ಸಿಎಂ ಕುಮಾರಸ್ವಾಮಿ ಅವರು ಜನಪರ ನಾಯಕ : ಸಿದ್ದರಾಮಯ್ಯ

ಮುಖ್ಯಮಂತ್ರಿ ಹೆಚ್.ಡಿ  ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾತನಾಡಿದ ಅವರು, ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಹಿಂದೆ ಬಿಜೆಪಿಯ ಅಧಿಕಾರಾವಧಿಯಲ್ಲಿ ಮೂರು ಜನ ಮುಖ್ಯಮಂತ್ರಿ ಆಗಿದ್ದರು. ಭ್ರಷ್ಟಾಚಾರ ಮಾಡಿ ಆರು ಮಂತ್ರಿಗಳು ಜೈಲಿಗೆ ಹೋಗಿದ್ದರು. ಅಂತವರಿಗೆ ಯಾಕೆ ಜನ ಮತ ಕೊಡ್ತಾರೆ ಎಂದು ಇದೇ ವೇಳೆ ಪ್ರಶ್ನೆ ಮಾಡಿದರು.

ಅವರು ಬೈ ಎಲೆಕ್ಷನ್ ಗೆಲ್ತಾರಾ ಇವರು ಬೈ ಎಲೆಕ್ಷನ್ ಸೋಲುತ್ತಾರಾ..? ಎನ್ನುವುದು ನಮಗೆ ಬೇಡ, ನಾವು ಎರಡೂ ಗೆಲ್ತೀವಿ. ಅವರ ಕಥೆ ಏನ್ ಆಗುತ್ತೆ ಅಂತ ಬೈ ಏಲೆಕ್ಷನ್ ನಲ್ಲಿ ನೋಡಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕಸಿದುಕೊಂಡಿದ್ದು ತಪ್ಪು ಎನ್ನೋ  ಜೆಡಿಎಸ್‌ನ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆಗೆ ಟಾಂಗ್ ನೀಡಿದ ಅವರು, ಹೊರಟ್ಟಿ ನಮ್ಮ ಪಕ್ಷದ ಬಗ್ಗೆ ಮಾತನಾಡದೇ ಇರೋದು ಒಳ್ಳೆಯದು ಎಂದು ಆಕ್ರೋಶ ಹೊರಹಾಕಿದರು.

ನಮ್ಮ ಶಾಸಕರು ಅಭಿಮಾನದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು  ಅವರ ಅಭಿಪ್ರಾಯ ಹೇಳ್ತಾರೆ. ಅವರು ಹೇಳಿದಾಗೆ ಹೇಗಾಗುತ್ತೆ. ಇವಾಗ ಖುರ್ಚಿ ಖಾಲಿ ಇಲ್ಲವಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ಪ್ರತಿಕ್ರಿಯೇ ನೀಡಿದರು.

‘ಏನಪ್ಪಾ ಎಂಬಿ ಪಾಟೀಲ್ ಹೀಗೆ ಹೇಳಿದ್ದಿರಿ’ : ಸಿಎಂ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿ ಎಂಬ ಗೃಹ ಸಚಿವ ಎಂ.ಬಿ ಪಾಟೀಲ್ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಏನ್ ಎಂ.ಬಿ ಹೀಗೆ ಹೇಳಿದ್ದೀರಿ ಎಂದು ಫೋನ್ ಮಾಡಿ ವಿಚಾರಿಸಿದ್ದಾರೆ.

ಈ ಬಗ್ಗೆ ಉತ್ತರಿಸಿರುವ ಗೃಹಸಚಿವರು, ನಾನು ಆ ಅರ್ಥದಲ್ಲಿ ಹೇಳಿಲ್ಲ. ನನ್ನ ಹೇಳಿಕೆಯನ್ನ ತಿರುಚಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ೫ ವರ್ಷ ಪೂರೈಸುತ್ತಾರೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಕ್ಯಾಂಡಿಡೇಟ್ ಅಂತ ನಾನು ಹೇಳಿಕೆ ನೀಡಿದ್ದೆ. ಆದರೆ, ಅದನ್ನ ಕೆಲವರು ತಿರುಚಿದ್ದಾರೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸ್ಪಷ್ಟನೆ ನೀಡಿದ್ದಾರೆ.

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಓಡಾಟ ಪ್ರಕರಣ ಸಂಬಂಧಿದಂತೆ ಮಾತನಾಡಿದ ಸಿಎಂ, ಗೃಹ ಸಚಿವ ಎಂ.ಬಿ ಪಾಟೀಲ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಸದ್ಯ ಅವರು ತಮಿಳುನಾಡು ಪ್ರವಾಸದಲ್ಲಿ ಇದ್ದಾರೆ.

ಶ್ರೀ ರಾಘವೇಂದ್ರ ರಾಯರ ಸನ್ನಿಧಿಯಲ್ಲಿ ನಡೀತು ಅಪರೂಪದ ಘಟನೆ..!

