ಮಾಜಿ ಪಾಕ್ ಕ್ರಿಕೆಟ್ ಕೋಚ್ ಫ್ಲವರ್‌ ಬಿಚ್ಚಿಟ್ಟ ಭಯಾನಕ ಸತ್ಯ!

ಪಾಕಿಸ್ತಾನ ದೇಶದಲ್ಲಿನ ಬದುಕು ಮತ್ತು ಪಾಕ್ ಕ್ರಿಕೆಟ್ ಮಂಡಳಿಯಲ್ಲಿನ ಸುಮಾರು ಐದು ವರ್ಷಗಳ ಕಾಲ ಕಳೆದ ಅನುಭವದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್‌ ಫ್ಲವರ್ ಬಾಯ್ಬಿಟ್ಟಿದ್ದಾರೆ.

ಪಿಸಿಬಿಯು ಫ್ಲವರ್ ಜೊತೆಗಿನ ಒಪ್ಪಂದ ಮುಂದುವರಿಸದಿರಲು ನಿರ್ಧರಿಸಿದ ಬಳಿಕ ಫ್ಲವರ್ ಪಾಕ್‌ ಬಗ್ಗೆ ಮೊದಲ ಬಾರಿ ತುಟಿ ಬಿಚ್ಚಿದ್ದು, ಸ್ನೇಹಿ ಜನರು ಪಾಕಿಸ್ತಾನ ದೇಶದಲ್ಲಿರುವುದು ಒಳ್ಳೆಯ ವಿಚಾರ. ಹಾಗೇ ಸ್ವಾತಂತ್ರ್ಯದ ಕೊರತೆ ಮತ್ತು ಭದ್ರತೆ ವಿಚಾರ ಪಾಕಿಸ್ತಾನದಲ್ಲಿ ಬದುಕುವ ನಿಟ್ಟಿನಲ್ಲಿ ಇರುವ ತುಂಬಾನೇ ನಿರಾಶಾದಾಯಕವಾದ ಸಂಗತಿ ಎಂದು ಹೇಳಿದರು.

2014ರಿಂದಲೂ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಫ್ಲವರ್ ಅವರೊಂದಿಗಿನ ಒಪ್ಪಂದವನ್ನು ನವೀಕರಿಸುವ ಜತೆಗೆ ಇಡೀ ಕೋಚಿಂಗ್ ವಿಭಾಗ ಮತ್ತು ಬೆಂಬಲ ಸಿಬ್ಬಂದಿ ವರ್ಗವನ್ನು ಬದಲಾಯಿಸಲು ಪಿಸಿಬಿ ಬಯಸಿದೆ. 2019ರ ವಿಶ್ವಕಪ್‌ನಲ್ಲಿ ಪಾಕ್ ತಂಡ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಕಾರಣಕ್ಕೆ ಪಿಸಿಬಿ ಈ ನಿರ್ಧಾರ ತೆಗೆದುಕೊಂಡಿದೆ.

ಇಂಗ್ಲೆಂಡ್ ವಿಶ್ವಕಪ್ ಟ್ರೋಫಿ ಗೆಲ್ಲೋ ಮೂಲಕ ಹೊಸ ದಾಖಲೆ!

ನ್ಯೂಜಿಲೆಂಡ್ ಇಂಗ್ಲೆಂಡ್ ಈಗ ವಿಶ್ವ ಕ್ರಿಕೆಟ್‌ನ ಹೊಸ ಚಾಂಪಿಯನ್. ಇದೇ ಮೊದಲ ಬಾರಿಗೆ ನನನನ ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ. ಈ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಇಂಗ್ಲೆಂಡ್ ಕೂಡ 241 ರನ್ ಸಿಡಿಸಿ ಆಲೌಟ್ ಆಯಿತು. ಹೀಗಾಗಿ ಪಂದ್ಯ ಟೈಗೊಂಡಿತು.

ಸೂಪರ್ ಓವರ್‌ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಸೂಪರ್ ಓವರ್‌ನಲ್ಲೂ ಟೈಗೊಂಡಿತು. ಹೀಗಾಗಿ ಗರಿಷ್ಠ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ರೋಚಕ ಗೆಲುವು ಸಾಧಿಸಿತು.

ಗೆಲುವಿಗೆ 242 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಕಿವೀಸ್ ಬೌಲರ್‌ಗಳ ಬೆಂಕಿ ಚೆಂಡು ಆಂಗ್ಲರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಜೇಸನ್ ರಾಯ್ 17 ರನ್ ಸಿಡಿಸಿ ಔಟಾದರು. ಜೂ ರೂಟ್ ಕೇವಲ 7 ರನ್‌ಗೆ ಔಟಾದರು. ಆದರೆ ಜಾನಿ ಬೈರ್‌ಸ್ಟೋ 36 ರನ್ ಕಾಣಿಕೆ ನೀಡಿದರು.

