ಮೋದಿ- ಶಾ ಕಂಡ್ರೆ ಬಿಎಸ್‌ವೈ ಗಡಗಡ!

ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರಿಗೆ ನರೇಂದ್ರ ಮೋದಿ- ಅಮಿತ್ ಶಾರನ್ನು ಕಂಡ್ರೆ ಭಯ.

ಆದುದರಿಂದ ಪರಿಹಾರ ಬಿಡುಗಡೆ ಮಾಡಿ ಎಂದು ಆಗ್ರಹಿಸಿಯೇ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು. ಒಂದು ವೇಳೆ ಪರಿಹಾರಕ್ಕೆ ಆಗ್ರಹಿಸಿದ್ದರೆ, ಎಷ್ಟು ಹಣ ಕೇಳಿದ್ದಾರೆ ಎಂದು ಯಡಿಯೂರಪ್ಪ ಬಹಿರಂಗಪಡಿಸಲಿ ಎಂದು ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.

ನೆರೆ ಹಾನಿ ಪ್ರದೇಶಗಳ ಕುರಿತು ಸುದೀರ್ಘವಾಗಿ ಪ್ರಧಾನಿ ಮತ್ತು ಗೃಹಸಚಿವರ ಜೊತೆ ಚರ್ಚೆ ಮಾಡಲಾಗಿದೆ. ಎರಡು ಅಥವಾ ಮೂರು ದಿನದಲ್ಲಿ ಪರಿಹಾರ ಕಾರ್ಯ ಚುರುಕಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ನಗದರಲ್ಲಿ ಮಾತನಾಡಿದ ಬಿಎಸ್‌ವೈ, ನೆರೆ ಪೀಡಿತರಿಗೆ 10 ಸಾವಿರ ಒಂದೊಂದು ಕುಟುಂಬಕ್ಕೆ ನೀಡಿಕೆಯಲ್ಲಿ ವಿಳಂಬವಾಗಿದೆ. ಇದರ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ.

ನೆರೆ ಪೀಡಿತರ ಕಷ್ಟಕ್ಕೆ ತಕ್ಷಣ ಸ್ಪಂದಿಸುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯ. ಪ್ರವಾಹ ಸಂತ್ರಸ್ತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಸರ್ಕಾರ ಸದಾ ನಿಮ್ಮ ಜೊತೆಯಲ್ಲಿದೆ ಎಂದು ಹೇಳಿದರು.

4900 ಕೋಟಿಯಿಂದ ಒಂದೇ ಒಂದೇ ದಿನದಲ್ಲಿ ಸಾವಿರ ಕೋಟಿಗೆ ಇಳಿದ ಕಾಫಿ ಡೇ ಸಾಲ..ಕಾರಣ

ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ವಿಜಿ ಸಿದ್ದಾರ್ಥ ಅಕಾಲಿಕ ಮರಣದ ಬಳಿಕ ಕಾಫಿ ಡೇ ಸಂಸ್ಥೆಯ ಮಾರುಕಟ್ಟೆ ಮೌಲ್ಯ ದಿನದಿನಕ್ಕೆ ಕುಸಿಯುತ್ತಿರುವುದು ವಾಸ್ತವ.

ಸಾಲದ ಹೊರೆ ತಗ್ಗಿಸಲು ಮುಂದಾಗಿರುವ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ತನ್ನ ಅಂಗ ಸಂಸ್ಥೆ ಟ್ಯಾಂಗ್ಲಿನ್ ಡೆವಲ್ಮೆಂಟ್ಸ್ ಒಡೆತನದಲ್ಲಿರುವ ಆಸ್ತಿಯೊಂದನ್ನು ಆಗಸ್ಟ್ 14 ರಂದೇ ಮಾರಿದೆ ಎನ್ನಲಾಗಿದೆ.

ಸಂಸ್ಥೆಯ ಒಡೆತನದಲ್ಲಿರುವ 90 ಎಕರೆ ವಿಸ್ತೀರ್ಣ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ನ್ನು ಬ್ಲಾಕ್ ಸ್ಟೋನ್ ಸಂಸ್ಥೆ ಖರೀದಿಗೆ ಮಾಡಿದೆ. ಈ ಮೂಲಕ ಸಾಲದ ಹೊರೆ 1 ಸಾವಿರ ಕೋಟಿ ರೂ. ಗೆ ಇಳಿದಿದೆ.