ಮಂತ್ರಾಲಯದಲ್ಲಿ ಶ್ರೀರಾಮನ ಆರಾಧನೆ ವೇಳೆ ಅಪರೂಪದ ಘಟನೆ ನಡೆದಿದ್ದು, ರಾಮದೂತನೂ ಕೂಡ ಪೂಜೆಯಲ್ಲಿ ಭಾಗವಹಿಸಿದ್ದು ವಿಶೇಷ.

ಮಂತ್ರಾಲಯ ಮಠದಲ್ಲಿ ಶ್ರೀ ಸುಭುದೇಂದ್ರ ಶ್ರೀಗಳು, ಶ್ರೀರಾಮನ ಪೂಜೆ ಮಾಡುವ ಸಂದರ್ಭದಲ್ಲಿ, ಹಿಂದೆ ಬಂದು ಕೂತ ಮಂಗ ಕೂಡ ಪೂಜೆಯಲ್ಲಿ ಭಾಗವಹಿಸಿದೆ.

ಇನ್ನು ನೆರೆದ ಭಕ್ತರ ಮಧ್ಯೆಯೇ ಪೂಜೆಯಲ್ಲಿ ಕುಳಿತು, ಯಾರಿಗೂ ತೊಂದರೆ ಕೊಡದೇ, ರಾಮನ ಆಶೀರ್ವಾದ ಪಡೆದ ಮಂಗ, ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್​ಗೆ ಕಾಂಗ್ರೆಸ್ ಹೈಕಮಾಂಡ್ ಖಡಕ್​ ಎಚ್ಚರಿಕೆ!

ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರು ಗೈರು ವಿಚಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದೆ.

ರಾಜ್ಯ ಕಾಂಗ್ರೆಸ್​​ ಉಸ್ತುವಾರಿ ಕೆ.ಸಿ ವೇಣುಗೋಪಾಲ್​, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆಗೆ ಯಾರು ಗೈರಾಗಿದ್ದಾರೆ. ಅವರು ಯಾಕೆ ಪ್ರಚಾರಕ್ಕೆ ಬಂದಿಲ್ಲ ಎಂಬ ಬಗ್ಗೆ ನಮಗೆ ಪಟ್ಟಿ ಕಳಿಸಿಕೊಡಿ ಎಂದು ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ.

ಯಾವ ಸಚಿವರು, ಯಾವ ಶಾಸಕರು ಗೈರಾಗಿದ್ದಾರೆ. ಅವರ ಗೈರಿಗೆ ಕಾರಣ ಕೇಳಿ ನಮಗೆ ಮಾಹಿತಿ ರವಾನಿಸಿ ಎಂದು ದಿನೇಶ್ ಗುಂಡೂರಾವ್​ಗೆ ಕೆ.ಸಿ ವೇಣುಗೋಪಾಲ್ ದೂರವಾಣಿ ಮೂಲಕ ಕರೆ ಮಾಡಿ ವಾರ್ನಿಂಗ್ ಮಾಡಿದ್ದಾರೆ.

ಉಪಚುನಾವಣೆ ಪ್ರಚಾರದಲ್ಲಿ ಬಿಜೆಪಿ, ಕಾಂಗ್ರೆಸ್​​​ ಎರಡು ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ ಇದರಲ್ಲಿ ಕಾಂಗ್ರೆಸ್​​ ಕೆಲವು ಸಚಿವರು, ಶಾಸಕರು ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸಿದ್ದಾರೆ ಹೀಗಾಗಿ ಕಾಂಗ್ರೆಸ್​​ ಹೈಕಮಾಂಡ್​ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ಈ ವಿಷಯ ತಂದಿದೆ.

ಪ್ರಧಾನಿ ಮೋದಿ ವಿಶ್ವದ ನಂ.2 ! ಮೊದಲ ಸ್ಥಾನದಲ್ಲಿ ಯಾರಿದ್ದಾರೆ?

ಸಾಮಾಜಿಕ ಜಾಲತಾಣಗಳಲ್ಲಿ 11 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೊದಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಎರಡನೇ ರಾಜಕೀಯ ನಾಯಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವೀಟರ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಮೋದಿ 11,09,12,648 ಹಿಂಬಾಲಕರನ್ನು ಸಂಪಾದಿಸಿದ್ದಾರೆ ಎಂದು ಆನ್‌ಲೈನ್‌ ಮಾಹಿತಿ ವಿಶ್ಲೇಷಣಾ ವೇದಿಕೆ ಸೆಮರುಷ್‌ ಡಾಟ್‌ ಕಾಮ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿದೆ.

