ದರ್ಶನ್ ಹಾಕಿದ್ದು ಅಂತಿಂಥ ಚಾಲೆಂಜ್ ಅಲ್ಲ! ಓಪನ್ ಚಾಲೆಂಜ್ ಹಾಕಿದ್ದು ಯಾರಿಗೆ ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಬಹಳಷ್ಟು ಅಭಿಮಾನಿಗಳನ್ನು ಮತ್ತು ಹೆಸರು ಸಂಪಾದನೆ ಮಾಡಿರುವಂತಹ ದರ್ಶನ್ ರವರು ಅವರದೇ ಆದಂತಹ ಒಂದು ಅಭಿಮಾನಿಗಳ ಗುಂಪನ್ನು ಹೊಂದಿದ್ದಾರೆ ದರ್ಶನ್ ರವರಿಗಾಗಿ ಏನು ಮಾಡಲು ಸಿದ್ಧವಾಗಿ ಇರುವಂತಹ ಅದೆಷ್ಟೋ ಅಭಿಮಾನಿಗಳು ಇದ್ದಾರೆ ಅಂತಹ ಅಭಿಮಾನಿ ಬಳಗವನ್ನು ಹೊಂದಿರುವಂತಹ ದರ್ಶನ್ ರವರು ಒಂದು ಟ್ವೀಟ್ ಅನ್ನು ಮಾಡಿದ್ದರು ಅದೇನೆಂದರೆ ನಾನು ಒಂದು ನಾಯಕನಿಗೆ ಬಹಿರಂಗವಾಗಿ ಸವಾಲನ್ನು ಹಾಕುತ್ತಿದ್ದೇನೆ ಎಂದು ಹೇಳಿದ್ದರು.

ಆ ಒಂದು ಟ್ವೀಟ್ ದರ್ಶನ್ ಅಭಿಮಾನಿ ಗಳಲ್ಲದೆ ಕರ್ನಾಟಕದ ಸಿನಿಮಾ ವೀಕ್ಷಕರ ತಲೆಯೊಳಗೆ ಹುಳ ಬಿಟ್ಟಂತೆ ಆಗುತ್ತಿತ್ತು ಯಾರಿರಬಹುದು ದರ್ಶನ್ ಅವರು ಯಾಕೆ ಈ ರೀತಿ ಅದನ್ನು ಮಾಡಿದ್ದಾರೆ ಹಾಗೂ ಅವರ ಹಿನ್ನೆಲೆಯೇನು ಅವರ ಲೆಕ್ಕಾಚಾರಗಳು ಏನೆಂಬುದು ಯಾರಿಗೂ ಅರ್ಥವಾಗದೇ ತಲೆಕೆಡಿಸಿಕೊಂಡಿದ್ದರು.

ಸರಿಯಾಗಿ ಮಧ್ಯಾಹ್ನ 1ಗಂಟೆಗೆ ತನ್ನ ಫೇಸ್ಬುಕ್ ಫೇಸ್ ನಿಂದ ಲೈವ್ ಬರುತ್ತೇನೆ ಎಂದು ಹೇಳಿದಂತಹ ದರ್ಶನ್ ಗಾಗಿ ಎಷ್ಟು ಸಹಸ್ರಾರು ಅಭಿಮಾನಿಗಳು ಕಾದು ಕುಳಿತಿದ್ದರು ಯಾರ ಮೇಲೆ ಇವರು ಚಾಲೆಂಜ್ ಮಾಡುತ್ತಿದ್ದಾರೆ ಎಂದು ಅದಕ್ಕೆ ಬ್ರೇಕ್ ಹಾಕಿದಂತಾಗಿದೆ ದರ್ಶನ್ ರವರು ಓಪನ್ ಚಾಲೆಂಜ್ ವಿಷಯವನ್ನು ಬಹಿರಂಗಗೊಳಿಸಿದ್ದಾರೆ ಅದೇನೆಂದರೆ ಕುರುಕ್ಷೇತ್ರದ ಆಡಿಯೋ ಲಾಂಚ್ ಸಂದರ್ಭದಲ್ಲಿ ಇನ್ವಿಟೇಶನ್ ರೂಪದಲ್ಲಿ ಒಂದು ಕಾರ್ಡನ್ನು ಬಳಸಿದ್ದರು ಆ ಕಾಡಿನಲ್ಲಿ ದರ್ಶನ್ ರವರ ಚಿತ್ರವನ್ನು ಕಾಣದೆ ಇದ್ದಾಗ ಅಭಿಮಾನಿಗಳು ಆಕ್ರೋಶ ಹೊರಹಾಕಿದರು ಅದರ ಸಲುವಾಗಿ ದರ್ಶನ್ ರವರ ನಲ್ಲಿ ಬಂದು ಕುರುಕ್ಷೇತ್ರ ಎಂಬುದು ಹಲವಾರು ಹಿರಿಯ ನಟರು ಮತ್ತು ಸಹಸ್ರಾರು ತಂತ್ರಜ್ಞಾನಿಗಳು ಕೆಲಸ ಮಾಡಿರುವ ಅಂತದ್ದು ಇಲ್ಲಿ ನಾನು ಎಂಬುದು ಯಾವುದೇ ಇಲ್ಲ ಎಲ್ಲರೂ ಒಗ್ಗೂಡಿ ಮಾಡಿರುವುದರಿಂದ ಇಲ್ಲಿ ದರ್ಶನ್ ಅವಶ್ಯಕತೆ ಇರುವುದಿಲ್ಲ ಎಲ್ಲರೂ ದಯವಿಟ್ಟು ದರ್ಶನ್ ಅಭಿಮಾನಿಗಳು ಇದಕ್ಕೆ ಗೌರವ ಕೊಡಬೇಕು ಅಲ್ಲಿ ಅಂಬರೀಶ್ ಇದ್ದಾರೆ ಹಾಗೂ ನಿಖಿಲ್ ಇದ್ದಾರೆ ಎಂದು ಪ್ರತಿಯೊಬ್ಬರ ಹೆಸರನ್ನು ಹೇಳಿದಂತಹ ದರ್ಶನ್ ರವರು ಚಿತ್ರವನ್ನು ಕೇವಲ ಚಿತ್ರವನ್ನಾಗಿ ನೋಡಿರಿ ಅರ್ಜುನ್ ದುರ್ಯೋಧನ ಇನ್ನಿತರ ಪಾತ್ರಗಳಿಗೆ ಗೌರವ ನೀಡಿ ಎಂದು ನಾನು ನಿಮ್ಮ ಮುಂದೆ ಚಾಲೆಂಜ್ ಹಾಕುತ್ತೇನೆ ಎಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಮ್ಮ ರಾಜ್ಯದ ಸಿಎಂ ನೀವಾ, ಇಲ್ಲ ಮೋದಿನಾ? – ಪಬ್ಲಿಕ್ ಪ್ರಶ್ನೆಗೆ ದಂಗಾದ ಸಿಎಂ ಮಾಜಿ ಸಿಎಂ..!