2,600 ಕೋಟಿ ರು ನಿಂದ 3,000 ಕೋಟಿ ರು ಮೌಲ್ಯಕ್ಕೆ ವಿಲೇಜ್ ಮಾರಟವಾಗಿದೆ. ಈಗ ಮಾರಾಟ ಸುದ್ದಿಯನ್ನು ಖಚಿತಪಡಿಸಿರುವ ಕಾಫಿ ಡೇ ಸಂಸ್ಥೆ, ಸಾಲದ ಹೊರೆ 1,000 ಕೋಟಿ ರುಗೆ ಇಳಿಯಲಿದೆ ಎಂದು ಪ್ರಕಟಿಸಿದೆ.

ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಮಾರಾಟದ ಬಳಿಕ ಲಾಜಿಸ್ಟಿಕ್ ಕಂಪನಿ ಸಿಕಾಲ್ ಕೂಡಾ ಮಾರುವ ಮುನ್ಸೂಚನೆ ಸಿಕ್ಕಿದೆ. ಸಿಕಾಲ್ ಲಾಜಿಸ್ಟಿಕ್ ಲಿಮಿಟೆಡ್ ಕೂಡಾ 1,488 ಕೋಟಿ ರು ಸಾಲ ಹೊಂದಿದೆ ಎನ್ನುವುದು ಅಷ್ಟೇ ಮುಖ್ಯವಾದ ವಿಚಾರ.

ಜುಲೈ 29ರಂದು ಮಂಗಳೂರು- ಉಳ್ಳಾಲ ಬಳಿಯ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದ ಸಿದ್ದಾರ್ಥ, ಜುಲೈ 31ರಂದು ಹೊಯ್ಗೆ ಬಜಾರ್ ಸಮೀಪ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಿದ್ಧಾರ್ಥ್ ಕಣ್ಮರೆಯಾದ ನಂತರದಿಂದ ಕಾಫೀ ಡೇ ಶೇರುಗಳು ನಿರಂತರ ಕುಸಿತ ಕಂಡು 62 ರು. ಗೆ ಬಂದು ತಲುಪಿದೆ

ಮಾಜಿ ಪಾಕ್ ಕ್ರಿಕೆಟ್ ಕೋಚ್ ಫ್ಲವರ್‌ ಬಿಚ್ಚಿಟ್ಟ ಭಯಾನಕ ಸತ್ಯ!

ಪಾಕಿಸ್ತಾನ ದೇಶದಲ್ಲಿನ ಬದುಕು ಮತ್ತು ಪಾಕ್ ಕ್ರಿಕೆಟ್ ಮಂಡಳಿಯಲ್ಲಿನ ಸುಮಾರು ಐದು ವರ್ಷಗಳ ಕಾಲ ಕಳೆದ ಅನುಭವದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್‌ ಫ್ಲವರ್ ಬಾಯ್ಬಿಟ್ಟಿದ್ದಾರೆ.

ಪಿಸಿಬಿಯು ಫ್ಲವರ್ ಜೊತೆಗಿನ ಒಪ್ಪಂದ ಮುಂದುವರಿಸದಿರಲು ನಿರ್ಧರಿಸಿದ ಬಳಿಕ ಫ್ಲವರ್ ಪಾಕ್‌ ಬಗ್ಗೆ ಮೊದಲ ಬಾರಿ ತುಟಿ ಬಿಚ್ಚಿದ್ದು, ಸ್ನೇಹಿ ಜನರು ಪಾಕಿಸ್ತಾನ ದೇಶದಲ್ಲಿರುವುದು ಒಳ್ಳೆಯ ವಿಚಾರ. ಹಾಗೇ ಸ್ವಾತಂತ್ರ್ಯದ ಕೊರತೆ ಮತ್ತು ಭದ್ರತೆ ವಿಚಾರ ಪಾಕಿಸ್ತಾನದಲ್ಲಿ ಬದುಕುವ ನಿಟ್ಟಿನಲ್ಲಿ ಇರುವ ತುಂಬಾನೇ ನಿರಾಶಾದಾಯಕವಾದ ಸಂಗತಿ ಎಂದು ಹೇಳಿದರು.

2014ರಿಂದಲೂ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ಫ್ಲವರ್ ಅವರೊಂದಿಗಿನ ಒಪ್ಪಂದವನ್ನು ನವೀಕರಿಸುವ ಜತೆಗೆ ಇಡೀ ಕೋಚಿಂಗ್ ವಿಭಾಗ ಮತ್ತು ಬೆಂಬಲ ಸಿಬ್ಬಂದಿ ವರ್ಗವನ್ನು ಬದಲಾಯಿಸಲು ಪಿಸಿಬಿ ಬಯಸಿದೆ. 2019ರ ವಿಶ್ವಕಪ್‌ನಲ್ಲಿ ಪಾಕ್ ತಂಡ ಸೆಮಿಫೈನಲ್ ಪ್ರವೇಶಿಸಲು ವಿಫಲವಾದ ಕಾರಣಕ್ಕೆ ಪಿಸಿಬಿ ಈ ನಿರ್ಧಾರ ತೆಗೆದುಕೊಂಡಿದೆ.

