ರಾಜ್ಯ ರಾಜಕೀಯದಲ್ಲಿ ಬಾರಿ ಕುತೂಹಲ ಮೂಡಿಸಿದ್ದ ನಿಖಿಲ್ ನಡೆ..!

ಫಲಿತಾಂಶಕ್ಕೂ ಮುನ್ನವೇ ರಾಜಕಾರಣದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ  ನಿಖಿಲ್ ಕುಮಾರಸ್ವಾಮಿ ಸಕ್ರಿಯರಾಗಿದ್ದು ಇಂದು  ಮಂಡ್ಯಕ್ಕೆ  ಭೇಟಿಕೊಡುತ್ತೀದ್ದಾರೆ.

ಜೆಡಿಎಸ್ ಕಾರ್ಯಕರ್ತರ ಸಭೆಗೆ ಇಂದು ಮಂಡ್ಯದ ಕೆ.ಆರ್ ಪೇಟೆಗೆ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ. ಕೆ.ಆರ್ ಪೇಟೆ ಪುರಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂದು ಜೆಡಿಎಸ್ ಪಕ್ಷದ ಪೂರ್ವಭಾವಿ ಸಭೆ ನಡೆಯಲಿದೆ.

ಮಂಡ್ಯ ಉಸ್ತುವಾರಿ ಸಚಿವ ಸಿಎಸ್.ಪುಟ್ಟರಾಜು, ಶಾಸಕ ನಾರಾಯಣಗೌಡ ನೇತೃತ್ವದಲ್ಲಿ ಜೆಡಿಎಸ್ ಸಭೆ ನಡೆಯಲಿದ್ದು, ಇದೀಗ ನಾನು ಸೋಲಲಿ ಗೆಲ್ಲಲಿ ನಿಮ್ಮೊಂದಿಗೆ ಇರುತ್ತೇನೆ ಎಂಬ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಸಭೆಗೆ  ನಿಖಿಲ್ ಆಗಮಿಸುತ್ತಿದ್ದಾರೆ.

ಲೋಕಸಭೆ ಚುನಾವಣೆ ನಂತರ ಜೆಡಿಎಸ್ ಸಭೆಯಲ್ಲಿ ಪ್ರಪ್ರಥಮವಾಗಿ ಪಾಲ್ಗೊಳ್ಳುತ್ತಿರುವ ನಿಖಿಲ್ ಕುಮಾರಸ್ವಾಮಿ, ಹಿಂದೆ  ಚುನಾವಣೆ ನಂತರ ಔಪಚಾರಿಕವಾಗಿ ಒಮ್ಮೆ ಮಂಡ್ಯಕ್ಕೆ ಆಗಮಿಸಿ ಮತದಾರರು, ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದರು. ಬಳಿಕ ಮತ್ತೆ ಮಂಡ್ಯಗೆ ಬಂದಿರಲಿಲ್ಲ. ಇದೀಗ ಮಂಡ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

ಚಂದಯಿರುವುದೇ ತಪ್ಪಾಯ್ತು ಜೀವನದಲ್ಲಿ – ಸಿಕ್ಕಾಪಟ್ಟೆ ಚಂದ ಎಂದು ನಟಿಯನ್ನು ನಿಷೇಧಿಸಿದ್ರು!

ಸಾಮಾನ್ಯವಾಗಿ ಎಲ್ಲರನ್ನೂ ತಕ್ಷಣ ಸೆಳೆಯೋದು ಸೌಂದರ್ಯ. ಅದು ವಸ್ತುವಾಗಿದ್ದರೂ ಸರಿ ಮನುಷ್ಯರಾಗಿದ್ದರೂ ಸರಿ, ಸುಂದರವಾಗಿ ಯಾವುದು ಇರುತ್ತೆ ಜನ ಅತ್ತ ಮುಖ ಮಾಡುತ್ತಾರೆ. ಆದರೆ ಕಾಂಬೋಡಿಯಾದಲ್ಲಿ ನಟಿಯೊಬ್ಬಳು ಅಗತ್ಯಕ್ಕಿಂತ ಹೆಚ್ಚು ಸುಂದರವಾಗಿದ್ದಾಳೆ ಎಂದು ಆಕೆಗೆ ಅಲ್ಲಿನ ಸರ್ಕಾರ ನಿಷೇಧ ಹೇರಿದೆ.

