಅದರಲ್ಲಿ ಮಂಡ್ಯ ಕ್ಷೇತ್ರದ ಸಕ್ಕರೆ ಯಾರ ಬಾಯಿಗೆ ಬೀಳುತ್ತೆ ಎಂದು ಕಾದು ನೋಡುತ್ತಾ ಇದೇ .

ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ನೂರಾರು ಸಮೀಕ್ಷೆಗಳು ನಡೆಯುತ್ತಿರೋ ಬೆನ್ನಲ್ಲೇ, ಕಾಂಗ್ರೆಸ್​​ ಕೂಡ ನಿಖರ ಸಮೀಕ್ಷೆ ನಡೆಸಿದ್ದು, ಅದರ ವರದಿ ಬಹಿರಂಗವಾಗಿದೆ.

KPCC ಕರ್ನಾಟಕದ ಎಲ್ಲಾ 28 ಕ್ಷೇತ್ರಗಳ ಸರ್ವೇಯನ್ನು ಮಾಡಿಸಿದ್ದು, ಸಮೀಕ್ಷೆಯಲ್ಲಿ ಕಾಂಗ್ರೆಸ್​ಗೆ 10, JDSಗೆ 3, ಬಿಜೆಪಿಗೆ 15 ಸ್ಥಾನ ಸಿಕ್ಕಿದೆ. ಬೆಂಗಳೂರು ಗ್ರಾಮೀಣ, ಬೆಂಗಳೂರು ಉತ್ತರ, ಚಾಮರಾಜನಗರ, ಕೋಲಾರ, ಚಿಕ್ಕೋಡಿ, ಕಲಬುರಗಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ ಕಾಂಗ್ರೆಸ್​ ಪಾಲಾಗಲಿವೆ.

ಹಾಸನ, ಮಂಡ್ಯ, ತುಮಕೂರು 3 ಕ್ಷೇತ್ರಗಳನ್ನು ಜೆಡಿಎಸ್​ ತೆಕ್ಕೆಗೆ ತಗೆದುಕೊಳ್ಳಲಿದೆ. ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಮೈಸೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ದಾವಣಗೆರೆ, ಬೆಳಗಾವಿ, ಬೀದರ್, ವಿಜಯಪುರ, ಕೊಪ್ಪಳ, ಹಾವೇರಿ ಲೋಕಸಭಾ ಕ್ಷೇತ್ರಗಳಲ್ಲಿ ಕಮಲ ಅರಳಲಿದೆ ಎಂದು ಕೆಪಿಸಿಸಿ ಸಮೀಕ್ಷೆ ಹೇಳಿದೆ.

ಸಿಎಂ ಭವಿಷ್ಯ ಬಿಚ್ಚಿಟ್ಟ ಡಿಸಿಎಂ !

ಚುನಾವಣೆಯಲ್ಲಿ ದಣಿದಿದ್ದಾರೆ.  ಪ್ರಚಾರಕ್ಕಾಗಿ ಓಡಾಡಿದ್ದಾರೆ. ನೀತಿ ಸಂಹಿತೆ ಇದೆ ಇದರಿಂದ ಸರಕಾರದಲ್ಲಿ ನಮ್ಮ ಕೆಲಸಗಳು ಕಡಿಮೆ ಇದೆ. ಹೀಗಾಗಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ರೆಸಾರ್ಟ್​  ವಾಸ್ತವ್ಯ ಹೊಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ತಿಳಿಸಿದರು.

ತುಮಕೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ. ರೆಸ್ಟ್ ಗೂ ಆರೋಗ್ಯಕ್ಕೂ ಏನು ಸಂಬಂಧ ಇಲ್ಲ,  ಎರಡು ಸಾರಿ ವಿಶ್ರಾಂತಿಗೆ ಹೋಗಿದ್ದಾರೆ ಅದನ್ನೇ ಮಾಧ್ಯಮದವರು ಪದೇ ಪದೇ ಅಂತೀರಾ..? ಅದು ಹೇಗೆ ಪದೇ ಪದೇ ಆಗುತ್ತೆ ಎಂದು ಪ್ರಶ್ನೆ ಮಾಡಿದರು.

ನಾನೂ ರೆಸಾರ್ಟ್​ಗೆ ಹೋಗ್ಬೇಕು ಅಂತಿದಿನಿ, ಒಂದೆರಡು ದಿನ ರೆಸ್ಟ್ ತಗೊಂಡ್ ಬರೋಕೂ ನೀವ್ ಬಿಡಲ್ಲಾ ಎಂದರೆ ಹೇಗೆ ಎಂದು ಮುಖ್ಯಮಂತ್ರಿ ರೆಸಾರ್ಟ್​ ವಾಸ್ತವ್ಯ ಪ್ರಶ್ನೆ ಮಾಡಿದ ಮಾಧ್ಯಮಗಳಿಗೆ ಮರು ಪ್ರಶ್ನೆ ಹಾಕಿದರು.

