ಸಿಎಂ ಪುತ್ರ ನಮ್ಮ ಸ್ವಾಮೀಜಿ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ..! : ಹೆಚ್.ಡಿ ರೇವಣ್ಣ

ಸಿಎಂ ಯಡಿಯೂರಪ್ಪ ಅವರು ತಂತಿ ಮೇಲೆ ನಡೆಯುತ್ತಿದ್ದೇನೆ ಎಂದು ಹೇಳುತ್ತಾರೆ. ಜಂಬೋ ಸರ್ಕಸ್​ನಲ್ಲಿ ತಂತಿ ಮೇಲೆ ನಡೆಯುತ್ತಾರೆ. ಅದೇ ರೀತಿ ಸಿಎಂ ಕೂಡ ತಂತಿ ಮೇಲೆ ನಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ವ್ಯಂಗ್ಯವಾಡಿದರು.

ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದಲ್ಲಿ ನಮ್ಮಂತಹವರಾಗಿದ್ರೆ ಆ ಸ್ಥಾನದಿಂದ ರಾಜೀನಾಮೆ ಕೊಟ್ಟು ಕೆಳಗೆ ಇಳಿಯುತ್ತಿದ್ದೇವು ಎಂದು ಅವರು ಹೇಳಿದರು.

ಇನ್ನು ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಕದ್ದಾಲಿಕೆ ವಿಚಾರ ಬಗ್ಗೆ ಮಾತನಾಡಿದ ಅವರು, ಸಿಎಂ ಸುಪುತ್ರ ನಮ್ಮ ಸ್ವಾಮೀಜಿ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ಸಮುದಾಯದ ಭಕ್ತರಿದ್ದಾರೆ ಅವರು ವಿಚಾರಿಸಿಕೊಳ್ಳುತ್ತಾರೆ ಎಂದು ಅವರು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯೇಂದ್ರ ಇಷ್ಟು ದಿನ ವನವಾಸದಲ್ಲಿದ್ದರು, ಈಗ ಟ್ರಜರಿ ಖಾಲಿಯಾಗಿದೆ ಅದಕ್ಕೆ ಸಿಎಂ ಪುತ್ರ ಟ್ರಜರಿ ಭರ್ತಿ ಮಾಡಿಕೊಳ್ಳಲಿ, ಹಿಂದೆ ಕೇಂದ್ರ ಸರ್ಕಾರ ಹಾಸನ, ಮಂಡ್ಯ, ತುಮಕೂರು ಜಿಲ್ಲೆಯ ಜೆಡಿಎಸ್ ನಾಯಕರ ಫೋನ್​ ಕದ್ದಾಲಿಕೆ ಆಗಿದೆ. ಕುಮಾರಸ್ವಾಮಿ, ದೇವೇಗೌಡರ ಹಾಗೂ ನನ್ನ ಪೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕೇಂದ್ರ ಸರ್ಕಾರ ಜೆಡಿಎಸ್ ನಾಯಕರ ಫೋನ್ ಕದ್ದಾಲಿಕೆ ಮಾಡಿದೆ. ನೆರೆ ಪರಿಹಾರ ಮುಚ್ಚಿ ಹಾಕಲು ನಿರ್ಮಲಾನಂದ ಸ್ವಾಮೀಜಿ ಫೋನ್ ಕದ್ದಾಲಿಕೆಯ ಆರೋಪ ಮಾಡಿ ಚರ್ಚೆ ಮಾಡುತ್ತಿದ್ದಾರೆ. ವಿಪಕ್ಷಗಳನ್ನು ಹತ್ತಿಕ್ಕಲು ಸರ್ಕಾರದಿಂದ ಸಾಧ್ಯವಿಲ್ಲ ಎಂದು ಮಾಜಿ ಸಚಿವ ರೇವಣ್ಣ ಅವರು ಆರೋಪ ಮಾಡಿದರು.

ಮಂಡ್ಯದಲ್ಲಿ ಕಂಡಿತಂತೆ ದೆವ್ವ, ಬೆಚ್ಚಿಬಿದ್ದ ಸಕ್ಕರೆನಾಡು ಮಂದಿ..?!

