ಅತೃಪ್ತ ಶಾಸಕರ ವಿರುದ್ದ ಸೇಡು ತೀರಿಸಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಕಾಂಗ್ರೆಸ್ಸ್ ನಾಯಕರು!

ವಿಶ್ವಾಸಮತಯಾಚನೆಗೆ ಕ್ಷಣಗಣನೆ ಆರಂಭವಾಗಿದ್ದರೂ ರಾಜ್ಯದಲ್ಲಿ ರಾಜಕೀಯ ಆಟ ಮುಗಿದಿಲ್ಲ. ಹೌದು ಸುಪ್ರೀಂ ಕೋರ್ಟ್​​ ಅತೃಪ್ತರು ಅಧಿವೇಶನಕ್ಕೆ ಹಾಜರಾಗಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಆದೇಶಿಸಿದ ಬೆನ್ನಲ್ಲೇ, ಅತೃಪ್ತರ ಅಮಾನತ್ತಿಗೆ ಮೈತ್ರಿ ನಾಯಕರು ಪಟ್ಟು ಹಿಡಿದಿದ್ದಾರೆ.

ಹೊಟೇಲ್​ನಲ್ಲಿ ಭರ್ಜರಿ ಸಭೆ ನಡೆಸಿದ ಬಳಿಕ ಸ್ಪೀಕರ್ ಕಚೇರಿಗೆ ತೆರಳಿದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ಧರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ್ ಸೇರಿದಂತೆ ಮೈತ್ರಿ ನಾಯಕರು ನಾಳೆ ಅಧಿವೇಶನಕ್ಕೂ ಮುನ್ನವೇ 15 ಅತೃಪ್ತ ಶಾಸಕರನ್ನು ಅಮಾನತ್ತುಗೊಳಿಸುವಂತೆ ಸ್ಪೀಕರ್​ಗೆ ಮನವಿ ಮಾಡಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್.ಶಂಕರ್ ಸೇರಿದಂತೆ ಎಲ್ಲರನ್ನು ಅನರ್ಹಗೊಳಿಸುವಂತೆ ನಾಯಕರು ಮನವಿ ಮಾಡಿದ್ದಾರೆ. ಅಲ್ಲದೇ ಅತೃಪ್ತ ಶಾಸಕರಾದ ಮಹೇಶ್ ಕುಮಟಳ್ಳಿ ಹಾಗೂ ರಮೇಶ್ ಜಾರಕಿಹೊಳಿಯವರನ್ನು ಇಂದು ಸಂಜೆಯೇ ಅನರ್ಹಗೊಳಿಸುವಂತೆ ದೋಸ್ತಿ ನಾಯಕರು ಒತ್ತಾಯಿಸಿದ್ದಾರೆ.

ಒಂದೊಮ್ಮೆ ಈ ನಾಯಕರು ಅನರ್ಹಗೊಂಡಲ್ಲಿ, ಮುಂದಿನ 6 ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ. ಶಾಸಕ ಅಥವಾ ಸಂಸದ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ. ಅಷ್ಟೇ ಅಲ್ಲ, 6 ವರ್ಷ ಸಚಿವ ಹಾಗೂ ನಿಗಮ ಮಂಡಳಿಯಲ್ಲೂ ಅಧಿಕಾರ ಪಡೆಯುವಂತಿಲ್ಲ. ಹೀಗಾಗಿ ಅತೃಪ್ತಿ ಹೊತ್ತು ಮುಂಬೈ ಸೇರಿ ಸರ್ಕಾರಕ್ಕೆ ಸಂಕಷ್ಟ ತಂದಿರುವ ಶಾಸಕರಿಗೆ ಪಾಠ ಕಲಿಸಲು ಸಮ್ಮಿಶ್ರ ಸರ್ಕಾರದ ನಾಯಕರು ಮಹಾಪ್ಲ್ಯಾನ್ ಮಾಡಿದ್ದಾರೆ.

ಬಿಜೆಪಿಗೆ ಉಲ್ಟಾ ಹೊಡೆದು ಮತ್ತೆ ಕಾಂಗ್ರೆಸ್ ಸೇರಲಿದ್ದಾರಾ ಆ ಬಂಡಾಯ ಶಾಸಕ!? ಚಿಂತೆಯಲ್ಲಿ ಯಡಿಯೂರಪ್ಪ

ಅತೃಪ್ತ ಶಾಸಕರು ರಾಜೀನಾಮೆ ನೀಡಿ ಮುಂಬೈ ನಲ್ಲಿ ಇದ್ದಾರೆ ಆದರೆ ಬೆಂಗಳೂರಿನ ಶಾಸಕರೊಬ್ಬರು ಮತ್ತೆ ಕಾಂಗ್ರೆಸ್ ಸೇರುವ ನಿರ್ಧಾರಕ್ಕೆ ಬಂದಿದ್ದಾರೆ!