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ 18 ಕೋಟಿ ಹಿಂಬಾಲಕರೊಂದಿಗೆ ಜಾಗತಿಕವಾಗಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ನಾಯಕ ಎನಿಸಿಕೊಂಡಿದ್ದಾರೆ. 11 ಕೋಟಿಗೂ ಅಧಿಕ ಹಿಂಬಾಲಕರನ್ನು ಸಂಪಾದಿಸಿರುವ ನರೇಂದ್ರ ಮೋದಿ, 9.6 ಕೋಟಿ ಹಿಂಬಾಲಕರನ್ನು ಹೊಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನೂ ಹಿಂದಿಕ್ಕಿದ್ದಾರೆ.

ಆದರೆ, ಟ್ರಂಪ್‌ ಅವರು ಟ್ವೀಟರ್‌ನಲ್ಲಿ ಎರಡನೇ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಜಕಾರಣಿ ಎನಿಸಿಕೊಂಡಿದ್ದಾರೆ. ಇನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮತ್ತು ಟ್ವೀಟರ್‌ನಲ್ಲಿ 1.2 ಕೋಟಿ ಹಿಂಬಾಲಕರನ್ನು ಸಂಪಾದಿಸಿದ್ದಾರೆ. ಉಳಿದ ಎಲ್ಲಾ ಸಾಮಾಜಿಕ ಜಾಲತಾಣ ವೇದಿಕೆಗಳಿಗಿಂತ ಟ್ವೀಟರ್‌ ಅತಿ ಹೆಚ್ಚಿನ ಸಂಖ್ಯೆ ಸಕ್ರಿಯ ರಾಜಕೀಯ ಪ್ರೇಕ್ಷಕರನ್ನು ಹೊಂದಿದೆ ಎಂದು ಸೆಮರುಷ್‌ನ ವರದಿ ತಿಳಿಸಿದೆ.

ಬಿಜೆಪಿಗೆ 280+ ಗೆಲುವು ನಿಶ್ಚಿತ! ಮಿತ್ರಪಕ್ಷಗಳಿಗೆ ಭಯ ಶುರು

ಲೋಕಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ  ಎಂದಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್‌ ಅವರ ಮಾತನ್ನೇ ಇದೀಗ ಬಿಜೆಪಿ ಮಿತ್ರಪಕ್ಷ ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಬೆಂಬಲಿಸಿದ್ದಾರೆ.

ಮುಂದಿನ ಸರ್ಕಾರ ರಚನೆಗೆ ಬಿಜೆಪಿಗೆ ಮಿತ್ರ ಪಕ್ಷಗಳ ಅನಿವಾರ್ಯತೆ ಉಂಟಾಗಲಿದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ 2014ರಂತೆ 280-282 ಸ್ಥಾನ ಗಳಿಸುವುದು ಅನುಮಾನ ಎಂದಿದ್ದಾರೆ.

ಮುಂದುವರೆಸಿ ಮಾತನಾಡಿದ ಅವರು ಎನ್‌ಡಿಎ ಪರಿವಾರ ಅಥವಾ ಕುಟುಂಬ ಇದನ್ನು ಗಳಿಸಲಿದೆ. ಮೋದಿ ಮತ್ತೆ ಪ್ರಧಾನಿಯಾದರೆ ಶಿವಸೇನೆ ಸಂತಸಪಡಲಿದೆ ಎಂದಿದ್ದಾರೆ.

ತಂದೆ ಸಾವಿನ ದಿನವೇ ಮಗಳ ಪರೀಕ್ಷೆ – ಸಿಬಿಎಸ್‍ಇಯಲ್ಲಿ ರೂಪಾ ಉತ್ತಮ ಸಾಧನೆ

ತಂದೆ ಶಿವಳ್ಳಿ ಸಾವಿನ ದುಃಖದ ಮಧ್ಯೆಯೂ ಅವರ ಎರಡನೇ ಮಗಳು ಕಣ್ಣೀರು ಹಾಕುತ್ತಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದಳು. ಇಂದು ಸಿಬಿಎಸ್‍ಸಿ 10ನೇ ತರಗತಿಯ ಫಲಿತಾಂಶ ಹೊರಬಂದಿದ್ದು, ಶಿವಳ್ಳಿ ಪುತ್ರಿ ರೂಪಾ ಪರೀಕ್ಷೆಯಲ್ಲಿ ಶೇ.76ರಷ್ಟು ಅಂಕಗಳನ್ನು ಪಡೆದಿದ್ದಾಳೆ.

ರೂಪಾ ತನ್ನ ತಂದೆ ಸಿ.ಎಸ್ ಶಿವಳ್ಳಿ ನಿಧನರಾದ ದಿನ ಇಂಗ್ಲಿಷ್ ಪರೀಕ್ಷೆ ಬರೆದಿದ್ದಳು. ಈಗ ಆಕೆ ಶೇ.76ರಷ್ಟು ಅಂಕ ಪಡೆದಿದ್ದಾಳೆ. ರೂಪಾ ಕಣ್ಣೀರು ಹಾಕುತ್ತಲೇ ಪರೀಕ್ಷೆ ಬರೆದು ನಂತರ ತನ್ನ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಳು.

ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೂಪಾ, “ನಾನು ಶೇ. 76ರಷ್ಟು ಅಂಕ ಗಳಿಸಿದ್ದೇನೆ. ಸಮಾಜ ವಿಜ್ಞಾನದಲ್ಲಿ 91, ಕನ್ನಡ 87, ವಿಜ್ಞಾನ 82, ಗಣಿತ 55, ಇಂಗ್ಲಿಷ್ 65 ಅಂಕಗಳು ಬಂದಿದೆ. ನಮ್ಮ ತಂದೆಗೆ ನಾನು ರಾಜಕೀಯ ಮತ್ತು ಸಮಾಜ ಸೇವೆಯಲ್ಲಿರಬೇಕು ಎಂದು ಆಸೆ ಇತ್ತು. ಈಗ ಅವರ ಕನಸು ನನಸು ಮಾಡಿ ಶೃದ್ಧಾಂಜಲಿ ಸಲ್ಲಿಸುತ್ತೇನೆ. ನಮ್ಮ ತಾಯಿಗೆ ಎಲ್ಲರೂ ಸಪೋರ್ಟ್ ಮಾಡುತ್ತಿದ್ದೇವೆ, ಅವರು ಗೆದ್ದು ಬರಲಿ. ಬಡವರು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂಬುದು ನನ್ನ ಗುರಿ. ತಂದೆ ಇದ್ದರೆ ಖುಷಿಪಡುತ್ತಿದ್ದರು” ಎಂದು ಹೇಳುತ್ತಾ ರೂಪಾ ಶಿವಳ್ಳಿ ಭಾವುಕಳಾದಳು.

ಸಿಎಸ್ ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಮಾರ್ಚ್ 22ರಂದು ಮೃತಪಟ್ಟಿದ್ದರು. ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ಕಾರ್ಯಾಚರಣೆ ನಡೆದ ಸ್ಥಳದಲ್ಲೇ ಹಾಜರಿದ್ದು, ಎಲ್ಲಾ ಕಾರ್ಯದ ಉಸ್ತುವಾರಿ ವಹಿಸಿದ್ದರು. ಈ ವೇಳೆಯೇ ಅವರು ಬಳಲಿದ್ದರು ಎಂಬ ಮಾಹಿತಿ ಲಭಿಸಿತು.

ಇಂದು 5 ವಿವಿಪ್ಯಾಟ್‌ಗಳ ಮತ ಎಣಿಕೆ ಶುರು!

ಲೋಕಸಭಾ ಚುನಾವಣೆಯ ಮತ ಎಣಿಕೆ ವೇಳೆ, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 5 ಮತಗಟ್ಟೆಗಳ ಬದಲು, ಒಟ್ಟಾರೆ ಮತಗಟ್ಟೆಗಳ ಶೇ.50ರಷ್ಟರಲ್ಲಿ ವಿವಿಪ್ಯಾಟ್‌ಗಳ ಮತ ಎಣಿಕೆ ಕೋರಿದ್ದ ವಿಪಕ್ಷಗಳ ಮನವಿಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ವಜಾಗೊಳಿಸಿದೆ. ಹೀಗಾಗಿ ಮೇ 23ರಂದು ಮಧ್ಯಾಹ್ನದ ವೇಳೆಗೆ ಲೋಕಸಭಾ ಚುನಾವಣೆ ಫಲಿತಾಂಶದ ಸ್ಪಷ್ಟಚಿತ್ರಣ ಹೊರಬೀಳುವುದು ಖಚಿತವಾಗಿದೆ. ಒಂದು ವೇಳೆ ವಿಪಕ್ಷಗಳ ಮನವಿಯನ್ನು ಸುಪ್ರೀಂಕೋರ್ಟ್‌ ಮಾನ್ಯ ಮಾಡಿದ್ದೇ ಆಗಿದ್ದಲ್ಲಿ, ಪೂರ್ಣ ಪ್ರಮಾಣದ ಪಲಿತಾಂಶ ಸಿಗಲು 4-5 ದಿನ ಕಾಯಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇತ್ತು.

ಸುಪ್ರೀಂಕೋರ್ಟ್‌ನ ಈ ಸ್ಪಷ್ಟಆದೇಶದ ಹೊರತಾಗಿಯೂ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ 21 ವಿಪಕ್ಷಗಳ ನಾಯಕರು, ಪಾರದರ್ಶಕ ವ್ಯವಸ್ಥೆ ಜಾರಿ ಕುರಿತ ತಮ್ಮ ಹೋರಾಟವನ್ನು ಮುಂದುವರೆಸುವ ಮಾತುಗಳನ್ನು ಆಡಿದ್ದಾರೆ.