ನಾಯಕ ಇಯಾನ್ ಮಾರ್ಗನ್ ಹೋರಾಟ 9 ರನ್‌ಗೆ ಅಂತ್ಯವಾಯಿತು. 86 ರನ್‌ಗೆ 4 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಹೋರಾಟ ಇಂಗ್ಲೆಂಡ್ ತಂಡಕ್ಕೆ ಹೊಸ ಆಸೆ ಚಿಗುರಿಸಿತು. ಸ್ಟೋಕ್ಸ್ ಹಾಗೂ ಬಟ್ಲರ್ ತಲಾ ಹಾಫ್ ಸೆಂಚುರಿ ಸಿಡಿಸಿದರು. ಬಟ್ಲರ್ 59 ರನ್ ಸಿಡಿಸಿ ಔಟಾದರು.

ಕ್ರಿಸ್ ವೋಕ್ಸ್ ಕೇವಲ 2 ರನ್‌ಗೆ ಔಟಾದರು. ಇಂಗ್ಲೆಂಡ್ ಗೆಲುವಿಗೆ 18 ಎಸೆತ 34 ರನ್ ಬೇಕಿತ್ತು. ಸ್ಟೋಕ್ಸ್  ಸಿಕ್ಸರ್ ಸಿಡಿಸೋ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಇತ್ತ ಲಿಯಾಮ್ ಪ್ಲಂಕೆಟ್ 10 ರನ್ ಸಿಡಿಸಿ ಔಟಾದರು. ಜೋಫ್ರಾ ಆರ್ಚರ್ ಶೂನ್ಯ ಸುತ್ತಿದರು. 8 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಗೆಲುವಿಗೆ 6 ಎಸೆತದಲ್ಲಿ 15 ರನ್ ಬೇಕಿತ್ತು.

ಆರಂಭಿಕ 2 ಎರಡು ಎಸೆತದಲ್ಲಿ ಯಾವುದೇ ರನ್ ಬಂದಿಲ್ಲ, ಆದರೆ 3ನೇ ಎಸೆತದಲ್ಲಿ ಸ್ಟೋಕ್ಸ್  ಸಿಕ್ಸರ್ ಸಿಡಿಸಿದರೆ, ನಾಲ್ಕನೇ ಎಸತದಲ್ಲಿ ಓವರ್ ಥ್ರೋ ಇಂಗ್ಲೆಂಡ್‌ಗೆ ಮತ್ತೆ 6 ರನ್ ನೀಡಿತು. ಆದಿಲ್ ರಶೀದ್ ರನೌಟ್ ಬಳಿಕ, ಅಂತಿ 1 ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ 2ನೇ ರನ್‌ಗೆ ಯತ್ನಿಸಿದ ಪ್ಲಂಕೆಟ್ ರನೌಟ್‌ಗೆ ಬಲಿಯಾದರು. ಈ ಮೂಲಕ ಇಂಗ್ಲೆಂಡ್ 241 ರನ್‌ಗೆ  ಆಲೌಟ್ ಆಯಿತು. ಸ್ಟೋಕ್ಸ್ ಅಜೇಯ 84 ರನ್ ಸಿಡಿಸಿದರು. ಈ ಮೂಲಕ ಪಂದ್ಯ ಟೈಗೊಂಡಿತು.ಹೀಗಾಗಿ ಸೂಪರ್ ಓವರ್‌ ಮೂಲಕ ಫಲಿತಾಂಶ ನಿರ್ಧರಿಸಲಾಯಿತು.

ಸೂಪರ್ ಓವರ್‍‌ನಲ್ಲಿ ಇಂಗ್ಲೆಂಡ್ 15 ರನ್ ಸಿಡಿಸಿತು. ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಅಬ್ಬರಿಸಿದರು. 2 ಬೌಂಡರಿ ನೆರವಿನಿಂದ ನ್ಯೂಜಿಲೆಂಡ್‌ಗೆ 16 ರನ್ ಟಾರ್ಗೆಟ್ ನೀಡಲಾಯಿತು. ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಟಿಲ್ ಹಾಗೂ ಜೇಮ್ಸ್ ನೀಶಮ್ ರನ್ ಚೇಸ್ ಮಾಡಲು ಕಣಕ್ಕಿಳಿದರು. ಜೇಮ್ಸ್ ನೀಶನ್ ಭರ್ಜರಿ ಸಿಕ್ಸರ್ ಪಂದ್ಯಕ್ಕೆ ರೋಚಕ ತಿರುವು ನೀಡಿತು. ಆದರೆ ಅಂತಿಮ 1 ಎಸೆತದಲ್ಲಿ 2 ರನ್ ಬೇಕಿತ್ತು. 2ನೇ ರನ್‌ಗೆ ಪ್ರಯತ್ನಿಸಿದ ಗಪ್ಟಿಲ್ ರನೌಟ್‌ಗೆ ಬಲಿಯಾದರು.ಪಂದ್ಯ ಮತ್ತೆ ಟೈಗೊಂಡಿತು. ಆದರೆ ಗರಿಷ್ಠ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತು. ಕ್ರಿಕೆಟ್ ಜನಕರು ಇದೇ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದಿಕೊಂಡಿತು. ಆದರೆ ದಿಟ್ಟ ಹೋರಾಟ ನೀಡಿದರೂ ನ್ಯೂಜಿಲೆಂಡ್‌ಗೆ ಅದೃಷ್ಠ ಕೈಹಿಡಿಯಲಿಲ್ಲ. ಸತತ 2ನೇ ಬಾರಿ ನ್ಯೂಜಿಲೆಂಡ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ನ್ಯೂಜಿಲೆಂಡ್ ವಿರುದ್ಧ ಭಾರತದ ಸೋಲಿಗೆ ಕಾರಣ ಯಾರು ಎಂಬ ​ಸಮೀಕ್ಷೆ ವಿರುದ್ಧ ರೊಚ್ಚಿಗೆದ್ದ ಅಭಿಮಾನಿಗಳು