ಪ್ರತಿ ಬಾರಿಯೂ ಮಾಧ್ಯಮಗಳ ವಿರುದ್ಧ ಕಿಡಿಕಾರುತ್ತಿದ್ದ ಮುಖ್ಯಮಂತ್ರಿಗಳು ಇಂದು ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ವಿರುದ್ಧ ತನ್ನ ಕೋಪ ಹೊರ ಹಾಕುವ ಮೂಲಕ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮಕ್ಕೆ ಗ್ರಾಮ ವಾಸ್ತವ್ಯ ಮಾಡಲು ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಗರಂ ಆಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ನಾಯಕರು ಸಿಎಂ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ನೀವಾ ಅಥವಾ ಮೋದಿಯೇ? ರಾಜ್ಯದ ಸಮಸ್ಯೆಯನ್ನು ನಿಮ್ಮ ಬಳಿ ಹೇಳಿಕೊಳ್ಳುವಂತಿಲ್ಲವೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ನಡೆದಿದ್ದು ಏನು?
ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಪ್ರತಿಭಟನಾನಿರತರ ಮೇಲೆ ಗರಂ ಆದ ಪ್ರಸಂಗ ನಡೆಯಿತು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು.

ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು ಹೇಳಿ ಪ್ರತಿಭಟನಾಕಾರರ ಮೇಲೆ ಕೂಗಾಡಿದರು. ಅಷ್ಟೇ ಅಲ್ಲ ನಾನು ಗ್ರಾಮವಾಸ್ತವ್ಯ ಮಾಡುವುದಿಲ್ಲ ಎಂದು ಹೇಳಿದರು.

ನಂತರ ಸಿಎಂ ತಮ್ಮ ಸಿಟ್ಟನ್ನು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮೇಲೆ ಹೊರ ಹಾಕಿದರು. ಗರಂ ಆಗಿದ್ದ ಸಿಎಂ ಅವರನ್ನು ನಾಡಗೌಡ ಅವರು ಸಮಾಧಾನಪಡಿಸಿ, ಯಾವನ್ರೀ ಅವನು ಎಸ್ಪಿ ಎಂದು ಪೊಲೀಸ್ ಅಧಿಕಾರಿಗಳ ಮೇಲೆ ತಮ್ಮ ಕೋಪವನ್ನು ಹೊರಹಾಕಿದರು.