‘ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯರನ್ನು ಕೈ ಬಿಡಬೇಕು’

ಜಾತಿ ಜಾತಿ ನಡುವೆ ಬೆಂಕಿ ಹಚ್ಚಿದ್ದು, ಕಾಂಗ್ರೆಸ್ ಸರಕಾರ ಹೋಗಲು ಸಿದ್ದರಾಮಯ್ಯ ಅವರೇ ಕಾರಣ. ಕಾಂಗ್ರೆಸ್ ಪಕ್ಷದಿಂದಲೇ ಸಿದ್ದರಾಮಯ್ಯರನ್ನು ಸಸ್ಪೆಂಡ್ ಮಾಡಬೇಕು ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಅತಂತ್ರ ಮಾಡಲು ಕಾಂಗ್ರೆಸ್ ನವರೇ ಪ್ರಯತ್ನಿಸ್ತಾ ಇದ್ದಾರೆ. ಸಿದ್ದರಾಮಯ್ಯ ಸಹ ಟವಲ್ ಹಾಕಿಕೊಂಡು ಕುಳಿತಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಕುಮ್ಮಕ್ಕು ಕೊಡ್ತಾ ಇರೋದೆ ಸಿದ್ದರಾಮಯ್ಯ.ಇನ್ನೊಂದೆಡೆ ದಿನೇಶ್ ಗುಂಡೂರಾವ್, ಪರಮೇಶ್ವರ್ ಸಹ ಪ್ರಯತ್ನ ಮಾಡ್ತಾ ಇದ್ದಾರೆ.
ಕಾಂಗ್ರೆಸ್ ನಲ್ಲಿ ಎರಡು ಗುಂಪು ಮಾಡ್ಕೊಂಡು ಬಡಿದಾಟ ಮಾಡ್ತಾ ಇದಾರೆ. ಮೇ 23 ರ ನಂತರ ಇದು ಇನ್ನೂ ಜಾಸ್ತಿಯಾಗುತ್ತೆ ಎಂದು ಇದೇ ವೇಳೆ ತಿಳಿಸಿದರು.

ಸಿದ್ದರಾಮಯ್ಯನಿಗೆ ನಾಚಿಕೆ ಮರ್ಯಾದೆ ಇಲ್ಲ, ಅವರದ್ದು ತಿರುಕನ ಕನಸು. ಯಡಿಯೂರಪ್ಪ ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ನಾಚಿಕೆ ಮಾನ, ಮರ್ಯಾದೆ ಯಾರಿಗಿಲ್ಲ ಮೊದಲು ತಿಳಿದುಕೊಳ್ಳಲಿ. ಸರ್ಕಾರ ಅತಂತ್ರಗೊಳಿಸಿ, ಅಧಿಕಾರಕ್ಕಾಗಿ ಬಡಿದಾಡುತ್ತಿರುವ ಇವರಿಗೆ ಇದೆಯಾ…?? ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು.

ಒಂದು ಕುರ್ಚಿಗಾಗಿ ಕಾಂಗ್ರೆಸ್ ನಾಯಕರ ಹೊಡೆದಾಟ! ವಿಡಿಯೋ ನೋಡಿ

ಕುರ್ಚಿಗಾಗಿ ರಾಜಕೀಯ ನಾಯಕರು ಬಡಿದಾಡಿಕೊಳ್ಳುವುದು ಭಾರತದಲ್ಲಿ ಸಾಮಾನ್ಯ ಸಂಗತಿ ಏನಲ್ಲ ಬಿಡಿ. ಅದರಂತೆ ಟಿಆರ್‌ಎಸ್ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಕುರ್ಚಿಗಾಗಿ ಎಲ್ಲರ ಸಮ್ಮುಖದಲ್ಲೇ ಬಡಿದಾಡಿಕೊಂಡ ಘಟನೆ ಹೈದಾರಾಬಾದ್‌ನಲ್ಲಿ ನಡೆದಿದೆ.

ತೆಲಂಗಾಣದ ಹಿರಿಯ ಕಾಂಗ್ರೆಸ್ ನಾಯಕ ವಿ. ಹನುಮಂತ್ ರಾವ್ ಮತ್ತು ನಾಗೇಶ್ ಮುದ್ದಿರಾಜು ಕುರ್ಚಿಗಾಗಿ ಬಡಿದಾಡಿಕೊಂಡಿದ್ದು, ನಾಯಕರ ಜಗಳ ಕಂಡು ನೆರೆದ ಜನಸ್ತೋಮ ನಕ್ಕು ನಕ್ಕು ಸುಸ್ತಾಗಿದ್ದಾರೆ.