ಸುಂದರವಾಗಿ ಕಾಣಲು ಹುಡುಗಿಯರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಸೌಂದರ್ಯ ವರ್ಧಕ, ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಆದರೆ ಕಾಂಬೋಡಿಯಾದಲ್ಲಿ ನಟಿಯೊಬ್ಬಳಿಗೆ ತನ್ನ ಅತೀಯಾದ ಸೌಂದರ್ಯವೇ ಮುಳುವಾಗಿದೆ. ಕಾಂಬೋಡಿಯನ್ ನಟಿ ಡೆನಿ ನಾನ್(26) ಈಗ ಭಾರಿ ಸುದ್ದಿಯಲ್ಲಿದ್ದಾಳೆ. ಹೌದು, ಡೆನ್ನಿ ನಾನ್‍ಗೆ ಕಾಂಬೋಡಿಯಾ ಸರ್ಕಾರ ಆಕೆ ಸಿಕ್ಕಾಪಟ್ಟೆ ಸುಂದರವಾಗಿದ್ದೀಯ ಎಂದು ಒಂದು ವರ್ಷದ ನಿಷೇಧ ವಿಧಿಸಿದೆ.

ಡೆನ್ನಿ ಫೋಟೋಗಳು ದೇಶದ ನೀತಿ ಸಂಹಿತೆಯನ್ನು ಉಲ್ಲಂಘಿಸುವಂತಿದೆ. ಅಗತ್ಯಕ್ಕಿಂತ ಹೆಚ್ಚು ಸುಂದರವಾಗಿದ್ದಾಳೆ ಎಂಬುದೇ ನಟಿಯ ನಿಷೇಧಕ್ಕೆ ಕಾರಣ ಎಂದು ಕಾಂಬೋಡಿಯನ್ ಸಂಸ್ಕೃತಿ ಮತ್ತು ಕಲೆ ಸಚಿವಾಲಯ ತಿಳಿಸಿದೆ.

ಈ ರೀತಿ ನಿಷೇಧಕ್ಕೊಳಗಾಗುವಂತಹ ಯಾವುದೇ ಕೆಲಸ ನಾನು ಮಾಡಿಲ್ಲವೆಂದು ಡೆನ್ನಿ ಹೇಳಿದ್ದಾರೆ. ಡೆನ್ನಿ ಫೇಸ್‍ಬುಕ್ ಪೇಜ್ ಹೊಂದಿದ್ದು, ಅದರಲ್ಲಿ ಆಕೆಯನ್ನು 30 ಲಕ್ಷಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ.

ಕುಂದಗೋಳ ಉಪಚುನಾವಣೆಯಲ್ಲಿ ಬಿಜೆಪಿಗೆ ಶಾಕ್

ಕುಂದಗೋಳ ಉಪ ಚುನಾವಣೆ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಇಂದು ಧಾರವಾಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಬಸವರಾಜ್ ಅರಬಗೊಂಡ ಇಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಬಸವರಾಜ್ ಅರಬಗೊಂಡ ಸದ್ಯ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾಗಿದ್ದಾರೆ.

ಕೆಲವು ದಿನಗಳ ಹಿಂದೆಯೇ ಸಚಿವ ಡಿ.ಕೆ.ಶಿವಕುಮಾರ್ ಬಹಿರಂಗ ಪ್ರಚಾರದಲ್ಲಿ ಬಿಜೆಪಿ ನಾಯಕರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಮಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಂದು ಸುಳಿವು ನೀಡಿದಂತೆ ಸ್ಥಳೀಯ ಪ್ರಭಾವಿ ಮುಖಂಡರಾಗಿರುವ ಬಸವರಾಜ್ ಅರಬಗೊಂಡರನ್ನು ಪಕ್ಷಕ್ಕೆ ಕರೆತರುವಲ್ಲಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದು, ಬಿಜೆಪಿ ಭಾರೀ ಹೊಡೆತ ಎನ್ನಲಾಗಿದೆ. ಈ ಮೊದಲೇ ಸ್ಥಳೀಯ ಬಿಜೆಪಿ ಮುಖಂಡರ ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಸುಳಿವನ್ನು ಡಿ.ಕೆ.ಶಿವಕುಮಾರ್ ನೀಡಿದ್ದರು.

ಬಿಜೆಪಿ ಕಾರ್ಯಕರ್ತರನ್ನು ತಮ್ಮತ್ತ ಸೆಳೆಯುವ ಕೆಲಸ ಡಿಕೆಶಿ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಕೈ ಹಾಕಿದರೆ ಹುಷಾರ್. ಇದರ ಪರಿಣಾಮ ನೆಟ್ಟಗಿರಲ್ಲ. ಇದು ಕನಕಪುರ, ರಾಮನಗರ ಅಲ್ಲ. ಇಲ್ಲಿ ಯಾರನ್ನು ಖರೀದಿಸಲು ಸಾಧ್ಯವಿಲ್ಲ. ಡಿಕೆ ಶಿವಕುಮಾರ್ ಅವರಿಗೆ ಕುಂದಗೋಳ ಉಪ ಚುನಾವಣೆಯ ಉಸ್ತುವಾರಿ ಕೊಟ್ಟಿದ್ದಾರೆ. ಯಾಕೆ ಕಾಂಗ್ರೆಸ್‍ನಲ್ಲಿ ಉತ್ತರ ಕರ್ನಾಟಕದಲ್ಲಿ ನಾಯಕರೇ ಇಲ್ಲವೇ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗುರುವಾರ ಎಚ್ಚರಿಕೆ ನೀಡಿದ್ದರು.

ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇಡೀ ರಾಜ್ಯದ ನಾಯಕರು ಚುನಾವಣೆ ನಡೆಸಲು ಆಗಮಿಸಿದ್ದಾರೆ. ನಮ್ಮ ಕಾರ್ಯಕರ್ತರು ಗ್ರಾಮ ಪಂಚಾಯತ್ ಮಟ್ಟದಲ್ಲಿ ತೆರಳಿ ಮಹಿತಿ ಕಲೆ ಹಾಕಿದ್ದು, ಶಿವಳ್ಳಿ ಅವರು ಯಾರಿಗೂ ಕಿರುಕುಳ ನೀಡಿಲ್ಲ. ನಮ್ಮ ಸರ್ಕಾರ ಮತ್ತು ಪಕ್ಷದ ಒಗ್ಗಟ್ಟಿನಿಂದ ಚುನಾವಣೆಯ ಕೆಲಸದಲ್ಲಿ ಭಾಗಿಯಾಗಿದೆ. ಜನ ನಮ್ಮ ಜೊತೆಗಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರು ನಮಗೆ ಆಶಿರ್ವಾದ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಯಾರಿಗೂ ಹಣದ ಆಮಿಷ ಒಡ್ಡಿಲ್ಲ. ಯಾರ ಬಳಿ ಸಾಕ್ಷ್ಯಗಳಿದ್ದರೆ, ಬೇಕಾದರೆ ಪೊಲೀಸರಿಗೆ ದೂರು ನೀಡಬಹುದು ಎಂದು ತಿಳಿಸಿದರು

ಕುಮಾರಸ್ವಾಮಿ ವಿಶ್ರಾಂತಿ ಪಡೆಯುತ್ತಿರುವ ರೆಸಾರ್ಟ್ ವಿಶೇಷತೆ ಏನು ? 1 ದಿನದ ಬಾಡಿಗೆ ಎಷ್ಟು ? ತಿಳಿದರೆ ಕಣ್ಣು ಕೆಂಪಗಾಗುತ್ತದೆ

ರಾಜ್ಯದಲ್ಲಿ ಬರಗಾಲ ಇದ್ದು, ಎಲ್ಲೆಡೆ ಜನರು ನೀರಿಗಾಗಿ ಹಾಹಕಾರ ಕೇಳಿಬರುತ್ತಿದೆ. ಆದರೆ ಸಿಎಂ ಕುಮಾರಸ್ವಾಮಿ ಮಾತ್ರ ರೆಸಾರ್ಟ್‍ನಲ್ಲಿ ಕಾಲ ಕಳೆಯಲು ಮುಂದಾಗಿದ್ದಾರೆ.

ಕಾಪು ರೆಸಾರ್ಟ್, ಟೆಂಪಲ್ ರನ್ ಬಳಿಕ ಸಿಎಂ ಮತ್ತೆ ರೆಸಾರ್ಟ್ ನತ್ತ ಮುಖ ಮಾಡಿದ್ದಾರೆ. ಮಡಿಕೇರಿ ನಗರದಿಂದ ಸ್ವಲ್ಪ ದೂರದಲ್ಲಿರುವ ಇಬ್ಬನಿ ರಾಯಲ್ ರೆಸಾರ್ಟಿನಲ್ಲಿ ಶನಿವಾರದಿಂದ 2 ದಿನ ಸಿಎಂ ಕುಮಾರಸ್ವಾಮಿ ವಿಶ್ರಾಂತಿ ಪಡೆಯಲಿದ್ದಾರೆ.

ಈ ರೆಸಾರ್ಟಿನಲ್ಲಿ ಒಂದು ದಿನಕ್ಕೆ ಕೊಠಡಿ ಬೆಲೆ 40 ಸಾವಿರ ರೂ. ಆಗಿದ್ದು, ಕುಮಾರಸ್ವಾಮಿ ಒಟ್ಟು 4 ರೂಮ್‍ಗಳನ್ನು ಬುಕ್ ಮಾಡಿದ್ದಾರೆ. 2 ದಿನದ ವಿಶ್ರಾಂತಿಗೆ ಸಿಎಂ 2 ಲಕ್ಷದ ತನಕ ಖರ್ಚು ಮಾಡಲಿದ್ದಾರೆ.