ಸಿಎಂ ಗೌರಯುತವಾಗಿ ನಡೆದುಕೊಳ್ಳಲಿ. ಸಿಎಂ ಅಅವರ ಮಾತನ್ನು ಖಂಡಿಸುತ್ತೇನೆ. ಅವರದ್ದೇ ಆದ ಭಾಷೆಯಲ್ಲಿ ಇದಕ್ಕೆ ಪ್ರತ್ಯುತ್ತರ ಕೊಡಲು ಸಿದ್ಧರಿದ್ದೇವೆ. ಈ ಹಿಂದಿನ ಯಾವುದೇ ಮುಖ್ಯಮಂತ್ರಿಗಳು ಈ ರೀತಿ ಮಾತನಾಡಿಲ್ಲ. ಜನ ಕೊಟ್ಟಿರುವ ತೆರಿಗೆಯಿಂದ ಅಭಿವೃದ್ಧಿ ಮಾಡುವುದು ಹೊರತು ಸಿಎಂ ಅವರ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡೋದು ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜೀನಾಮೆ ನೀಡಲಿ: ಸಿಎಂ ಹೇಳಿಕೆಗೆ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ವಾಗ್ದಾಳಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಹೋರಾಟಗಾರರು ನಿಮ್ಮ ತಂದೆಯ ಆಸ್ತಿ ಕೇಳಿಲ್ಲ. ರಾಜ್ಯದ ಮುಖ್ಯಮಂತ್ರಿ ಆಗಲು ನಿಮಗೆ ಯೋಗ್ಯತೆ ಇಲ್ಲ. ನೀವು ಜೆಡಿಎಸ್ ಮುಖ್ಯಮಂತ್ರಿ ಆದರೆ ರಾಜ್ಯಪಾಲರು ಅವರಿಗೆ ನೀಡುತ್ತಿರುವ ಸೌಲಭ್ಯಗಳನ್ನು ವಾಪಸ್ ಪಡೆಯಲಿ. ನಿಮ್ಮ ಮಾತು ಅಸಂವಿಧಾನಿಕ ಮಾತು. ಸಿಎಂ ಜನರನ್ನ ಕೆರಳಿಸುವ ಮಾತುಗಳನ್ನಾಡಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಹತಾಶರಾಗಿ ವರ್ತನೆ ಮಾಡುತ್ತಿದ್ದಾರೆ. ನಿಮ್ಮ ಹತಾಶೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿಮ್ಮ ಆರೋಗ್ಯ, ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ. ದೇವೇಗೌಡರು ತಮ್ಮ ಮಗನಿಗೆ ರಾಜೀನಾಮೆ ನೀಡುವ ಸಲಹೆ ನೀಡಲಿ. ಈ ಮೂಲಕ ರಾಜ್ಯದ ಜನರ ಹಿತ ಸಿಎಂ ಕಾಪಾಡಲಿ ಎಂದು ರವಿ ಸಲಹೆ ನೀಡಿದರು.

ಸಿಎಂ ಇಂದು ಸಣ್ಣತನದ ಮಾತು ಆಡಿದ್ದಾರೆ. ಶಿವನಗೌಡರು ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅವರ ಬಗ್ಗೆಯೂ ಏಕವಚನದಲ್ಲಿ ಮಾತಾಡಿದ್ದಾರೆ. ನೀವು ರಾಜ್ಯದ ಮುಖ್ಯಮಂತ್ರಿಯೋ, ಜೆಡಿಎಸ್ ಮುಖ್ಯಮಂತ್ರಿಯೋ. ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ರಾ ಅಥವಾ ಜೆಡಿಎಸ್ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ರಾ ಎಂದು ಪ್ರಶ್ನಿಸುವ ಮೂಲಕ ಸಿಟಿ ರವಿ ಅವರು ಕಿಡಿಕಾರಿದರು.

ಮುಖ್ಯಮಂತ್ರಿ  ಕುಮಾರಸ್ವಾಮಿರವರ ಗ್ರಾಮ ವಾಸ್ತವ್ಯದ ನಾಟಕ ಮತ್ತೊಮ್ಮೆ ಬಯಲಾಗಿದೆ. ಸಮಸ್ಯೆ ಬಗೆಹರಿಸಲೆಂದು ಕೋರಿದ ಸಾರ್ವಜನಿಕರನ್ನು ಮೋದಿಜೀ (ಬಿಜೆಪಿ) ಪಕ್ಷಕ್ಕೆ ಮತಹಾಕಿದ್ದಕ್ಕೆ ತರಾಟೆಗೆ ತೆಗೆದುಕೊಂಡು ಲಾಠಿ ಚಾರ್ಜ್ ಮಾಡಿಸುವುದಾಗಿ ಬೆದರಿಸಿ ದೌರ್ಜನ್ಯವೆಸಗಿದ್ದಾರೆ. ಇವರ ನಕಲಿ ಜನಪರ ಕಾಳಜಿ ಇಲ್ಲಿ ಬಯಲಾಗಿದೆ.

ನಕಲಿ ಜನಪರ ಕಾಳಜಿ: ಈ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಆರ್ ಆಶೋಕ್ ಕೂಡ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರ್. ಅಶೋಕ್, ಜನರಿಗೆ ಬೈಯುವ ಮೂಲಕ ಮುಖ್ಯಮಂತ್ರಿಗಳ ನಕಲಿ ಜನಪರ ಕಾಳಜಿ ಇಂದು ಬಯಲಾಗಿದೆ ಎಂದು ಬರೆದುಕೊಂಡಿದ್ದಾರೆ.

`ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯದ ನಾಟಕ ಮತ್ತೊಮ್ಮೆ ಬಯಲಾಗಿದೆ. ಸಮಸ್ಯೆ ಬಗೆಹರಿಸಲೆಂದು ಕೋರಿದ ಸಾರ್ವಜನಿಕರನ್ನು ಮೋದಿಜೀ (ಬಿಜೆಪಿ) ಪಕ್ಷಕ್ಕೆ ಮತಹಾಕಿದ್ದಕ್ಕೆ ತರಾಟೆಗೆ ತೆಗೆದುಕೊಂಡು ಲಾಠಿ ಚಾರ್ಜ್ ಮಾಡಿಸುವುದಾಗಿ ಬೆದರಿಸಿ ದೌರ್ಜನ್ಯವೆಸಗಿದ್ದಾರೆ. ಇವರ ನಕಲಿ ಜನಪರ ಕಾಳಜಿ ಇಲ್ಲಿ ಬಯಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ನೀವೇನು ಸರ್ವಾಧಿಕಾರಿಯೇ: ಶಿವಮೊಗ್ಗದಲ್ಲಿ ಪ್ರತಿಯಿಸಿರುವ ಕೆ.ಎಸ್ ಈಶ್ವರಪ್ಪ, ಕರ್ನಾಟಕ ರಾಜ್ಯದ ಕಾಂಗ್ರೆಸ್- ಜೆಡಿಎಸ್ ನಾಯಕರು ತಲೆ ಕೆಟ್ಟವರಂತೆ ಮಾತನಾಡುತ್ತಿದ್ದಾರೆ. ಸಿಎಂ, ಡಿಸಿಎಂ ಹೇಳಿಕೆಗಳ ನೋಡಿದ್ರೆ ಇವರನ್ನು ತಲೆಕೆಟ್ಟವರು ಎಂದೇ ಹೇಳಬೇಕಾಗಿದೆ. ಮುಖ್ಯಮಂತ್ರಿ ಆಗಿರೋದಕ್ಕೆ ಜನ ಸಮಸ್ಯೆ ಹೇಳಿಕೊಳ್ಳಲು ಬರುತ್ತಾರೆ. ರಸ್ತೆ ಮೇಲೆ ಹೋಗೋ ದಾಸಯ್ಯನಿಗೆ ಕೇಳುತ್ತಿಲ್ಲ ಅನ್ನೋದನ್ನ ಸಿಎಂ ಅರಿತುಕೊಳ್ಳಬೇಕು. ಇದು ಸೊಕ್ಕಿನ, ದುರಹಂಕಾರದ ಮಾತಾಗಿದೆ. ಪ್ರಜಾಪ್ರಭುತ್ವ ಹಾಗೂ ಮತದಾರರಿಗೆ ಮಾಡಿದ ಅವಮಾನವಾಗಿದೆ. ಲಾಠಿ ಚಾರ್ಜ್ ಮಾಡುತ್ತೇನೆ ಎಂದಿದ್ದೀರಿ, ನೀವೇನು ಸರ್ವಾಧಿಕಾರಿಯೇ? ಅಘೋಷಿತ ತುರ್ತು ಪರಿಸ್ಥಿತಿ ತರಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ತಾವು, ಅನುಭವಿ ರಾಜಕಾರಣಿಯಾಗಿ, ಮಾಜಿ ಪ್ರಧಾನಿಯ ಪುತ್ರನಾಗಿ ಹೀಗೆ ಹೇಳುವುದು ನಿಮ್ಮ ಯೋಗ್ಯತೆಯ ಬಗ್ಗೆ ಸಂಶಯ ಮೂಡುತ್ತದೆ !!!!!

