ಚುನಾವಣಾ ಫಲಿತಾಂಶ ಮೋದಿ ಪರವಾಗಿದ್ದರೆ ಮುಂದೈದು ವರ್ಷ ಹೇಗಿರುತ್ತೆ ಗೊತ್ತಾ..? ಭಾರತ

ಚುನಾವಣೆಯ ಫಲಿತಾಂಶ ದೇಶದ ಮುಂದಿನ ಐದು ವರ್ಷದ ದಿಕ್ಸೂಚಿಯಾಗಲಿದೆ. 2014ರಲ್ಲಿ ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಕೈಗೆ ತೆಗೆದುಕೊಂಡ ನಂತರ ಕಾಲಿಗೆ ಚಕ್ರ ಸುತ್ತಿಕೊಂಡವರಂತೆ ಜಗತ್ತನ್ನ ಸುತ್ತ ತೊಡಗಿದರು. ಅದರ ಫಲಿತಾಂಶ 2014 ರಲ್ಲಿ 25 ಬಿಲಿಯನ್ ಅಮೆರಿಕನ್ ಡಾಲರ್ ಇದ್ದ ವಿದೇಶಿ ಹೂಡಿಕೆ ಇಂದಿಗೆ 193 ಬಿಲಿಯನ್ ಮುಟ್ಟಿದೆ.

ಕಳೆದ ಒಂದು ತಿಂಗಳಿಂದ ವಿದೇಶಿ ಹೂಡಿಕೆಯಲ್ಲಿ ಇಳಿಕೆಯಾಗಿದೆ. ಅದಕ್ಕೆ ಕಾರಣ ಚುನಾವಣೆ. ಹೂಡಿಕೆದಾರರು ಕಾ ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ವಾಲ್ಮಾರ್ಟ್ ಕೋಟ್ಯಂತರ ಹಣವನ್ನ ಭಾರತದಲ್ಲಿ ಹೂಡಿಕೆ ಮಾಡಿದೆ. ತನ್ನ ಭಾರತೀಯ ಎದುರಾಳಿ ಫ್ಲಿಪ್ಕಾರ್ಟ್ ಅನ್ನು 16 ಬಿಲಿಯನ್ ಡಾಲರ್ ತೆತ್ತು ಕೊಂಡದ್ದು ಗೊತ್ತಿರುವ ವಿಷಯ. ಇದರ ಜೊತೆಗೆ ಅಮೆಜಾನ್, ಇಕೆಯ, ಮುಂತಾದ ಕಂಪನಿಗಳು ಭಾರತದಲ್ಲಿ ಹೂಡಿಕೆಯನ್ನ ಮಾಡಿದವು.

ನರೇಂದ್ರ ಮೋದಿಯವರ ಮೊದಲ ಎರಡು ವರ್ಷದ ವಿದೇಶಿ ಹೂಡಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷ ಅಂದರೆ 2019ರಲ್ಲಿ ಇದು 30 ಪ್ರತಿಶತ ಇಳಿಕೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚಿಗೆ ಈ -ಕಾಮರ್ಸ್ ವಲಯಕ್ಕೆ ಕೇಂದ್ರ ಸರಕಾರ ಹಾಕಿರುವ ಒಂದೆರಡು ನಿಬಂಧನೆಗಳು ಮತ್ತು ಚುನಾವಣೆ. ಮೇ 23 ರಂದು ಚುನಾವಣೆಯ ಫಲಿತಾಂಶಕ್ಕೆ ಕೇವಲ ಭಾರತೀಯರು ಮಾತ್ರ ಕಾದು ಕುಳಿತಿಲ್ಲ , ಜಗತ್ತು ಇಂದು ಭಾರತದತ್ತ ನೋಡುತ್ತಿದೆ.

ಚುನಾವಣೆಯ ಫಲಿತಾಂಶ ಮೋದಿಯವರ ಪರವಾಗಿದ್ದರೆ ಯಾವ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆಯಾಗಬಹದು ಎನ್ನುವುದನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಇದು ಅತ್ಯಂತ ಸಹಾಯಕಾರಿ ಏಕೆಂದರೆ ಮುಂದಿನ ದಿನಗಳಲ್ಲಿ ಹೂಡಿಕೆಗೆ ಯಾವ ಕ್ಷೇತ್ರ ಉತ್ತಮ ಎನ್ನುವುದರ ಅರಿವಾಗುತ್ತದೆ. ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ನಮ್ಮ ಸಮಾಜದಲ್ಲಿ ಆಗುವ ಬದಲಾವಣೆಗಳಿಗೆ ನಾವು ಇಂದೇ ಮಾನಸಿಕವಾಗಿ ಸಜ್ಜಾಗಬಹದು.

ಕೃಷಿ ಕ್ಷೇತ್ರ:  ಮೋದಿಯವರ ಸರಕಾರದ ಮೇಲೆ ಇರುವ ಅತಿ ದೊಡ್ಡ ನಿಂದನೆಯೆಂದರೆ ಅವರು ಕೃಷಿ ಕ್ಷೇತ್ರವನ್ನ ಕಡೆಗಣಿಸಿದ್ದಾರೆ ಎನ್ನುವುದು. ಆದರೆ ಈ ಮಾತು ನಿಜವಲ್ಲ. ರೈತರ ಹಿತವನ್ನ ಕಾಪಾಡಲು ಹಲವಾರು ಯೋಜಗಳು ಕಾರ್ಯ ನಿರ್ವಹಿಸುತ್ತಿವೆ. ಇರಲಿ. ಮುಂಬರುವ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆಯನ್ನ ನೀಡಲಾಗುತ್ತದೆ. ಹೇಳಿ-ಕೇಳಿ ಇಂದಿಗೂ ಭಾರತ ಕೃಷಿಕರ ರಾಷ್ಟ್ರ. ಹೀಗಾಗಿ ಕೃಷಿ ಭೂಮಿಯ ಮೇಲಿನ ಹೂಡಿಕೆ ಉತ್ತಮ.

ಮಾನವ ಸಂಪನ್ಮೂಲ: ಗಮನಿಸಿ ಮೋದಿಯವರ ಸರಕಾರದ ಮೇಲಿನ ಇನ್ನೊಂದು ನಿಂದನೆ ಹೆಚ್ಚಿನ ಕೆಲಸದ ಸೃಷ್ಟಿ ಆಗಿಲ್ಲ ಎನ್ನುವುದು. ಹೀಗಾಗಿ ಈ ಕ್ಷೇತ್ರಕ್ಕೆ ಕೂಡ ಹೆಚ್ಚಿನ ಮಹತ್ವ ಮುಂದಿನ ದಿನಗಳಲ್ಲಿ ಬರಲಿದೆ. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ನಮ್ಮ ಬಡ್ಡಿಯ ದರ 4 ಪ್ರತಿಶತಕ್ಕೆ ಇಳಿಯಲಿದೆ.

ಈ ಕಾರಣ ಸಮಾಜದಲ್ಲಿ ಹೆಚ್ಚಿನ ಹಣದ ಹರಿವು ಇರುತ್ತದೆ. ಸುಲಭವಾಗಿ ಜನರಿಗೆ ಮಾಡಬೇಕಾದ ಕಾರ್ಯಕ್ಕೆ ಹಣ ಸಿಗಲಿದೆ. ಕೌಶಲ್ಯ ವೃದ್ಧಿಸಿಕೊಂಡು ತಮ್ಮದೇ ಆದ ಒಂದು ಸಣ್ಣ ಸಂಸ್ಥೆಯನ್ನ ತೆಗೆದು ಕಾರ್ಯ ನಿರ್ವಹಿಸುವ ಇಚ್ಛೆಯುಳ್ಳ ಯುವ ಜನತೆಗೆ ಬಹಳವೇ ಒಳ್ಳೆಯ ದಿನಗಳು ಕಾದಿವೆ. ಸ್ಕಿಲ್ ಡೆವಲಪ್ಮೆಂಟ್, ಟ್ರೈನಿಂಗ್ ಇಂತಹ ಕಾರ್ಯ ಕ್ಷೇತ್ರಗಳಲ್ಲಿ ಕೂಡ ಹೂಡಿಕೆ ಮಾಡಬಹದು.

ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಮುಂದಿನ ಐದು ವರ್ಷ ಅತ್ಯಂತ ಮುಖ್ಯವಾಗಲಿದೆ. ಅಂತಾರಾಷ್ಟ್ರೀಯ ಮಟ್ಟದ ಮೂಲಭೂತ ಸೌಕರ್ಯಗಳನ್ನ ಕಲ್ಪಿಸಲು ಸರಕಾರ ಸಕಲ ಪ್ರಯತ್ನ ಮಾಡುತ್ತದೆ. ಈ ನಿಟ್ಟಿನಲ್ಲಿ ಕಾರ್ಯ ಸೂಚಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳು ಇರುವುದು ತಿಳಿದ ವಿಷಯ. ಇವು ಅತ್ಯಂತ ವೇಗ ಪಡೆದುಕೊಂಡು ಕಾರ್ಯ ಸಾಧನೆಯತ್ತ ಹೆಜ್ಜೆ ಹಾಕಲಿವೆ. ಗುಜರಾತ್ ನಲ್ಲಿ ಗಿಫ್ಟ್ ಸಿಟಿ ಆಗಲೇ ಪೂರ್ಣ ಪ್ರಮಾಣದ ಸ್ಮಾರ್ಟ್ ಸಿಟಿ ಎನ್ನುವ ಹೆಗ್ಗಳಿಕೆ ಪಡೆದಿದೆ. ಹೀಗಾಗಿ ಈ ಕಾರ್ಯ ಕ್ಷೇತ್ರದಲ್ಲಿ ಕೂಡ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳಲಿವೆ.

ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿ ಹೆಚ್ಚು ಹೆಚ್ಚಿನ ಕ್ರೋಡೀಕರಣ ನೋಡಬಹದು.2024 ರ ವೇಳೆಗೆ ಬಲಿಷ್ಠ ನಾಲ್ಕೈದು ಬ್ಯಾಂಕ್ ಮಾತ್ರ ಉಳಿದುಕೊಳ್ಳಲಿವೆ. ಅಂದರೆ ಬ್ಯಾಂಕ್ಗಳ ವಿಲೀನವಾಗುತ್ತದೆ. ಬ್ಯಾಂಕ್ ನಲ್ಲಿ ಬಡ್ಡಿ ದರ ಕುಸಿಯಲಿದೆ. ಮುಂದುವರಿದ ದೇಶಗಳಲ್ಲಿ ಇರುವ ಮಟ್ಟಿಗಲ್ಲದಿದ್ದರೂ ನಮ್ಮ ಬಡ್ಡಿ ದರ 3 ಅಥವಾ 4 ಪ್ರತಿಶತಕ್ಕೆ ಖಂಡಿತ ಹೋಗಲಿದೆ. ಹೀಗಾದಾಗ ಏನಾಗುತ್ತದೆ ಗಮನಿಸಿ.

ಬ್ಯಾಂಕ್ನಲ್ಲಿ ಹಣವನ್ನ ತೊಡಗಿಸಿ ಸುಮ್ಮನೆ ಕೂತ ಜನ ತಮ್ಮ ಹಣಕ್ಕೆ ಬರುವ ಆದಾಯ ಕಡಿಮೆಯಾದಾಗ ಆ ಹಣವನ್ನ ಬೇರೆಡೆ ತೊಡಗಿಸಿ ಹೆಚ್ಚು ಹಣವನ್ನ ಗಳಿಸುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಕೆಲಸದ ಸೃಷಿಯಾಗುತ್ತದೆ. ಜೊತೆಗೆ ಬ್ಯಾಂಕ್ ಕೂಡ ಕಡಿಮೆ ಬಡ್ಡಿಯಲ್ಲಿ ಸಾಲವನ್ನ ಜನರಿಗೆ ಕೊಡುವುದರಿಂದ ಹಣದ ಹರಿವು , ವಹಿವಾಟು ಸಮಾಜದಲ್ಲಿ ಹೆಚ್ಚಾಗುತ್ತದೆ. ಇದು ಒಟ್ಟು ಜಿಡಿಪಿ ಹೆಚ್ಚಾಗಲು ಸಹಾಯ ಮಾಡುತ್ತದೆ. ಉತ್ತಮ ಐಡಿಯಾ ಹೊಂದಿರುವ ಆದರೆ ಹಣದ ಕೊರತೆ ಇರುವ ಯುಜನತೆಗೆ ಮುಂಬರುವ ವರ್ಷಗಳು ಆಶಾದಾಯಕವಾಗಿರಲಿದೆ.

ಮೇಲೆ ಹೇಳಿದ ನಾಲ್ಕು ಕ್ಷೇತ್ರಗಳಲ್ಲಿ ಜನ ಸಾಮಾನ್ಯ ಕೂಡ ಗುರುತಿಸಬಹದುದಾದ ರೀತಿಯ ಬದಲಾವಣೆ ಕಾಣಲಿದೆ. ಉಳಿದಂತೆ ಬೇರೆ ಕ್ಷೇತ್ರಗಳು ಕೂಡ ಬದಲಾಗಲಿವೆ.

ಅವುಗಳಲ್ಲಿ ಪ್ರಮುಖವಾಗಿ:
ವಿದೇಶಿ ಹೂಡಿಕೆಗೆ ಅಲ್ಪ ಮಟ್ಟದ ಕಡಿವಾಣ ಹಾಕಬಹದು. ಮೋದಿಯವರು ಎರಡನೇ ಬಾರಿ ಆರಿಸಿ ಬಂದರೆ ತಮ್ಮ ಪ್ರಥಮ ಅವಧಿಯಲ್ಲಿ ವಿದೇಶಿ ಹೂಡಿಕೆಗೆ ನೀಡಿದ ಉತ್ತೇಜನ, ಪ್ರಾಶಸ್ತ್ಯ ನೀಡುವುದಿಲ್ಲ ಎನ್ನುವ ಮಾತು ಆಗಲೇ ಹಣಕಾಸು ವಲಯದಲ್ಲಿ ಗಿರಕಿ ಹೊಡೆಯುತ್ತಿದೆ. ಚೀನಾ ದೇಶ ಜಗತ್ತಿಗೆ ತನ್ನ ಉತ್ಪನ್ನಗಳನ್ನ ಮಾರುತ್ತ ಬಂದಿದೆ. ಜೊತೆ ಜೊತೆಗೆ ತನ್ನ ಡೊಮೆಸ್ಟಿಕ್ ಬಳಕೆಯನ್ನ ಕೂಡ ಬಹಳ ಹೆಚ್ಚು ಮಾಡಿಕೊಂಡಿದೆ. ಅಂದರೆ ಒಂದು ಹಂತದಲ್ಲಿ ಎಕ್ಸ್ಪೋರ್ಟ್ ಕುಸಿದರೂ ಅದು ತನ್ನ ದೇಸಿ ಬೇಡಿಕೆಯ ಫಲವಾಗಿ ದೇಶವನ್ನ ಕುಸಿತದಿಂದ ತಪ್ಪಿಸುತ್ತದೆ. ಚೀನಾ ಮಾದರಿಯ ದೇಸಿ ಮಾರುಕಟ್ಟೆಯನ್ನ ಬಲ ಪಡಿಸುವ ಪ್ರಕ್ರಿಯೆಗೆ ಮೋದಿಯವರು ಮುಂದಾಗುತ್ತಾರೆ. ಮೇಕ್ ಇನ್ ಇಂಡಿಯಾ ಇನ್ನಷ್ಟು ಬಲ ಪಡೆದುಕೊಳ್ಳಲಿದೆ. ನುರಿತ ಕುಶಕರ್ಮಿಗಳು ಹೆಚ್ಚೆಚ್ಚು ಅವಕಾಶ ಪಡೆಯಲಿದ್ದಾರೆ.