ಬೆಂಗಳೂರಿನ ಬಹುತೇಕ ಶಾಸಕರು ರಾಜೀನಾಮೆ ನೀಡಿ ಮುಂಬೈನಲ್ಲಿದ್ದಾರೆ ಅವರು ಕೋರ್ಟ್ ನ ಆದೇಶದ ಪ್ರಕಾರ ವಿಪ್ ನಡೆಯುವ ಸಂದರ್ಭದಲ್ಲಿ ಸಂಸತ್ತಿಗೆ ಬರಬೇಕು ಎಂಬ ಯಾವ ಒತ್ತಡವೂ ಇಲ್ಲ ಆದರೆ ಕಾಂಗ್ರೆಸ್ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಮಾತ್ರ ತಮ್ಮ ವರಸೆಯನ್ನು ಬದಲಾಯಿಸಿದ್ದಾರೆ ಅದೇನೆಂದರೆ ನಾನು ಮತ್ತೆ ಕಾಂಗ್ರೆಸ್ ಸಭೆಗೆ ಬರಲಿದ್ದೇನೆ ಎಂದು ಹೇಳಿದ್ದಾರೆ.

ರಾಜಿನಾಮೆ ಹಿಂಪಡೆಯುವುದು ಅಥವಾ ರಾಜೀನಾಮೆಯನ್ನು ಅಂಗೀಕಾರ ಮಾಡುವಂತೆ ಸ್ಪೀಕರ್ ಬಳಿ ಕೇಳುವುದು ಅದರ ಬಗ್ಗೆ ಈಗ ನಾನು ಹೇಳುವುದಿಲ್ಲ ಮುಂದಿನ ದಿನಗಳಲ್ಲಿ ಹೇಳುತ್ತೇನೆ.. ಎಂದು ಹೇಳಿದರು.

ಇದೆಲ್ಲವೂ ಯಡಿಯೂರಪ್ಪನವರಿಗೆ ಯೋಚನೆಯಾಗಿ ಪರಿಣಿಮಿಸಿದೆ ಕಾರಣವೇನೆಂದರೆ ರಾಮಲಿಂಗ ರೆಡ್ಡಿ ಅವರೇ ಮುಖ್ಯವಾಗಿ ಅತೃಪ್ತ ಶಾಸಕರ ನಾಯಕರ ಎಂಬಂತೆ ಇದ್ದರೂ ಅವರಿಂದ ಏನಾದರೂ ಬೇರೆ ಶಾಸಕರ ಮನವೊಲಿಸುವ ಪ್ರಯತ್ನ ಮಾಡಿದರೆ ಅಲ್ಲಿಗೆ ಬಿಜೆಪಿಯ ಕನಸು ಭಗ್ನವಾಗಲಿದೆ.

ಅತೃಪ್ತ ಶಾಸಕರಿಗೆ ಡಿಕೆ ಶಿವಕುಮಾರ್ ರಿಂದ ಎಚ್ಚರಿಕೆ! ಬೆಚ್ಚಿಬಿದ್ದ ಅತೃಪ್ತರು!

ಕೋರ್ಟ್ ಅಂತಿಮ ನಿರ್ಧಾರದ ಪ್ರಕಾರ ಈಗಾಗಲೇ ಅತೃಪ್ತರು ಹೂಡಿದ್ದ ಪ್ರಕರಣ ಅವರ ಪರವಾಗಿ ಆಗಿದೆ.

ಅಂತೆಯೇ ವಿಪ್ ಜಾರಿ ಮಾಡಿರುವಂತಹ ಪಕ್ಷಗಳ ಸಭೆಯಲ್ಲಿ ಅತೃಪ್ತ ಶಾಸಕರು ಹಾಜರಾತಿ ಕಡ್ಡಾಯ ಇಲ್ಲವೆಂಬುದನ್ನು ಕೋರ್ಟ್ ತೀರ್ಮಾನ ಮಾಡಿದೆ.