ಈ ರೆಸಾರ್ಟ್ ನ ವಿಶೇಷ ಏನೆಂದರೆ, ರೂಮ್ ಒಳಗೆ ಪ್ರೈವೇಟ್ ಬಾರ್, ಪ್ರತ್ಯೇಕ ಸ್ವಿಮ್ಮಿಂಗ್ ಫುಲ್, ಪ್ರತ್ಯೇಕ ಬಾಲ್ಕನಿ, ಜಕೂಜಿ (ಸ್ಪೆಷಲ್ ವಾಟರ್ ಮಸಾಜ್ ಟಬ್) ಜೊತೆಗೆ ಓಪನ್ ಶವರ್, ಬೇಜಾರಾದ್ರೆ ಬೋಟಿಂಗ್‍ಗೆ ಹೋಗಿ ಮೀನು ಹಿಡಿದು ತಿನ್ನಲೂಬಹುದು.

ಜನರ ಆಕ್ರೋಶ:
ರಾಜ್ಯದಲ್ಲಿ ಭೀಕರ ಬರಗಾಲ ಬಂದಾಗಲೂ ಸಿಎಂ ಟೆಂಪಲ್ ರನ್, ರೆಸಾರ್ಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಸಮಸ್ಯೆಗೆ ಸ್ಪಂದಿಸಲಾಗದಿದ್ರೆ ಸೀಟಿನಿಂದ ಕೆಳಗೆ ಇಳಿರೀ ಸ್ವಾಮಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಮತ್ತೆ ಕೆಲವರು ಸಿಎಂಗೆ ಮಗನ ಗೆಲುವು, ಕುರ್ಚಿ ಉಳಿಸಿಕೊಳ್ಳೋದು ಮುಖ್ಯ. ರೈತರ ಗೋಳಲ್ಲ ಎಂದು ತಮ್ಮ ಸಿಟ್ಟುನ್ನು ಹೊರಹಾಕಿದ್ದಾರೆ.

ಮೈತ್ರಿ ಸರ್ಕಾರ ಪತನಕ್ಕೆ ಮುಹೂರ್ತ ಫಿಕ್ಸ್ : ರಮೇಶ್ ಜಾರಕಿಹೊಳಿ ಸ್ಪಷ್ಟನೆ

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಖಚಿತ. ವಿಧಾನಸಭೆ ಉಪಚುನಾವಣೆಯಲ್ಲಿ ಮತ್ತೆ ಗೋಕಾಕ್ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‍ನ ಬಂಡಾಯ ನಾಯಕ ರಮೇಶ್ ಜಾರಕಿ ಹೊಳಿ ಪ್ರಕಟಿಸಿದ್ದಾರೆ.

ಬೆಳಗಾವಿಯ ಖಾಸಗಿ ಹೊಟೇಲ್‍ನಲ್ಲಿಂದು ಯಮಕನಮರಡಿ ಹಾಗೂ ಗೋಕಾಕ್ ಕ್ಷೇತ್ರದ ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಿದ ರಮೇಶ್ ಜಾರಕಿ ಹೊಳಿ, ಸಮ್ಮಿಶ್ರ ಸರ್ಕಾರದ ಪತನಕ್ಕೆ ಮುಹೂರ್ತ ಫಿಕ್ಸ್ ಮಾಡಿದಂತೆ ಮಾತನಾಡಿದ್ದಾರೆ.

ಕಾಂಗ್ರೆಸ್‍ನ ಅತೃಪ್ತ ನಾಯಕರನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ಮಸ್ಕಿ ಕ್ಷೇತ್ರದ ಪ್ರತಾಪ್‍ಗೌಡ ಪಾಟೀಲ್, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಜೊತೆ ಕುಮಾರಸ್ವಾಮಿ ಖುದ್ದಾಗಿ ಮಾತನಾಡಿದ್ದು, ರಮೇಶ್ ಜಾರಕಿ ಹೊಳಿ ಅವರ ಜೊತೆ ಸಂಸದ ಬಿ.ವಿ.ನಾಯಕ್ ಮೂಲಕ ಸಂಧಾನ ನಡೆಸಿದ್ದರು. ಒಂದು ಹಂತದಲ್ಲಿ ಸಂಧಾನ ಕೈಗೂಡಿದೆ ಎಂದು ಭಾವಿಸಲಾಗಿತ್ತು.

ಬೆಂಗಳೂರಿನಿಂದ ಬೆಳಗಾವಿಗೆ ತೆರಳಿ ರಮೇಶ್ ಜಾರಕಿ ಹೊಳಿ, ಲೋಕಸಭೆ ಚುನಾವಣಾ ಫಲಿತಾಂಶದವರೆಗೂ ತಾವು ರಾಜೀನಾಮೆ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದರು.