ತೆಲಂಗಾಣದ 10ನೇ ತರಗತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಪಕ್ಷಗಳು ಟಿಆರ್‌ಎಸ್ ಸರ್ಕಾರದ ವಿರುದ್ಧ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದವು.  ಈ ವೇಳೆ ಮಾತನಾಡಲು ಎದ್ದು ನಿಂತ ವಿ ಹನುಮಂತ್ ರಾವ್ ಅವರ ಕುರ್ಚಿಯನ್ನು ನಾಗೇಶ್ ಮುದ್ದಿರಾಜು ಆ ವೇಳೆ ಬಂದ ಮತ್ತೋರ್ವ ನಾಯಕರಿಗೆ ಕೊಟ್ಟಿದ್ದಾರೆ.

ಇದರಿಂದ ಕೋಪಗೊಂಡ ಹನುಮಂತ್ ರಾವ್, ಕೂಡಲೇ ನಾಗೇಶ್ ಅವರನ್ನು ತಳ್ಳಿ ಹೊಡೆಯಲು ಮುಂದಾಗಿದ್ದಾರೆ. ಇದರಿಂದ ಮುಜುಗರಕ್ಕೀಡಾದ ನಾಗೇಶ್ ಕೂಡ ಹನುಮಂತ್ ರಾವ್ ಮೇಲೆ ಕೈ ಮಾಡಿದ್ದಾರೆ. ಇಬ್ಬರೂ ನಾಯಕರ ಜಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾಂಗ್ರೆಸ್ ತೀವ್ರ ಮುಜುಗರಕ್ಕೀಡಾಗಿದೆ.

ಅಮೆರಿಕ -ಇರಾನ್ ನಡುವೆ ಯಾವುದೇ ಕ್ಷಣದಲ್ಲಿಯಾದರು ಯುದ್ಧ ಸಾಧ್ಯತೆ?

ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನ ಸ್ಥಿತಿ ಮತ್ತಷ್ಟು ಭುಗಿಲೆದ್ದಿದೆ. ಅಮೆರಿಕ ವಿರುದ್ಧ ಗುಡುಗಿ ಆಕ್ರಮಣ ನಡೆಸಲು ಸಿದ್ಧವಾಗಿರುವ ಇರಾನ್ಗೆ ಎಚ್ಚರಿಕೆ ನೀಡಲು ವಾಷಿಂಗ್ಟನ್ ಮತ್ತಷ್ಟು ಯುದ್ಧ ನೌಕೆ ಮತ್ತು ವಿಮಾನಗಳನ್ನು ಮಧ್ಯಪ್ರಾಚ್ಯಗೆ ರವಾನಿಸಿದೆ.

ಬೆಳವಣಿಗೆಯಿಂದ ಎರಡೂ ರಾಷ್ಟ್ರಗಳ ನಡುವೆ ಯುದ್ಧದ ಕಾರ್ಮೋಡ ದಟ್ಟವಾಗುತ್ತಿದೆಅಮೆರಿಕ ರಕ್ಷಣಾ ಇಲಾಖೆ ಯುಎಸ್ಎಸ್ ಅರ್ಲಿಂಗ್ಟನ್ ಸಮರ ನೌಕೆ ಹಾಗೂ ಪೆಟ್ರಿಯಾಟ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಮಧ್ಯಪ್ರಾಚ್ಯಗೆ ರವಾನಿಸಿದೆ ಎಂದು ಪೆಂಟಗನ್ ತಿಳಿಸಿದೆ.

ಇರಾನ್ ನಮ್ಮ ಸೇನಾಪಡೆಗಳ ಮೇಲೆ ಆಕ್ರಮಣ ನಡೆಸುವುದಾಗಿ ಬೆದರಿಕೆವೊಡ್ಡಿ ದಾಳಿಗೆ ಸಜ್ಜಾಗುತ್ತಿದೆ. ಇದನ್ನು ನೋಡಿಕೊಂಡು ನಾವು ಸುಮ್ಮನೆ ಕೂರುವುದಿಲ್ಲ. ಈಗಾಗಲೇ ಮಧ್ಯಪ್ರಾಚ್ಯಕ್ಕೆ ಯುಎಸ್ಎಸ್ ಅಬ್ರಹಾಂ ಲಿಂಕನ್ ನೌಕೆಯನ್ನು ರವಾನಿಸಲಾಗಿದೆ.