ಯಡಿಯೂರಪ್ಪ ಆಪ್ತ ಐವರಿಗೆ ಸಚಿವರಿಗೆ ಬಂಪರ್ ಆಪರ್: ಸಚಿವ ಸ್ಥಾನ ಪಕ್ಕಾ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ತೆರೆಮರೆಯಲ್ಲಿ ಬಹುವಾಗಿ ಶ್ರಮಿಸಿದ ಪಕ್ಷದ ಹಲವು ಶಾಸಕರು ಹಾಗೂ ಮುಖಂಡರ ಪೈಕಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಶಾಸಕರಾದ ಅರವಿಂದ್‌ ಲಿಂಬಾವಳಿ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌.ಆರ್‌.ವಿಶ್ವನಾಥ್‌, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಹಾಗೂ ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್‌.ಆರ್‌.ಸಂತೋಷ್‌ ಅವರು ಸರ್ಕಾರ ರಚಿಸುವುದಕ್ಕೆ ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸುವಲ್ಲಿ ಹಲವು ತಿಂಗಳುಗಳಿಂದ ತಂತ್ರಗಾರಿಕೆ ರೂಪಿಸಿ ಸಾಕಷ್ಟುಶ್ರಮ ವಹಿಸಿದ್ದರು. ಇವರನ್ನು ಹೊರತುಪಡಿಸಿ ಇತರ ಕೆಲವು ಶಾಸಕರು ಹಾಗೂ ಮುಖಂಡರಿದ್ದರೂ ಐವರ ಪಾತ್ರ ಮುಖ್ಯವಾದದ್ದು.

ಈ ಪೈಕಿ ಯಡಿಯೂರಪ್ಪ ಅವರ ಆಪ್ತ ಸಹಾಯಕವಾಗಿರುವ ಸಂತೋಷ್‌ ಅವರಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಅವರು ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿಯೇ ಮುಂದುವರೆಯಲಿದ್ದಾರೆ. ಆದರೆ, ಇನ್ನುಳಿದ ನಾಲ್ವರ ಪೈಕಿ ಎಲ್ಲರೂ ಸಚಿವ ಸ್ಥಾನದ ಬಗ್ಗೆ ಆಕಾಂಕ್ಷೆ ಹೊಂದಿದ್ದಾರೆ.

ಯಡಿಯೂರಪ್ಪ ಅವರಿಗೂ ಲಿಂಬಾವಳಿ, ಅಶ್ವತ್ಥನಾರಾಯಣ, ವಿಶ್ವನಾಥ್‌ ಹಾಗೂ ಯೋಗೇಶ್ವರ್‌ ಅವರೆಲ್ಲರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಒಲವಿದೆ. ಆದರೆ, ಪಕ್ಷದ ಹೈಕಮಾಂಡ್‌ ಎಷ್ಟುಮಂದಿಗೆ ಹಸಿರು ನಿಶಾನೆ ನೀಡಲಿದೆ ಎಂಬುದನ್ನು ಕಾದು ನೋಡಬೇಕು.

ಸದ್ಯಕ್ಕೆ ಲಭಿಸಿರುವ ಮಾಹಿತಿ ಅನುಸಾರ ಅರವಿಂದ್‌ ಲಿಂಬಾವಳಿ ಮತ್ತು ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತ ಎಂಬ ಮಾತು ಪಕ್ಷದಿಂದ ಕೇಳಿಬಂದಿದೆ. ಲಿಂಬಾವಳಿ ಅವರಿಗೆ ಹಿರಿತನ ಮತ್ತು ಪಕ್ಷ ಸಂಘಟನೆಯ ಅನುಭವದ ಆಧಾರದ ಮೇಲೆ ಸಚಿವ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಪಕ್ಷದ ಮುಂದಿನ ರಾಜ್ಯಾಧ್ಯಕ್ಷ ಹುದ್ದೆಯ ರೇಸ್‌ನಲ್ಲೂ ಅವರ ಹೆಸರು ಮುಂಚೂಣಿಯಲ್ಲಿರುವುದರಿಂದ ಎರಡರಲ್ಲಿ ಒಂದು ಸ್ಥಾನ ಪಕ್ಕಾ ಎನ್ನಲಾಗುತ್ತಿದೆ.