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಸೋತ ನಂತರ ಟೀಮ್ ಇಂಡಿಯಾ 2019 ಐಸಿಸಿ ಕ್ರಿಕೆಟ್ ವಿಶ್ವಕಪ್‌ನಿಂದ ಹೊರಗುಳಿದಿದೆ. ಆಟದ ನಂತರ, ತಂಡದ ಸೋಲನ್ನು ಅವಮಾನಿಸಲು ಆನ್‌ಲೈನ್ ಅಭಿಯಾನಕ್ಕೆ ಪ್ರಯತ್ನಿಸಿದ ಮಾಧ್ಯಮದ ವಿರುದ್ಧ ಅಭಿಮಾನಿಗಳು ಮತ್ತು ಕ್ರಿಕೆಟಿಗರಿಂದ ಟೀಕೆಗಳು ಕೇಳಿ ಬುರುತ್ತಿವೆ.

ಖಾಸಗೀ ಸುದ್ದಿ ಮಾಧ್ಯಮದವರು ಟ್ವಿಟರ್​​ನಲ್ಲಿ ತಂಡದ ಸೋಲಿಗೆ ಕಾರಣರಾದ ಯಾರು ಎಂದು ಮೂರು ಆಯ್ಕೆ ಭಾರತ ತಂಡದ ಆಟಗಾರರ ಹೆಸರು ಸೂಚಿಸಿ ಕ್ರಿಕೆಟ್​ ಅಭಿಮಾನಿಗಳಿಂದ ಅಭಿಪ್ರಾಯ ಕಲೆಹಾಕಲು ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಕ್ರಿಕೆಟ್​ನ ಅಭಿಮಾನಿಗಗಳು ಸೇರಿದಂತೆ ಕ್ರಿಕೆಟಿಗರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯದಮ ಟ್ವಟಿರ್​ ಫೋಲ್​ಅನ್ನು ಈ ಕೆಳಗೆ ನೀಡಲಾಗಿದೆ.

ನಾಳೆ ವಿಶ್ವಕಪ್ ಸಮರದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಗೆಲುವಿಗಾಗಿ ಪಾಕ್ ಪ್ರಾರ್ಥನೆ!!

ನಾಳೆ ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂನಲ್ಲಿ  ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಇಂಗ್ಲೆಂಡ್​ ಮುಖಾಮುಖಿಯಾಗಲಿದೆ. ಟೀಂ ಇಂಡಿಯಾದ ಗೆಲುವಿನ ನಾಗಲೋಟ ನಾಳೆ ಕೂಡ ಮುಂದುವರೆಯೋ ಮುನ್ಸೂಚನೆ ಇದೆ. ವಿಶೇಷ ಅಂದ್ರೇ ನಾಳೆ  ಭಾರತದ ಗೆಲುವಿಗೆ ಪಾಕ್​ ಕೂಡ ಪ್ರಾರ್ಥಿಸುತ್ತಿದೆ. ಇದಕ್ಕೆ ಕಾರಣ ಏನು ಗೊತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್.

ಕ್ರಿಕೆಟ್​ ಪಂದ್ಯದ ವೇಳೆ ಇಂಡಿಯಾ ವಿನ್ ಆಗ್ಲಿ ಅಂತ ಭಾರತೀಯರು ಬೇಡಿಕೊಳ್ಳುವುದು ಕಾಮನ್. ಆದ್ರೆ  ನಾಳಿನ ಪಂದ್ಯವನ್ನು ಗಮನಿಸೋದಾದರೇ, ಪಾಕಿಸ್ತಾನ ಕೂಡ ಟೀಂ ಇಂಡಿಯಾ ನಾಳೆ ಮ್ಯಾಚ್ ವಿನ್ ಆಗ್ಲಿ ಅಂತ ಬೇಡಿಕೊಳ್ಳುತ್ತಿದ್ದಾರೆ.ಕಾರಣ ಇಷ್ಟೆ..ನಾಳೆ ಏನಾದ್ರು ಇಂಗ್ಲೆಂಡ್ ವಿನ್ ಆದ್ರೆ ಪಾಕಿಸ್ತಾನ ತಂಡ ವಿಶ್ವಕಪ್ ನಿಂದ ಹೊರಹೋಗೊ ಸಾದ್ಯತೆ ಇದೆ.