ದೇಸಿ ವಿನಿಮಯ ಮಾಧ್ಯಮಗಳಾದ ರುಪೆ, ಭಾರತ್ ಫೆ ಇತ್ಯಾದಿಗಳು ಅಂತಾರಾಷ್ಟ್ರೀಯ ಮಾಧ್ಯಮಗಳಾದ ವೀಸಾ, ಮಾಸ್ಟರ್ ಕಾರ್ಡ್, ಪೆಟಿಎಂ ಗಳಿಗೆ ಸೆಡ್ಡು ಹೊಡೆದು ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸಲಿವೆ.

ಅಮೇರಿಕಾ ಮತ್ತು ಚೀನಾ ದೇಶಗಳ ನಡುವಿನ ಇನ್ನು ನಿಲ್ಲದ ಟ್ರೇಡ್ ವಾರ್ ನಿಂದ ಲಾಭ ಆಗುತ್ತಿರುವುದು ಭಾರತಕ್ಕೆ, ಅಮೆರಿಕಾ ಭಾರತದ ಪದಾರ್ಥಗಳ ಮೇಲೆ ಸುಂಕ ಹೆಚ್ಚಿಸಿ ಭಾರತದೊಂದಿಗೆ ಕೂಡ ಟ್ರೇಡ್ ವಾರ್ಗೆ ಇಳಿದಿತ್ತು. ಭಾರತ ಅದಕ್ಕೆ ವಿರುದ್ಧವಾಗಿ ಅನೇಕ ಅಮೆರಿಕಾ ಪದಾರ್ಥಗಳ ಮೇಲೆ ಸುಂಕ ಹೆಚ್ಚಿಸಿ ತಾನೇನು ಕಡಿಮೆಯಿಲ್ಲ ಎನ್ನುವ ಸಂದೇಶವನ್ನ ರವಾನಿಸಿತ್ತು. ಮುಂಬರುವ ದಿನಗಳಲ್ಲಿ ಟ್ರೇಡ್ ವಾರ್ ನಲ್ಲಿ ಭಾರತ ಹಿಂದೆ ಬೀಳದೆ ಗಟ್ಟಿಯಾಗಿ ನಿಂತು ಎದುರಿಸುವ ಸಾಧ್ಯತೆ ಹೆಚ್ಚಾಗಲಿದೆ.

ಬ್ರೆಕ್ಸಿಟ್ ಯೂರೋಪಿನ ಮಟ್ಟಿಗೆ, ಬ್ರಿಟನ್ ಮಟ್ಟಿಗೆ ಕೆಟ್ಟ ಸುದ್ದಿ ಆದರೆ ಭಾರತೀಯ ಹೂಡಿಕೆದಾರರಿಗೆ ಮತ್ತು ಭಾರತಕ್ಕೆ ಇದು ಶುಭ ಸುದ್ದಿಯಾಗಲಿದೆ. ಭಾರತ ಕಾಮನ್ ವೆಲ್ತ್ ದೇಶವಾಗಿರುವದರಿಂದ ಬ್ರಿಟನ್ ಸಹಜವಾಗೇ ಹೆಚ್ಚಿನ ವ್ಯವಹಾರವನ್ನ ಭಾರತದೊಂದಿಗೆ ಮಾಡಲು ಬಯಸುತ್ತದೆ. ವೈದ್ಯಕೀಯ ಮತ್ತು ಔಷಧ ಸಂಬಂಧಪಟ್ಟ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿವೆ. ನಮ್ಮ ಷೇರು ಮಾರುಕಟ್ಟೆ ಪ್ರಥಮ 2/3 ಮೂರು ವರ್ಷ ನಾಗಾಲೋಟ ಪಡೆಯಲಿದೆ.

ಡಿಜಿಟಲ್ ಇಂಡಿಯಾ: ಡಿಜಿಟಲ್ ಇಂಡಿಯಾ ಎನ್ನುವ ಈ ಪರಿಕಲ್ಪನೆಯಿಂದ ಸಮಾಜದಲ್ಲಿ ಕಪ್ಪು ಹಣದ ಓಟ ನಿಧಾನವಾಗುತ್ತದೆ. ಹಲವು ಹತ್ತು ಕ್ಷೇತ್ರದಲ್ಲಿ ನೆಡೆಯುವ ಕೆಲಸಗಳು ವೇಗವನ್ನ ಪಡೆದುಕೊಳ್ಳುತ್ತದೆ . ಒಟ್ಟಾರೆಯಾಗಿ ಸಮಾಜದ ಜನರ ಜೀವನ ಮಟ್ಟವನ್ನ ಸುಧಾರಿಸುತ್ತದೆ . ಗ್ಯಾಸ್ ಸಬ್ಸಿಡಿ ಇರಬಹದು , ಪಿಂಚಣಿಯಿರಬಹದು, ಆರೋಗ್ಯ ವಿಮೆಯ ಸೌಲಭ್ಯವಿರಬಹದು ಇವುಗಳಲ್ಲಿ ಆಗುತ್ತಿದ್ದ ವಿಳಂಬ ಮತ್ತು ಹಣಕಾಸು ಏರುಪೇರುಗಳು ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಡಿಜಿಟಲ್ ಇಂಡಿಯಾ ಎನ್ನುವ ಈ ಯೋಜನೆಯ ಮೂಲೋದ್ದೇಶಕ್ಕೆ ಚ್ಯುತಿ ಬರದಂತೆ ನೆಡೆಸಿಕೊಂಡು ಹೋದರೆ ಮುಂಬರುವ ದಿನಗಳಲ್ಲಿ ಜಗತ್ತಿನ ಇತರ ದೇಶಗಳಿಗೆ ಭಾರತ ಮಾದರಿ ದೇಶವಾಗಿ ನಿಲ್ಲಬಹದು. ಅನಿವಾಸಿ ಭಾರತೀಯರು ಭಾರತದ ಬೆಳವಣಿಗೆಯಲ್ಲಿ , ಯಶೋಗಾಥೆಯಲ್ಲಿ ಹೆಚ್ಚು ಭಾಗಿಯಾಗಲು ಪ್ರೇರೇಪಿಸಬಹದು.

ಕೊನೆಮಾತು : ಮೋದಿಯವರು ಎರಡನೇ ಅವಧಿಗೆ ಆರಿಸಿ ಬಂದರೆ ಬಹಳಷ್ಟು ಕೆಲಸ ಕಾರ್ಯಗಳು ವೇಗವನ್ನ ಪಡೆದುಕೊಳ್ಳುತ್ತವೆ . ಭಾರತದ ಅಭಿವೃದ್ಧಿಯ ವೇಗ ಕೂಡ ಹೆಚ್ಚಾಗುತ್ತದೆ . ಆಗಲೇ ಜಗತ್ತಿನಲ್ಲಿ ತನ್ನ ಛಾಪು ಮೂಡಿಸುತ್ತಿರುವ ಭಾರತದ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೊಂದು ಹಂತವನ್ನ ತಲುಪಲಿದೆ. ಭಾರತೀಯತೆ , ರಾಷ್ಟ್ರೀಯತೆ ಇನ್ನಷ್ಟು ಹೆಚ್ಚಿನ ಮಹತ್ವವನ್ನ ಪಡೆದುಕೊಳ್ಳುತ್ತದೆ. ಹಾಗೊಮ್ಮೆ ಭಾರತದಲ್ಲಿ ಮೋದಿಯವರದ್ದಲ್ಲದೇ ಬೇರೆ ಸರಕಾರ ಬಂದರೂ ಭಾರತದ ಬಂಡಿ ನಿಲ್ಲುವುದಿಲ್ಲ. ಏಕೆಂದರೆ ಹೇಳಿಕೇಳಿ ನಮ್ಮದು 130 ಕೋಟಿ ಜನರಿರುವ ಮಾರುಕಟ್ಟೆ ಇದರ ಮೇಲೆ ಅಧಿಪತ್ಯ ಸಾಧಿಸಲು ಹಲವು ಶಕ್ತಿಗಳು ಹೊಡೆದಾಡುತ್ತವೆ. ಆರ್ಥಿಕವಾಗಿ ಭಾರತದ ಬಂಡಿ ಹೊಡೆಯಲು ಹಲವಾರು ಶಕ್ತಿ ಕೇಂದ್ರಗಳು ಜನಿಸುತ್ತವೆ. ವ್ಯವಸ್ಥಿವಾದ ಬೆಳವಣಿಗೆ ಕಡಿಮೆಯಾಗಿ ಹಿಂದಿನಂತೆ ಶಕ್ತಿ ಕೇಂದ್ರಗಳ ಸುತ್ತಮುತ್ತಲ ಬೆಳವಣಿಗೆ ಹೆಚ್ಚಾಗುತ್ತದೆ .