ಮಂಡ್ಯದಲ್ಲಿ ದೆವ್ವ ಕಾಣಿಸಿಕೊಂಡಿದೆ ಎಂಬ ಸುದ್ದಿ ಹಬ್ಬಿದ್ದು, ಇದಕ್ಕೆ ಸಂಬಂಧಿಸಿದಂತೆ 2 ಫೋಟೋಗಳು ಕೂಡ ರಿವೀಲ್ ಆಗಿದೆ. ಮಂಡ್ಯದ ಗುತ್ತಲು ರಸ್ತೆ ಮತ್ತು ಮಹಾವೀರ ವೃತ್ತದಲ್ಲಿ ದೆವ್ವ ಕಾಣಿಸಿದೆಯಂತೆ.

ಗುತ್ತಲು ರಸ್ತೆಯ ಸಾದತ್ ನಗರದ ಬಳಿ ಎರಡು ದೆವ್ವಗಳು ಕಾಣಿಸಿಕೊಂಡಿದ್ದು, ಕಳೆದ ವರ್ಷ ಇದೇ ಸ್ಥಳದಲ್ಲಿ ಭೀಕರ ಅಪಘಾತವಾಗಿ ನಾಲ್ಕು ಮಂದಿ ದಾರುಣವಾಗಿ ಸಾವಿಗೀಡಾಗಿದ್ದರು. ಸಾವನ್ನಪ್ಪಿದವರೇ ದೆವ್ವಗಳಾಗಿ ಬಂದಿದ್ದಾರೆಂಬುದು ಇಲ್ಲಿ ಸ್ಥಳೀಯರ ಮಾತು.

ಮಹಾಲಯ ಅಮವಾಸ್ಯೆ ಹಿನ್ನೆಲೆ ಪದೇ ಪದೇ ದೆವ್ವ ಕಾಣಿಸುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಫೋಟೋಗಳು ಕೂಡ ರಿವೀಲ್ ಆಗಿದ್ದು, ಸಕ್ಕರೆ ನಾಡಿನ ಜನ ಬೆಚ್ಚಿಬೀಳುವಂತಾಗಿದೆ. ಆದ್ರೆ ನಿಜವಾಗ್ಲೂ ಅದು ದೆವ್ವಾನೇನಾ..? ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ.

ವಿಸ್ಮಯ : ಕುತ್ತಿಗೆಯಲ್ಲಿ ಮೊಟ್ಟೆ ಇಡುವ ಕೋಳಿ…!! ವಿಡಿಯೋ ಸಖತ್ ವೈರಲ್

ಕೋಳಿ ಮೊಟ್ಟೆ ಇಡೋದು ಸರ್ವೆ ಸಾಮಾನ್ಯ ಆದರೆ ಇಲ್ಲೊಂದು ಕೋಳಿ ಕುತ್ತಿಗೆ ಮೂಲಕ ಮೊಟ್ಟೆ ಇಡುತ್ತಿದೆ. ಈ ವಿಚಿತ್ರ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಕುತ್ತಿಗೆಯಲ್ಲಿ ಮೊಟ್ಟೆ ಇಡುವ ಕೋಳಿ

ನಾಗಮಂಗಲ ಪಟ್ಟಣದ ಹೇಮಾವತಿ ಬಡಾವಣೆಯ ಬರಹಗಾರ ಶಿವರಾಮೇಗೌಡ ರವರ ಮನೆಯಲ್ಲಿ ಅಪರೂಪದ ಘಟನೆ ನಡೆದಿದೆ. ಸುಮಾರು ಎರಡು ವರ್ಷದಿಂದ ತಮ್ಮ ಮನೇಲಿ ಸಾಕಿಕೊಂಡಿದ್ದ ಕೋಳಿ ಹಲವು ಬಾರಿ ಮೊಟ್ಟೆಗಳನ್ನು ಇಟ್ಟು ಮರಿಗಳನ್ನು ಮಾಡಿತ್ತು ಆದರೆ ಇಂದು ಕುತ್ತಿಗೆ ಭಾಗದಿಂದ ಮೊಟ್ಟೆಗಳನ್ನು ಇಡುವುದನ್ನು ನೋಡಿದ ಮನೆಯವರು ಆಸಕ್ತರಾಗಿದ್ದಾರೆ.