ಇದರಿಂದ ಪರೋಕ್ಷವಾಗಿ ಮೈತ್ರಿ ಸರ್ಕಾರ ಕುಸಿದು ಹೋಗುವ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ ಅಲ್ಲದೆ ಮೈತ್ರಿ ಸರ್ಕಾರದ ಪ್ರಮುಖ ನಾಯಕರಾಗಿ ಮೈತ್ರಿ ಸರ್ಕಾರವನ್ನು ಉಳಿಸುವ ಶತಪ್ರಯತ್ನ ಮಾಡಿದಂತಹ ಡಿಕೆ ಶಿವಕುಮಾರ್ ರವರು ಈ ವಿಷಯ ಕುರಿತು ಒಂದು ಹೇಳಿಕೆ ನೀಡಿದ್ದಾರೆ ನಾನು ಸಾಮಾನ್ಯ ಶಾಸಕನಾಗಿ ಸಂವಿಧಾನದ ಹಾಗೂ ಕೋರ್ಟ್ನ ನಿರ್ಧಾರಕ್ಕೆ ತಲೆಬಾಗುತ್ತೇನೆ.

ಹಾಗೂ ಅತೃಪ್ತ ಶಾಸಕರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ ನೀವು ಆ ಪಕ್ಷಕ್ಕೆ ಹೋದರೆ ನಿಮಗೆ ಯಾವುದೇ ಒಳಿತಾಗುವುದಿಲ್ಲ ಹಾಗೂ ಅವರು ನಿಮಗೆ ಮೋಸ ಮಾಡಲಿದ್ದಾರೆ ಮತ್ತು ನಿಮಗೆ ನಿಮ್ಮ ಸಂಬಂಧಿಕರು ನಿಮ್ಮ ರಾಜಕೀಯ ಜೀವನ ಮುಂದಿದೆ ನಿರ್ಧರಿಸಿ ಎಂದು ಪರೋಕ್ಷವಾಗಿ ಎಚ್ಚರಿಕೆಯ ಗಂಟೆಯನ್ನು ಅತೃಪ್ತ ರಲ್ಲಿ ಮೂಡಿಸಿದ್ದಾರೆ.

ಅತೃಪ್ತ ಶಾಸಕರ ಅನರ್ಹತೆಗೆ ಕಾಂಗ್ರೆಸ್ ಪಕ್ಷದಲ್ಲೇ ವಿರೋಧ! ಇಬ್ಭಾಗವಾಯಿತಾ ಕಾಂಗ್ರೆಸ್?

ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರ  ರಾಜೀನಾಮೆ ಹಿನ್ನೆಲೆಯಲ್ಲಿ 13 ತಿಂಗಳ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉಳಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಅತೃಪ್ತ ಶಾಸಕರ ಅನರ್ಹತೆ ವಿಷಯವಾಗಿ ಇಬ್ಭಾಗವಾಗಿದ್ದಾರೆ.

ಪಕ್ಷದ  ಉನ್ನತ ಮೂಲಗಳಂತೆ, ಸರ್ಕಾರದಲ್ಲಿ ಅಸ್ಥಿರತೆ ಬಿಕ್ಕಟ್ಟನ್ನು ಸೃಷ್ಟಿಸಿದ ಹಾಗೂ ಜುಲೈ 18 ರಂದು ವಿಶ್ವಾಸ ಮತ ಕೋರಿಕೆಗೆ ಕಾರಣವಾದ ಶಾಸಕರಿಗೆ ಶಿಕ್ಷೆಯಾಗುವಂತೆ ಕಾಂಗ್ರೆಸ್ ಕೆಲ ಹಿರಿಯ ನಾಯಕರು ಇಚ್ಛಿಸಿದ್ದರೆ, ಕೆಲ ನಾಯಕರು ಪಕ್ಷಾಂತರ ನಿಷೇಧ ಕಾನೂನು ಜಾರಿಗೊಳಿಸುವ ಈ ಕ್ರಮವನ್ನು ವಿರೋಧಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ ಪರಮೇಶ್ವರ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ಅತೃಪ್ತ ಶಾಸಕರ ಮನವೊಲಿಸುವ ಕೊನೆ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಅನರ್ಹಗೊಂಡರೆ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ ಮತ್ತು ಸರ್ಕಾರಿ ಹುದ್ದೆಗಳನ್ನು ಅಲಂಕರಿಸುವಂತಿಲ್ಲ ಎಂದು ಅತೃಪ್ತ ಶಾಸಕರಿಗೆ ಕಿವಿಮಾತು ಹೇಳುತ್ತಿದ್ದಾರೆ.