ಏರಿಕೆ ಇಲ್ಲ:

ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿದ್ದ ವಿಪಕ್ಷಗಳು ಈ ಹಿಂದೆ ಸುಪ್ರೀಂಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿದ್ದವು. ಅದರಲ್ಲಿ, ಲೋಕಸಭಾ ಚುನಾವಣೆಯ ಮತ ಎಣಿಕೆಯ ವೇಳೆ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾಡಲಾಗುವ ಯಾವುದಾದರೂ ಒಂದು ಮತಗಟ್ಟೆಯಲ್ಲಿನ ವಿವಿಪ್ಯಾಟ್‌ನ ಮತಚೀಟಿಯನ್ನು ತಾಳೆ ಹಾಕುವುದರ ಬದಲು, ಒಟ್ಟಾರೆ ಮತಗಟ್ಟೆಗಳ ಪೈಕಿ ಶೇ.50ರಷ್ಟರಲ್ಲಿ ವಿವಿಪ್ಯಾಟ್‌ನ ಮತ ಚೀಟಿಗಳನ್ನು ತಾಳೆ ಹಾಕಬೇಕು ಎಂದು ಕೋರಿದ್ದವು. ಆದರೆ ವಿಪಕ್ಷಗಳ ಬೇಡಿಕೆಯನ್ನು ಮಾನ್ಯ ಮಾಡಿದರೆ ಪೂರ್ಣ ಪ್ರಮಾಣದಲ್ಲಿ ಫಲಿತಾಂಶ ನೀಡಲು 4-5 ದಿನ ಬೇಕಾಗಬಹುದು ಎಂದು ಚುನಾವಣಾ ಆಯೋಗ ಹೇಳಿತ್ತು.

ಈ ಅರ್ಜಿಯ ಕುರಿತ ಏ.8ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಪ್ರತಿ ವಿಧಾನಸಭಾ ಕ್ಷೇತ್ರದ 1 ಮತಗಟ್ಟೆಬದಲಿಗೆ 5 ಬೂತ್‌ಗಳ ವಿವಿಪ್ಯಾಟ್‌ ಚೀಟಿಗಳನ್ನು ಎಣಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಒಂದರ ಬದಲಿಗೆ 5 ಬೂತ್‌ಗಳಲ್ಲಿ ವಿವಿಪ್ಯಾಟ್‌ಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಇದಕ್ಕೆ ಹೆಚ್ಚಿನ ಮಾನವಶಕ್ತಿ ಬೇಕಾಗಿಲ್ಲ. ಹಾಗೆಯೇ ಫಲಿತಾಂಶ ಕೂಡ ಭಾರಿ ಪ್ರಮಾಣದಲ್ಲಿ ವಿಳಂಬವಾಗುವುದಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ತೃಪ್ತಿ ಮೂಡಿಸಲು ಈ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರಿದ್ದ ಪೀಠ ಹೇಳಿತ್ತು.

ಆದರೆ ಈ ತೀರ್ಪಿಗೆ ಅತೃಪ್ತಿ ವ್ಯಕ್ತಪಡಿಸಿದ್ದ ವಿಪಕ್ಷಗಳು, ಏ.8ರ ತೀರ್ಪು ಮರುಪರಿಶೀಲನೆ ಕೋರಿ ಮತ್ತೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿ ವಿಚಾರಣೆ ವೇಳೆ, ಮತದಾರರ ತೃಪ್ತಿ ಮತ್ತು ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಸಕ್ತ ಮಾಡಲಾದ ಶೇ.2ರಷ್ಟುಏರಿಕೆ ಬದಲು, ಕನಿಷ್ಠ ಶೇ.25ರಷ್ಟನ್ನಾದರೂ ಏರಿಸಬೇಕು ಎಂದು ಕೋರಿದ್ದವು.

ಆದರೆ ಈ ಅರ್ಜಿಯ ಕುರಿತು ವಿಚಾರಣೆ ನಡೆಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯನ್ನು ವಜಾ ಮಾಡಿತು. ಹೀಗಾಗಿ ವಿಚಾರಣೆ ಆಲಿಸಲೆಂದೇ ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿದ್ದ ಸಿಎಂ ಚಂದ್ರಬಾಬು ನಾಯ್ಡು ಸೇರಿ, ಹಲವು ವಿಪಕ್ಷಗಳ ನಾಯಕರು ತೀವ್ರ ನಿರಾಸೆ ಅನುಭವಿಸುವಂತೆ ಆಯಿತು.

2015ರ ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷರ ಬರಾಮ್‌ ಒಬಾಮಾ ಆಗಮನ ಹಿಂದಿನ ರಹಸ್ಯ ಬಯಲು!!