ನಂತರ ಅದರ ವಿಡಿಯೋವನ್ನು ಮಾಡಿ ಆಶ್ಚರ್ಯ ಪಟ್ಟಿದ್ದಾರೆ. ಹಲವು ವರ್ಷಗಳಿಂದ ತಮ್ಮ ಪಾಡಿಗೆ ತಾವು ಜಗತ್ತಿಗೆ ಸಂದೇಶ ಹೇಳುವ 15ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ವ್ಯವಸಾಯ ಮಾಡಿಕೊಂಡಿದ್ದ ಶಿವರಾಮೇಗೌಡರ ಮನೆಯಲ್ಲಿ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯವಾಗಿದೆ. ಆದರೆ ಕೋಳಿ ಕುತ್ತಿಗೆಯಲ್ಲಿ ಮೊಟ್ಟೆ ಇಡುತ್ತಿರುವುದು ಹೇಗೆ ಎಂಬುದು ಮನೆಯವರಲ್ಲೂ ಕುತೂಹಲ ಮೂಡಿಸಿದೆ.

‘ಬೇಟಿ ಬಚ್ಚಾವೋ ಬೇಟಿ ಪಡಾವೋ’ : 1 ಜಿಲ್ಲೆ, 132 ಹಳ್ಳಿ, 3 ತಿಂಗಳಲ್ಲಿ ಒಂದೇ ಒಂದು ಹೆಣ್ಣು ಮಗು ಕೂಡ ಜನಿಸಿಲ್ಲ!

‘ಬೇಟಿ ಬಚ್ಚಾವೋ ಬೇಟಿ ಪಡಾವೋ’ ಎಂಬ ಘೋಷ ವಾಕ್ಯದೊಂದಿಗೆ ಸರ್ಕಾರ ಯೋಜನೆಗಳನ್ನು ಜಾರಿ ಮಾಡಿ ಎಲ್ಲೆಡೆ ಪ್ರಚಾರ ಮಾಡುತ್ತಿದೆ. ಆದರೆ, ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ 132 ಹಳ್ಳಿಗಳಲ್ಲಿ ಲಿಂಗಾನುಪಾತ ಮಾತ್ರದಲ್ಲಿ ಮಾತ್ರ ಆಶ್ಚರ್ಯ ಪಡುವ ರೀತಿಯಲ್ಲಿ ವರದಿ ಬಂದ್ದು, ಈ ಜಿಲ್ಲೆಯಲ್ಲಿ ಒಂದೇ ಒಂದು ಹೆಣ್ಣು ಮಗು ಜನಿಸಿಲ್ಲ ಎಂದು ವರದಿಗಳು ತಿಳಿಸಿದೆ.

ಅಂಕಿ-ಅಂಶಗಳ ಪ್ರಕಾರ, 132 ಹಳ್ಳಿಗಳಿಂದ ಒಟ್ಟು 216 ಮಕ್ಕಳು ಮೂರು ತಿಂಗಳಲ್ಲಿ ಜನನ ಆಗಿವೆ. ಆದರೆ, ಒಂದೇ ಒಂದು ಹೆಣ್ಣು ಮಗು ಈ ಅವಧಿಯಲ್ಲಿ ಜನಿಸಿಲ್ಲ ಎಂದು ಜಿಲ್ಲಾಡಳಿತ ವರದಿ ಮಾಡಿದೆ.

ಹೆಣ್ಣು ಮಗುವಿನ ಹೆರಿಗೆಯ ಸಂಖ್ಯೆ ಶೂನ್ಯವಾಗಿರುವ ಎಂಬ ಪ್ರದೇಶಗಖನ್ನು ನಾವು ಗುರುತಿಸಿದ್ದೇವೆ. ಲಿಂಗಾನುಪಾತದ ಮೇಲೆ ಏನು ಪರಿಣಾಮ ಬೀರುತ್ತಿದೆ ಎಂಬುದನ್ನು ಕಂಡುಹಿಡಿಯಲು ನಾವು ಆ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಇದರ ಹಿಂದಿನ ಕಾರಣವನ್ನು ಗುರುತಿಸಲು ವಿವರವಾದ ಸಮೀಕ್ಷೆ ಮತ್ತು ಅಧ್ಯಯನವನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಆಶಿಶ್ ಚೌಹಾನ್ ಅವರು ಹೇಳಿದ್ದಾರೆ.