ಇನ್ನು ಡಾ.ಅಶ್ವತ್ಥ ನಾರಾಯಣ ಮತ್ತು ಎಸ್‌.ಆರ್‌.ವಿಶ್ವನಾಥ್‌ ಇಬ್ಬರೂ ಮೂರನೇ ಬಾರಿ ಶಾಸಕರಾಗಿದ್ದಾರೆ. ಆದರೆ, ಸರ್ಕಾರ ರಚನೆಯಲ್ಲಿ ವಿಶ್ವನಾಥ್‌ ಅವರಿಗೆ ಹೋಲಿಸಿದರೆ ಅಶ್ವತ್ಥನಾರಾಯಣ ಅವರ ಪಾತ್ರ ದೊಡ್ಡದು. ಹೆಚ್ಚೂ ಕಡಮೆ ತಿಂಗಳುಗಟ್ಟಲೇ ಇದಕ್ಕಾಗಿಯೇ ಸಮಯವನ್ನು ಮೀಸಲಿಟ್ಟಿದ್ದಾರೆ.

ಆದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅನರ್ಹ ಶಾಸಕರಿಗೂ ಭವಿಷ್ಯದಲ್ಲಿ ಸಚಿವ ಸ್ಥಾನ ನೀಡಬೇಕಾಗಿರುವುದರಿಂದ ಬಿಜೆಪಿಗರಿಗೆ ಸಚಿವ ಸ್ಥಾನಗಳ ಕೊರತೆ ಎದುರಾಗಲಿದೆ. ಹೀಗಾಗಿ, ಅಶ್ವತ್ಥನಾರಾಯಣ ಅವರಿಗೆ ಸಚಿವ ಸ್ಥಾನ ಸಿಗುತ್ತದೆಯೊ ಅಥವಾ ಬೇರೊಂದು ಹುದ್ದೆಯನ್ನು ನೀಡಿ ಸಮಾಧಾನ ಮಾಡಲಾಗುತ್ತದೆಯೊ ಎಂಬುದು ಸ್ಪಷ್ಟವಾಗಿಲ್ಲ.

ವಿಸ್ಮಯ : ಕುತ್ತಿಗೆಯಲ್ಲಿ ಮೊಟ್ಟೆ ಇಡುವ ಕೋಳಿ…!! ವಿಡಿಯೋ ಸಖತ್ ವೈರಲ್

ಕೋಳಿ ಮೊಟ್ಟೆ ಇಡೋದು ಸರ್ವೆ ಸಾಮಾನ್ಯ ಆದರೆ ಇಲ್ಲೊಂದು ಕೋಳಿ ಕುತ್ತಿಗೆ ಮೂಲಕ ಮೊಟ್ಟೆ ಇಡುತ್ತಿದೆ. ಈ ವಿಚಿತ್ರ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಕುತ್ತಿಗೆಯಲ್ಲಿ ಮೊಟ್ಟೆ ಇಡುವ ಕೋಳಿ

ನಾಗಮಂಗಲ ಪಟ್ಟಣದ ಹೇಮಾವತಿ ಬಡಾವಣೆಯ ಬರಹಗಾರ ಶಿವರಾಮೇಗೌಡ ರವರ ಮನೆಯಲ್ಲಿ ಅಪರೂಪದ ಘಟನೆ ನಡೆದಿದೆ. ಸುಮಾರು ಎರಡು ವರ್ಷದಿಂದ ತಮ್ಮ ಮನೇಲಿ ಸಾಕಿಕೊಂಡಿದ್ದ ಕೋಳಿ ಹಲವು ಬಾರಿ ಮೊಟ್ಟೆಗಳನ್ನು ಇಟ್ಟು ಮರಿಗಳನ್ನು ಮಾಡಿತ್ತು ಆದರೆ ಇಂದು ಕುತ್ತಿಗೆ ಭಾಗದಿಂದ ಮೊಟ್ಟೆಗಳನ್ನು ಇಡುವುದನ್ನು ನೋಡಿದ ಮನೆಯವರು ಆಸಕ್ತರಾಗಿದ್ದಾರೆ.