ಇದರೊಂದಿಗೆ ಮತ್ತೊಂದು ಯುದ್ಧ ಹಡಗು ಮತ್ತು ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಅಲ್ಲಿಗೆ ನಿಯೋಜಿಸಲಾಗಿದೆ ಎಂದು ಪೆಂಟಗನ್ ಹೇಳಿದೆ. ಯುಎಸ್ಎಸ್ ಅರ್ಲಿಂಗ್ಟನ್ ಯುದ್ಧ ನೌಕೆಯು ಸಮುದ್ರ, ಭೂಮಿ ಮತ್ತು ಆಗಸದಿಂದ ದಾಳಿ ನಡೆಸುವ ವಿಮಾನಗಳು ಮತ್ತು ಇತರ ವಾಹನಗಳನ್ನು ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದೆ.

ಇನ್ನು ಪೇಟ್ರಿಯಾಟ್ ಏರ್ ಡಿಫೆನ್ಸ್ ಸಿಸ್ಟಮ್ ವೈರಿಗಳ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಒಡೆದುರುಳಿಸುವ ಸಮರ್ಥ ವ್ಯವಸ್ಥೆಯನ್ನು ಒಳಗೊಂಡಿದೆ.
ಇರಾನ್ ಜೊತೆ ನಾವು ಯುದ್ಧ ಬಯಸುವುದಿಲ್ಲ.

ಆದರೆ ಟೆಹ್ರಾನ್ ಯಾವುದೇ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲು ವಾಷಿಂಗ್ಟನ್ ಸರ್ವಸನ್ನದವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಮೊನ್ನೆಯಷ್ಟೇ ಎಚ್ಚರಿಕೆ ನೀಡಿದ್ದರು.

ಇರಾನ್ಗೆ ನಿಟ್ಟಿನಲ್ಲಿ ಸ್ಪಷ್ಟ ಎಚ್ಚರಿಕೆ ನೀಡುವ ಉದ್ದೇಶದಿಂದಲೇ ಅಮೆರಿಕ ಮಧ್ಯ ಪ್ರಾಚ್ಯದಲ್ಲಿ ನೌಕಾ ಆಕ್ರಮಣ ಸಮೂಹ ಮತ್ತು ಬಿ52 ಬಾಂಬರ್ ಕಾರ್ಯಪಡೆಯನ್ನು ನಿಯೋಜಿಸಿ ಸಜ್ಜಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.

ಟ್ರಂಪ್ ಆಡಳಿತ ಯಾವುದೇ ಕಾರಣಕ್ಕೂ ಯಾವ ದೇಶದ ಮೇಲೆ ಯುದ್ಧ ಬಯಸುವುದಿಲ್ಲ. ಆದರೆ ವಿನಾಕಾರಣ ನಮ್ಮ ಮೇಲೆ ಬಿದ್ದರೆ ನಾವು ಅದಕ್ಕೆ ದಿಟ್ಟ ಪ್ರತ್ಯುತ್ತರ ನೀಡುತ್ತೇವೆ ಎಂದು ಇರಾನ್ಗೆ ಎಚ್ಚರಿಕೆ ನೀಡಿದ್ದರು.

ಮಧ್ಯಪ್ರಾಚ್ಯದ ಅನೇಕ ದೇಶಗಳು ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ. ಆದರೆ ಇರಾನ್ ಮೊದಲಿನಿಂದ ನಮ್ಮ ದೇಶದ ವಿರುದ್ಧ ಹಗೆ ಸಾಧಿಸುತ್ತಲೇ ಇದೆ. ಅಲ್ಲದೆ ಅಮೆರಿಕದ ಮಿತ್ರ ದೇಶಗಳ ಸಂಬಂಧ ಹಾಳು ಮಾಡಲು ಹವಣಿಸುತ್ತಿದೆ ಎಂದು ಹೇಳಿದ್ದರು.

ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಅಮೆರಿಕದ ಮಾಜಿ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.

ಹೀಗೂ ಉಂಟು…! ಗೋವಾದ ನಿಗೂಢ ಜಾಗಗಳಿವು.?