2015ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಬರಾಮ್ಒಬಾಮಾ ಬಂದಿದ್ದರ ಹಿಂದೆ, ದೊಡ್ಡ ಯೋಜನೆಯೊಂದು ಅಡಗಿತ್ತು ಎಂಬ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಭಾರತದ ಜೊತೆಗಿನ ಸಂಬಂಧ ವೃದ್ಧಿಯ ಜೊತೆಗೆ ತಮ್ಮ ಗುರಿ ಈಡೇರಿಸಿಕೊಳ್ಳಲು ಒಬಾಮಾ ಅವರು ರಾಜ್ಯೋತ್ಸವ ಕಾರ್ಯಕ್ರಮವನ್ನು ದಾಳವಾಗಿ ಬಳಸಿಕೊಂಡರು ಎಂದು ಒಬಾಮಾಗೆ ರಾಷ್ಟ್ರೀಯ ಭದ್ರತಾ ಅಧಿಕಾರಿಯಾಗಿದ್ದ ಬೆಂಜಮಿನ್ರೋಡ್ಸ್ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಪ್ಯಾರಿಸ್ಒಪ್ಪಂದ: ಜಾಗತಿಕ ತಾಪಮಾನ ಏರಿಕೆ ತಡೆಯಲು, ಅಭಿವೃದ್ಧಿ ಹೊಂದಿರುವ ಮತ್ತು ಹೊಂದುತ್ತಿರುವ ರಾಷ್ಟ್ರಗಳನ್ನು ಇಂಗಾಲ ಬಿಡುಗಡೆ ಕಡಿತ ಮಾಡುವ ಕುರಿತ ಒಪ್ಪಂದಕ್ಕೆ ಸಹಿ ಹಾಕಿಸಲು ವಿಶ್ವದ ಹಲವು ರಾಷ್ಟ್ರಗಳು ಮುಂದಾಗಿದ್ದವು. ಅಮೆರಿಕ ಇದರ ನೇತೃತ್ವ ವಹಿಸಿತ್ತು. ಒಪ್ಪಂದಕ್ಕೆ ಸಹಿ ಹಾಕಲು ವಿಶ್ವದ ಬಹುತೇಕ ದೇಶಗಳು ಒಪ್ಪಿಕೊಂಡಿದ್ದವು. ಆದರೆ ಹಾದಿಯಲ್ಲಿ ಅಮೆರಿಕಕ್ಕೆ ಅಡ್ಡಗಾಲಾಗಿದ್ದು ಚೀನಾ ಮತ್ತು ಭಾರತ. ಆದರೆ 2014ರಲ್ಲಿ ಚೀನಾ ಜೊತೆ ಮಾತುಕತೆ ನಡೆಸಿದ್ದ ಒಬಾಮಾ, ಪರಸ್ಪರ ಇಂಗಾಲ ಕಡಿತಕ್ಕೆ ಸಮ್ಮತಿ ಸೂಚಿಸಿದ್ದರು. ಹೀಗಾಗಿ ಒಬಾಮಾ ಹಾದಿಯಲ್ಲಿ ಉಳಿದಿದ್ದು ಭಾರತ ಮಾತ್ರ.

ವೇಳೆ ಅವರ ಆಪ್ತರು, ಅಮೆರಿಕಕ್ಕೆ ಪ್ಯಾರಿಸ್ಒಪ್ಪಂದಕ್ಕಿಂತ, ಭಾರತದ ಜೊತೆಗಿನ ಸಂಬಂಧ ಮುಖ್ಯ. ಆದರೆ ಪ್ಯಾರಿಸ್ಒಪ್ಪಂದವನ್ನೂ ಕೈಬಿಡುವಂತಿಲ್ಲ. ಹೀಗಾಗಿ ಮೋದಿ ಜೊತೆಗಿನ ನಿಮ್ಮ ಆಪ್ತ ಸಂಬಂಧವನ್ನ ಇನ್ನಷ್ಟುಗಾಢ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದರಂತೆ.

ಹಿನ್ನೆಲೆಯಲ್ಲಿ ಮೋದಿ ಅವರು ನೀಡಿದ ಆಹ್ವಾನದಂತೆ ಒಬಾಮಾ, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದು, ಗೌರವ ಸ್ವೀಕರಿಸಿ ಹೋಗಿದ್ದರು. ವೇಳೆ ಇಬ್ಬರ ನಡುವಣ ಸಂಬಂಧ ಮತ್ತಷ್ಟುಹತ್ತಿರವಾಗಿತ್ತು. ಮೂಲಕ ತಮ್ಮ ಗುರಿ ಈಡೇರಿಸಿಕೊಳ್ಳುವಲ್ಲಿ ಒಬಾಮಾ ಒಂದು ಹಂತ ದಾಟಿದ್ದರು.