ನಿಮ್ಮ ಸ್ಥಾನಕ್ಕೆ ಗೌರವ ತರುವ ಕೆಲಸ ಮಾಡಿ, ಅಡಿದ ಮಾತಿಗಾಗಿ ಮತದಾರರ ಕ್ಷಮೆ ಕೇಳಿ. ನಿಮ್ಮ ಮಗ ನಿಖಿಲ್ ಸೋತಿದ್ದಕ್ಕೆ ಸಿಟ್ಟು ಬಂದಿದೆಯೋ ಅಥವಾ ಪ್ರಜ್ವಲ್ ಗೆದ್ದಿದ್ದಕ್ಕೆ ಸಿಟ್ಟು ಬಂದಿದೆಯೋ ಎಂದು ಮರು ಪ್ರಶ್ನೆ ಮಾಡಿರುವ ಈಶ್ವರಪ್ಪ ಅವರು, ನಿಮ್ಮ ಈ ಸಿಟ್ಟನ್ನು ಮೋದಿ ಅವರ ಮೇಲೆ ತೀರಿಸಿಕೊಳ್ಳಬೇಡಿ. ಪ್ರಜಾಪ್ರಭುತ್ವಕ್ಕೆ ಗೌರವ ನೀಡಿ, ಇಲ್ಲವಾದಲ್ಲಿ ರಾಜೀನಾಮೆ ನೀಡಿ ಹೋಗಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂಗೆ ‘ಪಬ್ಲಿಕ್’ ಪ್ರಶ್ನೆಗಳೇನು?:
ಪ್ರಶ್ನೆ 1– ನಿಮಗೆ ವೋಟು ಹಾಕದಿದ್ದರೆ ಸಮಸ್ಯೆ ಹೇಳೋ ಹಾಗೆನೇ ಇಲ್ವಾ?
ಪ್ರಶ್ನೆ 2– ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ?
ಪ್ರಶ್ನೆ 3– ನೀವು ಕರ್ನಾಟಕದ ಮುಖ್ಯಮಂತ್ರಿನಾ ಅಥವಾ ಜೆಡಿಎಸ್ ಮುಖ್ಯಮಂತ್ರಿನಾ?
ಪ್ರಶ್ನೆ 4– ಜನರು ನಿಮ್ಮತ್ರ ಬರೋ ಹಾಗೇ ಇಲ್ವಾ?
ಪ್ರಶ್ನೆ 5– ಕಷ್ಟ ಹೇಳೋದು ಜನರ ಹಕ್ಕು; ಬಗೆಹರಿಸೋದು ನಿಮ್ಮ ಕರ್ತವ್ಯ
ಪ್ರಶ್ನೆ 6– ಸಮಸ್ಯೆ ಹೇಳಿದ್ರೆ ಲಾಠಿಚಾರ್ಜ್ ಮಾಡಿಸ್ತೀರಾ?
ಪ್ರಶ್ನೆ 7– ಮೋದಿಗೆ ವೋಟ್ ಹಾಕಿದ್ರೆ ನಿಮ್ಮ ಬಳಿ ಸಮಸ್ಯೆ ಹೇಳೋ ಆಗಿಲ್ವಾ?

ನರೇಂದ್ರ ಮೋದಿ ಬಗೆಹರಿಸುವ ಸಮಸ್ಯೆಗಳನ್ನು ನರೇಂದ್ರ ಮೋದಿಗೆ ಕೇಳುತ್ತೇವೆ. ನಿಮ್ಮನ್ನ ಸಿ.ಎಮ್ ಎಂದು ನಾವ್ಯಾರೂ ಸೆಲೆಕ್ಟೇ ಮಾಡಿಲ್ಲ. ಯಾಕೆ ಸಿ.ಎಮ್ ಆದ್ರಿ? ಈಗ ಸಮಸ್ಯೆ ಬಗೆಹರಿಸಿ, ಇಲ್ಲವೇ, ರಾಜೀನಾಮೆ ನೀಡಿ ಮನೆಗೆ ಹೋಗಿ.

ಜೆಡಿಎಸ್ ಗೆ ರಾಜೀನಾಮೆ ಬೆದರಿಕೆ : ಎಚ್ ವಿಶ್ವನಾಥ್

ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಬಂಡಾಯ ಕಂಡು ಬರುತ್ತಿದೆ. ಇದುವರೆಗೆ ಕಾಂಗ್ರೆಸ್ ನಲ್ಲಿ ಅತೃಪ್ತ ನಾಯಕರ ಬಣ ಹುಟ್ಟಿಕೊಂಡಿದ್ದು, ಇದೀಗ ಜೆಡಿಎಸ್ ನಲ್ಲಿಯೂ ಕೂಡ ಬಂಡಾಯ ಶುರುವಾಗಿದೆ.

ಮೈಸೂರಿನಲ್ಲಿ ಮಾತನಾಡಿದ  ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಪಕ್ಷದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ತಾವು ಶಿಫಾರಸ್ಸು ಮಾಡಿ ಒಬ್ಬರಿಗೂ ಕೂಡ ಟಿಕೆಟ್ ನೀಡಿಲ್ಲ. ನಮ್ಮ ದುರಹಂಕಾರದಿಂದಲೇ ನಮಗೆ ಸೋಲಾಗಿದೆ ಎಂದು ಹೇಳಿದ್ದಾರೆ.

ಜೆಡಿಎಸ್ ವಿರುದ್ಧವೇ ಸಿಡಿದೆದ್ದ ಜೆಡಿಎಸ್ ರಾಜ್ಯಾಧ್ಯಕ್ಷ
ಎಚ್.ವಿಶ್ವನಾಥ್. ಕೆ.ಆರ್‌.ನಗರ ಪುರಸಭೆ ಸೋಲಿನ ಹಿನ್ನೆಲೆ ನಡೆದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಕೆ.ಆರ್.ನಗರ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ನಮ್ಮ ಕುರುಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ಕೂಡ ನೀಡಿಲ್ಲ. ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದರು.