ಐಪಿಎಲ್ ಇತಿಹಾಸದಲ್ಲೇ ವಿಚಿತ್ರ ರನೌಟ್, ವಿಡಿಯೋ ವೈರಲ್!

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿಚಿತ್ರ ರನೌಟ್ ಗಳ ಪಟ್ಟಿ ದೊಡ್ಡದಿದೆ. ಆದರೆ ಐಪಿಎಲ್ ನಲ್ಲಿ ಇತಿಹಾಸದಲ್ಲೇ ಇಂತಹ ವಿಚಿತ್ರ ರನೌಟ್ ಅನ್ನು ನೀವು ನೋಡಿರಲಿಕ್ಕಿಲ್ಲ. ಹೌದು ವಿಕೆಟ್ ಗೆ ಚೆಂಡು ಬಡಿಯದಿದ್ದರೂ ಬ್ಯಾಟ್ಸ್ ಮನ್ ರನೌಟ್ ಆಗಿರುವ ವಿಚಿತ್ರ ಘಟನೆ ನಡೆದಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಅಮಿತ್ ಮಿಶ್ರಾ ವಿಚಿತ್ರವಾಗಿ ರನೌಟ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಹೈದರಾಬಾದ್ ವಿರುದ್ಧ ಗೆಲ್ಲಲು ಡೆಲ್ಲಿ ತಂಡಕ್ಕೆ ಕೊನೆಯ ಓವರ್ ನಲ್ಲಿ 5 ರನ್ ಬೇಕಿತ್ತು. ಈ ವೇಳೆ ಖಲೀಲ್ ಅಹ್ಮದ್ ಬೌಲಿಂಗ್ ಮಾಡಿದ್ದು 20ನೇ ಓವರ್ ನ 4ನೇ ಎಸೆತದಲ್ಲಿ ಅಮಿತ್ ಮಿಶ್ರಾ ಸ್ಫೋಟಕ ಹೊಡೆತಕ್ಕೆ ಮುಂದಾದರೂ ಆದರೆ ಚೆಂಡು ಕೀಪರ್ ಕೈಸೇರಿದ್ದರಿಂದ ಸಿಂಗಲ್ ತೆಗೆದುಕೊಳ್ಳಲು ಮುಂದಾದರು. ಈ ವೇಳೆ ಕೀಪರ್ ವಿಕೆಟ್ ಗೆ ಚೆಂಡನ್ನು ಎಸೆದರು ಅದು ಮಿಸ್ ಆಗಿ ಬೌಲರ್ ಖಲೀಲ್ ಗೆ ಸಿಕ್ಕಿತ್ತು. ಕೂಡಲೇ ಖಲೀಲ್ ಚೆಂಡನ್ನು ನಾನ್ ಸ್ಟ್ರೈಕ್ ನಲ್ಲಿನ ವಿಕೆಟ್ ಗೆ ಎಸೆದರು. ಅಮಿತ್ ಮಿಶ್ರಾ ಅಡ್ಡ ಬಂದಿದ್ದರಿಂದ ಅವರಿಗೆ ತಗುಲಿ ವಿಕೆಟ್ ಮಿಸ್ ಆಯಿತು.

ಚೆಂಡು ಅಮಿತ್ ಮಿಶ್ರಾಗೆ ತಗುಲಿದ ಕೂಡಲೇ ಖಲೀಲ್ ರನೌಟ್ ಗೆ ಅಪೀಲ್ ಮಾಡಿದರು. ಅಂಪೈರ್ ಸತ್ಯಾಂಶ ತಿಳಿದುಕೊಳ್ಳಲು ಮೂರನೇ ಅಂಪೈರ್ ಮೊರೆ ಹೋದರು. ಅಲ್ಲಿ ನಿಜಾಂಶ ಹೊರಬಂದಿದ್ದು ಅಮಿತ್ ಮಿಶ್ರಾ ಔಟ್ ಎಂದು ನಿರ್ಧಾರಕ್ಕೆ ಬರಲಾಗಿತ್ತು.

ಬ್ಯಾಟ್ಸ್ ಮನ್ ಗಳು ಪಿಚ್ ನ ಮಧ್ಯದಲ್ಲಿ ಓಡಬಾರದು ಎಂದು ನಿಯಮವಿದೆ. ಅಲ್ಲದೇ ಉದ್ದೇಶಪೂರ್ವಕವಾಗಿ ಔಟ್ ಆಗುವುದನ್ನು ತಪ್ಪಿಸಿಕೊಳ್ಳಲು ಪಿಚ್ ನ ಮಧ್ಯದಲ್ಲಿ ಓಡಿದರೇ ಅವರನ್ನು ಔಟ್ ಎಂದು ಘೋಷಿಸಲಾಗುತ್ತದೆ.

ಮತ್ತೆ ಹೊಸ ನಾಟಕ ಶುರು ಮಾಡಿದ ಸುಪರ್ ಸಿಎಂ !

ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಐದು ವರ್ಷ ಆಡಳಿತಾವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಕಾಂಗ್ರೆಸ್ ಶಾಸಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆ ವಿಚಾರಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿ ಗಮನ ಹರಿಸುತ್ತಾರೆ.

ಗೊಂದಲ ವಿದ್ದರೆ ಸಮನ್ವಯಸಮಿತಿ ಸಭೆಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಲಾಗುತ್ತದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೊಟ್ಟ ಕೆಲಸವನ್ನು ಮಾಡುವುದಷ್ಟೇ ನನ್ನ ಕೆಲಸ ಎಂದರು.

ಉಪಮುಖ್ಯಮಂತ್ರಿಯಾಗುವ ಯೋಗವಿದೆಯೇ ಎಂಬ ಪ್ರಶ್ನೆಗೆ ಉತ್ತಸಿಸಿದ ಸಚಿವರು, ಉಪವೂ ಇಲ್ಲ. ಮುಖ್ಯವೂ ಇಲ್ಲ. ಯೋಗ ಬಂದಾಗ ಯಾರೂ ತಡೆಯಲಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಹಾಸನ ಜಿಲ್ಲಾಧಿಕಾರಿ ಹಾಗೂ ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ವರದಿಯಾದಂತೆ ಯಾವ ಡಿಶುಂ ಡಿಶುಂ ಆಗಿಲ್ಲ. ವೈಯಕ್ತಿಕ ಹಿತಾಸಕ್ತಿ ಇಲ್ಲ. ಬಡವರ, ಜನರ ಕೆಲಸವಾಗಬೇಕೆಂಬುದಷ್ಟೇ ತಮ್ಮ ಕಾಳಜಿ. ಬರಗಾಲ ಇರುವುದರಿಂದ ಬರಪರಿಹಾರ ಕಾಮಗಾರಿ, ಕುಡಿಯುವ ನೀರಿನ ವಿಚಾರದಲ್ಲಿ ವಿಷಯ ಪ್ರಸ್ತಾಪಿಸಲಾಗಿತ್ತು.

ಮೇ 15ರಿಂದ ಆಲೂಗಡ್ಡೆ ಬಿತ್ತಲೆ ಶುರುವಾಗುತ್ತದೆ. ಆಲೂಗಡ್ಡೆ ಬಿತ್ತನೆ ಬೀಜ, ಔಷಧಿ, ಗೊಬ್ಬರಕ್ಕೆ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಹಿಂದೆ ಲಾಠಿ ಚಾರ್ಜೂ ಆಗಿತ್ತಿ. ಆ ರೀತಿ ಮತ್ತೆ ಆಗುವುದು ಬೇಡ ಎಂಬುದಷ್ಟೇ ನಮ್ಮ ಕಾಳಜಿ ಎಂದರು.