ನಾಳೆ ಇಂಗ್ಲೆಂಡ್ ವಿರುದ್ದ ಭಾರತ ವಿನ್ ಆದ್ರೆ ಸೆಮಿಫೈನಲ್ ಲಿಸ್ಟ್ ಸಲ್ಲಿ ಭಾರತ ತಂಡ ಇರೋದು ಪಕ್ಕಾ..ಅದೇ ಇಂಗ್ಲೆಂಡ್ ಈ ಪಂದ್ಯ‌ ಗೆದ್ದರೆ 10 ಪಾಯಿಂಟ್ ಗಳೊಂದಿಗೆ ಸೆಮಿಫೈನಲ್ ಗೆ ಹತ್ತಿರವಾಗುತ್ತೆ.ಆದ್ರೆ ವಿಪರ್ಯಾಸ ಅಂದ್ರೆ ಇಂಗ್ಲೆಂಡ್ ಗೆಲುವು ಪಾಕಿಸ್ತಾನಕ್ಕೆ ಮುಳುವಾಗುತ್ತೆ. ಮೂರು ಗೆಲುವು ಮೂರು ಸೋಲು ಒಂದು ಮಳೆಯಿಂದ ರದ್ದಾದ ಪಂದ್ಯದಿಂದ ಪಾಕಿಸ್ತಾನ 7 ಪಾಯಿಂಟ್ ಗಳೊಂದಿಗೆ ಆರನೆ ಸ್ಥಾನದಲ್ಲಿದೆ.

ನಾಳೆ ಪಂದ್ಯದಲ್ಲಿ ಭಾರತ ವಿನ್ ಆದ್ರೆ ಇಂಗ್ಲೆಂಡ್‌ ತಂಡ ಸಂಕಷ್ಟಕ್ಕೆ ಸಿಲುಕುತ್ತೆ.8 ಪಾಯಿಂಟ್ ಗಳೊಂದಿಗೆ ನಾಲ್ಕನೆ ಸ್ಥಾನದಲ್ಲೆ ಇರಬೇಕಾಗುತ್ತೆ.ಮುಂದಿನ ಪಂದ್ಯಗಳನ್ನು ಗೆದ್ದು ಇಂಗ್ಲೆಂಡ್ ಸ್ಥಾನದಲ್ಲಿ ನಮ್ಮ ತಂಡ ನೋಡುವ ಆಸೆ ಪಾಕಿಸ್ತಾನ ತಂಡದ್ದು.ಇದೇ ಕಾರಣಕ್ಕೆ ಮೊದಲ ಭಾರಿಗೆ ಪಾಕಿಸ್ತಾನ ಅಭಿಮಾನಿಗಳು ಭಾರತಕ್ಕೆ ಜೈ ಹೋ ಅಂತಿದ್ದಾರೆ.

ಅಪ್ಪ ಮಕ್ಕಳ ಜಗಳದಲ್ಲಿ ಮೂರನೇಯವರಿಗೆ ಲಾಭ : ಬಿ.ಎಸ್.ಯಡಿಯೂರಪ್ಪ

ಮೈತ್ರಿ ಪಕ್ಷಗಳಲ್ಲಿ ಅಷ್ಟೇ ಅಲ್ಲ. ಕುಮಾರಸ್ವಾಮಿ, ದೇವೇಗೌಡರ ನಡುವೆಯೂ ಹೊಂದಾಣಿಕೆಯೂ ಇಲ್ಲ. ಮಗ ಗ್ರಾಮ ವಾಸ್ತವ್ಯ ಮಾಡಲು ಮುಂದಾದರೆ, ಅಪ್ಪ ಮಧ್ಯಂತರ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟೀಕೆ ಮಾಡಿದ್ದಾರೆ.

ನಗರದ ಜಗನ್ನಾಥ ಭವನದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮಧ್ಯಂತರ ಚುನಾವಣೆಗೆ ಅವಕಾಶ ಕೊಡುವುದಿಲ್ಲ. ಬಿಜೆಪಿ ಪಕ್ಷದಲ್ಲಿ 105 ಶಾಸಕರ ಜೊತೆ ಜೆಡಿಎಸ್, ಕಾಂಗ್ರೆಸ್‍ ಪಕ್ಷದಲ್ಲಿರುವ ಅತೃಪ್ತ ಶಾಸಕರು ಇದ್ದಾರೆ. ಯೋಗ್ಯತೆ ಇಲ್ಲದ ಮೇಲೆ ಸರ್ಕಾರವನ್ನು ವಿಸರ್ಜಿಸಿ. ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದರು.