ಪಕ್ಷದ ರಾಜ್ಯಾದ್ಯಕ್ಷನಾಗಿ ನಾನು ಹೇಳಿದ ಒಬ್ಬರಿಗೂ ಚುನಾವಣೆಯಲ್ಲಿ ಟಿಕೆಟ್ ನೀಡದೆ ದುರಾಂಕರದಿಂದ ವರ್ತಿಸಿದ್ದಾರೆ. ಹಣ ಬಲವೇ ಮುಖ್ಯ ಎನ್ನುವ ಮನೋಭಾವವನ್ನು ಇನ್ನಾದರೂ ಬಿಡದಿದ್ದಲ್ಲಿ ಒಳಿತಾಗದು ಎಂದು ಪರೋಕ್ಷವಾಗಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಧರ್ಮಸ್ಥಳದಲ್ಲಿ ನೀರನ್ನು ಅಭಾವಕ್ಕೆ ಮಾಸ್ಟರ್ ಪ್ಲಾನ್ ಮಾಡಿದ ದರ್ಶನ್ ! ಎಲ್ಲರೂ ಡಿ ಬಾಸ್ ನೋಡಿ ಕಲಿಯಬೇಕು.? ಅಷ್ಟಕ್ಕೂ ಡಿ ಬಾಸ್ ಮಾಡಿದ್ದೇನು?

ಶ್ರೀ ಧರ್ಮಸ್ಥಳ ಮಂಜುನಾಥ ಶ್ರೀ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಹೆಚ್ಚು ಕಾಣಿಸಿಕೊಂಡಿರುವುದರಿಂದ ಅಲ್ಲಿನ ಸಮಸ್ಯೆಗೆ ಬಗ್ಗೆಹರಿಸಲು ಮುಂದಾಗಿದ್ದಾರೆ ಸ್ಥಳದ ಪೀಠಾಧಿಕಾರಿಯಾದ ವೀರೇಂದ್ರ ಸ್ವಾಮೀಜಿಯವರ ಜೊತೆ ಚರ್ಚಿಸಿ ಈ ಯತ್ನಕ್ಕೆ ಮುಂದಾಗಿದ್ದಾರೆ.

ಡಿ ಬಾಸ್ ಮಾಸ್ಟರ್ ಪ್ಲಾನ್ ಕೆಳಿ ಸ್ವಾಮೀಜಿಗಳು ಮಾಡಿದ್ದೇನು ಅವರು ಪ್ಲಾನ್ ಗೆ ಸಾಥ್ ನೀಡಿದ್ದರು ಹೇಗೆ ನೋಡಿ .

https://youtu.be/WoP50aXcd4Y

ಎಚ್ ಡಿ ರೇವಣ್ಣ ಸಿಎಂ ಆಗ್ಬೇಕಾ..! ಭವಾನಿ ರೇವಣ್ಣ ಹೇಳಿದ್ದೇನು..?

ಸಚಿವ ರೇವಣ್ಣ ಸಿಎಂ ಆಗಲು ಅರ್ಹರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಭಗವಂತನ ಇಚ್ಛೆಗೆ ನಾವು ಬದ್ಧ. ನಮ್ಮ ಮನೆಯವರೇ ಸಿಎಂ ಇರುವುದರಿಂದ ಅವರನ್ನ ಪಕ್ಕಕ್ಕೆ ಸರಿಸಿ ರೇವಣ್ಣ ಆಗಲಿ ಎಂದು ಹೇಳುವುದಿಲ್ಲ ಎಂದು ಹೇಳಿದ ಭವಾನಿ ರೇವಣ್ಣ, ರೇವಣ್ಣ ಸಿಎಂ ಆಗಬೇಕಾ ಬೇಡವಾ ಅದು ಭಗವಂತನ ಇಚ್ಛೆ. ಅವರಿಗೆ ಅವಕಾಶ ಬಂದಾಗ ಯಾರು ತಡೆಯಲು ಆಗಲ್ಲ. ಇವತ್ತಿನ ಮಟ್ಟಿಗೆ ಕುಮಾರಸ್ವಾಮಿ ಅವರೆ ಸಿಎಂ ಇದ್ರೇನೆ ಒಳ್ಳೆಯದು ಎಂದು ಹೇಳಿದ್ದಾರೆ.

“ನಿಖಿಲ್ ಎಲ್ಲಿದ್ದೀಯಪ್ಪ” ಚಿತ್ರದ ಪೋಸ್ಟರ್ ಬಿಡುಗಡೆ! ನೋಡಿ ಈ ವೈರಲ್ ಪೋಸ್ಟರ್

ಮಂಡ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ಇದ್ದರು ಆದರೆ ಅಲ್ಲಿ ಎಲ್ಲವೂ ಅಂದುಕೊಂಡಂತೆ ಆಗಿರಲಿಲ್ಲ ಅಲ್ಲೇ ತಮ್ಮ ವೈರಿಯಾಗಿ ನಿಂತದ್ದು ಮಂಡ್ಯದ ಸೊಸೆ ಸುಮಲತಾ ರವರು ಇದರಿಂದಾಗಿ ಎರಡು ಬಣಗಳು ಉಂಟಾಗಿದ್ದವು ಅಂಬರೀಶ್ರವರ ಅಭಿಮಾನಿಗಳ ಬಳಗ ಹಾಗೂ ಇನ್ನೊಂದು ಜೆಡಿಎಸ್-ಕಾಂಗ್ರೆಸ್ ನಾಯಕರುಗಳ ಬಳಗ.