ಆಶಿಶ್ ಚೌಹಾನ್ ಆಶಾ ಕಾರ್ಯಕರ್ತರೊಂದಿಗೆ ತುರ್ತು ಸಭೆ ನಡೆಸಿ ಈ ಪ್ರದೇಶಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಲು ಮತ್ತು ದತ್ತಾಂಶಗಳ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಗಂಗೋತ್ರಿ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ್ ರಾವತ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

‘ಜೆಡಿಎಸ್ ಪಕ್ಷದ ವರಿಷ್ಠರ ಮಾತನ್ನು ಧಿಕ್ಕರಿಸಿ ಬಂದಿದ್ದೇನೆ’ – ಶಾಸಕ ಅನ್ನದಾನಿ

ಎಲ್ಲ ಟೆನ್ಷನ್ ಮರೆತು ಚೆಲ್ಲಿದರು ಮಲ್ಲಿಗೆಯ ಜಾನಪದ ಗೀತೆಯನ್ನು ಹಾಡುವ ಮೂಲಕ ಜೆಡಿಎಸ್​ ಶಾಸಕ ಅನ್ನದಾನಿ ಅವರು ಜನರನ್ನು ರಂಜಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಶಾಸಕರಾದ ಅನ್ನದಾನಿ ಅವರು, ಇಷ್ಟು ದಿನ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರೆಲ್ಲರು ರೆಸಾರ್ಟ್ನಲ್ಲಿದ್ದರು. ಸರ್ಕಾರ ಉರುಳುವ ಭಯದಲ್ಲಿ ರೆಸಾರ್ಟ್ ಸೇರಿದ್ದರು.

ಆದರೆ, ಇಂದು ಅನ್ನದಾನಿ ಅವರು ಮಳವಳ್ಳಿಗೆ ಆಗಮಿಸಿ ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದ ಆವರಣದಲ್ಲಿ ನಡೆದ ಆದಿಜಗದ್ಗುರು ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದಾರೆ.

ಅಲ್ಲದೇ ಮಾದೇಶ್ವರರ ಮೇಲಿನ ಚಲ್ಲಿದರು ಮಲ್ಲಿಗೆಯ ಗೀತೆ ಹಾಡಿದ ಶಾಸಕ ಅನ್ನದಾನಿ ಅವರು ಎಲ್ಲ ಗಮನ ಸೆಳೆದಿದ್ದು, ಇಂದಿನ ರಾಜಕೀಯ ಪರಿಸ್ಥಿತಿ ಯಲ್ಲಿ ನಾನು ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿರಲಿಲ್ಲ, ಆದರೆ, ನನ್ನ ಕ್ಷೇತ್ರದ ಜನರ ಸಮಸ್ಯೆ ಗಳನ್ನು ಆಲಿಸಿದ ನಂತರ ಸಂಜೆಯೊಳಗೆ ಬಂದು ನಿಮ್ಮಲ್ಲಿಗೆ ಸೇರುತ್ತೇನೆ ಎಂದು ಹೇಳಿ ಬಂದಿದ್ದೇನೆ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯ ನಮ್ಮ ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಸಿ ಬಂದ್ದಿದ್ದೇನೆ. ಜನರ ಸಮಸ್ಯೆಗಳನ್ನು ಕೇಳದಿದ್ದರೆ ಮನುಷ್ಯನಾಗಿರಲು ಸಾಧ್ಯವಿಲ್ಲವೆಂದು ನಮ್ಮ ವರಿಷ್ಠರು ಮಾತನ್ನು ಧಿಕ್ಕರಿಸಿ ನಾನು ಇಲ್ಲಿಗೆ ಬಂದಿದ್ದೇನೆ. ಇನ್ನೆರಡು ದಿನಗಳಲ್ಲಿ ಸರ್ಕಾರದ ಭವಿಷ್ಯ ಏನಾಗುತ್ತೋ ಯಾರಿಗು ಗೊತ್ತಿಲ್ಲ, ಆದರೂ ದೇವರನ್ನು ನಂಬಿಕೊಂಡಿದ್ದು ಸರಿಯಾಗುವ ಭರವಸೆ ಇದೆ ಎಂದು ಮಳವಳ್ಳಿ ಜೆಡಿಎಸ್​ ಶಾಸಕ ಅನ್ನದಾನಿ ಅವರು ನುಡಿದರು.

ಕುತೂಹಲ ಮೂಡಿಸಿದೆ ಕೇಂದ್ರ ಸರಕಾರ : ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಸಾಧ್ಯತೆ?