ನಾನು ಬಿಜೆಪಿ ಅಧ್ಯಕ್ಷನಾಗಿ ಸ್ಪಷ್ಟವಾಗಿ ಹೇಳಿದ್ದೇನೆ. ಮಧ್ಯಂತರ ಚುನಾವಣೆಗೆ ಅವಕಾಶ ಕೊಡುವುದಿಲ್ಲ. ನಾವು 105 ಶಾಸಕರು ಮತ್ತು ಅತೃಪ್ತ ಶಾಸಕರು ಇದ್ದಾರೆ. ನಿಮ್ಮ ಕೈಯಲ್ಲಿ ಆಗದೇ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು. ನನ್ನ ಪ್ರಕಾರ ಈ ಸರ್ಕಾರ ಇನ್ನು ಹೆಚ್ವು ದಿನ ಉಳಿಯಲ್ಲ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಒಂದಂಕಿಗೆ ತರುತ್ತೇವೆ ಎಂದವರೇ ಈಗ ಒಂದೊಂದು ಸ್ಥಾನ ಪಡೆದಿದ್ದಾರೆ. ಚುನಾವಣೆಯಲ್ಲಿ 43 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಪಡೆದಿದ್ದು, ಕುಮಾರಸ್ವಾಮಿ ಅವರಿಗೆ ಮಾನಮಾರ್ಯದೆ ಇದ್ದಿದ್ದರೆ ಚುನಾವಣೆ ಸೋಲಿನ ಬಳಿಕ ಸರ್ಕಾರವನ್ನು ವಿಸರ್ಜಿಸಿ ಮನೆಗೆ ಹೋಗಬೇಕಿತ್ತು. ಸರ್ಕಾರ ನಡೆಸಲು ಯೋಗ್ಯತೆ ಇಲ್ಲದ ಮೇಲೆ ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಜೆಡಿಎಸ್ ಪಕ್ಷದಲ್ಲಿ 20 ಅತೃಪ್ತರು ಇದಾರೆ. ಮೈತ್ರಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಒಂದು ವರ್ಷದ ಸಾಧನೆ ಪುಸ್ತಕದಲ್ಲಿ ಹೇಳಿಕೊಳ್ಳುವಂತಹದ್ದೇನೂ ಇಲ್ಲ. ಜನತಾದರ್ಶನ ಮಾಡಿ ಇಲ್ಲಸಲ್ಲದ ಸುಳ್ಳು ಭರವಸೆ ನೀಡಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡಿದ್ದಾರೆ‌. ಮಳೆಯ ಕುಂಟುನೆಪ ಹೇಳಿ ಗ್ರಾಮವಾಸ್ತವ್ಯ ರದ್ದು ಮಾಡಿ ಹೈದ್ರಾಬಾದ್ ನಿಂದ ವಾಪಸ್ ಬಂದಿದ್ದಾರೆ‌.ಒಂದು ದಿನದ ಇವರ ಗ್ರಾಮವಾಸ್ತವ್ಯದ ನಾಟಕವನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಟೀಕಿಸಿದರು.

20-20 ಸರ್ಕಾರದ ಕುಮಾರಸ್ವಾಮಿ ಗ್ರಾಮವಾಸ್ತವ್ಯದಲ್ಲಿ ಜನರಿಗೆ ನೀಡಿದ ಭರವಸೆಗಳು ಏನಾದವು? ಅವರು ಗ್ರಾಮವಾಸ್ತವ್ಯ ಮಾಡಿದ್ದ ಗ್ರಾಮಗಳಲ್ಲಿ ಆಗಿರುವ ಪ್ರಗತಿ ಏನು ಎಂಬುದನ್ನು ರಾಜ್ಯದ ಜನರಿಗೆ ತಿಳಿಸಲು ಪಕ್ಷದ ವತಿಯಿಂದ ಪುಸ್ತಕವೊಂದನ್ನು ಹೊರತರುತ್ತಿದ್ದು, ಜೂನ್ 24 ರಂದು ಪುಸ್ತಕ ಬಿಡುಗಡೆಗೊಳಿಸುತ್ತಿರುವುದಾಗಿ ಯಡಿಯೂರಪ್ಪ ಹೇಳಿದರು.