ಜಿಲ್ಲಾಧಿಕಾರಿಗಳಖಾತೆಯಲ್ಲಿ 10 ಕೋಟಿ ಹಣ ವಿದೆ. ಕುಡಿಯುವ ನೀರಿಗೆ 5 ಕೋಟಿ ಹಣ ಒದಗಿಸಲಾಗಿದೆ. ಆದರೂ 15 ದಿನ ಕಳೆದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಶಾಸಕರು ತಿಳಿಸಿದಾಗ ಆ ವಿಚಾರದಲ್ಲಿ ಪ್ಛ್ರಸ್ತಾಪಿಸಲಾಗಿದೆಯಷ್ಟೇ ಎಂದು ಹೇಳಿದರು.

ತಾವು ಕಾನೂನು ಹೊರತುಪಡಿಸಿ ಕೆಲಸ ಮಾಡಿ ಎಂದು ಯಾರಿಗೂ ಹೇಳಲಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳೇ ಸಭೆ ನಡೆಸಿ ಕ್ರಮ ಕೈಗೊಂಡರೂ ಅಭ್ಯಂತರವಿಲ್ಲ. ಒಂದು ವೇಳೆ ಜಿಲ್ಲಾಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶಾಂತ ರೀತಿಯಲ್ಲಿ ಚುನಾವಣೆ ನಡೆದಿದೆ ಎಂದು ಈಗಾಗಲೇ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಲ್ಲೆಡೆ ದಾಳಿ ನಡೆಸಿದರು. ನಾವು ಬೇಡ ಎನ್ನಲಿಲ್ಲ ಎಂದು ಹೇಳಿದರು.

ತಾವು ಪೀಸ್‍ವಕ್ರ್ಸ್ ಕಾಮಗಾರಿ ನೀಡಿಲ್ಲ. ಸಿಂಗಲ್ ಟೆಂಡರ್ ಇರುವುದರಿಂದ ಮರು ಟೆಂಡರ್ ಕರೆಯಲು ಸೂಚಿಸಲಾಗಿದೆ. ಗುಣಮಟ್ಟದಲ್ಲಿ ಲೋಪವಾದರೆ ಅಧಿಕಾರಿಗಳೇ ಹೊಣೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ರೇವಣ್ಣ ತಿಳಿಸಿದರು.

ವಿಧಾನಸೌಧದಲ್ಲಿ ಕಾಂಗ್ರೆಸ್ ಬಂಡಾಯ ಶಾಸಕ ಆರ್.ನಾಗೇಂದ್ರ ಜತೆ ಸಿಎಂ ಸುದೀರ್ಘ ಚರ್ಚೆ

ಇಂದು ವಿಧಾನಸೌಧದಲ್ಲಿ ಕಾಂಗ್ರೆಸ್ಸಿನ ಬಂಡಾಯ ಶಾಸಕರಾದ ನಾಗೇಂದ್ರ ಜೊತೆ ಸಿಎಂ ಸುದೀರ್ಘ ಚರ್ಚೆ ನಡೆಯಿತು .ಚರ್ಚೆಯಲ್ಲಿ ಪ್ರಮುಖವಾದ ವಿಷಯಗಳು ಕುರಿತು ನಡೆಯಿತು .

ಸಮ್ಮಿಶ್ರ ಸರ್ಕಾರ ಬಜೆಟ್ ಅಧಿವೇಶನದ ವೇಳೆ ಶಾಸಕರಾದ ನಾಗೇಂದ್ರ, ಮಹೇಶ್ ಕಮಟಳ್ಳಿ, ಉಮೇಶ್ ಜಾಧವ್ ಅವರು ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಜೊತೆ ಸೇರಿಕೊಂಡು ಮಹಾರಾಷ್ಟ್ರದ ಹೊಟೇಲ್‍ವೊಂದರಲ್ಲಿ ತಂಗಿದ್ದರು. ಇದು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಕೊನೆಗೆ ಕಾಂಗ್ರೆಸ್ ನಾಯಕರು ನೀಡಿದ ಎಚ್ಚರಿಕೆ ಮತ್ತು ಸಿದ್ದರಾಮಯ್ಯ ಅವರು ಅತೃಪ್ತರ ವಿರುದ್ಧ ಸ್ಪೀಕರ್‍ಗೆ ದೂರು ನೀಡಿದ ಮೇಲೆ ನಾಗೇಂದ್ರ ಅವರು ಇತರ ಶಾಸಕರ ಜೊತೆ ಬೆಂಗಳೂರಿಗೆ ಆಗಮಿಸಿದ್ದಲ್ಲದೆ, ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದರು. ಆನಂತರ ಮತ್ತೆ ನಾಗೇಂದ್ರ ತೆರೆಮರೆಗೆ ಸರಿದಿದ್ದರು.

ಇತ್ತೀಚಿನ ಬೆಳವಣಿಗೆಗಳಲ್ಲಿ ಅತೃಪ್ತ ಶಾಸಕರು ತಮ್ಮ ಬಂಡಾಯದ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ. ಕಾಂಗ್ರೆಸ್ ನಾಯಕರುಗಳು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸಂಧಾನ ಪ್ರಕ್ರಿಯೆ ಕೈಬಿಟ್ಟು, ಅತೃಪ್ತರನ್ನು ಕಾನೂನಿನ ಅಸ್ತ್ರದ ಮೂಲಕ ಸದೆಬಡಿಯಲು ಮುಂದಾಗಿದ್ದಾರೆ.

ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾಂಗ್ರೆಸ್‍ನ ಅತೃಪ್ತ ಶಾಸಕರ ಜೊತೆ ಹಂತ ಹಂತವಾಗಿ ಮಾತುಕತೆ ನಡೆಸುವ ಮೂಲಕ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ರಹಸ್ಯ ರಣತಂತ್ರ ಹೆಣೆದಿದ್ದಾರೆ.

ಬಿಜೆಪಿ ಆಪರೇಷನ್ ಕಮಲ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಸಂಧಾನ ಸಭೆಗಳ ಮೂಲಕ ಬಿಜೆಪಿ ಪ್ರಯತ್ನ ವಿಫಲಗೊಳಿಸುತ್ತಿದ್ದಾರೆ. ಇತ್ತೀಚೆಗೆ ರಮೇಶ್ ಜಾರಕಿ ಹೊಳಿ ಜೊತೆ ಕುಮಾರಸ್ವಾಮಿ ಸಂಸದ ಬಿ.ವಿ.ನಾಯಕ್ ಮೂಲಕ ನಡೆಸಿದ ಸಂಧಾನ ಭಾಗಶಃ ಯಶಸ್ವಿಯಾಗಿದ್ದು, ಈಗ ನಾಗೇಂದ್ರ ಅವರ ಜೊತೆಯೂ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ.

ಮಹೇಶ್ ಕುಮಟಳ್ಳಿ ಜೊತೆ ಕೂಡ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಗೆ ಹೋಗುವ ಮುನ್ನ ಸುಮಾರು ಅರ್ಧ ಗಂಟೆ ಕಾಲ ಕುಮಾರಸ್ವಾಮಿ ಮತ್ತು ನಾಗೇಂದ್ರ ಅವರು ಚರ್ಚೆ ನಡೆಸಿದರು. ನಂತರ ಸಂಪುಟ ಸಭೆ ನಂತರವೂ ಈ ಇಬ್ಬರು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು ಎಂದು ಹೇಳಲಾಗಿದೆ.

ಗಾಂಧೀ ಕುಟುಂಬ ಯುದ್ಧನೌಕೆ ಬಳಸಿತ್ತು : ಮೋದಿ ಟೀಕೆ

ಕಾಂಗ್ರೆಸ್ಸಿಗರಿಗೆ ಏನಾಗಿದೆ ? ಬುದ್ಧಿಯಿಲ್ಲದವರಂತೆ ಯಾಕಾಡುತ್ತಿದ್ದಾರೆ ? ಯುದ್ಧ ನೌಕೆಯಲ್ಲಿ ಹಾಲಿಡೇ ಟ್ರಿಪ್ 10 ದಿನಗಳ ಕಾಲ ಕುಟುಂಬ ಪ್ರವಾಸ ಮಾಡಿದ್ದನ್ನ ಸಮರ್ಥಿಸಿಕೊಳ್ಳುತ್ತಾರೆಂದರೆ ಇವರಿಗೆ ಒಂದು ಸ್ವಲ್ಪವೂ ಮಾನ ಮರ್ಯಾದೆ ಬೇಡವೇ ?