ನಂತರ ಅದರ ವಿಡಿಯೋವನ್ನು ಮಾಡಿ ಆಶ್ಚರ್ಯ ಪಟ್ಟಿದ್ದಾರೆ. ಹಲವು ವರ್ಷಗಳಿಂದ ತಮ್ಮ ಪಾಡಿಗೆ ತಾವು ಜಗತ್ತಿಗೆ ಸಂದೇಶ ಹೇಳುವ 15ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ವ್ಯವಸಾಯ ಮಾಡಿಕೊಂಡಿದ್ದ ಶಿವರಾಮೇಗೌಡರ ಮನೆಯಲ್ಲಿ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯವಾಗಿದೆ. ಆದರೆ ಕೋಳಿ ಕುತ್ತಿಗೆಯಲ್ಲಿ ಮೊಟ್ಟೆ ಇಡುತ್ತಿರುವುದು ಹೇಗೆ ಎಂಬುದು ಮನೆಯವರಲ್ಲೂ ಕುತೂಹಲ ಮೂಡಿಸಿದೆ.

‘ಬೇಟಿ ಬಚ್ಚಾವೋ ಬೇಟಿ ಪಡಾವೋ’ : 1 ಜಿಲ್ಲೆ, 132 ಹಳ್ಳಿ, 3 ತಿಂಗಳಲ್ಲಿ ಒಂದೇ ಒಂದು ಹೆಣ್ಣು ಮಗು ಕೂಡ ಜನಿಸಿಲ್ಲ!

‘ಬೇಟಿ ಬಚ್ಚಾವೋ ಬೇಟಿ ಪಡಾವೋ’ ಎಂಬ ಘೋಷ ವಾಕ್ಯದೊಂದಿಗೆ ಸರ್ಕಾರ ಯೋಜನೆಗಳನ್ನು ಜಾರಿ ಮಾಡಿ ಎಲ್ಲೆಡೆ ಪ್ರಚಾರ ಮಾಡುತ್ತಿದೆ. ಆದರೆ, ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ 132 ಹಳ್ಳಿಗಳಲ್ಲಿ ಲಿಂಗಾನುಪಾತ ಮಾತ್ರದಲ್ಲಿ ಮಾತ್ರ ಆಶ್ಚರ್ಯ ಪಡುವ ರೀತಿಯಲ್ಲಿ ವರದಿ ಬಂದ್ದು, ಈ ಜಿಲ್ಲೆಯಲ್ಲಿ ಒಂದೇ ಒಂದು ಹೆಣ್ಣು ಮಗು ಜನಿಸಿಲ್ಲ ಎಂದು ವರದಿಗಳು ತಿಳಿಸಿದೆ.

ಅಂಕಿ-ಅಂಶಗಳ ಪ್ರಕಾರ, 132 ಹಳ್ಳಿಗಳಿಂದ ಒಟ್ಟು 216 ಮಕ್ಕಳು ಮೂರು ತಿಂಗಳಲ್ಲಿ ಜನನ ಆಗಿವೆ. ಆದರೆ, ಒಂದೇ ಒಂದು ಹೆಣ್ಣು ಮಗು ಈ ಅವಧಿಯಲ್ಲಿ ಜನಿಸಿಲ್ಲ ಎಂದು ಜಿಲ್ಲಾಡಳಿತ ವರದಿ ಮಾಡಿದೆ.

ಹೆಣ್ಣು ಮಗುವಿನ ಹೆರಿಗೆಯ ಸಂಖ್ಯೆ ಶೂನ್ಯವಾಗಿರುವ ಎಂಬ ಪ್ರದೇಶಗಖನ್ನು ನಾವು ಗುರುತಿಸಿದ್ದೇವೆ. ಲಿಂಗಾನುಪಾತದ ಮೇಲೆ ಏನು ಪರಿಣಾಮ ಬೀರುತ್ತಿದೆ ಎಂಬುದನ್ನು ಕಂಡುಹಿಡಿಯಲು ನಾವು ಆ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಇದರ ಹಿಂದಿನ ಕಾರಣವನ್ನು ಗುರುತಿಸಲು ವಿವರವಾದ ಸಮೀಕ್ಷೆ ಮತ್ತು ಅಧ್ಯಯನವನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಆಶಿಶ್ ಚೌಹಾನ್ ಅವರು ಹೇಳಿದ್ದಾರೆ.