ಆದರೆ ಹೆಚ್ಚಾಗಿ ಸುದ್ದಿಯಾಗಿದ್ದು ನಿಖಿಲ್ ಎಲ್ಲಿದಿಯಪ್ಪ ಎಂಬ ಒಂದೇ ಒಂದು ಹೇಳಿಕೆ ಈ ಹೇಳಿಕೆಯಿಂದ ಪ್ರಾರಂಭದಲ್ಲಿ ಮುನಿಸಿಕೊಂಡಿದ್ದ ಜೆಡಿಎಸ್ ನಾಯಕರು ತದನಂತರ ಇದನ್ನೇ ತಿರುಗುಬಾಣವಾಗಿ ನೀಡಲು ನಿರ್ಧಾರ ವಾಗಿದ್ದರೂ ನಿಖಿಲ್ ಅವರಿಗೆ ಅಪಮಾನ ಉಂಟು ಮಾಡಿದರು ಆದರೆ ಅದರಿಂದ ಹೊರಬಂದು ಅವರು ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಚಿತ್ರ ಮನೆ ಮಾಡುತ್ತೇನೆ ಎಂದು ಹೇಳಿದರು ಅದಕ್ಕಾಗಿ ಈಗ ಒಂದು ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರದಲ್ಲಿ ಕಾಣುವಂತೆ ಸಹಜವಾಗಿ ನಿಖಿಲ್ ರವರು  ಭಾರತದ ಗೇಟ್ ಎಂದೆನಿಸಿಕೊಂಡಿರುವ ದೆಹಲಿಯ ಗೇಟ್ ಬಳಿ ಹೋಗುತ್ತಿರುವುದು ಈ ಚಿತ್ರದಲ್ಲಿ ಕಾಣಿಸುತ್ತದೆ.

ಎರಡು ಸಲ ಮಿಸ್​.. ಈ ಸಲ ನಯನತಾರಾ ಮದುವೆ ಫಿಕ್ಸ್..!ಈ ನಟಿ ಸಂಭಾವನೆ ಎಷ್ಟು ಕೋಟಿ ಗೊತ್ತಾ..?

ನಯನತಾರಾ ಫಿಲ್ಮೋಗ್ರಫಿ ಚೆಕ್​ ಮಾಡಿದರೆ, ಇತ್ತೀಚೆಗೆ ಅಂಥಾ ಸೂಪರ್ ಹಿಟ್ ಸಿನಿಮಾಗಳು ಯಾವ್ದು ಕೊಟ್ಟಿಲ್ಲ, ಹಾಗಂತ ಆಕೆಯ ರೆಮ್ಯೂನರೇಷನ್ ಮಾತ್ರ ಕಡಿಮೆಯಾಗಿಲ್ಲ.ಮತ್ತದೇ ಕ್ರೇಜ್. ಹಲವು ವರ್ಷಗಳಿಂದ ಕ್ರೇಜ್​​​ನ ಉಳಿಸಿ, ಬೆಳಸಿಕೊಂಡು ಬರ್ತಿರೋ ಚೆಲುವೆ ನಯನತಾರಾ.

ಇವತ್ತಿಗೂ ಸೌತ್​ನಲ್ಲಿ ಅತಿ ಹೆಚ್ಚು ಅಭಿಮಾನಿಗಳು ಈ ಲೇಡಿ ಸೂಪರ್​ ಸ್ಟಾರ್​ಗಿದ್ದಾರೆ. ಗ್ಲಾಮರ್​ ಜೊತೆಗೂ ಅಭಿನಯಕ್ಕೂ ಸೈ ಅನ್ನೋ ಚೆಲುವೆ ಈಕೆ. ಅದೇ ಕಾರಣಕ್ಕೆ ನಯನತಾರಾ ಕಾಲ್​ಶೀಟ್​ಗಾಗಿ ಫಿಲ್ಮ್​ ಮೇಕರ್ಸ್​ ಮುಗಿಬೀಳ್ತಾರೆ. ಡಿಮ್ಯಾಂಡ್ ಜಾಸ್ತಿಯಾದಂತೆ ಕಾಲ್​ಶೀಟ್​ ರೇಟ್ ಏರ್ತಿದೆ. ಸದ್ಯ ಚಿತ್ರವೊಂದಕ್ಕೆ ನಯನತಾರ 3 ಕೋಟಿ ಸಂಭಾವನೆ ಪಡಿತ್ತಿದ್ದಾರಂತೆ.