ರಾಜ್ಯ ರಾಜಕೀಯ ಪ್ರಸ್ತುತ ನಾಟಕೀಯ ತಿರುವು ಪಡೆಯುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಳೆ ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಲಿರುವ ಕೇಂದ್ರ ರಾಜಕೀಯ ವ್ಯವಹಾರಗಳ ಸಂಫುಟ ಸಮಿತಿ ಸಭೆ ಕುತೂಹಲ ಮೂಡಿಸಿದೆ. ಅಲ್ಲದೆ ಈ ಸಭೆಯಲ್ಲಿ ರಾಜ್ಯದ ಮೇಲೆ ರಾಷ್ಟ್ರಪತಿ ಅಳ್ವಿಕೆ ಹೇರುವ ಕುರಿತ ತೀರ್ಮಾನ ತೆಗೆದುಕೊಳ್ಳುವ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿವೆ.

ಗುರುವಾರ ಸಿಎಂ ಕುಮಾರಸ್ವಾಮಿ ಅವರಿಗೆ ಆದೇಶಿಸಿದ್ದ ರಾಜ್ಯಪಾಲ ವಜುಭಾಯ್ ವಾಲಾ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಬಹುಮತ ಸಾಬೀತುಪಡಿಸಲು ಸೂಚಿಸಿದ್ದರು. ಆದರೆ, ಮೈತ್ರಿ ಸರ್ಕಾರ ರಾಜ್ಯಪಾಲರ ಈ ಆದೇಶವನ್ನು ಉಲ್ಲಂಘಿಸಿದೆ. ಹಾಗಾಗಿ ರಾಜ್ಯಪಾಲ ವಜುಭಾಯ್ ವಾಲಾ ಈ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ.

ಈ ವರದಿಯಲ್ಲಿ”ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ ಎಂಬ ವಿಚಾರ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ, ಬಹುಮತಯಾಚನೆಗೆ ಆದೇಶಿಸಿದ್ದರೂ ಸರ್ಕಾರ ಅದನ್ನು ಉಲ್ಲಂಘಿಸಿದೆ. ಇದರಿಂದ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದ್ದು, ಕೇಂದ್ರ ಮಧ್ಯಪ್ರವೇಶಿಸಬೇಕು” ಎಂದು ವರದಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯಪಾಲರ ಈ ವರದಿಯನ್ನು ಆಧರಿಸಿ ಶನಿವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರಾಜ್ಯ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚೆ ಹಾಗೂ ರಾಜ್ಯಪಾಲರ ಶಿಫಾರಸುಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವ ಕುರಿತು ಸಹ ಈ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಾಳೆ ವಿಶ್ವಾಸಮತ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಸವರಾಜ​ ರಾಯರೆಡ್ಡಿ ಹೊಸ ಬಾಂಬ್!

ನಾಳೆ ವಿಶ್ವಾಸಮತ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಸವರಾಜ​ ರಾಯರೆಡ್ಡಿ ಹೊಸ ಬಾಂಬ್​ ಸಿಡಿಸಿದ್ದು, ವಿಶ್ವಾಸ ಮತಯಾಚನೆ ವೇಳೆ ಬಿಜೆಪಿಯವರಿಂದಲೂ ಬೆಂಬಲ ಸಿಗಬಹುದು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಬುಧವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಅವರು ನುಡಿದರು.

ಇನ್ನು ನಾಳೆ ವಿಶ್ವಾಸ ಮತಯಾಚನೆ ವೇಳೆ ಏನು ಬೇಕಾದ್ರೂ ಆಗಬಹುದು. ಬಿಜೆಪಿಯವರು ನಾಲ್ಕೈದು ಜನ ನಮಗೆ ಬೆಂಬಲಿಸಬಹುದು. ಇಲ್ಲವೇ ನಮ್ಮವರೇ ಬಂದು ಬೆಂಬಲವನ್ನೂ ನೀಡಬಹುದು. ವಿಶ್ವಾಸ ಮತಯಾಚನೆ ವೇಳೆ ಏನಾಗಲಿದೆ ಅನ್ನೋದನ್ನ ಕಾದು ನೋಡಿ ಎಂದು ಮಾಜಿ ಸಚಿವ ಬಸವರಾಜ​ ರಾಯರೆಡ್ಡಿ ಹೊಸ ಬಾಂಬ್​ ಸಿಡಿಸಿದ್ದಾರೆ.