ನಡುವೆ 2016ರಲ್ಲಿ ಪ್ಯಾರಿಸ್ನಲ್ಲಿ ಸಮ್ಮೇಳನ ಆಯೋಜನೆಗೊಂಡಿತ್ತು. ಆದರೆ ಅಭಿವೃದ್ದಿ ಹೊಂದುತ್ತಿರುವ ದೇಶವಾದ ಭಾರತ, ತನ್ನ ಇಂಗಾಲ ಬಿಡುಗಡೆ ಪ್ರಮಾಣ ಕಡಿತ ಮಾಡಲು ಸುಲಭವಾಗಿ ಒಪ್ಪಿರಲಿಲ್ಲ. ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಧಿಕಾರಿಗಳ ಜೊತೆ ಸ್ವತಃ ಒಬಾಮಾ ಅವರೇ ನಿಂತು ಚೌಕಾಸಿ ನಡೆಸಿದರೂ, ಭಾರತ ತನ್ನ ನಿಲುವು ಸಡಿಲಿಸಿರಲಿಲ್ಲ. ಹಂತದಲ್ಲಿ ಮಾತುಕತೆಯ ವೇದಿಕೆಗೆ ಪ್ರವೇಶ ಮಾಡಿದ ಮೋದಿ, ‘ನಮ್ಮ ದೇಶದಲ್ಲಿ ವಿದ್ಯುತ್ಸಂಪರ್ಕ ಇಲ್ಲದ 30 ಕೋಟಿ ಜನರಿದ್ದಾರೆ. ಹೀಗಿರುವಾಗ ನಮಗೆ ನೀವು ಕಲ್ಲಿದ್ದಲು, ಮತ್ತಿತರೆ ವಸ್ತುಗಳನ್ನು ಇಂಧನವಾಗಿ ಬಳಸಬೇಡಿ ಎನ್ನುತ್ತೀರಿ. ಇದು ಹೇಗೆ ಸಾಧ್ಯಎಂದು ತಮ್ಮ ಪಟ್ಟನ್ನು ಬಿಗಿಗೊಳಿಸಿದ್ದರು.

ಹಂತದಲ್ಲಿ ಒಬಾಮಾ ಅವರು ತಮ್ಮ ಕಪ್ಪು ಜನಾಂಗದ ಹಿನ್ನೆಲೆಯನ್ನೇ ಅಂತಿಮ ದಾಳವಾಗಿ ಬಳಸಿದರು.‘ನೋಡಿ, ನಾನೊಬ್ಬ ಕಪ್ಪು ಜನಾಂಗದ, ಆಫ್ರಿಕನ್ಮೂಲದ ಅಮೆರಿಕ ವ್ಯಕ್ತಿ. ಶ್ರೀಮಂತ ವ್ಯಕ್ತಿಗಳ ಗುಂಪು ನಿಮ್ಮ ಬೆನ್ನ ಮೇಲೆ ಕುಳಿತು, ನಿಮಗೆ ಅನ್ಯಾಯ ಮಾಡುತ್ತಿದ್ದಾಗ ಅಂಥವರ ಪರಿಸ್ಥಿತಿ ಏನಾಗಿರುತ್ತದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಾನು ಅದೇ ಸಿಟ್ಟಿನಲ್ಲಿ ತೀರ್ಮಾನ ತೆಗೆದುಕೊಂಡೇ ಎಂದಾದಲ್ಲಿ ಎಂದಿಗೂ ನಿಮ್ಮ ಮನವೊಲಿಕೆ ಸಾಧ್ಯವಿಲ್ಲ. ಆದರೆ ನಾನಿರುವ ಭೂಮಿಯಲ್ಲೇ ನಾನು ಬದುಕಬೇಕು. ಇದಕ್ಕಾಗಿ ಒಂದಷ್ಟುತ್ಯಾಗ ಅನಿವಾರ್ಯ. ನೀವು ಒಪ್ಪಂದಕ್ಕೆ ಸಹಿ ಹಾಕಿ. ನಿಮ್ಮ ಸೌರ ವಿದ್ಯುತ್ಯೋಜನೆಗಳಿಗೆ ಅಮೆರಿಕ ಬೆಂಬಲ ನೀಡಲಿದೆಎಂದು ಭರವಸೆ ನೀಡಿದರು. ಇದಕ್ಕೆ ಮೋದಿ ಕೂಡಾ ಒಪ್ಪಿ, ಪ್ಯಾರಿಸ್ಒಪ್ಪಂದಕ್ಕೆ ಸಹಿ ಹಾಕಿದರು.

ಹೀಗೆ ಮೋದಿ ಜೊತೆಗಿನ ಆಪ್ತತೆ, ತನ್ನ ಜನಾಂಗೀಯ ವರ್ಣವನ್ನೂ ಬಳಸುವ ಮೂಲಕ ಒಮಾಮಾ ತಮ್ಮ ಗುರಿ ಈಡೇರಿಸಿಕೊಂಡರು ಎಂದು ರೋಡ್ಸ್ಹೇಳಿದರು.

ಡಿಕೆಶಿ ಡಬಲ್ ಗೇಮ್ ಗೆ ಎಚ್ಡಿಕೆ ಹೋಸ ಸಂಕಷ್ಟ!

ಮೈತ್ರಿ ಸರ್ಕಾರವನ್ನು ಉಳಿಸಿಕೋಳಲ್ಲು ಹೋಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಕ್ಕಟ್ಟಿಗೆ ಸಿಲುಕಿದ್ದಾರೆ.