ಆದರೆ, ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಿಜ್ವಾನ್  ಅರ್ಷದ್ ಮತ್ತಿತರರು ಅತೃಪ್ತ ಶಾಸಕರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ವಾದಿಸುತ್ತಿದ್ದಾರೆ.

ತಮ್ಮ ರಾಜೀನಾಮೆ  ಸ್ವೀಕರಿಸುವಂತೆ ಅತೃಪ್ತ ಶಾಸಕರು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಒತ್ತಾಯಿಸುತ್ತಿದ್ದರೆ, ಕಾಂಗ್ರೆಸ್ ನ ಕೆಲ ನಾಯಕರು ಪಕ್ಷವನ್ನು ಹಾಳು ಮಾಡಲೆತ್ನಿಸಿರುವ  ಶಾಸಕರನ್ನು  ಅನರ್ಹಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಇಂತಹ ನಿರ್ಧಾರಗಳಿಂದ ಪಕ್ಷ ಮತ್ತಷ್ಟು ದುರ್ಬಲಗೊಳ್ಳಲು ಕಾರಣವಾಗಬಹುದು ಎಂಬ ಆತಂಕವನ್ನು ಮತ್ತೊಂದು ಗುಂಪು ವ್ಯಕ್ತಪಡಿಸುತ್ತಿದೆ.  

ನಿವೃತ್ತ ಯೋಧ ತನ್ನ ಜೀವನದ ಹಣವನ್ನೆಲ್ಲ ಜೋಡಿಸಿ ಸರ್ಕಾರಕ್ಕೆ ಕೊಟ್ಟರು!

ಈ ಕಾಲದಲ್ಲಿ ಯಾರಾದರೂ ಒಬ್ಬರಿಗೆ ಸಹಾಯ ಮಾಡುತ್ತಿದ್ದಾರೆ ಎಂದರೆ ಅವರ ಅಪೇಕ್ಷೆ ಬೇರೊಂದು ಇದ್ದೇ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ಆದರೆ ಈ ವ್ಯಕ್ತಿಯ ಜೀವನ ಹೇಗಿದೆ ಎಂದರೆ ತಾನೇ ದೇಶಸೇವೆ ಮಾಡಿ ನಿವೃತ್ತಿ ಪಡೆದ ನಂತರವೂ ದೇಶಕ್ಕಾಗಿ ಸಮಾಜದ ಒಳಿತಿಗಾಗಿ ಹಣವನ್ನು ನೀಡಿದ್ದಾರೆ ಆದರೆ ಅಚ್ಚರಿ ಎಂದರೆ ಇವರು ಕೊಟ್ಟ ಮೊತ್ತ ಮಾತ್ರ ವಿಸ್ಮಯ ಬರೋಬ್ಬರಿ 1.08 ಕೋಟಿಯನ್ನು ನೀಡಿದ್ದಾರೆ. ಆದರೆ ಅವರು ಹಣ ಜೋಡಿಸಿ ಕೊಡುವುದಕ್ಕೆ ಕಷ್ಟ ಮಾತ್ರ ಹೇಳತೀರದು.

ನಿವೃತ್ತಿಯಾದ ನಂತರ ಒಂದು ಕೋಳಿ ಫಾರ್ಮ್ ಅನ್ನು ನಡೆಸಿ ಅದರಿಂದ ಬಂದ ಹಣವನ್ನೆಲ್ಲಾ ಒಟ್ಟುಗೂಡಿಸಿ ದೇಶಸೇವೆಗಾಗಿ ನೀಡಿದ್ದಾರೆ ಆದರೆ ಹೇಳಿದಷ್ಟು ಸುಲಭವಾಗಿಲ್ಲ ಕೇವಲ 5 ರೂಪಾಯಿ ಇಟ್ಟುಕೊಂಡು ಹೋರಾಟ ಓಡಾಡುತ್ತಿದ್ದ ವ್ಯಕ್ತಿ ಇಂದು 500 ಎಕರೆ ಒಡೆಯರಾಗಿದ್ದಾರೆ ಇದಕ್ಕಾಗಿ ನಾನು ದೇಶಕ್ಕಾಗಿ ನೀಡುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

74 ವರ್ಷದ ಸಿಬಿಆರ್ ಪ್ರಸಾದ್ ಎನ್ನುವ ಮಾಜಿ ವಾಯುಸೇನಾ ಅಧಿಕಾರಿ ಇವರೇ ನಿಜವಾದ ಭಾರತಮಾತೆಯ ಪುತ್ರ! ನಿಮಗೊಂದು ಸಲಾಂ!