ಸುಪ್ರೀಂಕೋರ್ಟ್​​ ತೀರ್ಪು ಮೈತ್ರಿ ಸರ್ಕಾರಕ್ಕೆ ಹಿನ್ನೆಡೆ ಅಲ್ಲ, ವಿಪ್ ಕೊಡೋದು ಸಂವಿಧಾನಾತ್ಮಕ ಹಕ್ಕು. ಕೋರ್ಟ್​ ತೀರ್ಪು ಸರಿಯಿದೆ. ಕಲಾಪಕ್ಕೆ ಭಾಗಿಯಾಗುವ ವಿಚಾರ ಶಾಸಕರಿಗೆ ಬಿಟ್ಟಿದ್ದು, ರಾಜೀನಾಮೆ ಅಂಗೀಕಾರ, ತಿರಸ್ಕಾರ ಸ್ಪೀಕರ್​​ಗೆ ಬಿಟ್ಟಿದ್ದು ಈ ಬಗ್ಗೆ ಸ್ಪೀಕರ್ ಇಂದು ಅಥವಾ ನಾಳೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದರು.

ಜುಲೈ 22 ರವರೆಗೂ ಸರ್ಕಾರದ ಅನಿಶ್ಚಿತತೆ ಮುಂದುವರಿಕೆ? : ಮುಖ್ಯಮಂತ್ರಿ ಕುಮಾರಸ್ವಾಮಿ

ಕರ್ನಾಟಕ ರಾಜ್ಯ ರಾಜಕೀಯ ಬಿಕ್ಕಟ್ಟು ಸದ್ಯದಲ್ಲಿ ಬಗೆಹರಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ, ಮುಂದಿನ ಸೋಮವಾರದವರೆಗೂ ಈ ಅನಿಶ್ಚಿತತೆ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.

ಏಕೆಂದರೇ ಅತೃಪ್ತ ಶಾಸಕರ ಮನವೊಲಿಸಲು ಸಮಯ ಬೇಕಾಗಿರುವ ಕಾರಣ ಮುಂದಿನ ಸೋಮವಾರದವರೆಗೆ ಸದನದಲ್ಲಿ ವಿಶ್ವಾಸ ಮತ ಯಾಚನೆ ಸಂಬಂಧ ಚರ್ಚೆ ನಡೆಯಲಿದೆ, ಮೂಲಗಳ ಪ್ರಕಾರ ಗುರುವಾರ ವಿಶ್ವಾಸ ಮತಯಾಚನೆ ಕಾರ್ಯ ಆಗುವುದಿಲ್ಲ,

ಸಮ್ಮಿಶ್ರ ಸರ್ಕಾರದ ಮುಖಂಡರು ಬೇಕಂತಲೇ ಸದನವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಹೀಗಾಗಿ ಮುಂದಿನ ಸೋಮವಾರ ಅಂದರೇ ಜುಲೈ 22 ರವರೆಗೆ ಸದನವನ್ನು ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ., ಸದನದಲ್ಲಿ ಮಾತನಾಡುವರ ಸಂಖ್ಯೆ ಹೆಚ್ಚಿಸಿ ಆ ಮೂಲಕ ಸಮಯವನ್ನು ತಮ್ಮದಾಗಿಸಿಕೊಳ್ಳಲು ಸಮ್ಮಿಶ್ರ ಸರ್ಕಾರದ ಮುಖಂಡರು ಪ್ಲಾನ್ ಮಾಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಜಿ ಪರಮೇಶ್ವರ್ ಹಾಗೂ ಡಿ.ಕೆ ಶಿವಕುಮಾರ್ ವಿಶ್ವಾಸ ಮತಯಾಚನೆ ವೇಳೆ ಮಾತನಾಡಲಿದ್ದಾರೆ. ಸೋಮವಾರ ಅಥವಾ ಪ್ರಶಸ್ತ ಗಳಿಗೆಯಲ್ಲಿ ಸಿಎಂ ತಮ್ಮ ಹುದ್ದೆಗೆ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ವಿಶ್ವಾಸಮತ ಯಾಚನೆ ಏಕೆ ಅನಿವಾರ್ಯ ಎಂಬದನ್ನು ನಾವು ದಾಖಲೆಯಲ್ಲಿ ತರಲು ಬಯಸುತ್ತೇವೆ, ಸರ್ಕಾರವನ್ನು ಬೀಳಿಸಲು ಅವರು ಎಷ್ಟೆಲ್ಲಾ ಪ್ರಯತ್ನ ಮಾಡಿದರು ಎಂಬ ಬಗ್ಗೆ ಎಲ್ಲರಿಗೂ ತಿಳಿಯಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ನಮ್ಮ ಶಾಸಕರು ವಾಪಸ್ ಬರಲಿದ್ದಾರೆ. ಮುಂಬಯಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅವರನ್ನು ಲಾಕ್ ಮಾಡಲಾಗಿದೆ. ಅವರ ಫೋನ್ ಗಳನ್ನು ಅವರಿಂದ ಕಸಿದುಕೊಳ್ಳಲಾಗಿದೆ, ಸಂಪೂರ್ಣವಾಗಿ ಅವರನ್ನು ಬಂಧನದಲ್ಲಿರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದ ಸಿಎಂ ನಡೆ : ದಿಢೀರ್ ಪ್ರಯಾಣ