ಗೋವಾ ಎಂದಾಕ್ಷಣ ಬೀಜ್, ಪಾರ್ಟಿ, ಜೂಜು ಮೋಜು…ಒಂದಾದ ನಂತರ ಮತ್ತೊಂದು ನೆನಪಿಗೆ ಬರುತ್ತವೆ. ಯುವಕರ ಫೇವರೇಟ್ ಔಟಿಂಗ್ ಸ್ಪಾಟ್.  ಚರ್ಚ್ ಹಾಗೂ ಬೀಚ್‌ಗಳ ಸೌಂದರ್ಯವನ್ನೇ ಹೊದ್ದಿರುವ ಗೋವಾದಲ್ಲಿ ಶಾಕಿಂಗ್ ನ್ಯೂಸ್ ಒಂದಿದೆ! ಇಲ್ಲಿನ ಕೆಲವು ಜನನಿಬಿಡ ಪ್ರದೇಶಗಳಲ್ಲಿಯೇ ದೆವ್ವಗಳಿವೆ ಎಂದೂ ನಂಬಲಾಗುತ್ತಿದೆ. ಅಂಥ ತಾಣಗಳು ಯಾವುವು?

ಕತ್ತಲಲ್ಲಿ ನಡೆಯುವ ಎಷ್ಟೋ ವಿಸ್ಮಯಕಾರಿ ಘಟನೆಗಳು ಕ್ಯಾಮೆರಾ ಮುಂದೆ ಮಾತ್ರ ಕಾಣುತ್ತದೆ. ಈ ಬಗ್ಗೆ ಸತ್ಯ-ಸುಳ್ಳು ಎಂಬ ವಾದ ವಿವಾದಗಳಿವೆ. ಅಂಥ ಕೆಲವು ಭಯಾನಕ ಸ್ಥಳಗಳಿವು…

ಇಗೋರ್ಶೆಮ್ ಬಾಂದ್

ಈ ಪ್ರೇದೇಶದಲ್ಲೊಂದು ಚರ್ಚ್ ಇದೆ. ಅದರ ಹಿಂಬದಿ ರಸ್ತೆಯಲ್ಲಿ ಮಧ್ಯಾಹ್ನ 2 ರಿಂದ 3 ಗಂಟೆ ವೇಳೆ ಹೆಚ್ಚಾಗಿ ಪ್ರೇತಾತ್ಮಗಳು ಕಾಣಿಸಿಕೊಳ್ಳುತ್ತವೆಯಂತೆ! ಈ ರಸ್ತೆಯಲ್ಲಿ ಸಂಚಾರ ಮಾಡುವವರೂ ಇದ್ದಕ್ಕಿದ್ದಂತೆ ಮೈ ಮೇಲೆ ದೆವ್ವ ಬಂದವರಂತೆ ಆಡುತ್ತಾರೆಂಬುವುದು ಸ್ಥಳೀಯರ ಮಾತು, ಈ ಸಮಯದಲ್ಲಿ ರಾತ್ರಿ ಹೋದರೆ?

ಬೆತಕೋಲ್ ರಸ್ತೆ

ಸದಾ ತಂಪಾಗಿರುವ ಈ ರಸ್ತೆಯಲ್ಲಿಯಲ್ಲಿಯೂ ಅಗೋಚರವೊಂದು ನಡೆಯುತ್ತವೆ. ಇಲ್ಲೊಬ್ಬ ಪುಟ್ಟ ಬಾಲಕ ರಸ್ತೆ ನಡುವೆ ನಿಂತು ಕಿರುಚುತ್ತಾ, ಅಳುತ್ತಾನಂತೆ! ಏನಾಯ್ತೆಂದು ವಿಚಾರಿಸುವ ಹೊತ್ತಿಗೆ ಅಪಘಾತ ಸಂಭವಿಸುತ್ತದೆಯಂತೆ. ಈ ಬಗ್ಗೆ ಈಗಾಗಲೇ ಸಾಕಷ್ಟು ತನಿಖೆ ನಡೆದಿದ್ದು, ಪ್ರೇತಾತ್ಮವೇ ಕಾರಣವೆಂಬ ಕನ್ಕ್ಲ್ಯೂಷನ್‌ಗೆ ಬರಲಾಗಿದೆ.

NH-17 ಮುಂಬೈಗೋವಾ ಹೆದ್ದಾರಿ

ದೇಶದಲ್ಲಿ ಅತಿ ಹೆಚ್ಚು ಅಪಘಾತಗಳಾಗುವ ಹೆದ್ದಾರಿಯಲ್ಲಿ ಇದೂ ಒಂದು. ಈ ಮಾರ್ಗದಲ್ಲಿ ಮಧ್ಯಹ್ನ 12 ಗಂಟೆ ನಂತರ  ಮಾಂಸವನ್ನು ಕೊಂಡೊಯ್ಯುವಂತಿಲ್ಲ. ಅಪ್ಪಿ ತಪ್ಪಿ ಕೊಂಡೋಯ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಡಿ ಮೆಲ್ಲೋ ಮನೆ