ಸಂಸದರ ಮೇಲೆ ಘರ್ಜಿಸಿದ ಮೋದಿ! ಅಷ್ಟಕ್ಕೂ ಸಂಸದರು ಮಾಡಿದ ತಪ್ಪೇನು ಗೊತ್ತಾ?

ಮೋದಿ ಭಾರತದ ಪ್ರಧಾನಿ ಹಾಗೂ ವಿಶ್ವದ ಅತ್ಯಂತ ಪ್ರಬಲ ನಾಯಕ ಎಂದು ಗುರುತಿಸಲ್ಪಡುವ ಅಂತಹ ಮೋದಿಯವರು ಒಬ್ಬ ಅದ್ಭುತ ನಾಯಕ.

ಮೋದಿಯವರು ಈ ತಮ್ಮ ಜೀವನದ ಶ್ರೇಷ್ಠ ಸಾಧನೆ ಯಾವುದರಿಂದ ಎಂದರೆ ಅವರ ನಿಷ್ಠೆ ಹಾಗೂ ಕಾರ್ಯಶೀಲತೆ ಸಮಯಪ್ರಜ್ಞೆ ಇವೆಲ್ಲವನ್ನೂ ಕೂಡಿಸಿ ತಮ್ಮ ದೇಶದ ಮೇಲಿರುವ ಅಭಿಮಾನ ಅವರನ್ನು ಈ ಮಟ್ಟಕ್ಕೆ ಕರೆದುಕೊಂಡು ಬಂದಿದೆ.

ಸಂಸತ್ತು ಎಂದು ನಡೆಯುವುದೇ ಸಂಸದರು ತಮ್ಮ ಕ್ಷೇತ್ರದ ಬಗ್ಗೆ ಪ್ರತಿನಿಧಿಸಲು ಹಾಗೂ ಜನರಿಗೆ ಸಹಾಯ ಮಾಡಲು ಆದರೆ ಈ ಸಂಸತ್ನಲ್ಲಿ ಪ್ರತಿನಿಧಿಗಳು ಬಾರದೆ ಗೈರಾದರೆ ಇದನ್ನು ಕೇಳುವವರು ಇಲ್ಲಿಯವರೆಗೂ ಯಾರೂ ಇರಲಿಲ್ಲ ಆದರೆ ಪ್ರಬಲ ನಾಯಕರಾದ ಮೋದಿಯವರು ಯಾವುದೇ ಸಂಸದರಾಗಲಿ ಯಾರೇ ಆಗಲಿ ಸಂಸತ್ ಗೆ ಬರಬೇಕು ಹಾಗೂ ತಮ್ಮ ಲೋಕಸಭಾ ಅಭಿವೃದ್ಧಿಯಲ್ಲಿ ಮಹತ್ವದ ಕಾರ್ಯವನ್ನು ವಹಿಸಬೇಕು ಇದರಲ್ಲಿ ಏನಾದರೂ ಅಡಚಣೆ ಉಂಟಾದರೆ ಅವರನ್ನು ನಾನು ಸುಮ್ಮನೆ ಬಿಡಲಾರೆ ಎಂದು ಮೋದಿಯವರು ಘರ್ಜಿಸಿದ್ದಾರೆ.

ಸಂಸತ್ತಿಗೆ ಗೈರಾಗಿರುವ ಸಂಸದರ ಪಟ್ಟಿಯನ್ನು ತಯಾರಿಸುವಂತೆ ಪ್ರಹ್ಲಾದ್ ಜೋಶಿ ಅವರಿಗೆ ಹೇಳಿದ್ದಾರೆ ಹಾಗೂ ಅವರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಮೋದಿಯವರು ತಮ್ಮ ಬಿಜೆಪಿ ಪಕ್ಷದ ನಾಯಕರುಗಳಿಗೆ ತಿಳಿಸಿದ್ದಾರೆ.

ಡಿಕೆಶಿ ಅತೃಪ್ತ ಶಾಸಕರನ್ನು ತಡೆಯುವಂತೆ ಸಿದ್ದರಾಮಯ್ಯಗೆ ಕರೆಮಾಡಿದಾಗ ಹೇಳಿದ್ದೇನು ಗೊತ್ತಾ?

ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ನಾಯಕರ ನಡುವೆ ವೈಮನಸ್ಸು ಹೆಚ್ಚಾಗಿದೆ ಅಲ್ಲದೆ ಬಹುತೇಕರು ತಮ್ಮ ಮೈತ್ರಿ ಸರ್ಕಾರವನ್ನು ಉಳಿಸುವಲ್ಲಿ ಆಸಕ್ತಿ ತೋರಿಸುತ್ತಿಲ್ಲ.

ಮೈತ್ರಿ ಸರ್ಕಾರ ಪತನಗೊಳ್ಳುವುದು ಈಗಾಗಲೇ ಬಹುತೇಕ ಖಚಿತವಾಗಿದೆ ಬಂಡಾಯ ವಿತ್ ಇರುವಂತಹ ಶಾಸಕರು ತಮ್ಮ ರಾಜೀನಾಮೆಯನ್ನು ನೀಡಿ ಮುಂಬೈಗೆ ತೆರಳಿದ್ದಾರೆ ಆದರೆ ಇನ್ನು ಮೈತ್ರಿ ಸರ್ಕಾರದ ನಾಯಕರುಗಳು ಯಾಕೋ ತಮ್ಮ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಮೈತ್ರಿ ಉಳಿಸುವುದಕ್ಕಿಂತ ಕೆಡುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ ಇದು ಈಗಾಗಲೇ ಜಗಜ್ಜಾಹೀರಾಗಿದೆ.

ಇದರಲ್ಲಿ ಪ್ರಮುಖವಾಗಿ ಸರ್ಕಾರವನ್ನು ಉಳಿಸುವಲ್ಲಿ ಪ್ರಯತ್ನ ಮಾಡುತ್ತಿರುವುದು ಡಿಕೆಶಿವಕುಮಾರ್ ಹಾಗೂ ಕುಮಾರಸ್ವಾಮಿಯವರು ಇವರ ಹೊರತಾಗಿ ಯಾವುದೇ ನಾಯಕರು ಮೈತ್ರಿ ಉಳಿಸುವ ಚಿಂತನೆಗಳು ಸಹ ನಡೆಸುತ್ತಿಲ್ಲ ಆದರೆ ಅಂದು ಬಹುತೇಕ ಶಾಸಕರು ರಾಜೀನಾಮೆ ನೀಡುವಂತಹ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ಇದನ್ನೆಲ್ಲಾ ಅರಿತು ಸಿದ್ದರಾಮಯ್ಯನವರಿಗೆ ಕರೆ ಮಾಡಿ ( ‘ಸ್ಪೀಕರ್‌ ಪಕ್ಕದಲ್ಲೇ ನಿಮ್ಮ ಕಚೇರಿ ಇದೆ. ನಾನು ಹೇಗಾದರೂ ಮಾಡಿ ಕಾಂಗ್ರೆಸ್‌ ಶಾಸಕರನ್ನು ಕರೆದುಕೊಂಡು ಬರುತ್ತೇನೆ. ಒಂದು ಸಲ ಹೊರಗೆ ಹೋಗಿಬಿಟ್ಟರೆ ಹಿಡಿಯೋದು ಕಷ್ಟ. ನೀವೂ ಬನ್ನಿ’ ಎಂದರಂತೆ. ) ಅಂತಹ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಹೇಳಿರುವುದು ಈಗಾಗಲೇ ಅತಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಸಿದ್ದರಾಮಯ್ಯನವರು ಹೇಳಿದ್ದೇನುು ಗೊತ್ತಾ? ( ‘ಅಯ್ಯೋ ಈಗ ಎಲ್ಲ ಕೈಮೀರಿ ಹೋಗಿದೆ. ನನಗೆ ಅವೆಲ್ಲ ಆಗೋದಿಲ್ಲ’) ಎಂದುಬಿಟ್ಟರಂತೆ.

ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಹೊಸ ಬಾಂಬ್ ಸಿಡಿಸಿದ ಯಡಿಯೂರಪ್ಪ! ಬೆಚ್ಚಿ ಬಿದ್ದ ಕಾಂಗ್ರೆಸ್

ಇಷ್ಟು ದಿನ ಅತೃಪ್ತ ಶಾಸಕರಿಗೆ ಮತ್ತು ಬಿಜೆಪಿ ಪಕ್ಷಕ್ಕೆ ಯಾವುದೇ ರೀತಿಯಾದಂತಹ ಸಂಬಂಧ ಇಲ್ಲ ಎಂದು ಹೇಳುತ್ತಿದ್ದ ಯಡಿಯೂರಪ್ಪ ಈಗ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಈಗಾಗಲೇ ಹಲವು ಬಾರಿ ಕೆಡವಲು ಪ್ರಯತ್ನಿಸಿದ ಬಿಜೆಪಿ ಪಕ್ಷಕ್ಕೆ ಭಾರೀ ಆಘಾತ ಉಂಟಾಗುತ್ತಿತ್ತು ಆದರೆ ಈ ಬಾರಿಯ ಪ್ರಯತ್ನಬಲ ಕೊಟ್ಟಂತೆ ಕಾಣತೊಡಗಿದೆ ಈಗಾಗಲೇ 17 ಶಾಸಕರು ರಾಜೀನಾಮೆ ಯನ್ನು ನೀಡಿ ಬಿಜೆಪಿಗೆ ಸೇರುವ ಮನಸ್ಸು ಮಾಡಿದ್ದಾರೆ.

ಇಷ್ಟು ದಿನ ಸುಮ್ಮನಿದ್ದ ಅಂತಹ ಯಡಿಯೂರಪ್ಪನವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಹೌದು ಆಪರೇಷನ್ ಕಮಲ ಮಾಡಿದ್ದು ನಾವೇ ಎಲ್ಲಾ ಶಾಸಕರನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ ಅಷ್ಟೇ ಅಲ್ಲದೆ ಇನ್ನೂ ಉಳಿದ ಬಹುತೇಕ ಶಾಸಕರನ್ನು ನಾವು ಬಿಜೆಪಿಗೆ ಸೇರ್ಪಡೆ ಮಾಡಿಕೊಡುತ್ತಿದ್ದೇವೆ ಈ ಮೂಲಕ ಕಾಂಗ್ರೆಸ್ಸನ್ನು ಕರ್ನಾಟಕದಲ್ಲಿ ಇಲ್ಲದಂತೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಚಾಣಾಕ್ಷ ಅಮಿತ್ ಶಾ ರವರ ಆ ಒಂದು ಹೇಳಿಕೆಗೆ ಬೆದರಿದ ಲೋಕಸಭೆ ಅಧಿವೇಶನ!

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಭಾರತದ ಗೃಹಮಂತ್ರಿ ಸಚಿವ ಅಮಿತ್ ಶಾ ಎಂದರೆ ವಿರೋಧಪಕ್ಷಗಳ ಸಿಂಹಸ್ವಪ್ನ ಎಂದು ಅವರನ್ನು ಬಿಂಬಿಸಲಾಗುತ್ತದೆ.

ಲೋಕಸಭೆಯ ಸಂಸತ್ನಲ್ಲಿ ಚರ್ಚೆಗಳ ವಿಷಯಕ್ಕಿಂತ ಹಬರಿ ಕತ್ತಲಾಗಿರುತ್ತದೆ ಆದರೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರೀತಿಯಾದಂತಹ ಒಂದು ಘಟನೆಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಅಮಿತ್ ಶಾ ಅವರು ಈಗಾಗಲೇ ತಮ್ಮ ಚಾಣಾಕ್ಷತನ ಮತ್ತು ಧೈರ್ಯವನ್ನು ಪ್ರದರ್ಶಿಸಿ ಬಿಜೆಪಿಯ ಪಕ್ಷವನ್ನು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ.