ಜನರಿಂದ ತಿರಸ್ಕೃತರಾಗಿರುವ ಕುಮಾರಸ್ವಾಮಿ ಅಪ್ಪನ ಮಾತು ಕೇಳಿಕೊಂಡು ಗ್ರಾಮವಾಸ್ತವ್ಯ ಮಾಡುವ ದೊಂಬರಾಟ ಆಡುತ್ತಿದ್ದಾರೆ. ಈ ರಾಜ್ಯದ ಮುಖ್ಯಮಂತ್ರಿ ಬರ ಪರಿಸ್ಥಿಯ ಬಗ್ಗೆ ಗಮನ ಹರಿಸಬೇಕು.ಅದು ಬಿಟ್ಟು ರಾಜಕೀಯ ದೊಂಬರಾಟ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬರ ಪರಿಸ್ಥಿತಿ ಸಂದರ್ಭದಲ್ಲಿ ಬಿಜೆಪಿ ರಾಜ್ಯದ ಜನ, ರೈತರ ಪರವಾಗಿ ನಿಲ್ಲುವ ಕೆಲಸ ಮಾಡುತ್ತಿದೆ. ಆಡಳಿತ ಪಕ್ಷದ ಮೇಲೆ ಅವಲಂಬಿತರಾಗದೇ ಜವಾಬ್ದಾರಿ ಅರಿತು ಪಕ್ಷದ ಶಾಸಕರು ತಮ್ಮತಮ್ಮ ಕ್ಷೇತ್ರಗಳಲ್ಲಿ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಗಳ ಮೂಲಕ ಕ್ಷೇತ್ರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು.ಬರ ಪರಿಹಾರ ಕಾಮಗಾರಿಗಳ ಬಗ್ಗೆ ವಾರಕ್ಕೆ ಒಂದು ಬಾರಿ ಪಕ್ಷದ ಕಚೇರಿಗೆ ವರದಿ ಕಳುಹಿಸಿಕೊಡಬೇಕು ಎಂದು ಯಡಿಯೂರಪ್ಪ ಬಿಜೆಪಿ ಶಾಸಕರಿಗೆ ಸೂಚಿಸಿದರು.

ರಾಜ್ಯದಲ್ಲಿ ಒಂದು ವರ್ಷದಿಂದ ಹಗಲು ದರೋಡೆ ನಡೆಯುತ್ತಿದೆ. ಕಾಮಗಾರಿ ನಡೆಸದೇ ಲೋಕೋಪಯೋಗಿ ಇಲಾಖೆಯಲ್ಲಿ ಬಿಲ್ ಪಾವತಿಸಲಾಗಿದೆ. ಈಗಲೂ ಒಂದು ಸಮೀಕ್ಷೆ ನಡೆದರೆ ರಾಜ್ಯದ ಶೇ.90 ರಷ್ಟು ಜನರು ಮೈತ್ರಿ ಸರ್ಕಾರ ತೊಲಗಲಿ ಎನ್ನುವುದು ತಿಳಿಯುತ್ತದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇನ್ನು ಹೆಚ್ಚು ದಿನ ಉಳಿಯುವುದಿಲ್ಲ. ರಾಜ್ಯ ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಕಾದು ನೋಡೋಣ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಮುನ್ನಡೆ ನೀಡಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಸದಸ್ಯತ್ವ ಅಭಿಯಾನ ಮಾಡುವ ವಿಶೇಷ ಗಮನ ನೀಡಬೇಕು ಎಂದು ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಿಗೆ ಯಡಿಯೂರಪ್ಪ ಸೂಚನೆ ನೀಡಿದರು.

ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್, ಸರ್ಕಾರ ಲಾಟರಿ ಹಗರಣದಲ್ಲಿ ಸಿಲುಕಿದ್ದ ಪೊಲೀಸ್ ಅಧಿಕಾರಿಗೆ ಮುಂಬಡ್ತಿ ಕೊಟ್ಟು ಬೆಂಗಳೂರು ಪೊಲೀಸ್ ಆಯುಕ್ತರನ್ನಾಗಿಸಿದೆ. ಮೇಲ್ಮನೆ ಸದಸ್ಯ ಗೋವಿಂದರಾಜು ಡೈರಿ ವಿಚಾರ ಇನ್ನೂ ಇತ್ಯರ್ಥಗೊಂಡಿಲ್ಲ. ಸರ್ಕಾರದ ಇಂತಹ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಹೋರಾಟ ಮಾಡುವುದೇ ಬಿಜೆಪಿಯ ಅಜೆಂಡಾ ಎಂದರು.