ಅದಕ್ಕೆ ಪೂರಕವೆಂಬಂತೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸತೀಶ್ ಜಾರಕಿ ಹೊಳಿ ಅವರು ಈವರೆಗೂ ರಮೇಶ್ ಜಾರಕಿ ಹೊಳಿ ಜೊತೆ ಸಂಧಾನ ಇಲ್ಲ ಎನ್ನುತ್ತಿದ್ದವರು. ನಿನ್ನೆ ಇದ್ದಕ್ಕಿದ್ದಂತೆ ರಾಗ ಬದಲಾವಣೆ ಮಾಡಿ ಹೈಕಮಾಂಡ್ ಬೇಕಾದರೆ ಸಂಧಾನ ಮಾಡಲಿ ಎಂದು ಹೇಳಿಕೆ ನೀಡಿದ್ದರು.

ಹೇಳಿಕೆ-ಪ್ರತಿಹೇಳಿಕೆಗಳ ನಡುವೆ ಇಂದು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿರುವ ರಮೇಶ್ ಜಾರಕಿ ಹೊಳಿ ತಮ್ಮಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ. ತಮ್ಮ ಜೊತೆ ನಾಲ್ವರು ಶಾಸಕರು ರಾಜೀನಾಮೆ ನೀಡುತ್ತಾರೆ. ನಾವು ಈಗಾಗಲೇ ಬಿಜೆಪಿ ಪಕ್ಷವನ್ನು ಬಲವರ್ಧನೆ ಮಾಡಲು ಕೆಲಸ ಆರಂಭಿಸಿದ್ದೇವೆ.

ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ. ಯಾರೂ ಹೆದರಿಕೊಳ್ಳುವ ಅಗತ್ಯವಿಲ್ಲ ಎಂದು ರಮೇಶ್ ಜಾರಕಿ ಹೊಳಿ ಸಭೆಯಲ್ಲಿ ಬೆಂಬಲಿಗರಿಗೆ ಆತ್ಮವಿಶ್ವಾಸ ತುಂಬುವಂತೆ ಮಾತನಾಡಿದ್ದಾರೆ.

ರಮೇಶ್ ಜಾರಕಿ ಹೊಳಿ ಸಭೆ ನಡೆಸಿದ ಹೊಟೇಲ್‍ನಲ್ಲೇ ಬಿಜೆಪಿಯ ಶಾಸಕರೂ ಆದ ಬಾಲಚಂದ್ರ ಜಾರಕಿ ಹೊಳಿ ತಂಗಿದ್ದರು. ಆದರೆ ಅಪ್ಪಿತಪ್ಪಿಯೂ ಇಬ್ಬರು ಎದುರುಬದರಾಗಿ ಮಾತನಾಡಲಿಲ್ಲ. ಬಾಲಚಂದ್ರ ಜಾರಕಿ ಹೊಳಿ ಅವರು ರಮೇಶ್ ಜಾರಕಿ ಹೊಳಿ ಪುತ್ರ ಅಮರ್‍ನಾಥ್ ಜೊತೆ ಹೊಟೇಲ್‍ನಿಂದ ಹೊರ ಹೋಗಿದ್ದು ಆಶ್ಚರ್ಯ ಮೂಡಿಸಿತು.

ಈ ಒಂದು ಷರತ್ತಿಗೆ ಒಪ್ಪಿದರೆ ಭಾರತಕ್ಕೆ ವಾಪಸ್ ಬರೋಕೆ ಝಾಕೀರ್ ನಾಯಕ್ ರೆಡಿ!

ಭಯೋತ್ಪಾದಕನೆ ಕೃತ್ಯಗಳಿಗೆ ಕುಮ್ಮಕ್ಕು ನೀಡಿ ವಿದೇಶಕ್ಕೆ ಪರಾರಿಯಾಗಿರುವ ಇಸ್ಲಾಮ್ ಧರ್ಮಪ್ರಚಾರಕ ಝಾಕೀರ್ ನಾಯಕ್, ಒಂದು ಷರತ್ತಿನ ಮೇಲೆ ಭಾರತಕ್ಕೆ ಹಿಂದಿರುಗಲು ಒಪ್ಪಿಗೆ ಸೂಚಿಸಿದ್ದಾನೆ.

ನಾನು ಆರೋಪಿ ಎಂದು ಸಾಬೀತಾಗುವವರೆಗೂ ನನ್ನನ್ನು ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಭರವಸೆ ನೀಡಿದರೆ ಮಾತ್ರ ನಾನು ಭಾರತಕ್ಕೆ ಹಿಂತಿರುಗಲು ಸಿದ್ದ ಎಂದು ಝಾಕೀರ್ ನಾಯಕ್ ಹೇಳಿಕೊಂಡಿದ್ದಾರೆ.

ಭಾರತದಿಂದ ಪಲಾಯನ ಮಾಡಿದ ಝಾಕೀರ್ ನಾಯಕ್ 2016ರಿಂದಲೂ ಮಲೇಷಿಯಾದಲ್ಲಿ ವಾಸಿಸುತ್ತಿದ್ದಾನೆ. ಮಲೇಷಿಯಾ ಸರ್ಕಾರ ಆತನಿಗೆ ಶಾಶ್ವತ ನಿವಾಸಿಯ ಸ್ಥಾನಮಾನ ನೀಡಿದೆ. ಈತ ಭಾರತದ ಪೌರತ್ವವನ್ನು ಸಹ ಪಡೆದಿದ್ದಾನೆ.