ಅವರು ಸಾಗರ ಯಾನಕ್ಕೆ ಪ್ರವಾಸಿ ಹಡಗು ತಗೊಂಡು ಹೋಗಲು ಅರ್ಹರಿರಬಹುದು ಆದರೆ ಆಗಿನ ಕಾಲದ ಕೇವಲ ಮೂರು ವರ್ಷದ ಮೊದಲು ಕಡಲ ಗಡಿ ರಕ್ಷಣೆಗೆ ಖರೀದಿಸಿದ್ದ ಅತಿ ದೊಡ್ಡ ನೌಕೆಯನ್ನು ಯಾವ ದೇಶದ ಮುಖ್ಯಸ್ಥನ ಕುಟುಂಬ ತಮ್ಮ ಜಾಲಿ ಪ್ರವಾಸಕ್ಕೆ ಬಳಸುತ್ತದೆ ಸ್ವಲ್ಪ ಯೊಚನೆ ಮಾಡಿ ,ಭಾರತ ದೇಶ ನೆಹರು ಗಾಂಧಿ ಪರಿವಾರದ ಆಸ್ತಿ ಕೆಟ್ಟೋಯ್ತಾ ?

ಅವರ ಜಾಗೀರ್ ಅನ್ನುವ ಹಾಗೆ ಬಳಸಿದ್ದಲ್ಲದೇ ,ಮೋದಿಗೆ ಕುಟುಂಬವಿಲ್ಲ ಹೋಗಿಲ್ಲವೆನ್ನುವಷ್ಟು ಮೂರ್ಖತನದ ಹೇಳಿಕೆಯನ್ನು ಒಬ್ಬ ಮಾಜಿ ಕೇಂದ್ರಮಂತ್ರಿ ಆಸ್ಥಾನ ಗುಲಾಮ ಕೊಡುತ್ತಾನೆ .

INS – ವಿರಾಟ್ ಅತಿದೊಡ್ಡ ಎರಡನೆಯ ಸಾಗದಲ್ಲಿ ಯುದ್ಧ ವಿಮಾನಗಳನ್ನು ಕೊಂಡೊಯ್ಯುವ ಹಡಗು 28700 ಟನ್ ಭಾರ ಸಾಗಿಸುವ 743 ಅಡಿಯ ಉದ್ದದ ಹಡಗು 1207 ಒಟ್ಟಾರೆ ಸಿಬ್ಬಂದಿಯೊಂದಿಗೆ ಇರುವ 143 ಪೈಲಟ್ ಇತರೆ ವಾಯುಸೇನೆ ಸಿಬ್ಬಂದಿ ಸದಾ 26 ವಿಮಾನಗಳೊಂದಿಗೆ ಯುದ್ಧ ಸನ್ನದ್ಧತೆಯ ಸ್ಥಿತಿಯಲ್ಲಿರುವ ಹಡಗನ್ನು ತಮ್ಮ ಪ್ರವಾಸ ಟೂರಿಸ್ಟ್ ಟ್ಯಾಕ್ಸಿ ತರ ಬಳಸುತ್ತಾರೆಂದರೆ ನೀವು ಲೆಕ್ಕ ಹಾಕಿ ಎಷ್ಟು ಕೋಟಿ ಖರ್ಚು ಬಂದಿರುತ್ತದೆ 10 ದಿನಗಳಿಗೆ ,ಯಾರಪ್ಪನ ದುಡ್ಡು ,ಭಾರತದ ಜನ ಇನ್ನೂ ರೋಟಿ ಕಪಡಾ ,ಔರ್ ಮಕಾನಲ್ಲೇ 70 ವರ್ಷ

ಪ್ರಿಯಕರನ ಎದುರೇ ಪ್ರೇಯಸಿಯ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರೇಮಿಗಳ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ, ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರೋ ಘಟನೆ ಮೈಸೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂತ್ರಸ್ತ ಯುವತಿ ಹೆಚ್​​ಡಿ ಕೋಟೆ ಮೂಲದ ಹುಡುಗನನ್ನ ಪ್ರೀತಿಸುತ್ತಿದ್ದಳು. ನಿನ್ನೆ  (ಬುಧವಾರ) ರಾತ್ರಿ 10 ಗಂಟೆ ಸುಮಾರಿಗೆ ಮೈಸೂರಿನ ಲಿಂಗಾಂಬುಧಿ ಕೆರೆ ಸಮೀಪ ಇಬ್ಬರೂ ಇದ್ದರು.

ಈ ಪ್ರೇಮಿಗಳನ್ನ ನೋಡಿದ ಕಿರಾತಕರು ಏಕಾಏಕಿ ದಾಳಿ ಮಾಡಿ ಯುವಕನ ಮೇಲೆ ಎರಗಿದ್ದಾರೆ. ಆತನ ಕಾಲ ಮೇಲೆ ಕಲ್ಲು ಎತ್ತಿ ಹಾಕಿ ಹಲ್ಲೆ ನಡೆಸಿದ್ದಾರೆ.

ಬಳಿಕ ಆತನ ಸಮ್ಮುಖದಲ್ಲೇ ಯುವತಿ ಮೇಲೆ ಮೃಗೀಯವಾಗಿ ಎರಗಿ ಅತ್ಯಾಚಾರ ಎಸೆಗಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಸಂತ್ರಸ್ತೆ ಗಂಭೀರ ಸ್ಥಿತಿಯಲ್ಲಿದ್ದು, ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಘಟನಾ ಸ್ಥಳಕ್ಕೆ ಎಸ್​ಪಿ ಅಮಿತ್ ಸಿಂಗ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೈಸೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅತ್ಯಾಚಾರಿಗಳ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಎರಡು ಸಲ ಮಿಸ್​.. ಈ ಸಲ ನಯನತಾರಾ ಮದುವೆ ಫಿಕ್ಸ್..!ಈ ನಟಿ ಸಂಭಾವನೆ ಎಷ್ಟು ಕೋಟಿ ಗೊತ್ತಾ..?

ನಯನತಾರಾ ಫಿಲ್ಮೋಗ್ರಫಿ ಚೆಕ್​ ಮಾಡಿದರೆ, ಇತ್ತೀಚೆಗೆ ಅಂಥಾ ಸೂಪರ್ ಹಿಟ್ ಸಿನಿಮಾಗಳು ಯಾವ್ದು ಕೊಟ್ಟಿಲ್ಲ, ಹಾಗಂತ ಆಕೆಯ ರೆಮ್ಯೂನರೇಷನ್ ಮಾತ್ರ ಕಡಿಮೆಯಾಗಿಲ್ಲ.ಮತ್ತದೇ ಕ್ರೇಜ್. ಹಲವು ವರ್ಷಗಳಿಂದ ಕ್ರೇಜ್​​​ನ ಉಳಿಸಿ, ಬೆಳಸಿಕೊಂಡು ಬರ್ತಿರೋ ಚೆಲುವೆ ನಯನತಾರಾ.

ಇವತ್ತಿಗೂ ಸೌತ್​ನಲ್ಲಿ ಅತಿ ಹೆಚ್ಚು ಅಭಿಮಾನಿಗಳು ಈ ಲೇಡಿ ಸೂಪರ್​ ಸ್ಟಾರ್​ಗಿದ್ದಾರೆ. ಗ್ಲಾಮರ್​ ಜೊತೆಗೂ ಅಭಿನಯಕ್ಕೂ ಸೈ ಅನ್ನೋ ಚೆಲುವೆ ಈಕೆ. ಅದೇ ಕಾರಣಕ್ಕೆ ನಯನತಾರಾ ಕಾಲ್​ಶೀಟ್​ಗಾಗಿ ಫಿಲ್ಮ್​ ಮೇಕರ್ಸ್​ ಮುಗಿಬೀಳ್ತಾರೆ. ಡಿಮ್ಯಾಂಡ್ ಜಾಸ್ತಿಯಾದಂತೆ ಕಾಲ್​ಶೀಟ್​ ರೇಟ್ ಏರ್ತಿದೆ. ಸದ್ಯ ಚಿತ್ರವೊಂದಕ್ಕೆ ನಯನತಾರ 3 ಕೋಟಿ ಸಂಭಾವನೆ ಪಡಿತ್ತಿದ್ದಾರಂತೆ.