ಆಶಿಶ್ ಚೌಹಾನ್ ಆಶಾ ಕಾರ್ಯಕರ್ತರೊಂದಿಗೆ ತುರ್ತು ಸಭೆ ನಡೆಸಿ ಈ ಪ್ರದೇಶಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಲು ಮತ್ತು ದತ್ತಾಂಶಗಳ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಗಂಗೋತ್ರಿ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ್ ರಾವತ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

‘ಜೆಡಿಎಸ್ ಪಕ್ಷದ ವರಿಷ್ಠರ ಮಾತನ್ನು ಧಿಕ್ಕರಿಸಿ ಬಂದಿದ್ದೇನೆ’ – ಶಾಸಕ ಅನ್ನದಾನಿ

ಎಲ್ಲ ಟೆನ್ಷನ್ ಮರೆತು ಚೆಲ್ಲಿದರು ಮಲ್ಲಿಗೆಯ ಜಾನಪದ ಗೀತೆಯನ್ನು ಹಾಡುವ ಮೂಲಕ ಜೆಡಿಎಸ್​ ಶಾಸಕ ಅನ್ನದಾನಿ ಅವರು ಜನರನ್ನು ರಂಜಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಶಾಸಕರಾದ ಅನ್ನದಾನಿ ಅವರು, ಇಷ್ಟು ದಿನ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರೆಲ್ಲರು ರೆಸಾರ್ಟ್ನಲ್ಲಿದ್ದರು. ಸರ್ಕಾರ ಉರುಳುವ ಭಯದಲ್ಲಿ ರೆಸಾರ್ಟ್ ಸೇರಿದ್ದರು.

ಆದರೆ, ಇಂದು ಅನ್ನದಾನಿ ಅವರು ಮಳವಳ್ಳಿಗೆ ಆಗಮಿಸಿ ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದ ಆವರಣದಲ್ಲಿ ನಡೆದ ಆದಿಜಗದ್ಗುರು ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದಾರೆ.

ಅಲ್ಲದೇ ಮಾದೇಶ್ವರರ ಮೇಲಿನ ಚಲ್ಲಿದರು ಮಲ್ಲಿಗೆಯ ಗೀತೆ ಹಾಡಿದ ಶಾಸಕ ಅನ್ನದಾನಿ ಅವರು ಎಲ್ಲ ಗಮನ ಸೆಳೆದಿದ್ದು, ಇಂದಿನ ರಾಜಕೀಯ ಪರಿಸ್ಥಿತಿ ಯಲ್ಲಿ ನಾನು ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿರಲಿಲ್ಲ, ಆದರೆ, ನನ್ನ ಕ್ಷೇತ್ರದ ಜನರ ಸಮಸ್ಯೆ ಗಳನ್ನು ಆಲಿಸಿದ ನಂತರ ಸಂಜೆಯೊಳಗೆ ಬಂದು ನಿಮ್ಮಲ್ಲಿಗೆ ಸೇರುತ್ತೇನೆ ಎಂದು ಹೇಳಿ ಬಂದಿದ್ದೇನೆ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯ ನಮ್ಮ ಪಕ್ಷದ ಮುಖಂಡರಿಗೆ ಮನವರಿಕೆ ಮಾಡಿಸಿ ಬಂದ್ದಿದ್ದೇನೆ. ಜನರ ಸಮಸ್ಯೆಗಳನ್ನು ಕೇಳದಿದ್ದರೆ ಮನುಷ್ಯನಾಗಿರಲು ಸಾಧ್ಯವಿಲ್ಲವೆಂದು ನಮ್ಮ ವರಿಷ್ಠರು ಮಾತನ್ನು ಧಿಕ್ಕರಿಸಿ ನಾನು ಇಲ್ಲಿಗೆ ಬಂದಿದ್ದೇನೆ. ಇನ್ನೆರಡು ದಿನಗಳಲ್ಲಿ ಸರ್ಕಾರದ ಭವಿಷ್ಯ ಏನಾಗುತ್ತೋ ಯಾರಿಗು ಗೊತ್ತಿಲ್ಲ, ಆದರೂ ದೇವರನ್ನು ನಂಬಿಕೊಂಡಿದ್ದು ಸರಿಯಾಗುವ ಭರವಸೆ ಇದೆ ಎಂದು ಮಳವಳ್ಳಿ ಜೆಡಿಎಸ್​ ಶಾಸಕ ಅನ್ನದಾನಿ ಅವರು ನುಡಿದರು.