ಲೋಕಸಭಾ ಚುನಾವಣೆಗೆ ಬಿಜೆಪಿಗೆ ಬಹುಮತ ನೀಡುವ ಮೂಲಕ ಜನರು ಕರ್ನಾಟಕ, ಕೇಂದ್ರದಲ್ಲಿ ಮಹಾಘಟ್ ಬಂಧನ್ ಬೇಡ ಎಂಬ ಸಂದೇಶ ಸಾರಿದ್ದಾರೆ. ಈಗ ಇಡೀ ಭಾರತದ ಭವಿಷ್ಯವನ್ನು ನಿರ್ಧರಿಸುವ ಜವಾಬ್ದಾರಿ ಬಿಜೆಪಿಯ ಕೈಯಲ್ಲಿದೆ. ದಕ್ಷಿಣ ಭಾರತವೂ ಈಗ ಬಿಜೆಪಿಯ ನಿಗಾದಲ್ಲಿದೆ. ಕರ್ನಾಟಕದಲ್ಲಿ ಅಪೂರ್ಣವಾಗಿರುವ ಕೆಲಸ ಪೂರ್ಣಗೊಳಿಸಬೇಕಾಗಿದೆ. ಕರ್ನಾಟಕದಲ್ಲಿ ಜನರಿಂದ ತಿರಸ್ಕೃತವಾಗಿರುವ ಮೈತ್ರಿ ಸರ್ಕಾರವನ್ನು ಕಿತ್ತೊಗೆಯುವುದು ನಮ್ಮ ಪ್ರಮುಖ ಗುರಿ. ಎಷ್ಟು ಬೇಗ ಈ ಮೈತ್ರಿ ಸರ್ಕಾರವನ್ನು ಕಿತ್ತೊಗೆಯುತ್ತೇವೋ ಅಷ್ಟು ಈ ರಾಜ್ಯದ ಭವಿಷ್ಯ ಸುರಕ್ಷಿತವಾಗಿರುತ್ತದೆ.ಅದಕ್ಕೆ ಮಧ್ಯಂತರ ಚುನಾವಣೆಯ ಹೆಸರು ಹೇಳಿ ಹೆದರಿಸುವ ಪ್ರಯತ್ನ ನಡೆದಿದೆ.ಮಧ್ಯಂತರ ಚುನಾವಣೆಗೆ ಹೋಗಲು ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಯಾವ ಅಧಿಕಾರವೂ ಇಲ್ಲ. ಬಿಜೆಪಿ ಅದಕ್ಕೆ ಅವಕಾಶ ಕೊಡುವುದಿಲ್ಲ. ಕರ್ನಾಟಕದ ಜನತೆ ಮಧ್ಯಂತರ ಚುನಾವಣೆಯನ್ನು ಒಪ್ಪುವುದಿಲ್ಲ ಎಂದರು.

ಕಳೆದಬಾರಿ ಮಿಸ್ ಕಾಲ್ ಮೂಲಕ ಸದಸ್ವತ್ವ ಅಭಿಯಾನ ಆರಂಭಿಸಿದ್ದ ಬಿಜೆಪಿ ಪಕ್ಷ, ಈ ಬಾರಿ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ವಿಸ್ತಾರಕರ ಮೂಲಕ ಮತದಾರರ ಪಟ್ಟಿ ಆಧರಿಸಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲು ಉದ್ದೇಶಿಸಿದೆ. ಆಗಸ್ಟ್ 11ರವರಗೆ ಸದಸ್ಯತ್ವ ಅಭಿಯಾನ ನಡೆಯಲಿದ್ದು, 50 ಲಕ್ಷ ಸದಸ್ಯರ ನೋಂದಣಿ ಗುರಿ ಹೊಂದಲಾಗಿದೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮೇಲ್ಮನೆ ಸದಸ್ಯ ರವಿಕುಮಾರ್,ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿಗೆ ಅತೀ ದೋಡ್ಡ ಆಘಾತ : ‘ಇದು ನನ್ನ ಕೊನೆ ಚುನಾವಣೆ, ಮುಂದಿನ ಚುನಾವಣೆಯಲ್ಲಿ ನಾನು ನಿಲ್ಲೋದಿಲ್ಲಾ’

ಇದು ನನ್ನ ಕೊನೆ ಚುನಾವಣೆ, ಮುಂದಿನ ಚುನಾವಣೆಯಲ್ಲಿ ನಾನು ನಿಲ್ಲೋದಿಲ್ಲಾ ಎಂದು ತುಮಕೂರಿನಲ್ಲಿ ನೂತನ ಸಂಸದ ಜಿ.ಎಸ್.ಬಸವರಾಜು ಹೇಳಿದ್ದಾರೆ. ನಾನು ಕಾಂಗ್ರೆಸ್‌ಗೆ ಹೋಗುವುದಿಲ್ಲ.

ಅವರನ್ನು ಕರೆತರೋದಿಲ್ಲ ಎಂದ ಬಸವರಾಜು, ಕೆ.ಎನ್.ರಾಜಣ್ಣ ಸೇರಿ ಹಲವು ಕಾಂಗ್ರೆಸ್ ನಾಯಕರು ಸಹಕಾರ ನೀಡಿದ್ದಾರೆ ಎಂದರು. ಮುಂದಿನ ಚುನಾವಣೆಯಲ್ಲಿ ನಾನು ನಿಲ್ಲೋದಿಲ್ಲಾ. ಯಾರನ್ನಾದ್ರೂ ತಯಾರು ಮಾಡುತ್ತೇನೆ. ಆರೋಗ್ಯ ಚೆನ್ನಾಗಿದ್ದಾರೆ ನಾನು ಯಾರನ್ನಾದ್ರೂ ಸ್ಪರ್ಧೆಗೆ ನಿಲ್ಲಿಸುತ್ತೇನೆ.