ತಮಿಳಿನ ಮಿಸ್ಟರ್ ಲೋಕಲ್, ಕೊಲಯತ್ತೂರ್​ ಕಲಾಂ, ವಿಜಯ್ ನಟನೆಯ ಇನ್ನೂ ಹೆಸರಿಡದ ಚಿತ್ರ, ರಜಿನಿಕಾಂತ್​​​ ಅಭಿನಯದ ದರ್ಬಾರ್, ತೆಲುಗಿನ ಸೈರಾ ನರಸಿಂಹ ರೆಡ್ಡಿ, ಮಲಯಾಳಂನ ಲವ್​ ಆ್ಯಕ್ಷನ್ ಡ್ರಾಮಾ ಸಿನಿಮಾಗಳು ನಯನತಾರಾ ಕೈಯಲ್ಲಿದೆ.

ಸದ್ಯ ಸೌತ್​ನ ಮತ್ಯಾವುದೇ ಟಾಪ್​ ಹಿರೋಯಿನ್​ ಕೈಯಲ್ಲಿ ಇಷ್ಟು ಸಿನಿಮಾಗಳಿಲ್ಲ, ಇದೇ ಕ್ರೇಜ್​ನಿಂದ್ಲೇ ನಯನತಾರಾ ರೆಮ್ಯೂನರೇಷನ್​ 3 ಕೋಟಿ ತಲುಪಿರೋದು. ಇತ್ತೀಚೆಗೆ ನಯನತಾರಾ ಒಂದು ಜಾಹಿರಾತಿಗೆ ಎರಡು ದಿನಗಳ ಕಾಲ್​ಶೀಟ್​ ಕೊಟ್ಟು 3 ಕೋಟಿ ಬ್ಯಾಗಿಗೆ ಇಳಿಸಿದ್ದಾರೆ.

ಬಾಲಕೃಷ್ಣ ನಟನೆಯ ಒಂದು ತೆಲುಗು ಮತ್ತು ಮಣಿರತ್ನಂ ನಿರ್ದೇಶನದ ಐತಿಹಾಸಿಕ ಪೊನ್ನಿಯನ್ ಸೆಲ್ವನ್​​ ಚಿತ್ರಗಳಿಗೆ ನಯನತಾರಾ ನಾಯಕಿಯಾಗೋ ಸಾಧ್ಯತೆಯಿದೆ. ಈ ಕುರಿತು ಮಾತುಕತೆ ನಡೀತಿದ್ದು, ಎಲ್ಲಾ ಅಂದುಕೊಂಡಂತೆ ಆದರೆ, ಈ ಚಿತ್ರಗಳಿಗೂ ದೊಡ್ಡ ಮಟ್ಟದ ರೆಮ್ಯೂನರೇಷನ್​ ನಯನತಾರಾ ಪಡೆಯಲಿದ್ದಾರೆ.

ಎರಡು ಸಲ ಮಿಸ್​.. ಈ ಸಲ ನಯನತಾರಾ ಮದುವೆ ಫಿಕ್ಸ್..!

ಇನ್ನೂ ನಯನತಾರಾ ಪರ್ಸನಲ್ ಲೈಫ್​ ಬಗ್ಗೆ ಹೇಳೋದಾದರೆ, ಈ ನವೆಂಬರ್​ನಲ್ಲಿ ಪ್ರಿಯಕರ ವಿಘ್ನೇಶ್​ ಶಿವನ್​ ಜೊತೆ ನಿಶ್ಚಿತಾರ್ಥಕ್ಕೆ ಮನಸ್ಸು ಮಾಡಿದ್ಧಾರಂತೆ. ಸಿಂಬು ಮತ್ತು ಪ್ರಭುದೇವಾರನ್ನು ಪ್ರೀತಿಸಿ, ದೂರಾದ ನಯನತಾರಾ 4 ವರ್ಷಗಳಿಂದ ಡೈರೆಕ್ಟರ್ ವಿಘ್ನೇಶ್ ಶಿವನ್​ ಜೊತೆ ಪ್ರೀತಿಲಿ ಮುಳುಗಿದ್ದಾರೆ.

ಇದೀಗ ಇಬ್ಬರು ಮದುವೆಗೆ ನಿರ್ಧರಿಸಿದ್ದು, ನವೆಂಬರ್​ನಲ್ಲಿ ಉಂಗುರ ಬದಲಿಸಿಕೊಂಡು ಮುಂದಿನ ವರ್ಷ ಹಸೆಮಣೆ ಏರೋಕೆ ಮುಂದಾಗಿದ್ದಾರಂತೆ. ಮದುವೆ ನಂತರ ಚಿತ್ರರಂಗದಲ್ಲಿ ನಯನತಾರಾ ಕ್ರೇಜ್​ ಹೇಗಿರುತ್ತೋ ಕಾದು ನೋಡ್ಬೇಕು.

ಶ್ರೀರಾಮುಲು ಒಂದು ಹೇಳಿಕೆಗೆ ಕಾಂಗ್ರೆಸ್ ಮುಖಂಡರು ಶೇಕ್ !

ಬಿಜೆಪಿ ಶಾಸಕ ಶ್ರೀರಾಮುಲು ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್​​ ಮುಖಂಡರು ಧಾರವಾಡ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ಅವರಿಗೆ ದೂರು ಸಲ್ಲಿಸಿದ್ದಾರೆ.

ದೂರು ನೀಡಲು ಸಂಸದ ವಿ.ಎಸ್ ಉಗ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್​​ ಮುಖಂಡರು ಚುನಾವಣಾ ಕಚೇರಿಗೆ ಆಗಮಿಸಿ ದೂರು ದಾಖಲಿಸಿದ್ದು, ಶಿವಳ್ಳಿ ನಿಧನಕ್ಕೆ ಮೈತ್ರಿ ಸರ್ಕಾರವೇ ಕಾರಣ ಎಂದು ಶ್ರೀರಾಮುಲು ಹೇಳಿಕೆ ನೀಡಿದ್ದರು. ಈ ಸಂಬಂಧ ಪ್ರಜಾಪ್ರತಿನಿಧಿ ಕಾಯಿದೆ ಹಾಗೂ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು  ಕೈ ಮುಖಂಡರು ದೂರು ದಾಖಲಿಸಿದ್ದಾರೆ.

ದೂರು ನೀಡುವ ಮುನ್ನ ಟಿವಿ೫ ಜೊತೆ ಮಾತನಾಡಿದ ಸಂಸದ ವಿ.ಎಸ್ ಉಗ್ರಪ್ಪ, ಶ್ರೀರಾಮುಲು ಮತದಾರರ ಮೇಲೆ ದುಷ್ಪರಿಣಾಮ ಬೀರುವ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದಾರೆ. ದೂರು ದಾಖಲು ಮಾಡಿ ಬಳಿಕ ಚುನಾವಣಾ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡೋಣ ಎಂದು ಅವರು ಪ್ರತಿಕ್ರಿಯಿಸಿದ್ದರು.

ಶಾಕಿಂಗ್ ನ್ಯೂಸ್ : ಕಾರು ರಿಪೇರಿಗೆ ಡೀಲರ್ ಮೊತ್ತ 3 ಲಕ್ಷ- ಲೋಕಲ್ ಗ್ಯಾರೇಜ್‌ನಲ್ಲಿ ಮೋತ್ತ ಎಷ್ಟು!