ಯಡಿಯೂರಪ್ಪ ಹೊಸ ಬಾಂಬ್ : ಕುಮಾರಸ್ವಾಮಿ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿ ಕೊಡಲಿ

ಕುಮಾರಸ್ವಾಮಿ ಅವರು ತಕ್ಷಣ ರಾಜೀನಾಮೆ ಕೊಡಲಿ, ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿ ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಧವಳಗಿರಿ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರ ಮೇಲೆ ವಿಪ್ ಜಾರಿ ಮಾಡಿದರೆ ಪರಿಣಾಮ ಆಗಲ್ಲ, ನಾಳೆ ಸಾಯಂಕಾಲದವರೆಗೆ ಎಲ್ಲ ಮುಗಿಯುವ ಭರವಸೆ ಇದೆ ಅಲ್ಲಿಯವರೆಗೆ ಕಾಯುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಎಲ್ಲರ ಗಮನ ನಾಳೆ ಸುಪ್ರೀಂಕೋರ್ಟ್ ಏನು ತೀರ್ಪು ಕೊಡಬಹುದು ಅನ್ನೋದರ ಮೇಲಿದೆ. ಈಗಾಗಲೇ ಸುಪ್ರೀಂಕೋರ್ಟ್ ಶಾಸಕರಿಗೆ ಸದನಕ್ಕೆ ಬರಬೇಕು ಅಂತ ಬಲವಂತ ಮಾಡಬಾರದು ಅಂತ ಹೇಳಿದೆ. ಸುಪ್ರೀಂ ಕೋರ್ಟ್ 15 ಜನ ಶಾಸಕರಿಗೆ ವಿಧಾನಸಭೆ ಹೋಗಬಹುದು ಅಥವಾ ಹೋಗದೆ ಇರಬಹುದು ಎಂದು ಹೇಳಿದೆ ಎಂದರು.

ಕುಮಾರಸ್ವಾಮಿ ಅವರು ಅನಗತ್ಯ ವಿಳಂಬ ಮಾಡಬಾರದು. ನಾಳೆ ವಿಶ್ವಾಸ ಮತ ಮಾಡುವ ಭರವಸೆಯನ್ನು ಸ್ಪೀಕರ್ ಮತ್ತು ಮುಖ್ಯಮಂತ್ರಿ ಕೊಟ್ಟಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ವಿಳಂಬ ಮಾಡಿದರೆ ಪ್ರಜಾತಂತ್ರಕ್ಕೆ ದ್ರೋಹ ಮಾಡಿದಂತಾಗುತ್ತದೆ ಹೀಗಾಗಿ ನಾವು ನಾಳೆವರೆಗೆ ಕಾದು ನೋಡುತ್ತೇವೆ ಎಂದರು.

ಕುತೂಹಲ ಮೂಡಿಸಿದೆ ಕೇಂದ್ರ ಸರಕಾರ : ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಸಾಧ್ಯತೆ?

ರಾಜ್ಯ ರಾಜಕೀಯ ಪ್ರಸ್ತುತ ನಾಟಕೀಯ ತಿರುವು ಪಡೆಯುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಳೆ ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಲಿರುವ ಕೇಂದ್ರ ರಾಜಕೀಯ ವ್ಯವಹಾರಗಳ ಸಂಫುಟ ಸಮಿತಿ ಸಭೆ ಕುತೂಹಲ ಮೂಡಿಸಿದೆ. ಅಲ್ಲದೆ ಈ ಸಭೆಯಲ್ಲಿ ರಾಜ್ಯದ ಮೇಲೆ ರಾಷ್ಟ್ರಪತಿ ಅಳ್ವಿಕೆ ಹೇರುವ ಕುರಿತ ತೀರ್ಮಾನ ತೆಗೆದುಕೊಳ್ಳುವ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿವೆ.

ಗುರುವಾರ ಸಿಎಂ ಕುಮಾರಸ್ವಾಮಿ ಅವರಿಗೆ ಆದೇಶಿಸಿದ್ದ ರಾಜ್ಯಪಾಲ ವಜುಭಾಯ್ ವಾಲಾ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಬಹುಮತ ಸಾಬೀತುಪಡಿಸಲು ಸೂಚಿಸಿದ್ದರು. ಆದರೆ, ಮೈತ್ರಿ ಸರ್ಕಾರ ರಾಜ್ಯಪಾಲರ ಈ ಆದೇಶವನ್ನು ಉಲ್ಲಂಘಿಸಿದೆ. ಹಾಗಾಗಿ ರಾಜ್ಯಪಾಲ ವಜುಭಾಯ್ ವಾಲಾ ಈ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ.