ಸಂದರ್ಶನವೊಂದರಲ್ಲಿ ಧಾರ್ಮಿಕ ಬೋಧಕ ಝಾಕೀರ್ ನಾಯಕ್ ನಾನು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಹೊಂದಿದ್ದಾನೆ ಅದು ಈಗಿರುವುದಕ್ಕಿಂತ ಮುಂಚಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿತ್ತು. ಎಂದಿದ್ದಾನೆ.

ರಾಷ್ಟ್ರೀಯ ತನಿಖಾ ಸಂಸ್ಥೆ ಬಯಸಿದ್ದಾದರೆ ಮಲೇಷಿಯಾದಲ್ಲೇ ನನ್ನನ್ನು ಪ್ರಶ್ನಿಸಬಹುದು ಎಂದು ನಾಯಕ್ ಪ್ರಶ್ನೆಯೊಂದಕ್ಕೆ ಉತ್ತರವನ್ನು ತಿಳಿಸಿದ್ದಾನೆ.

ಕಾರ್ಟೂನ್ ನೆಟ್ವರ್ಕ್ 16 ದೇಶದಲ್ಲಿ ಮೂರು ದಿನಗಳ ಕಾಲ ನಿರಂತರ ಅಡಲ್ಟ್ ವಿಡಿಯೋಗಳು ಪ್ರಸಾರ

ಕಾರ್ಟೂನ್ ನೆಟ್ವರ್ಕ್ ವೆಬ್ಸೈಟ್ ಹಲವಾರು ದೇಶಗಳಲ್ಲಿ ಏಕಕಾಲಕ್ಕೆ ಹ್ಯಾಕ್ ಆಗಿ, ಅವಾಂತರ ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ ಮಕ್ಕಳು ನೋಡುವ ಈ ಚಾನೆಲ್ ನಲ್ಲಿ ಬರೋಬ್ಬರಿ ಮೂರು ದಿನಗಳವರೆಗೆ ಪೋರ್ನ್ ವಿಡಿಯೋಗಳೇ ಪ್ರಸರವಾಗಿವೆ.

ಹೌದು ಬ್ರೆಜಿಲ್ ಮೂಲದ ಇಬ್ಬರು 16 ದೇಶಗಳಲ್ಲಿ ಕಾರ್ಟೂನ್ ನೆಟ್ವರ್ಕ್ ನ ವೆಬ್ ಸೈಟ್ ಹ್ಯಾಕ್ ಮಾಡಿದ್ದಾರೆ. ಬಳಿಕ ಕಾರ್ಟೂನ್ ಬದಲು ಅರೇಬಿಕ್ ಮೀಮ್ಸ್, ಬ್ರೆಜಿಲಿಯನ್ ಹಿಪ್ ಹಾಪ್ ಹಾಗೂ ಬ್ರೆಜಿಲಿಯನ್ ಸ್ಟ್ರಿಪರ್ಸ್ ವಿಡಿಯೋಗಳನ್ನು ಪ್ರಸಾರ ಮಾಡಿದ್ದಾರೆ. ಕರ್ಟೂನ್ ನೆಟ್ವರ್ಕ್ ನಲ್ಲಿ ಈ ಅಶ್ಲೀಲ ವಿಡಿಯೋಗಳನ್ನು ಗಮನಿಸಿದ ಪೋಷಕರು ಮಾತ್ರ ಕುಪಿತರಾಗಿದ್ದಾರೆ. ವಾರಾಂತ್ಯವಿಡೀ ಈ ಚಾನೆಲ್ ಹ್ಯಾಕ್ ಆಗಿತ್ತು. ಹೀಗಿದ್ದರೂ ಚಾನೆಲ್ ಮತ್ರ ಈ ಕುರಿತಾಗಿ ಯವುದೇ ಸ್ಪಷ್ಟೀಕರಣ ನೀಡಿಲ್ಲ.