ಕಾರು ಮಾಲೀಕರು ಹೆಚ್ಚಾಗಿ ತಮ್ಮ ಡೀಲರ್, ಶೋ ರೂಂಗಳಲ್ಲೇ ಕಾರು ಸರ್ವೀಸ್, ರಿಪೇರಿ ಮಾಡಿಸುತ್ತಾರೆ. ಕಾರಣ ಡೀಲರ್‌ಗಳ ಮೇಲೆ ನಂಬಿಕೆ ಹೆಚ್ಚು. ಆದರೆ ಹಲವು ಬಾರಿ ಈ ನಂಬಿಕೆ ಉಳಿಸಿಕೊಳ್ಳುವಲ್ಲಿ ಡೀಲರ್‌ಗಳು ವಿಫಲರಾಗಿದ್ದಾರೆ. ಇಷ್ಟೇ ಅಲ್ಲ ಲೋಕಲ್ ಗ್ಯಾರೇಜ್ ಹುಡುಗರು ಸಮಸ್ಯೆಗೆ ಕಡಿಮೆ ಬೆಲೆಯಲ್ಲಿ ಪರಿಹಾರ ನೀಡಿದ ಸಾಕಷ್ಟು ಉದಾಹರಣೆಗಳಿವೆ. ಇದೀಗ ಇಂತದ್ದೇ ಪ್ರಕರಣ ಮುಂಬೈನಲ್ಲಿ ನಡೆದಿದೆ.

ಮುಂಬೈ ಮೂಲದ ಕಾರು ಮಾಲೀಕನ ಸ್ಕೋಡಾ ಡೀಸೆಲ್ ಕಾರು ಸ್ಟಾರ್ಟ್ ಸಮಸ್ಯೆ ಎದುರಿಸುತ್ತಿತ್ತು. ಸರ್ವೀಸ್‌ಗೆ ಇನ್ನೂ ಕೆಲ ತಿಂಗಳು ಬಾಕಿ ಇತ್ತು. ಹೀಗಾಗಿ ಪಕ್ಕದ ಗ್ಯಾರೇಜ್‌ನಲ್ಲಿ ಬ್ಯಾಟರಿ ಪರಿಶೀಲಿಸಿದ್ದಾರೆ. ಬ್ಯಾಟರಿ ಯಾವುದೇ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಂಡ ಮಾಲೀಕ, ಪ್ರಯಾಣ ಬೆಳೆಸಿದ್ದಾರೆ.

ದಾರಿ ನಡುವೆ ಸ್ಕೋಡಾ ಕಾರು ಮತ್ತೆ ಸಮಸ್ಯೆ ಎದರಿಸಿತು. ಎಂಜಿನ್ ಆಫ್ ಆಗುತ್ತಿತ್ತು. ಇಂಧನ ಟ್ಯಾಂಕ್ ಕೂಡ ಖಾಲಿಯಾಗುವ ಹಂತದಲ್ಲಿತ್ತು. ಹೀಗಾಗಿ ಹೆಚ್ಚಿನ ಸಮಸ್ಯೆಗೆ ಗುರಿಯಾಗೋ ಮೊದಲೇ ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಿ, ಸಹೋದರನಿಗೆ ಫೋನ್ ಮಾಡಿ ಇಂಧನ ತರುವಂತೆ ಹೇಳಿದ್ದಾರೆ. ಬಳಿಕ 5  ಲೀಟರ್ ಇಂಧನ ತುಂಬಿಸಿದರೂ ಕಾರು ಸ್ಟಾರ್ಟ್ ಆಗಲಿಲ್ಲ. ಹೀಗಾಗಿ ಬೇರೆ ವಾಹನದ  ಸಹಾಯದಿಂದ  ಸ್ಕೋಡಾ ಡೀಲರ್ ಬಳಿಕ ಕೊಂಡೊಯ್ದಿದ್ದಾರೆ.

ಮರುದಿನ ಸ್ಕೋಡಾ ಡೀಲರ್ ಕಾರು ಮಾಲೀಕನಿಗೆ ಫೋನ್ ಮಾಡಿದ್ದಾರೆ. ಕಾರನ್ನು ಸಂಪೂರ್ಣ ಪರಿಶೀಲಿಸಿದ್ದೇವೆ. 4 ಫ್ಯೂಯೆಲ್ ಇಂಜೆಕ್ಟರ್, ಫ್ಯೂಯೆಲ್ ಪಂಪ್, ಫ್ಯೂಯೆಲ್ ಲೈನ್ ಹಾಗೂ ಇತರ ಕೆಲ ಬಿಡಿ ಭಾಗಗಳನ್ನ ಬದಲಾಯಿಸಬೇಕು. ಜೊತೆಗೆ ಸರ್ವೀಸ್ ಕೂಡ ಮಾಡಬೇಕು. ಹೀಗಾಗಿ ಅಂದಾಜು ಮೊತ್ತ 3 ಲಕ್ಷ ರೂಪಾಯಿ ಎಂದಿದ್ದಾರೆ.

ಕಾರು ರಿಪೇರಿಗೆ 3 ಲಕ್ಷ ರೂಪಾಯಿ ಎಂದು ತಕ್ಷಣ ಬೆಚ್ಚಿ ಬಿದ್ದ ಮಾಲೀಕ, ಕಾರನ್ನು ಲಾರಿ ಮೂಲಕ ಮನೆ ಹತ್ತಿರದ ಲೋಕಲ್ ಗ್ಯಾರೇಜ್‌ಗೆ ತಂದಿದ್ದಾರೆ. ಲೋಕಲ್ ಗ್ಯಾರೇಜ್ ಹುಡುಗ ಕಾರು ಪರಿಶೀಲಿಸಿ ಕೇವಲ ಹತ್ತೇ ನಿಮಿಷದಲ್ಲಿ ಕಾರು ಸರಿಪಡಿಸಿದ್ದಾರೆ.  ಕೇವಲ 1,000 ರೂಪಾಯಿ ಕಾರು ಸಂಪೂರ್ಣ ರಿಪೇರಿ ಮಾಡಲಾಗಿದೆ.

ಈ ಚಿತ್ರದ ಪ್ರಮೋಶನ್ ಗೆ ಬೆತ್ತಲೆ ಪೋಸು ಕೊಟ್ಟ ಬಾಲಿವುಡ್ ನಟಿ!

ಟಾಲಿವುಡ್ ನಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಟಾಕ್ ಆಫ್ ದಿ ಟೌನ್ ಆಗುತ್ತಿರುವ ಆದಾ ಶರ್ಮಾ ಇನ್ ಸ್ಟಾಗ್ರಾಂ ಪೋಸ್ಟ್ ವೈರಲ್ ಆಗುತ್ತಿದೆ.

‘So…AM I THE MAN OF YOUR DREAMS ? ಮ್ಯಾನ್ ಟು ಮ್ಯಾನ್ – ನನ್ನ ನೆಕ್ಸ್ಟ್ ಹಿಂದಿ ಚಿತ್ರ. ನನ್ನ ಸಿನಿ ಜರ್ನಿಯಲ್ಲಿ ಎಂದೂ ಅಂದುಕೊಂಡಿರದ ಪಾತ್ರವನ್ನು ನಿಭಾಯಿಸುವುದಾಗಿ ಅಂದುಕೊಂಡಿದ್ದೇನೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಫಿಲ್ಮ್. ವಿಭಿನ್ನ ಲವ್ ಸ್ಟೋರಿ. ಮಿಕ್ಕಿದ್ದು ನಿಮ್ಮ ಇಮ್ಯಾಜಿನೇಷನ್’ ಎಂದು ಬರೆದುಕೊಂಡಿದ್ದಾರೆ.

ಹಲವು ಬಾರಿ ಇಂತಹ ಪ್ರಯತ್ನಕ್ಕೆ ಕೈ ಹಾಕಿರುವ ಆದಾ 2017 ರಲ್ಲಿ ಕೂದಲು ಜಾಹಿರಾತೊಂದಕ್ಕೆ ಮ್ಯಾಗಜಿನ್ ಗೆ ಬೆತ್ತಲೆ ಪೋಸ್ ಕೊಟ್ಟಿದ್ದರು. ಅಷ್ಟೇ ಅಲ್ಲದೆ ನ್ಯೂಸ್ ಪೇಪರ್ ಡ್ರೆಸ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡು ಟ್ರೋಲಿಗರಿಗೆ ಆಹಾರವಾದರು.