ಈ ವರದಿಯಲ್ಲಿ”ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ ಎಂಬ ವಿಚಾರ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ, ಬಹುಮತಯಾಚನೆಗೆ ಆದೇಶಿಸಿದ್ದರೂ ಸರ್ಕಾರ ಅದನ್ನು ಉಲ್ಲಂಘಿಸಿದೆ. ಇದರಿಂದ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದ್ದು, ಕೇಂದ್ರ ಮಧ್ಯಪ್ರವೇಶಿಸಬೇಕು” ಎಂದು ವರದಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯಪಾಲರ ಈ ವರದಿಯನ್ನು ಆಧರಿಸಿ ಶನಿವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರಾಜ್ಯ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚೆ ಹಾಗೂ ರಾಜ್ಯಪಾಲರ ಶಿಫಾರಸುಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವ ಕುರಿತು ಸಹ ಈ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅತೃಪ್ತ ಶಾಸಕರ ವಿರುದ್ದ ಸೇಡು ತೀರಿಸಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಕಾಂಗ್ರೆಸ್ಸ್ ನಾಯಕರು!

ವಿಶ್ವಾಸಮತಯಾಚನೆಗೆ ಕ್ಷಣಗಣನೆ ಆರಂಭವಾಗಿದ್ದರೂ ರಾಜ್ಯದಲ್ಲಿ ರಾಜಕೀಯ ಆಟ ಮುಗಿದಿಲ್ಲ. ಹೌದು ಸುಪ್ರೀಂ ಕೋರ್ಟ್​​ ಅತೃಪ್ತರು ಅಧಿವೇಶನಕ್ಕೆ ಹಾಜರಾಗಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಆದೇಶಿಸಿದ ಬೆನ್ನಲ್ಲೇ, ಅತೃಪ್ತರ ಅಮಾನತ್ತಿಗೆ ಮೈತ್ರಿ ನಾಯಕರು ಪಟ್ಟು ಹಿಡಿದಿದ್ದಾರೆ.

ಹೊಟೇಲ್​ನಲ್ಲಿ ಭರ್ಜರಿ ಸಭೆ ನಡೆಸಿದ ಬಳಿಕ ಸ್ಪೀಕರ್ ಕಚೇರಿಗೆ ತೆರಳಿದ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ಧರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ್ ಸೇರಿದಂತೆ ಮೈತ್ರಿ ನಾಯಕರು ನಾಳೆ ಅಧಿವೇಶನಕ್ಕೂ ಮುನ್ನವೇ 15 ಅತೃಪ್ತ ಶಾಸಕರನ್ನು ಅಮಾನತ್ತುಗೊಳಿಸುವಂತೆ ಸ್ಪೀಕರ್​ಗೆ ಮನವಿ ಮಾಡಿದ್ದಾರೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್.ಶಂಕರ್ ಸೇರಿದಂತೆ ಎಲ್ಲರನ್ನು ಅನರ್ಹಗೊಳಿಸುವಂತೆ ನಾಯಕರು ಮನವಿ ಮಾಡಿದ್ದಾರೆ. ಅಲ್ಲದೇ ಅತೃಪ್ತ ಶಾಸಕರಾದ ಮಹೇಶ್ ಕುಮಟಳ್ಳಿ ಹಾಗೂ ರಮೇಶ್ ಜಾರಕಿಹೊಳಿಯವರನ್ನು ಇಂದು ಸಂಜೆಯೇ ಅನರ್ಹಗೊಳಿಸುವಂತೆ ದೋಸ್ತಿ ನಾಯಕರು ಒತ್ತಾಯಿಸಿದ್ದಾರೆ.

ಒಂದೊಮ್ಮೆ ಈ ನಾಯಕರು ಅನರ್ಹಗೊಂಡಲ್ಲಿ, ಮುಂದಿನ 6 ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ. ಶಾಸಕ ಅಥವಾ ಸಂಸದ ಸ್ಥಾನಕ್ಕೆ ಸ್ಪರ್ಧಿಸುವಂತಿಲ್ಲ. ಅಷ್ಟೇ ಅಲ್ಲ, 6 ವರ್ಷ ಸಚಿವ ಹಾಗೂ ನಿಗಮ ಮಂಡಳಿಯಲ್ಲೂ ಅಧಿಕಾರ ಪಡೆಯುವಂತಿಲ್ಲ. ಹೀಗಾಗಿ ಅತೃಪ್ತಿ ಹೊತ್ತು ಮುಂಬೈ ಸೇರಿ ಸರ್ಕಾರಕ್ಕೆ ಸಂಕಷ್ಟ ತಂದಿರುವ ಶಾಸಕರಿಗೆ ಪಾಠ ಕಲಿಸಲು ಸಮ್ಮಿಶ್ರ ಸರ್ಕಾರದ ನಾಯಕರು ಮಹಾಪ್ಲ್ಯಾನ್ ಮಾಡಿದ್ದಾರೆ.