ತಮಿಳಿನ ಮಿಸ್ಟರ್ ಲೋಕಲ್, ಕೊಲಯತ್ತೂರ್​ ಕಲಾಂ, ವಿಜಯ್ ನಟನೆಯ ಇನ್ನೂ ಹೆಸರಿಡದ ಚಿತ್ರ, ರಜಿನಿಕಾಂತ್​​​ ಅಭಿನಯದ ದರ್ಬಾರ್, ತೆಲುಗಿನ ಸೈರಾ ನರಸಿಂಹ ರೆಡ್ಡಿ, ಮಲಯಾಳಂನ ಲವ್​ ಆ್ಯಕ್ಷನ್ ಡ್ರಾಮಾ ಸಿನಿಮಾಗಳು ನಯನತಾರಾ ಕೈಯಲ್ಲಿದೆ.

ಸದ್ಯ ಸೌತ್​ನ ಮತ್ಯಾವುದೇ ಟಾಪ್​ ಹಿರೋಯಿನ್​ ಕೈಯಲ್ಲಿ ಇಷ್ಟು ಸಿನಿಮಾಗಳಿಲ್ಲ, ಇದೇ ಕ್ರೇಜ್​ನಿಂದ್ಲೇ ನಯನತಾರಾ ರೆಮ್ಯೂನರೇಷನ್​ 3 ಕೋಟಿ ತಲುಪಿರೋದು. ಇತ್ತೀಚೆಗೆ ನಯನತಾರಾ ಒಂದು ಜಾಹಿರಾತಿಗೆ ಎರಡು ದಿನಗಳ ಕಾಲ್​ಶೀಟ್​ ಕೊಟ್ಟು 3 ಕೋಟಿ ಬ್ಯಾಗಿಗೆ ಇಳಿಸಿದ್ದಾರೆ.

ಬಾಲಕೃಷ್ಣ ನಟನೆಯ ಒಂದು ತೆಲುಗು ಮತ್ತು ಮಣಿರತ್ನಂ ನಿರ್ದೇಶನದ ಐತಿಹಾಸಿಕ ಪೊನ್ನಿಯನ್ ಸೆಲ್ವನ್​​ ಚಿತ್ರಗಳಿಗೆ ನಯನತಾರಾ ನಾಯಕಿಯಾಗೋ ಸಾಧ್ಯತೆಯಿದೆ. ಈ ಕುರಿತು ಮಾತುಕತೆ ನಡೀತಿದ್ದು, ಎಲ್ಲಾ ಅಂದುಕೊಂಡಂತೆ ಆದರೆ, ಈ ಚಿತ್ರಗಳಿಗೂ ದೊಡ್ಡ ಮಟ್ಟದ ರೆಮ್ಯೂನರೇಷನ್​ ನಯನತಾರಾ ಪಡೆಯಲಿದ್ದಾರೆ.

ಎರಡು ಸಲ ಮಿಸ್​.. ಈ ಸಲ ನಯನತಾರಾ ಮದುವೆ ಫಿಕ್ಸ್..!

ಇನ್ನೂ ನಯನತಾರಾ ಪರ್ಸನಲ್ ಲೈಫ್​ ಬಗ್ಗೆ ಹೇಳೋದಾದರೆ, ಈ ನವೆಂಬರ್​ನಲ್ಲಿ ಪ್ರಿಯಕರ ವಿಘ್ನೇಶ್​ ಶಿವನ್​ ಜೊತೆ ನಿಶ್ಚಿತಾರ್ಥಕ್ಕೆ ಮನಸ್ಸು ಮಾಡಿದ್ಧಾರಂತೆ. ಸಿಂಬು ಮತ್ತು ಪ್ರಭುದೇವಾರನ್ನು ಪ್ರೀತಿಸಿ, ದೂರಾದ ನಯನತಾರಾ 4 ವರ್ಷಗಳಿಂದ ಡೈರೆಕ್ಟರ್ ವಿಘ್ನೇಶ್ ಶಿವನ್​ ಜೊತೆ ಪ್ರೀತಿಲಿ ಮುಳುಗಿದ್ದಾರೆ.

ಇದೀಗ ಇಬ್ಬರು ಮದುವೆಗೆ ನಿರ್ಧರಿಸಿದ್ದು, ನವೆಂಬರ್​ನಲ್ಲಿ ಉಂಗುರ ಬದಲಿಸಿಕೊಂಡು ಮುಂದಿನ ವರ್ಷ ಹಸೆಮಣೆ ಏರೋಕೆ ಮುಂದಾಗಿದ್ದಾರಂತೆ. ಮದುವೆ ನಂತರ ಚಿತ್ರರಂಗದಲ್ಲಿ ನಯನತಾರಾ ಕ್ರೇಜ್​ ಹೇಗಿರುತ್ತೋ ಕಾದು ನೋಡ್ಬೇಕು.