ಸ್ಯಾಂಟೆಮಾಲ್ ಪ್ರದೇಶದಲ್ಲಿರುವ ಹಳೆ  ಬಂಗಲೆ ಇದಾಗಿದ್ದು, ರಾತ್ರಿ ವೇಳೆ ಈ ಮನೆಯಿಂದ ಮಹಿಳೆಯೊಬ್ಬಳು ಕಿರುಚಾಡುವುದು ಹಾಗೂ ಕಿಟಕಿ ಬಾಗಿಲು ಬಡಿಯುವ ಸದ್ದು ಕೇಳಿಸುತ್ತದೆ. ಈ ಬಂಗಲೆಯಲ್ಲಿ ಸಹೋದರರಿಬ್ಬರು ವಾಸವಿದ್ದು, ಆಸ್ತಿ ವಿಷಯಕ್ಕೆ ಜಗಳವಾಡಿ ಅಸುನೀಗಿದ್ದಾರೆ. ಆದರೆ, ಈ ಮನೆ ಮಾರಾಟ ಮಾಡುವ ಯತ್ನವೂ ವಿಫಲವಾಗಿದೆ. ಹೀಗೂ ಉಂಟೇ? ಎಂದು ಹೇಳುವ ಹೊರತು ಇನ್ನೇನು ಹೇಳಲಾಗುವುದಿಲ್ಲ.

ರಾಡ್ರಿಗಸ್

ನೋಡಲು ಸಾಮಾನ್ಯ ಮನೆಯಂತೆ ಕಾಣುತ್ತದೆ. ಅದರೆ ರಾತ್ರಿ ಆಗುತ್ತಿದ್ದಂತೆ ಕಿಟಕಿ ಬಾಗಿಲು ಬಡಿದುಕೊಳ್ಳುತ್ತವೆ. ಮನೆ ಹತ್ತಿರ ಹೋಗುತ್ತಿದ್ದಂತೆ ಬಿರುಗಾಳಿಯಂತೆ ಗಾಳಿ ಬೀಸುತ್ತದೆ!

ಸಲಿಗೋ ವಿಲೇಜ್

ಚರ್ಚ್‌ಗಳಿಗೆ ಫೇಮಸ್ ಆಗಿರುವ ಜಾಗವಿದು. ಈ ಸ್ಥಳದಲ್ಲಿ ದೊಡ್ಡ ಆಲದ ಮರವಿದ್ದು, ಅದರ ಬಳಿ ಕ್ರಿಸ್ಟಲಿನಾ ಎಂಬ ಅತ್ಮ ಇಡೀ ಗ್ರಾಮವನ್ನೇ ಕಾಡುತ್ತದೆಯಂತೆ. ಅಷ್ಟೇ ಅಲ್ಲದೇ ರಾತ್ರಿ ಹೊತ್ತಿನಲ್ಲಿ ಮರದ ಸುತ್ತ ಇದನ್ನು ಯಾರೇ ನೋಡಿದರೂ ಅವರಿಗೆ ಗಾಯಗಳಾಗೋದು ಸಾಮಾನ್ಯವಂತೆ.

ಒಟ್ಟಿನಲ್ಲಿ ಕೆಲವೊಂದು ತರ್ಕಕ್ಕೆ ನಿಲುಕದ ಘಟನೆಗಳು ಈ ಅಗೋಚರ ಶಕ್ತಿಗೆ ಏನು ಕಾರಣವೇ ಬಲ್ಲವರಾರು? ಒಟ್ಟಿನಲ್ಲಿ ಹೀಗೂ ಇರುತ್ತೆ!

“ನಾನೇನ್ನು ಜೆಡಿಎಸ್ ಪಕ್ಷ ಬಿಟ್ಟಿರಲಿಲ್ಲ, ದೇವೇಗೌಡರೇ ನನ್ನನ್ನು ಪಕ್ಷದಿಂದ ಹೊರಹಾಕಿದ್ದರು” : ಮಾಜಿ ಸಿಎಂ

ಅಧಿಕಾರದ ಆಸೆ ತೋರಿಸಿ ದುಡ್ಡಿನ ಆಮಿಷ ಒಡ್ಡಿ ಬಲವಂತ ಮಾಡಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿ ಈಗಾಗಲೇ ಸೋತಿರುವ ಬಿಜೆಪಿಯವರ ಹೊಸ ಪ್ರಯತ್ನಗಳಿಗೆ ಕಾಂಗ್ರೆಸ್ ಶಾಸಕರು ಸೊಪ್ಪು ಹಾಕುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯ ನಂತರ 20 ಕಾಂಗ್ರೆಸ್ ಶಾಸಕರು ಏನೂ ಬೇಕಾದರೂ ನಿರ್ಣಯ ಕೈಗೊಳ್ಳಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನೀಡಿರುವ ಹೇಳಿಕೆಗೆ ತಿರುಗೇಟು ನೀಡಿದರು.