ಆದರೆ ಇಂದು ಲೋಕಸಭಾ ಸಂಸತ್ತಿನಲ್ಲಿ ನಡೆದ ಒಂದು ವಿಷಯ ಅವರಲ್ಲಿ ಇರುವಂತಹ ಗುಣಲಕ್ಷಣವನ್ನು ಸಹ ಹೊರಹಾಕಿದೆ ಅದೇನೆಂದರೆ ವಿರೋಧ ಪಕ್ಷದ ನಾಯಕರೊಬ್ಬರು ತಮ್ಮ ಚರ್ಚೆಯನ್ನು ಕೇಳದೆ ಸಭೆಯಲ್ಲಿ ಕರಾಟೆ ಮತ್ತು ಗದ್ದಲ ಮಾಡುತ್ತಿದ್ದರು ಇದಕ್ಕೆ ಅಮಿತ್ ಶಾ ರವರು ತಮ್ಮ ಸಾಮರ್ಥ್ಯವನ್ನು ಚರ್ಚೆಯನ್ನು ಆರಿಸುವುದರಲ್ಲಿ ಬೇರೆ ಯಾವುದರಲ್ಲೂ ಬೇಡ ಎಂದು ಬಹಿರಂಗವಾಗಿ ಹೇಳಿದ್ದರು. ಅದಕ್ಕೆ ಆ ನಾಯಕ ನಮ್ಮನ್ನು ಬೆದರಿಸಿದ್ದ ಎಂದು ಹೇಳಿದರು ಇದಕ್ಕೆ ಪ್ರತ್ಯುತ್ತರವಾಗಿ ಅಮಿತ್ ಶಾ ರವರು ನಾನು ಯಾರನ್ನೂ ಬೆದರಿಸುತ್ತಿಲ್ಲ.  ಆದರೆ ಭಯವು ನಿಮ್ಮ ಅಂತರ್ಗತವಾಗಿದ್ದರೆ ಏನೂ ಮಾಡಲಾಗದು ಎಂದು ಹೇಳಲಾಗಿದೆ.

ಮೈತ್ರಿ ಸರ್ಕಾರ ಬೀಳುವ ಹೊತ್ತಿನಲ್ಲಿ ನಡೆದಿದೆಯಾ ಭಾರಿ ಅವ್ಯವಹಾರ??

ಮೈತ್ರಿ ಸರ್ಕಾರ ಬಿಡುವ ಸಾಧ್ಯತೆ ಹೆಚ್ಚಾಗಿದೆ ಅತ್ರಪ್ತ ಶಾಸಕರು ರಾಜಿನಾಮೆ ನೀಡಿ ಮುಂಬೈಗ ತೆರಳಿದ್ದಾರೆ.

ಸರ್ಕಾರ ಬಿಡುವ ಹೊಸ್ತಿಲಲ್ಲಿ ನಿಂತ ಎಲ್ಲಾ ಅನುಭವಗಳನ್ನು ಬಳಸಿ ಎಲ್ಲಾ ಪ್ರಯತ್ನಗಳನ್ನು ಮಾಡಿ ಸರ್ಕಾರವು ಯುವ ಸಾಧ್ಯತೆಯಂತೂ ಕನಿಷ್ಠವಾಗಿದೆ ಇನ್ನೊಂದೆಡೆ ಬಿಜೆಪಿ ಪಕ್ಷವು ಅಧಿಕಾರಕ್ಕೆ ಏರುವ ದಿನಗಳು ದೂರವೇನಿಲ್ಲ ಇದೆಲ್ಲವನ್ನು ಅರಿತಿರುವ ಅಂತಹ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವು ಅವ್ಯವಹಾರಗಳನ್ನು ನಡೆಸುತ್ತಿದೆ ಎಂಬುದು ಭಾರಿ ಚರ್ಚೆಗೆ ಕಾರಣವಾಗಿದೆ.

ಮಾಧ್ಯಮಗಳ ವರದಿ ಪ್ರಕಾರ ಮೈತ್ರಿ ಸರ್ಕಾರದ ನಾಯಕರು ಕೆಲವು ಸರ್ಕಾರದ ಫೈಲ್ ಗಳಿಗೆ ಅನುಮತಿ ನೀಡುತ್ತಿದ್ದಾರೆ ಹಾಗೂ ಸರ್ಕಾರಿ ನೌಕರರ ಟ್ರಾನ್ಸ್ಫರ್ ಗಳನ್ನು ಮುಗಿಸುತ್ತಿದ್ದಾರೆ ಮತ್ತು ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆ ಇದೆಲ್ಲವನ್ನು ಗಮನಿಸುತ್ತಿರುವ ಅಂತಹ ಮಾಧ್ಯಮಗಳು ಇಲ್ಲಿಗೆ ಭಾರಿ ಅವ್ಯವಹಾರ ನಡೆಯುತ್ತಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಪತನವಾಗುವ ಸಮಯದಲ್ಲಿ ರೀತಿಯಂತೆ ಮಾಡುತ್ತಿರುವುದು ಪಕ್ಷಗಳಿಗೆ ಶೋಭೆಯಲ್ಲ ಎಂದು ಸಾರ್ವಜನಿಕರು ವಿಷಾದ ವ್ಯಕ್ತ ಪಡಿಸುತ್ತಿದ್ದಾರೆ.