ರಾಜ್ಯ ರಾಜಕೀಯ ಪ್ರಹಸನದ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ. 

ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ HAL ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ದಿಲ್ಲಿಗೆ ತೆರಳುವ ಸಾಧ್ಯತೆ ಇದೆ. ಈ ನಡೆ ಕುತೂಹಲಕ್ಕೆ ಕಾರಣವಾಗಿದೆ. 

ಸುಪ್ರೀಂ ತೀರ್ಪು ಬೆನ್ನಲ್ಲೇ ಸಿಎಂ ವಿಮಾನ ನಿಲ್ದಾಣಕ್ಕೆ ತೆರಳಿದ್ದು,  ದಿಲ್ಲಿಗೆ ತೆರಳಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭೇಟಿ ಮಾಡುವ ಸಾಧ್ಯತೆ ಇದೆ. ಆದರೆ ಸಿಎಂ ಪ್ರಯಾಣದ ಹಾದಿ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.

ಅವಿಶ್ವಾಸ ನಿರ್ಣಯದ ವೇಳೆ ಅತೃಪ್ತರಾಗಿ ರಾಜೀನಾಮೆ ನೀಡಿ ಹೋದ ಶಾಸಕರು ಆಗಮಿಸಬಹುದು ಅಥವಾ, ಆಗಮಿಸದೇ ಇರಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅವರಿಗೆ ಆಗಮಿಸಲು ಯಾವುದೇ ಒತ್ತಡ ಹೇರುವಂತಿಲ್ಲ ಎಂದು ತೀರ್ಪು ಬಂದಿದೆ. ಇದು ಮೈತ್ರಿ ನಾಯಕರಲ್ಲಿ ಆತಂಕ ಮೂಡಿಸಿದ್ದು, ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.

ಸ್ಪೀಕರ್ ಒಂದು ಎಡವಟ್ಟು ಬಿಜೆಪಿಗೇ ಬಾರಿ ಲಾಭ? ಬಂಡಾಯ ಶಾಸಕರ ಕೈಯಲ್ಲಿ ದೋಸ್ತಿ ಸರ್ಕಾರದ ಜುಟ್ಟು!

ಸರ್ಕಾರದ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿದ್ದ ಬಂಡಾಯ ಶಾಸಕರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ರಾಜೀನಾಮೆ ಅಂಗೀಕಾರವಾಗದೇ ಅತಂತ್ರ ಮತ್ತು ಅನಿಶ್ಚಿತ ಸ್ಥಿತಿಯಲ್ಲಿದ್ದ ಅತೃಪ್ತರಿಗೆ ಸುಪ್ರೀಂ ಕೋರ್ಟ್ ತೀರ್ಪು ಬಲ ಕೊಟ್ಟಿದೆ.

ಗುರುವಾರ ನಡೆಯುವ ವಿಶ್ವಾಸ ಮತಯಾಚನೆಗೆ ಬಂಡಾಯ ಶಾಸಕರನ್ನು ಹಾಜರಾಗಲೇಬೇಕೆಂದು ಒತ್ತಾಯಪಡಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂದರೆ, ಅತೃಪ್ತ ಶಾಸಕರಿಗೆ ವಿಪ್ ಹೊರಡಿಸಲು ಸಾಧ್ಯವಾಗುವುದಿಲ್ಲ. ಇದು ಬಿಜೆಪಿ ಪಾಲಿಗೆ ವರದಾನವಾಗಿದೆ.