ಅಧಿಕಾರ ಸಿಗದ ಹತಾಶೆಯಿಂದ ಬಿಜೆಪಿಯವರು ರೀತಿಯ ಮಾತುಗಳನ್ನು ಆಡುತ್ತಿದ್ದಾರೆ. ಶಾಸಕರಿಗೆ ಆಮಿಷವೊಡ್ಡುತ್ತಿದ್ದಾರೆ. ಶಾಸಕರಿಗೆ ಕೊಡಲು ಬಿಜೆಪಿಯವರಿಗೆ ಅಷ್ಟೊಂದು ದುಡ್ಡು ಎಲ್ಲಿಂದ ಬರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಉತ್ತರಿಸಬೇಕಿದೆ.

ಯಡಿಯೂರಪ್ಪ ಅವರು ಈಗಾಗಲೇ ಒಂದು ಬಾರಿ ಸರ್ಕಾರ ರಚಿಸಲು ಪ್ರಯತ್ನ ಮಾಡಿದ್ದರು. ರಾಜ್ಯಪಾಲರು ಅದಕ್ಕೆ ಅವಕಾಶ ಕೊಟ್ಟಿದ್ದರು. ಆದರೆ ಯಡಿಯೂರಪ್ಪ ಕೈಯಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಮೂರೇ ದಿನದಲ್ಲಿ ಮನೆಗೆ ಹೋದರು. ಈಗ ಪದೇ ಪದೇ ಕಾಂಗ್ರೆಸ್ 20 ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ಹೇಳುವುದಕ್ಕೆ ನಾಚಿಕೆಯಾಗುವುದಿಲ್ಲವೇ?

ನಮ್ಮ ಯಾವ ಶಾಸಕರು ಎಲ್ಲಿಗೂ ಹೋಗುವುದಿಲ್ಲ, ಬಿಜೆಪಿಯ ಆಮಿಷಗಳಿಗೆ ಸೊಪ್ಪು ಹಾಕುವುದಿಲ್ಲ . ಅಧಿಕಾರ ಮತ್ತು ದುಡ್ಡಿನ ಆಮಿಷದಿಂದ ಕಾಂಗ್ರೆಸ್ ಶಾಸಕರನ್ನು ಸೆಳೆಯುವುದು ಸುಲಭವಲ್ಲ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಬಂದಿದ್ದರು ಬಿಜೆಪಿ ಹಿರಿಯ ನಾಯಕ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, ನಾನಾಗಿಯೇ ಜೆಡಿಎಸ್ ಬಿಟ್ಟು ಬರಲಿಲ್ಲ. ಅಹಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ದೇವೇಗೌಡರೇ ನನ್ನನ್ನು ಜೆಡಿಎಸ್ನಿಂದ ಹೊರಹಾಕಿದ್ದರು.

ಅಶೋಕ್ ಅವರಿಗೆ ಸತ್ಯವೂ ಗೊತ್ತಿಲ್ಲ, ಸುಳ್ಳು ಗೊತ್ತಿಲ್ಲ. ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಾರೆ. ಅವರ ಹೇಳಿಕೆಗಳಿಗೆ ತಲೆಬುಡ ಇರುವುದಿಲ್ಲ. ಯಾವುದೂ ಅರ್ಥವೂ ಆಗುವುದಿಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಕೆವಲ 3 ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಖಚಿತ! ಬಿಜೆಪಿಗೆ ಎಷ್ಟು? ಭವಿಷ್ಯವಾಣಿ

ಮೈತ್ರಿ ಪಕ್ಷಗಳ ಅಪಸ್ವರ ಹಾಗೂ ಪ್ರತಿಪಕ್ಷಗಳ ಅಬ್ಬರದ ವಿರೋಧದ ನಡುವೆಯೂ ಲೋಕಸಭಾ ಚುನಾವಣಾ ಕಣದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತವರ ಇಬ್ಬರು ಮೊಮ್ಮಕ್ಕಳ ಗೆಲುವು ಖಚಿತ ಎಂದು ಜ್ಯೋತಿಷಿ ದ್ವಾರಕಾನಾಥ್ ಭವಿಷ್ಯ ನುಡಿದಿದ್ದಾರೆ.