ವರದಿಗಳನ್ವಯ ಇಬ್ಬರು ಹ್ಯಾಕರ್ಸ್ ಆಫ್ರಿಕಾ, ಅಮೆರಿಕಾ, ಅರಬ್, ಬ್ರೆಜಿಲ್, ಚೆಕ್ ರಿಪಬ್ಲಿಕ್, ಡೆನ್ಮರ್ಕ್, ಜರ್ಮನಿ, ಹಂಗ್ರಿ, ಇಟಲಿ, ಮೆಕ್ಸಿಕೋ, ನೆದರ್ಲ್ಯಾಂಡ್, ಪೋಲ್ಯಾಂಡ್, ರೊಮಾನಿಯಾ, ರಷ್ಯಾ ಹಾಗೂ ಟರ್ಕಿಯಲ್ಲಿ ಕಾರ್ಟೂನ್ ನೆಟ್ವರ್ಕ್ ಹ್ಯಾಕ್ ಮಾಡಿದ್ದು, ಏಪ್ರಿಲ್ 25ರಂದು ಈ ವಿಚಾರ ಬಯಲಾಗಿದೆ. ಇದಾದ ಬಳಿಕ ಕಾರ್ಟೂನ್ ನೆಟ್ವರ್ಕ್ ತನ್ನ ವೆಬ್ಸೈಟ್ ಸ್ಥಗಿತಗೊಳಿಸಿ, ನೂತನ ವರ್ಶನ್ ಅಪ್ಲೋಡ್ ಮಾಡಿದೆ. ಬೇಸತ್ತ ಜನರು ಟ್ವಿಟರ್ ನಲ್ಲಿ ಸ್ಕ್ರೀನ್ ಶಾಟ್ ಶೇರ್ ಮಾಡಿ ಈ ವಿಚಾರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://twitter.com/EthanNunn/status/1122329452950769669?s=19

 

ಬಿಎಸ್‌ವೈ ಹೊಸ ಲೆಕ್ಕಾಚಾರ ! ಏನಿದು..?

ಸೋಲಿನ ಭಯದಿಂದ ಕುಮಾರಸ್ವಾಮಿ, ದೇವೇಗೌಡ ಕಂಗಾಲಾಗಿದ್ದಾರೆ. ಉಪಚುನಾವಣೆ ಫಲಿತಾಂಶದ ನಂತರ ಬಿಜೆಪಿ ಸಂಖ್ಯಾಬಲ 106 ಆಗಲಿದೆ. ಮೂರು ಜನ ಪಕ್ಷೇತರರು ಬಿಜೆಪಿ ಬೆಂಬಲಿಸ್ತಾರೆ. 20 ಕ್ಕೂ ಹೆಚ್ಚು ಶಾಸಕರು ಅತೃಪ್ತಿ ಹೊಂದಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಹಾಗಾದರೆ ಬಿಎಸ್ ಯಡಿಯೂರಪ್ಲ ಈ ಮಾತು ಹೇಳಿರುವುದರ ಹಿಂದಿನ ಅರ್ಥ ಏನು? ಸಹಜವಾಗಿಯೇ ಕುತೂಹಲ ಮೂಡಿಸುವ ಪ್ರಶ್ನೆ. ಕಾಂಗ್ರೆಸ್ ನಲ್ಲಿ ಅಲ್ಲಿಲ್ಲಿ ಅಸಮಾಧಾನದ ಮಾತುಗಳು ಕೇಳಿ ಬರುತ್ತಿವೆ.

224  ಕ್ಷೇತ್ರಗಳ ಪೈಕಿ ಸದ್ಯ 104 ಸ್ಥಾನಗಳು ಬಿಜೆಪಿ ಬಳಿ ಇವೆ. ಇಬ್ಬರು ಪಕ್ಷೇತರರಿದ್ದಾರೆ. 38 ಸ್ಥಾನ ಹೊಂದಿರುವ ಜೆಡಿಎಸ್ ಮತ್ತು 78 ಸ್ಥಾನ ಗಳಿಸಿದ್ದ ಕಾಂಗ್ರೆಸ್ ದೋಸ್ತಿಯಾಗಿ ಸರಕಾರ ನಿಭಾಯಿಸುತ್ತಿವೆ.  ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಇದೆಲ್ಲವನ್ನು ಗಮನದಲ್ಲಿ  ಇಟ್ಟುಕೊಂಡು ಮಾಜಿ ಸಿಎಂ ಇಂಥ ಹೇಳಿಕೆ ನೀಡಿದ್ದಾರೆ.

ಮೈತ್ರಿ ಸರ್ಕಾರಕ್ಕೆ ಶಾಕ್ : 20 ಶಾಸಕರ ಬಿಜೆಪಿಗೆ ಹೆಚ್ಚದೆ ಸಂಖ್ಯಾಬಲ!

ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು,  ಭ್ರಷ್ಟಾಚಾರದ ಹಣದಿಂದ ಗೆಲುವು ಪಡೆಯುವುದು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೈತ್ರಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಡಿ.ಕೆ.ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಅವರು ಬೇಜವಾಬ್ದಾರಿ ಹೇಳಿಕೆ ನೀಡುವುದು ನಿಲ್ಲಿಸಬೇಕು ಎಂದರು. ಅಲ್ಲದೇ ಮೈತ್ರಿ ಸರ್ಕಾರದಲ್ಲಿ ಈಗಾಗಲೇ ಆಂತರಿಕ ಕಚ್ಚಾಟ ಆರಂಭವಾಗಿದ್ದು, ಮತ್ತೆ ಅಪ್ಪ ಮಗ ರೆಸಾರ್ಟ್ ಸೇರಿದ್ದಾರೆ. ಸೋಲಿನ ಭಯದಿಂದ ದೇವೇಗೌಡ, ಕುಮಾರಸ್ವಾಮಿ ಕಂಗಾಲಾಗಿದ್ದಾರೆ ಎಂದರು.