ವಿಶ್ವಾಸ ಮತ ಯಾಚನೆ ವೇಳೆ 15 ಅತೃಪ್ತ ಶಾಸಕರು ಗೈರಾದರೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಂತಾಗುತ್ತದೆ. ಬಿಜೆಪಿಯಿಂದ ರಾತ್ರೋರಾತ್ರಿ ಸಾಕಷ್ಟು ಸಂಖ್ಯೆಯಲ್ಲಿ ಶಾಸಕರನ್ನು ಸೆಳೆದುಕೊಂಡರೆ ಮಾತ್ರ ಮೈತ್ರಿಸರ್ಕಾರ ಉಳಿಯಲು ಸಾಧ್ಯ. ಇಲ್ಲವಾದಲ್ಲಿ ಸರ್ಕಾರದ ಪತನ ತಡೆಯಲು ಸಾಧ್ಯವಿಲ್ಲ.

ಒಂದು ವೇಳೆ, ಸ್ಪೀಕರ್ ರಮೇಶ್ ಕುಮಾರ್ ಅವರು 15 ಶಾಸಕರನ್ನು ಅನರ್ಹಗೊಳಿಸುವ ಕಡುನಿರ್ಧಾರಕ್ಕೆ ಬಂದರೂ ಮೈತ್ರಿ ಸರ್ಕಾರದ ಪತನವನ್ನು ತಡೆಯಲು ಸಾಧ್ಯವಿಲ್ಲ.

ಅತೃಪ್ತರ ಕೈಲಿದೆ ಸರ್ಕಾರದ ಭವಿಷ್ಯ:
ಆದರೆ, ಮೈತ್ರಿ ಸರ್ಕಾರ ಉಳಿಸುವ ಏಕೈಕ ಮಾರ್ಗ ಇರುವುದು ಅತೃಪ್ತರಲ್ಲೇ. ಅಂದರೆ, ರಾಜೀನಾಮೆ ನೀಡಿರುವ ಬಂಡಾಯ ಶಾಸಕರು ದಿಢೀರ್ ಮನಸು ಬದಲಾಯಿಸಿ ನಾಳೆ ವಿಶ್ವಾಸ ಮತ ಯಾಚನೆಗೆ ಬಂದು ಮೈತ್ರಿ ಸರ್ಕಾರದ ಪರ ವೋಟು ಚಲಾಯಿಸಿದರೆ ಕುಮಾರಸ್ವಾಮಿ ಸರ್ಕಾರ ಉಳಿಯಲು ಸಾಧ್ಯ. ಪ್ರಸಕ್ತ ಸಂದರ್ಭದಲ್ಲಿ ಇದು ಬಹುತೇಕ ಅಸಾಧ್ಯವೆಂಬಂತಿದೆ.

ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ಧಾರೆ. ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯವಾಗಿದೆ. ಅತೃಪ್ತ ಶಾಸಕರಿಗೆ ಸಿಕ್ಕ ನೈತಿಕ ಜಯವಾಗಿದೆ. ಸ್ಪೀಕರ್ ಅಧಿಕಾರವನ್ನು ಸುಪ್ರೀಂ ಕೋರ್ಟ್ ಮಿತಿಗೊಳಿಸಿದೆ. ಇದು ಸ್ವಾಗತಾರ್ಹ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇನ್ನು, ಕೆ.ಎಸ್. ಈಶ್ವರಪ್ಪ ಅವರು ಸಿಎಂ ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿದ್ಧಾರೆ. ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಗೊತ್ತಿದ್ರೂ ನಾಳೆ ವಿಶ್ವಾಸಮತ ಯಾಚನೆ ಯಾಕೆ? ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಮಾಜಿ ಉಪಮುಖ್ಯಮಂತ್ರಿಯೂ ಆದ ಈಶ್ವರಪ್ಪ ಆಗ್ರಹಿಸಿದ್ದಾರೆ.

ಸರ್ಕಾರದ ಪತನ ಹೇಗೆ?
ಕರ್ನಾಟಕ ವಿಧಾನಸಭೆ ಬಲಾಬಲ: 224
ರಾಜೀನಾಮೆ ನೀಡಿರುವ ಶಾಸಕರು: 16
ವಿಶ್ವಾಸ ಮತಯಾಚನೆಯ ದಿನ ಇವರು ಗೈರಾದಲ್ಲಿ ಸದನದ ಬಲ 108ಕ್ಕೆ ಇಳಿಕೆ
ವಿಶ್ವಾಸಮತ ಗೆಲ್ಲಲು ಬೇಕಾದ ಬಹುಮತ: 105
ಮೈತ್ರಿ ಸರ್ಕಾರದ ಬಲ: 119-18 = 101

ಬಿಜೆಪಿಯ ಬಲ: 105+2 = 107