`ಜೋಡೆತ್ತು’ಗಳ ರೀತಿ ಇದ್ದ ಸಿಎಂ ಮತ್ತು ಸಚಿವ ಡಿಕೆ ಶಿವಕುಮಾರ್ ನಡುವೆ ಸಂಧಾನಕ್ಕೆ ಸಂಬಂಧಿಸಿದಂತೆ ಇದೀಗ ವೈಮನಸ್ಸು ಎದ್ದಿದೆ. ಈ ಮೂಲಕ ಸಂಕಷ್ಟದ ಸಮಯದಲ್ಲಿ ಜೊತೆಯಾಗಿದ್ದ ಡಿಕೆಶಿ ಅವರು ಸಿಎಂ ಮೇಲೆ ಗರಂ ಆದ್ರಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಸರ್ಕಾರ ಸೇಫ್ ಮಾಡಿಕೊಳ್ಳುವ ಸಲುವಾಗಿ ಡಿಕೆಶಿ ಹಾಗೂ ರಮೇಶ್ ಜಾರಕಿಹೊಳಿ ಒಂದು ಮಾಡಲು ಸಿಎಂ ಮುಂದಾಗಿದ್ದಾರೆ. ಆದರೆ ಮುಖ್ಯಮಂತ್ರಿ ಈ ಪ್ರಯತ್ನ ಒಂದು ಹಂತದಲ್ಲಿ ಫಲ ಕೊಟ್ಟರೂ ಆ ಬಳಿಕ ಅದು ಫಲಪ್ರದವಾಗಲಿಲ್ಲ.

ವೈಮನಸ್ಸು ಎದ್ದಿದು ಯಾಕೆ?
ರೆಬೆಲ್ ರಮೇಶ್ ಜಾರಕಿಹೊಳಿಯನ್ನು ಜೆಡಿಎಸ್‍ಗೆ ಸೆಳೆಯಲು ಸಿಎಂ ಮುಂದಾಗಿದ್ದರು. ಕಾಂಗ್ರೆಸ್‍ನಲ್ಲಿ ಇರುಸು ಮುರುಸಾದ್ರೆ ನಮ್ಮ ಜೊತೆ ಬನ್ನಿ ಎಂದು ರಮೇಶ್‍ಗೆ ಹೇಳಲು ಸಿಎಂ ಪ್ಲಾನ್ ಮಾಡಿದ್ದರು. ಆದರೆ ಸಿಎಂ ನಡೆಯನ್ನು ಒಪ್ಪಿಕೊಳ್ಳಲು ಬಿಲ್‍ಕುಲ್ ಸಾಧ್ಯವಿಲ್ಲ ಎಂದು ಸಚಿವ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಮೇಶ್ ಇದ್ದರೆ ಕಾಂಗ್ರೆಸ್‍ನಲ್ಲೇ ಇರಲಿ. ಅವರು ಬಯಸಿದರೆ ಸ್ನೇಹಕ್ಕೂ ಸೈ, ಅಂತರ ಕಾಯ್ದುಕೊಳ್ಳಲು ಸೈ. ರಮೇಶ್ ಹೋಗೋದಾದ್ರೆ ಬಿಜೆಪಿಗೆ ಹೋಗಲಿ. ಆದರೆ ಜೆಡಿಎಸ್ ಜೊತೆ ಗುರುತಿಸಿಕೊಂಡರೆ ಇದನ್ನ ನಾನು ಒಪ್ಪಲ್ಲ. ಜೆಡಿಎಸ್ ರಮೇಶ್‍ಗೆ ಆಶ್ರಯ ಕೊಟ್ಟರೆ ಅದು ಮೈತ್ರಿಗೆ ಮಾಡುವ ದ್ರೋಹವಾಗುತ್ತದೆ. ನನಗೆ ಪಕ್ಷ ಮೊದಲು ಸರ್ಕಾರ ನಂತರ. ನಾವು ಎಷ್ಟೇ ಆತ್ಮೀಯರಾದರೂ ನನಗೆ ಖಾಸಗಿ ಗೆಳೆತನಕ್ಕಿಂತ ಪಕ್ಷವೆ ಮುಖ್ಯ. ಆಮೇಲೆ ನಿಮ್ಮ ಸಂಪುಟದ ಸಚಿವ ಸ್ಥಾನ ಎಂದಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಒಟ್ಟಿನಲ್ಲಿ ಸಚಿವ ಡಿಕೆ ಶಿವಕುಮಾರ್ ಅವರು ಸಿಎಂ ಕುಮಾರಸ್ವಾಮಿಯ ಈ `ಡಬಲ್’ ತಂತ್ರವನ್ನು ನೇರವಾಗಿ ವಿರೋಧಿಸಿದ್ದು, ಇದೀಗ ಸಿಎಂ ಮತ್ತೆ ಟೆನ್ಶನ್ ಆರಂಭವಾಗಿದೆ ಎನ್ನಲಾಗುತ್ತಿದೆ.