ಇನ್ನು ರಾಜ್ಯದಲ್ಲಿ ಉಪ ಚುನಾವಣೆ ಬಳಿಕ ಬಿಜೆಪಿ ಸಂಖ್ಯಾಬಲ 106 ಆಗಲಿದೆ. ಮೂವರು ಪಕ್ಷೇತರರು ಬೆಂಬಲ ನೀಡುತ್ತಾರೆ. ಈಗಾಗಲೇ ರಾಜ್ಯದ ಮೈತ್ರಿ ಪಕ್ಷಗಳ 20ಕ್ಕೂ ಹೆಚ್ಚು ಶಾಸಕರು ಅತೃಪ್ತಿ ಹೊಂದಿದ್ದಾರೆ.  ಇದರಿಂದ ಬಿಜೆಪಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರುವ ವಾತಾವರಣ ನಿರ್ಮಾಣವಾಗುತ್ತಿದೆ.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಯಡಿಯೂರಪ್ಪ ಭರವಸೆ ಮಾತನಾಡಿದರು.

‘ತಮ್ಮ ಜೀವನದ ಮಾಡಿದ ಅತೀ ದೊಡ್ಡ ತಪ್ಪಿದು’: ಪ್ರಕಾಶ್ ಬೆಳವಾಡಿ

ಎಷ್ಟೇ ದೊಡ್ಡ ವ್ಯಕ್ತಿ ಆದ್ರೂ ಜೀವನದಲ್ಲಿ ತಪ್ಪು ಮಾಡುವುದು ಸಹಜ. ಅದನ್ನು ಒಪ್ಪಿಕೊಂಡು ಸರಿ ಮಾಡಿಕೊಳ್ಳುವುದು ದೊಡ್ಡ ಗುಣ. ಅಂತಹ ಕೆಲವೊಂದು ತಪ್ಪುಗಳ ಬಗ್ಗೆ ಪ್ರಕಾಶ್ ಬೆಳವಾಡಿ ’ವೀಕೆಂಡ್ ವಿತ್ ರಮೇಶ್’ ನಲ್ಲಿ ಹಂಚಿಕೊಂಡಿದ್ದಾರೆ.

ನಟ ಹಾಗೂ ರಂಗಕರ್ಮಿ ಪ್ರಕಾಶ್ ಬೆಳವಾಡಿ ತಮ್ಮ ನೇರ ಗುಣದಿಂದ ಫೇಮಸ್ ಆದವರು. ವೀಕೆಂಡ್ ಕಾರ್ಯಕ್ರಮದ ಕೊನೆಯಲ್ಲಿ ರಮೇಶ್ ಆಗಮಿಸಿರುವ ಅತಿಥಿಗಳ ಬಳಿ ಒಂದು ಪ್ರಶ್ನೆ ಹೇಳುತ್ತಾರೆ ‘ನೀವು ಯಾರಿಗಾದರೂ ಸಾರಿ, ಥ್ಯಾಂಕ್ಸ್ ಹೇಳುವುದಾದರೆ ಹೇಳಬಹುದು ’ ಎಂದು. ಅದಕ್ಕೆ ಪ್ರಕಾಶ್ ಬೆಳವಾಡಿ ಕೊಟ್ಟ ಉತ್ತರವಿದು.

‘ನಾನು ಮಾಡಿದ ದೊಡ್ಡ ತಪ್ಪು ಅಂದ್ರೆ ಸಾಲ. ಇದರಿಂದ ಸಾಲಗಾರರು ಮನೆ ಬಾಗಿಲಿಗೆ ಬಂದು ನಿಲ್ಲುವಂತಾಗುತ್ತದೆ. ಅದಕ್ಕೆ ನನ್ನ ಕುಟುಂಬದವರನ್ನು ಕ್ಷಮೆ ಕೇಳುತ್ತೇನೆ. ಇದರಿಂದ ಅವರಿಗೂ ಕೂಡ ಬಹಳ ಅವಮಾನ ಆಗಿದೆ. ಎಷ್ಟೋ ಜನರಿಗೆ ಇನ್ನೂ ಹಣ ನೀಡಿಲ್ಲ. ಆದರೆ ಆದಷ್ಟು ಬೇಗ ಕೊಡುತ್ತೇನೆ’ ಎಂದು ಹೇಳಿದರು.