ಮಧುಗಿರಿ ಹಾಲಿ ಶಾಸಕ ವೀರಭದ್ರಯ್ಯ ಕಾರ್ಯವೈಖರಿ ನೋಡಿ ನನಗೆ ಮತ ಚಲಾಯಿಸಿದ್ದಾರೆ. ಕೆ.ಎನ್.ರಾಜಣ್ಣ ಬೆಂಬಲಿಗರು ಸಿಂಪತಿಯಾಗಿ ಮತ ಹಾಕಿದ್ದಾರೆಂದು ಬಸವರಾಜು ಹೇಳಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ ವಿಚಿತ್ರ ರನೌಟ್, ವಿಡಿಯೋ ವೈರಲ್!

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿಚಿತ್ರ ರನೌಟ್ ಗಳ ಪಟ್ಟಿ ದೊಡ್ಡದಿದೆ. ಆದರೆ ಐಪಿಎಲ್ ನಲ್ಲಿ ಇತಿಹಾಸದಲ್ಲೇ ಇಂತಹ ವಿಚಿತ್ರ ರನೌಟ್ ಅನ್ನು ನೀವು ನೋಡಿರಲಿಕ್ಕಿಲ್ಲ. ಹೌದು ವಿಕೆಟ್ ಗೆ ಚೆಂಡು ಬಡಿಯದಿದ್ದರೂ ಬ್ಯಾಟ್ಸ್ ಮನ್ ರನೌಟ್ ಆಗಿರುವ ವಿಚಿತ್ರ ಘಟನೆ ನಡೆದಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಅಮಿತ್ ಮಿಶ್ರಾ ವಿಚಿತ್ರವಾಗಿ ರನೌಟ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಹೈದರಾಬಾದ್ ವಿರುದ್ಧ ಗೆಲ್ಲಲು ಡೆಲ್ಲಿ ತಂಡಕ್ಕೆ ಕೊನೆಯ ಓವರ್ ನಲ್ಲಿ 5 ರನ್ ಬೇಕಿತ್ತು. ಈ ವೇಳೆ ಖಲೀಲ್ ಅಹ್ಮದ್ ಬೌಲಿಂಗ್ ಮಾಡಿದ್ದು 20ನೇ ಓವರ್ ನ 4ನೇ ಎಸೆತದಲ್ಲಿ ಅಮಿತ್ ಮಿಶ್ರಾ ಸ್ಫೋಟಕ ಹೊಡೆತಕ್ಕೆ ಮುಂದಾದರೂ ಆದರೆ ಚೆಂಡು ಕೀಪರ್ ಕೈಸೇರಿದ್ದರಿಂದ ಸಿಂಗಲ್ ತೆಗೆದುಕೊಳ್ಳಲು ಮುಂದಾದರು. ಈ ವೇಳೆ ಕೀಪರ್ ವಿಕೆಟ್ ಗೆ ಚೆಂಡನ್ನು ಎಸೆದರು ಅದು ಮಿಸ್ ಆಗಿ ಬೌಲರ್ ಖಲೀಲ್ ಗೆ ಸಿಕ್ಕಿತ್ತು. ಕೂಡಲೇ ಖಲೀಲ್ ಚೆಂಡನ್ನು ನಾನ್ ಸ್ಟ್ರೈಕ್ ನಲ್ಲಿನ ವಿಕೆಟ್ ಗೆ ಎಸೆದರು. ಅಮಿತ್ ಮಿಶ್ರಾ ಅಡ್ಡ ಬಂದಿದ್ದರಿಂದ ಅವರಿಗೆ ತಗುಲಿ ವಿಕೆಟ್ ಮಿಸ್ ಆಯಿತು.

ಚೆಂಡು ಅಮಿತ್ ಮಿಶ್ರಾಗೆ ತಗುಲಿದ ಕೂಡಲೇ ಖಲೀಲ್ ರನೌಟ್ ಗೆ ಅಪೀಲ್ ಮಾಡಿದರು. ಅಂಪೈರ್ ಸತ್ಯಾಂಶ ತಿಳಿದುಕೊಳ್ಳಲು ಮೂರನೇ ಅಂಪೈರ್ ಮೊರೆ ಹೋದರು. ಅಲ್ಲಿ ನಿಜಾಂಶ ಹೊರಬಂದಿದ್ದು ಅಮಿತ್ ಮಿಶ್ರಾ ಔಟ್ ಎಂದು ನಿರ್ಧಾರಕ್ಕೆ ಬರಲಾಗಿತ್ತು.

ಬ್ಯಾಟ್ಸ್ ಮನ್ ಗಳು ಪಿಚ್ ನ ಮಧ್ಯದಲ್ಲಿ ಓಡಬಾರದು ಎಂದು ನಿಯಮವಿದೆ. ಅಲ್ಲದೇ ಉದ್ದೇಶಪೂರ್ವಕವಾಗಿ ಔಟ್ ಆಗುವುದನ್ನು ತಪ್ಪಿಸಿಕೊಳ್ಳಲು ಪಿಚ್ ನ ಮಧ್ಯದಲ್ಲಿ ಓಡಿದರೇ ಅವರನ್ನು ಔಟ್ ಎಂದು ಘೋಷಿಸಲಾಗುತ್ತದೆ.