ಆರ್.ಟಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರೊಂದಿಗೆ ಶುಕ್ರವಾರ ಅವರು ಸುಮಾರು ಒಂದೂವರೆ ತಾಸಿಗಿಂತ ಹೆಚ್ಚು ಕಾಲ ರಾಜಕೀಯ ಬೆಳವಣಿಗೆ ಕುರಿತು ಸಮಾಲೋಚನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ, ಮಂಡ್ಯ ಮತ್ತು ತುಮಕೂರಿ (ಎಚ್‌ಎಂಟಿ)ನಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ಇದೆ. ಸಮಬಲದ ಹೋರಾಟ ಇರುವ ಕಾರಣ ದೈವ ಇಚ್ಛೆ ಏನೆಂಬುದು ನೋಡಬೇಕು. ಆದರೆ, ಶೇ.1ರಷ್ಟು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಅವರಿಗೆ ಹೆಚ್ಚಿನ ಅವಕಾಶ ಇದೆ ಎಂದರು.

ಮತ್ತೊಮ್ಮೆ ಪ್ರಧಾನಿಯಾಗಿ ನರೇಂದ್ರ ಮೋದಿ ಬರುವುದನ್ನು ತಡೆಯುವುದಕ್ಕೆ ಆಗುವುದಿಲ್ಲ. ಆದರೆ, ಬಿಜೆಪಿ ಬಹುಮತ ಮಾತ್ರ ಬರುವುದಿಲ್ಲ ಎಂದು ಇದೇ ವೇಳೆ ದ್ವಾರಕನಾಥ್ ಪುನರುಚ್ಚರಿಸಿದರು. ಮೇ 23 ರ ಬಳಿಕ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಇದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಮುಖ್ಯಮಂತ್ರಿ ಯಾರೇ ಆದರೂ ನಂಬರ್ ಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ, ಸಚಿವ ಡಿ. ಕೆ.ಶಿವಕುಮಾರ್ ಆಗಲಿ ನಂಬರ್ ಬೇಕಾಗುತ್ತದೆ. ನಂಬರ್ ಇಲ್ಲದಿದ್ದರೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಯಾರೇ ಆದರೂ ಎಲ್ಲರೂ ನಮ್ಮವರೇ ಎಂದರು.

ರಾಜೀವ್‌ ಜತೆ ಯುದ್ಧನೌಕೆಗೆ ಹೋಗಿದ್ದು ನಿಜ: ರಾಹುಲ್‌! ಪ್ರಧಾನಿ ಆರೋಪಕ್ಕೆ ರಾಹುಲ್ ಗಾಂಧಿ ಸ್ಪಷ್ಟನೆ

ರಾಜೀವ್ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಐಎನ್ಎಸ್ವಿರಾಟ್ಅನ್ನು ತಮ್ಮ ಕುಟುಂಬದ ಖಾಸಗಿ ಟ್ಯಾಕ್ಸಿಯನ್ನಾಗಿ ಮಾಡಿಕೊಂಡಿದ್ದರು. ಮೂಲಕ ದೇಶದ ಭದ್ರತೆ ಜೊತೆ ರಾಜೀ ಮಾಡಿಕೊಳ್ಳಲಾಗಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಗಂಭೀರ ಆರೋಪಕ್ಕೆ ಕಾಂಗ್ರೆಸ್ಅಧ್ಯಕ್ಷ ರಾಹುಲ್ಗಾಂಧಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಗ್ಗೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಹುಲ್‌, ‘ನನ್ನ ತಂದೆ ಪ್ರಧಾನಿಯಾಗಿದ್ದಾಗ ನಾನು ಅವರ ಜೊತೆ ಐಎನ್ಎಸ್ವಿರಾಟ್ನೌಕೆಗೆ ಹೋಗಿದ್ದು ನಿಜ. ಹಾಗಾಗಿಯೇ ಕುರಿತಾದ ಫೋಟೋಗಳಿವೆ. ಆದರೆ, ಮೋಜುಮಸ್ತಿಗಾಗಿ ಹೋಗಿದ್ದೆವು ಎಂಬ ಆರೋಪವೇ ಹುಚ್ಚುತನದ್ದು. ಪ್ರಧಾನಿಯವರ ಅಧಿಕೃತ ಕಾರ್ಯಕ್ರಮಕ್ಕಾಗಿ ಐಎನ್ಎಸ್ವಿರಾಟ್ನಲ್ಲಿ ಲಕ್ಷದ್ವೀಪಕ್ಕೆ ಹೋಗಿದ್ದೆವು.

ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಐಎನ್ಎಸ್ವಿರಾಟ್ನಲ್ಲಿ ಯಾರಾದರೂ ರಜೆಯ ಮೋಜು ಮಾಡುತ್ತಾರೆಯೇ? ಅದೇನು ಕ್ರೂಸ್ಶಿಪ್‌ (ಐಷಾರಾಮಿ ಹಡಗು) ಅಲ್ಲಎಂದು ಮೋದಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.